Work From Home: ಕಚೇರಿಗೆ ಬನ್ನಿ, ಇಲ್ಲ ಬೇರೆ ಕೆಲಸ ಹುಡುಕಿಕೊಳ್ಳಿ ಎಂದಿದ್ದಕ್ಕೆ ಆ ಕಂಪೆನಿ ಸಿಬ್ಬಂದಿ ಮಾಡಿದ್ದೇನು?

ಕಂಪೆನಿಯೊಂದರ ಸಿಇಒ ಉದ್ಯೋಗಿಗಳಿಗೆ ಕಚೇರಿಯಿಂದಲೇ ಕೆಲಸ ಮಾಡುವುದನ್ನು ಕಡ್ಡಾಯ ಮಾಡಿದ್ದಕ್ಕೆ ಆ ನಂತರ ಎಂಬುದರ ಬಗ್ಗೆ ಉದ್ಯೋಗಿಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

Work From Home: ಕಚೇರಿಗೆ ಬನ್ನಿ, ಇಲ್ಲ ಬೇರೆ ಕೆಲಸ ಹುಡುಕಿಕೊಳ್ಳಿ ಎಂದಿದ್ದಕ್ಕೆ ಆ ಕಂಪೆನಿ ಸಿಬ್ಬಂದಿ ಮಾಡಿದ್ದೇನು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Feb 12, 2022 | 12:02 PM

ಕೊರೊನಾ ಬಂದೇ ಬಂತು, ಕಚೇರಿಗಳಿಗೆ ಹೋಗಿಯೇ ಕೆಲಸ ಮಾಡಬೇಕು ಅನ್ನೋ ಆ ಹಳೇ ಆಲೋಚನೆಯನ್ನೇ ತಲೆ ಕೆಳಗಾಗಿಸಿತು. ಎಲ್ಲೋ ಮಂತ್ರಿಗಳು, ದೊಡ್ಡ ಕಂಪೆನಿಗಳ ಸಿಇಒಗಳ ಬಾಯಿಂದ ಕೇಳಿದ್ದ ಹೋಮ್​ ಆಫೀಸ್​ (ವರ್ಕ್​ ಫ್ರಮ್ ಹೋಮ್) ಎಂಬ ಮಾದರಿ ಈಗ ಎಲ್ಲೆಡೆಯೂ ಸಾಮಾನ್ಯ ಎಂಬಂತಾಗಿದೆ. ಆದರೆ ಹಲವು ಕಂಪೆನಿಗಳಿಗೇ ಈಗಾಗಲೇ ವರ್ಕ್ ಫ್ರಮ್ ಹೋಮ್ (Work From Home) ಬೇಡವಾಗಿದೆ. ಯಾವಾಗ ಮತ್ತೆ ಕಚೇರಿಗಳಿಗೆ ವಾಪಸಾಗ್ತೀವೋ ಎಂದು ಅನೇಕರು ಕಾಯುತ್ತಿದ್ದಾರೆ. ನಿಮಗೆ ಇಲ್ಲೊಂದು ತಮಾಷೆ, ವಿಚಿತ್ರ ಹಾಗೂ ಇವತ್ತಿನ ಮಟ್ಟಿಗೆ ಸತ್ಯವಾದ ಘಟನೆಯೊಂದರ ವರದಿ ಇದೆ. ಕಂಪೆನಿಯೊಂದರ ಸಿಇಒ ಉದ್ಯೋಗಿಗಳಿಗೆ, ವರ್ಕ್​ ಫ್ರಮ್ ಹೋಮ್ ಬೇಕು ಅನ್ನೋ ಹಾಗಿದ್ದರೆ ಬೇರೆ ಕಡೆಗೆ ಕೆಲಸ ನೋಡಿಕೊಳ್ಳಿ ಅಂದರಂತೆ. ಅದಕ್ಕೆ ಸಿಬ್ಬಂದಿ ಮುಲಾಜಿಲ್ಲದೆ ಕೆಲಸ ಬಿಟ್ಟಿದ್ದಾರೆ. ಈ ಸನ್ನಿವೇಶವನ್ನು ಉದ್ಯೋಗಿಯೊಬ್ಬರು ವಿವರಿಸಿದ್ದಾರೆ: ಅದೊಂದು ಫುಡ್​ ಡೆಲಿವರಿ ಆ್ಯಪ್. Redditನಲ್ಲಿ ಸಹೋದ್ಯೋಗಿಗಳ ಪ್ರತಿಕ್ರಿಯೆ ಹೇಗಿದೆ? ಮತ್ತೆ ಕಚೇರಿಗೆ ಬರುವ ವಿಚಾರದಲ್ಲಿ ಅವರ ನಿಲವು ಹೇಗೆ ಎಂಬುದನ್ನು ತಿಳಿಸಿದ್ದಾರೆ.

