AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chitra Ramakrishna: ಅಪರಿಚಿತ ಯೋಗಿ ಇಶಾರೆಯಂತೆ 3 ವರ್ಷ ಎನ್​ಎಸ್​ಇ ಮುನ್ನಡೆಸಿದ ಮಾಜಿ ಸಿಇಒ ಚಿತ್ರಾ ವಿಚಿತ್ರ ಸ್ಟೋರಿ

ಎನ್​ಎಸ್​ಇಯಲ್ಲಿ ಎಂ.ಡಿ. ಹಾಗೂ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಅಪರಿಚಿತ ಯೋಗಿಯ ಇಶಾರೆಯಂತೆಯೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡ ಚಿತ್ರಾ ರಾಮಕೃಷ್ಣ ಅವರು ಸೆಬಿಗೆ ನೀಡಿದ ಜವಾಬುಗಳು ಹೇಗಿವೆ ಎಂಬ ಮಾಹಿತಿ ಇಲ್ಲಿದೆ.

Chitra Ramakrishna: ಅಪರಿಚಿತ ಯೋಗಿ ಇಶಾರೆಯಂತೆ 3 ವರ್ಷ ಎನ್​ಎಸ್​ಇ ಮುನ್ನಡೆಸಿದ ಮಾಜಿ ಸಿಇಒ ಚಿತ್ರಾ ವಿಚಿತ್ರ ಸ್ಟೋರಿ
ಚಿತ್ರಾ ರಾಮಕೃಷ್ಣ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on:Feb 19, 2022 | 12:56 PM

Share

ಒಬ್ಬ ವ್ಯಕ್ತಿಯು ಧಾರ್ಮಿಕ ಗುರುಗಳನ್ನು ಎಷ್ಟೆಲ್ಲ ನಂಬಬಹುದು? ನಂಬಿಕೆಯ ಪರಾಕಾಷ್ಠೆ ಅಂದರೆ ಇದೇ ಇರಬಹುದಾ? ನ್ಯಾಷನಲ್ ಸ್ಟಾಕ್​ ಎಕ್ಸ್​ಚೇಂಜ್ (NSE) ಮಾಜಿ ಸಿಇಒ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಚಿತ್ರಾ ರಾಮಕೃಷ್ಣ ಅವರ ಉತ್ತರಗಳು ಚಿತ್ರ ವಿಚಿತ್ರವಾಗಿವೆ. ಹಿಮಾಲಯದಲ್ಲಿನ “ಯೋಗಿ”ಯೊಬ್ಬರ ಜತೆಗೆ ನ್ಯಾಷನಲ್ ಸ್ಟಾಕ್​ ಎಕ್ಸ್​ಚೇಂಜ್​ನ ರಹಸ್ಯ ವಿಚಾರಗಳನ್ನು ಹಂಚಿಕೊಂಡ ಆರೋಪ ಹೊತ್ತಿರುವ ಚಿತ್ರಾ, ಆ ಯೋಗಿಯ ನಿರ್ದೇಶನ- ಸೂಚನೆ ಮೇರೆಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂಬ ಗಂಭೀರ ಆಪಾದನೆಯನ್ನೂ ಎದುರಿಸಿದ್ದಾರೆ. ಸೆಬಿ (Securities Exchange Board Of India) ಆರೋಪ ಮಾಡಿರುವಂತೆ, ಎನ್​ಎಸ್​ಇ ಹಣಕಾಸು ಹಾಗೂ ವ್ಯವಹಾರದ ಯೋಜನೆ, ಡಿವಿಡೆಂಡ್ ಸನ್ನಿವೇಶ, ಹಣಕಾಸು ಫಲಿತಾಂಶವೂ ಒಳಗೊಂಡಂತೆ ವರ್ಗೀಕೃತ ಮಾಹಿತಿಯನ್ನು ಆ ಯೋಗಿ ಜತೆಗೆ ಚಿತ್ರಾ ರಾಮಕೃಷ್ಣ ಹಂಚಿಕೊಂಡಿದ್ದಾರೆ.

ಚಿತ್ರಾ ರಾಮಕೃಷ್ಣನ್ ಅವರು ಸೆಬಿ ಪ್ರಶ್ನೆಗಳಿಗೆ ನೀಡಿದ ಪ್ರತಿಕ್ರಿಯೆ, ಧಾರ್ಮಿಕ ಗುರುವಿನ ಮೇಲೆ ಆಕೆಯ ಅವಲಂಬನೆ, ಅಪರಿಚಿತ ವ್ಯಕ್ತಿಯೊಂದಿಗೆ ಇಮೇಲ್​ಗಳ ವಿನಿಮಯದ ಬಗ್ಗೆ ಹೇಳಿಕೊಂಡಿದ್ದಾರೆ. ಸೆಬಿ ದಾಖಲಿಸಿರುವಂತೆ, ಇಮೇಲ್​ಗಳ ಆಧಾರದಲ್ಲಿ ಹೇಳುವುದಾದರೆ, 2015ರಲ್ಲಿ ಹಲವು ಬಾರಿ ಈ ಯೋಗಿಯನ್ನು ಚಿತ್ರಾ ಭೇಟಿ ಮಾಡಿದ್ದಾರೆ. 2013ರಿಂದ 2016ನೇ ಇಸವಿ ತನಕ ಷೇರು ಮಾರುಕಟ್ಟೆಯನ್ನು ಚಿತ್ರಾ ಮುನ್ನಡೆಸುತ್ತಿದ್ದರು. ಆ “ಅಪರಿಚಿತ ವ್ಯಕ್ತಿ”ಯು rigyajursama@outlook.com ಬಳಕೆ ಮಾಡಿದ್ದಾರೆ. ಆ ಇಮೇಲ್​ ಐಡಿಯನ್ನು ಸಿದ್ಧಪುರುಷ/ಯೋಗಿಯು ಬಳಸುತ್ತಿದ್ದದ್ದು ಬಹುತೇಕ ಹಿಮಾಲಯದ ಶ್ರೇಣಿಗಳಲ್ಲಿ ಇರುವಾಗಲೇ ಎಂದು ಕೂಡ ಚಿತ್ರಾ ಹೇಳಿದ್ದಾರೆ.

