Anil Ambani: ರಿಲಯನ್ಸ್ ಹೋಮ್ ಫೈನಾನ್ಸ್, ಅನಿಲ್ ಅಂಬಾನಿ ಮತ್ತು ಇತರ ಮೂವರನ್ನು ಸೆಕ್ಯೂರಿಟೀಸ್​ ಮಾರುಕಟ್ಟೆಯಿಂದ ನಿಷೇಧಿಸಿದ ಸೆಬಿ

ರಿಲಯನ್ಸ್ ಹೋಮ್ ಫೈನಾನ್ಸ್, ಅನಿಲ್ ಅಂಬಾನಿ ಮತ್ತು ಇತರ ಮೂವರನ್ನು ಸೆಕ್ಯೂರಿಟೀಸ್ ಮಾರ್ಕೆಟ್​ನಿಂದ ನಿಷೇಧಿಸಲಾಗಿದೆ ಎಂದು ಸೆಬಿ ತಿಳಿಸಿದೆ.

Anil Ambani: ರಿಲಯನ್ಸ್ ಹೋಮ್ ಫೈನಾನ್ಸ್, ಅನಿಲ್ ಅಂಬಾನಿ ಮತ್ತು ಇತರ ಮೂವರನ್ನು ಸೆಕ್ಯೂರಿಟೀಸ್​ ಮಾರುಕಟ್ಟೆಯಿಂದ ನಿಷೇಧಿಸಿದ ಸೆಬಿ
ಅನಿಲ್ ಅಂಬಾನಿ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Feb 12, 2022 | 3:03 PM

ರಿಲಯನ್ಸ್​ ಹೋಮ್ ಫೈನಾನ್ಸ್​ ಲಿಮಿಟೆಡ್​, ಉದ್ಯಮಿ ಅನಿಲ್ ಅಂಬಾನಿ (Anil Ambani) ಮತ್ತು ಇತರ ಮೂವರು ಸೆಕ್ಯೂರಿಟೀಸ್ ಮಾರುಕಟ್ಟೆಯಿಂದ ನಿಷೇಧಿಸಲಾಗಿದೆ ಎಂದು ಸೆಕ್ಯೂರಿಟೀಸ್ ಎಕ್ಸ್​ಚೇಂಜ್ ಬೋರ್ಡ್​ ಆಫ್ ಇಂಡಿಯಾ (SEBI) ಫೆಬ್ರವರಿ 11ರಂದು ತಿಳಿಸಿದೆ. ಕಂಪೆನಿಯಿಂದ ಹಣ ವಂಚನೆ ಮಾಡಿದ ಆರೋಪದಲ್ಲಿ ಈ ಬೆಳವಣಿಗೆ ನಡೆದಿದೆ. ನಿಷೇಧಕ್ಕೆ ಒಳಗಾದ ಇತರ ಮೂವರೆಂದರೆ, ಅಮಿತ್ ಬಾಪ್ನಾ, ರವೀಂದ್ರ ಸುಧಾಕರ್ ಮತ್ತು ಪಿಂಕೇಶ್ ಆರ್ ಶಾ. 100 ಪುಟಗಳ ಮಧ್ಯಂತರ ಆದೇಶದಲ್ಲಿ, ಈ ವ್ಯಕ್ತಿಗಳು ತಮ್ಮನ್ನು ಯಾವುದೇ ಲಿಸ್ಟೆಡ್ ಕಂಪೆನಿಗಳು ಅಥವಾ ಸೆಬಿಯೊಂದಿಗೆ ನಂಟು ಹೊಂದಿರುವ ನೋಂದಾಯಿತ ಮಧ್ಯವರ್ತಿಗಳ ಜತೆಗೆ ವ್ಯವಹರಿಸುವಂತಿಲ್ಲ. ಅಥವಾ ಮುಂದಿನ ಆದೇಶದವರೆಗೆ ಸಾರ್ವಜನಿಕರಿಂದ ಹಣ ಸಂಗ್ರಹ ಉದ್ದೇಶಕ್ಕೆ ಯಾವುದೇ ಪಬ್ಲಿಕ್ ಕಂಪೆನಿಯ ಹಂಗಾಮಿ ನಿರ್ದೇಶಕರು/ಪ್ರವರ್ತಕರಾಗುವಂತಿಲ್ಲ ಎನ್ನಲಾಗಿದೆ.

ಕಂಪೆನಿಯಿಂದ ಹಣವನ್ನು ವಂಚಿಸಿದ ಆರೋಪಕ್ಕೆ ಸಂಬಂಧಿಸಿದ ಆದೇಶವನ್ನು ಒಟ್ಟು 28 ವ್ಯಕ್ತಿಗಳು ಮತ್ತು ಘಟಕಗಳ ವಿರುದ್ಧ (ನೋಟಿಸ್‌ಗಳು) ರವಾನಿಸಲಾಗಿದೆ. 2018-19ರ ಅವಧಿಯಲ್ಲಿ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (ಆರ್‌ಎಚ್‌ಎಫ್‌ಎಲ್) ಹಲವಾರು ಸಾಲ ಪಡೆಯುವ ಘಟಕಗಳಿಗೆ ಸಾಲಗಳನ್ನು ವಿತರಿಸಿದ ವಿಧಾನವನ್ನು ವಿಶಾಲವಾಗಿ ಪರಿಶೀಲಿಸುವುದು ಸೆಬಿ ತನಿಖೆಯ ಗಮನವಾಗಿತ್ತು. ಪ್ರಸ್ತುತ ಪ್ರಕ್ರಿಯೆಗಳ ಮೂಲವನ್ನು ಅನೇಕ ಮೂಲದಿಂದಲೂ ಕಂಡುಹಿಡಿಯಲಾಗಿದೆ ಎಂದು ಸೆಬಿ ತಿಳಿಸಿದೆ.

