ಪ್ಯಾಲೆಸ್ತೀನ್ನ ಭಾರತದ ರಾಯಭಾರಿ ಮುಕುಲ್ ಆರ್ಯಾ ಸಾವು; ರಾಯಭಾರಿ ಕಚೇರಿಯಲ್ಲೇ ಸಿಕ್ಕ ಮೃತದೇಹ, ತನಿಖೆಗೆ ಆದೇಶ
ಪ್ಯಾಲಿಸ್ತೀನ್ ಸರ್ಕಾರ ಕೂಡ ಮುಕುಲ್ ಆರ್ಯ ನಿಧನಕ್ಕೆ ಸಂತಾಪ ಸೂಚಿಸಿದೆ. ಅಲ್ಲಿನ ಕೇಂದ್ರ ವಿದೇಶಾಂಗ ಇಲಾಖೆ ಸಚಿವ ಡಾ. ರಿಯಾದ್ ಅಲ್ ಮಲಿಕಿ ತೀವ್ರ ನೋವು ವ್ಯಕ್ತಪಡಿಸಿದ್ದಾರೆ.
ಪ್ಯಾಲೆಸ್ತೀನ್ ದೇಶಕ್ಕೆ ಭಾರತದ ರಾಯಭಾರಿಯಾಗಿದ್ದ ಮುಕುಲ್ ಆರ್ಯಾ ( ಮೃತಪಟ್ಟಿದ್ದಾರೆ. ಈ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್.ಜೈಶಂಕರ್ ಟ್ವೀಟ್ ಮಾಡಿದ್ದು, ಪ್ಯಾಲೆಸ್ತೀನ್ನ ರಾಮಲ್ಲಾದಲ್ಲಿದ್ದ ಭಾರತದ ರಾಯಭಾರಿ ಮುಕುಲ್ ಆರ್ಯಾ ನಿಧನದ ವಾರ್ತೆ ಕೇಳಿ ತುಂಬ ಶಾಕ್ ಆಗಿದೆ. ಪ್ರತಿಭಾವಂತ ಅಧಿಕಾರಿಯಾಗಿದ್ದರು. ಮುಕುಲ್ ನಿಧನದ ದುಃಖ ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ಕರುಣಿಸಲಿ ಎಂದು ಹೇಳಿದ್ದಾರೆ. ಮುಕುಲ್ ಆರ್ಯಾ ಮೃತದೇಹ ರಾಯಭಾರಿ ಕಚೇರಿಯಲ್ಲಿ ಪತ್ತೆಯಾಗಿದ್ದು, ಅವರ ಸಾವಿನ ಬಗ್ಗೆ ಕೆಲವು ಅನುಮಾನ ವ್ಯಕ್ತವಾಗಿದೆ. ಮುಕುಲ್ ಆರ್ಯ ಸಾವಿಗೆ ಸಂಬಂಧಪಟ್ಟು ತನಿಖೆ ನಡೆಸಲು ಪ್ಯಾಲಿಸ್ತೀನ್ ಆಡಳಿತ ಆದೇಶ ನೀಡಿದೆ.