“ಪವಿತ್ರ ಸ್ಥಳಗಳಲ್ಲಿನ ಕಾರ್ಯಕ್ರಮಗಳಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೇನೆ. ಯಾವುದೇ ನಿರ್ದಿಷ್ಟ ಸ್ಥಳ ಅಂತೇನಿಲ್ಲ,” ಎಂಬುದು ಇಲ್ಲ ಎಂದಿದ್ದಾರೆ. ಹಿಮಾಲಯದಲ್ಲಿನ ಯೋಗಿಗೆ ಇಮೇಲ್​ಸಂಪರ್ಕ ಹೇಗೆ ಸಿಗುತ್ತಿತ್ತು ಮತ್ತು ನಿಯಮಿತವಾಗಿ ಹೇಗೆ ಸಂವಹನ ನಡೆಸುತ್ತಿದ್ದರು ಎಂದು ಚಿತ್ರಾ ಅವರನ್ನು ಸೆಬಿಯಿಂದ ಕೇಳಲಾಗಿದೆ. ಆದಕ್ಕೆ ಆಕೆ, ನನಗೆ ಇರುವ ತಿಳಿವಳಿಕೆ ಮಟ್ಟಿಗೆ ಅವರ ಧಾರ್ಮಿಕ ಶಕ್ತಿಗೆ ಭೌತಿಕವಾದ ಕೋ- ಆರ್ಡಿನೇಟ್ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ನಾನು ಅವರನ್ನು ಇಪ್ಪತ್ತು ವರ್ಷದ ಹಿಂದೆ ಮೊದಲ ಬಾರಿಗೆ ಗಂಗಾ ನಂದಿಯ ತಟದಲ್ಲಿ ನೇರವಾಗಿ ಭೇಟಿ ಆಗಿದ್ದೆ. ಆ ನಂತರ ವರ್ಷಗಳು ಕಳೆದಂತೆ ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳಲ್ಲಿ ನಾನು ಅವರ ಮಾರ್ಗದರ್ಶನ ಪಡೆದಿದ್ದೇನೆ. ಈ ಮಾರ್ಗದುದ್ದಕ್ಕೂ ಅವರು ಇಚ್ಛೆಯಂತೆ ಸೂಚನೆ ಮಾಡುತ್ತಿದ್ದರು ಮತ್ತು ನನ್ನ ಬಳಿ ಅವರ ಯಾವುದೇ ಸ್ಥಳದ ಬಗ್ಗೆ ಖಚಿತತೆ ಇಲ್ಲದ ಕಾರಣ, ನಾನು ಅಗತ್ಯವೆಂದು ಭಾವಿಸಿದಾಗ ಅವರ ಮಾರ್ಗದರ್ಶನವನ್ನು ಪಡೆಯುವ ಮಾರ್ಗಕ್ಕಾಗಿ ವಿನಂತಿಸಿದೆ. ಅದರಂತೆ, ಅವರು ನನ್ನ ವಿನಂತಿಗಳನ್ನು ಕಳುಹಿಸಬಹುದಾದ ಐಡಿಯನ್ನು ನೀಡಿದರು ಎಂದಿರುವ ಚಿತ್ರಾ ಆ ವ್ಯಕ್ತಿಯನ್ನು ಧಾರ್ಮಿಕ ಶಕ್ತಿ ಎಂದು ಸೆಬಿಗೆ ಬಣ್ಣಿಸಿದ್ದಾರೆ. ಸೆಬಿಯ ಆದೇಶದಲ್ಲಿ ಈ ಇಬ್ಬರ ಮಧ್ಯದ ಇಮೇಲ್​ಗಳ ಪಟ್ಟಿ ಸಹ ಇದೆ.

ಇದನ್ನೂ ಓದಿ: ಚಿತ್ರಾ ರಾಮಕೃಷ್ಣ ಯಾರು? ಅವರ ವೃತ್ತಿಜೀವನದ ಸಾಧನೆ ಹೇಗಿದೆ ಗೊತ್ತಾ?

Published On - 12:55 pm, Sat, 19 February 22

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!