ಇತರ ವಿಷಯಗಳ ಮಧ್ಯೆ ಕಂಪೆನಿ ಶಾಸನಬದ್ಧ ಲೆಕ್ಕಪರಿಶೋಧಕರಾಗಿ ತಮ್ಮ ರಾಜೀನಾಮೆ ಆರ್​ಎಚ್​ಎಫ್​ಎಲ್​ಗೆ ತಿಳಿಸುವ ಪತ್ರವನ್ನು ವಾಟರ್‌ಹೌಸ್ ಮತ್ತು ಕೋಗೆ ನೀಡಿದ್ದರು. ಮತ್ತು ಕಂಪೆನಿಯ ಪ್ರವರ್ತಕರು ಮತ್ತು ಮ್ಯಾನೇಜ್‌ಮೆಂಟ್‌ನಿಂದ ಆರ್​ಎಚ್​ಎಫ್​ಎಲ್​ನ ನಿಧಿಯನ್ನು ವಂಚನೆ ಮಾಡಲಾಗುತ್ತಿದೆ/ಬದಲಾಯಿಸಲಾಗಿದೆ ಎಂದು ಆರೋಪಿಸಿ ಸೆಬಿ ದೂರುಗಳನ್ನು ಸ್ವೀಕರಿಸಿದೆ. ವಿವಿಧ ಸಾಲದಾತರಿಂದ ಆರ್​ಎಚ್​ಎಫ್​ಎಲ್ ಪಡೆದ ಸಾಲದ ಹಣವನ್ನು ಭಾಗಶಃ ಸಾಲಗಳ ಮರುಪಾವತಿಗೆ ಬಳಸಲಾಗಿದೆ ಎಂದು ಆರೋಪಿಸಿ ಬ್ಯಾಂಕ್‌ಗಳಿಂದ ಬಹು ವಂಚನೆ ಮಾನಿಟರಿಂಗ್ ರಿಟರ್ನ್ಸ್ (FMRಗಳು) ಇವೆ ಎಂದು ನಿಯಂತ್ರಕವಾದ ಸೆಬಿ ಹೇಳಿದೆ.

ವಿವಿಧ ಸಂಬಂಧಿತ ವ್ಯಕ್ತಿಗಳು ಮತ್ತು ದುರ್ಬಲ ಹಣಕಾಸು ಹೊಂದಿರುವ ಕಂಪೆನಿಗಳನ್ನು ಆರ್​ಎಚ್​ಎಫ್​ಎಲ್​ನಿಂದ ಪ್ರವರ್ತಕ ಕಂಪೆನಿ ರಿಲಯನ್ಸ್ ಕ್ಯಾಪಿಟಲ್‌ಗೆ ಸಂಪರ್ಕ ಹೊಂದಿದ ಘಟಕಗಳನ್ನು ಹಣವನ್ನು ಹೊರಕ್ಕೆ ಸಾಗಿಸಲು ಮಾರ್ಗಗಳಾಗಿ ಬಳಸಲಾಗಿದೆ ಎಂದು ದೂರಲಾಗಿದೆ ಎಂಬುದಾಗಿ ಆದೇಶದಲ್ಲಿ ತಿಳಿಸಲಾಗಿದೆ. “ಒಬ್ಬ ವ್ಯಕ್ತಿ ಅನಿಲ್ ಅಂಬಾನಿ ಕಂಪೆನಿಯನ್ನು ತನ್ನ ಪ್ರವರ್ತಕ ಸ್ಥಾನದಿಂದ ನಿಯಂತ್ರಿಸುವ ಮತ್ತು ತನ್ನ ನೇರ ಹಾಗೂ ಪರೋಕ್ಷ ಷೇರು ಪಾಲಿನ ಮೂಲಕ ಷೇರುದಾರರನ್ನು ನಿಯಂತ್ರಿಸುವ ಅನಿಯಂತ್ರಿತ ಅಧಿಕಾರವನ್ನು ಚಲಾಯಿಸುತ್ತಿದ್ದುದನ್ನು ಗಮನಿಸಲಾಗಿದೆ,” ಎಂದು ಸೆಬಿ ಹೇಳಿದೆ.

ಇದನ್ನೂ ಓದಿ: SEBI: ವಂಚನೆ ವಹಿವಾಟು ನಡೆಸಿದ 85 ಸಂಸ್ಥೆಗಳನ್ನು ಕ್ಯಾಪಿಟಲ್​ ಮಾರ್ಕೆಟ್​ನಿಂದ ನಿಷೇಧಿಸಿದ ಸೆಬಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