ಅತ್ತ ಪ್ಯಾಲಿಸ್ತೀನ್ ಸರ್ಕಾರ ಕೂಡ ಮುಕುಲ್ ಆರ್ಯ ನಿಧನಕ್ಕೆ ಸಂತಾಪ ಸೂಚಿಸಿದೆ. ಅಲ್ಲಿನ ಕೇಂದ್ರ ವಿದೇಶಾಂಗ ಇಲಾಖೆ ಸಚಿವ ಡಾ. ರಿಯಾದ್ ಅಲ್ ಮಲಿಕಿ ತೀವ್ರ ನೋವು ವ್ಯಕ್ತಪಡಿಸಿದ್ದಾರೆ. ಭಾರತದ ರಾಯಭಾರಿ ಆರ್ಯಾ ನಿಧನದಿಂದ ದುಃಖವಾಗಿದೆ. ಮೃತದೇಹವನ್ನು ಭಾರತಕ್ಕೆ ಕಳಿಸಲು ಅಗತ್ಯವಿರುವ ಎಲ್ಲ ಪ್ರಕ್ರಿಯೆಗಳನ್ನೂ ನಡೆಸಲಾಗುವುದು. ಈ ಸಂಬಂಧ ಭಾರತದ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದೂ ಹೇಳಿದ್ದಾರೆ. ಪ್ಯಾಲಿಸ್ತೀನ್ ಅಧ್ಯಕ್ಷ ಮೊಹಮದ್ ಅಬ್ಬಾಸ್ ಮತ್ತು ಪ್ರಧಾನಮಂತ್ರಿ ಡಾ. ಮುಹಮ್ಮದ್ ಷ್ಟಯೇ ಅವರಿಗೂ ಈ ವಿಚಾರ ತಿಳಿಸಲಾಗಿದೆ. ಅವರೂ ಕೂಡ ಸಂತಾಪ ವ್ಯಕ್ತಪಡಿಸಿದ್ದು, ಭಾರತದ ರಾಯಭಾರಿ ನಿಧನದ ವಿಷಯವನ್ನು ಭದ್ರತಾ ಸಿಬ್ಬಂದಿ, ಪೊಲೀಸ್, ಸಾರ್ವಜನಿಕ ಆಡಳಿತಗಳಿಗೆ ತಿಳಿಸಲು ಸೂಚಿಸಿದ್ದಾರೆ ಎಂದೂ ಕೂಡ ಪ್ಯಾಲಿಸ್ತೀನ್ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
Deeply shocked to learn about the passing away of India’s Representative at Ramallah, Shri Mukul Arya.
He was a bright and talented officer with so much before him. My heart goes out to his family and loved ones. Om Shanti.
— Dr. S. Jaishankar (@DrSJaishankar) March 6, 2022
ಮುಕುಲ್ ಆರ್ಯಾ ಇವರು ವೃತ್ತಿಯಲ್ಲಿ ರಾಜತಾಂತ್ರಿಕರು. ಈ ಹಿಂದೆ ದೆಹಲಿಯಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆಯಲ್ಲಿ ಕೂಡ ಕೆಲಸ ಮಾಡಿದ್ದಾರೆ. ಪ್ಯಾರಿಸ್ನಲ್ಲಿರುವ ಯುನೆಸ್ಕೋದಲ್ಲಿ ಭಾರತದ ಶಾಶ್ವತ ನಿಯೋಗದ ಪ್ರತಿನಿಧಿಯಾಗಿದ್ದರು. ಅಷ್ಟೇ ಅಲ್ಲ, ಕಾಬೂಲ್ ಮತ್ತು ಮಾಸ್ಕೋದಲ್ಲಿ ಕೂಡ ಭಾರತದ ರಾಯಭಾರಿಯಾಗಿದ್ದರು. ದೆಹಲಿಯಲ್ಲಿಯೇ ಬೆಳೆದು ಶಿಕ್ಷಣ ಪಡೆದ ಮುಕುಲ್ ಆರ್ಯಾ, ಜೆಎನ್ಯು ಮತ್ತು ದೆಹಲಿ ಯೂನಿವರ್ಸಿಟಿಯಲ್ಲಿ ಆರ್ಥಿಕತೆ ಅಧ್ಯಯನ ಮಾಡಿದ್ದಾರೆ. 2008ರಲ್ಲಿ ಇಂಡಿಯನ್ ಫಾರಿನ್ ಸರ್ವೀಸ್ ಸೇರಿದ್ದರು.
ಇದನ್ನೂ ಓದಿ: ಸೋನಾಕ್ಷಿ ಸಿನ್ಹಾಗೆ ಬಂಧನ ಭೀತಿ; ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ ಕೋರ್ಟ್: ಏನಿದು ಕೇಸ್?