“ಕಳೆದ ವರ್ಷ ಕೆಲ ಸಮಯ ಫುಡ್ ಡೆಲಿವರಿ ಆ್ಯಪ್​ನ ಅಭಿವೃದ್ಧಿ ಪಡಿಸುವ ತಂಡದಲ್ಲಿ ಟೀಮ್​ ಲೀಡ್​ ಆಗಿ ಕೆಲಸ ಮಾಡಿದೆ. ಕೊರೊನಾ ಶುರುವಾದಾಗಿನಿಂದ ಪೂರ್ತಿ ತಂಡ ವರ್ಕ್​ ಫ್ರಮ್ ಹೋಮ್ ಮಾಡುತ್ತಿತ್ತು. ಇನ್ನು ದೂರದಿಂದ ಕೆಲಸ ಮಾಡುವಂಥ ಕೆಲ ಜನರಿದ್ದರು. ವಿವಿಧ ಟೈಮ್ ಝೋನ್​ಗಳಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಭವಿಷ್ಯದಲ್ಲಿ ಹೀಗೇ ಇರಲಿದೆ ಎಂಬ ಆಲೋಚನೆಯಲ್ಲಿ ಅದು ಹಾಗೇ ಕೆಲಸ ಮಾಡಿಕೊಂಡು ಹೋಗುವಂತೆ ನೋಡಿಕೊಂಡೆವು,” ಎಂದು ಬರೆದುಕೊಳ್ಳುತ್ತಾರೆ. ಆ ನಂತರ ಸೀನಿಯರ್​ಗಳು ನಿರ್ಧರಿಸಿ, ಅರೆಕಾಲಿಕವಾಗಿ ನಾವು ಕಚೇರಿಗಳಿಗೆ ಹಿಂತಿರುಗುತ್ತೇವೆ, ಕ್ರಮೇಣ ಪೂರ್ಣಾವಧಿಗೆ ಹೆಚ್ಚಿಸುತ್ತೇವೆ ಎಂದರು. ನಮ್ಮನ್ನು ನೇಮಕ ಮಾಡಿಕೊಳ್ಳುವಾಗಲೇ ಹೇಳಿದ್ದರು: ಒಂದು ವೇಳೆ ಕಚೇರಿಗೆ ಹಿಂತಿರುಗುವುದಾದರೆ ಸಮಯದ ವಿಚಾರದಲ್ಲಿ ಆರಾಮವಾಗಿ ಇರುತ್ತದೆ ಎಂಬ ಮಾತು. ಆದರೆ ವಾಸ್ತವದಲ್ಲಿ ಹಾಗಾಗಲಿಲ್ಲ ಎಂದು ಹೇಳಿದ್ದಾರೆ.

ಯಾವ ಉದ್ಯೋಗಿಗಳು ಕಂಪೆನಿಯ ಕಚೇರಿ ಇಲ್ಲದ ನಗರದಲ್ಲಿ ಕೆಲಸ ಮಾಡುತ್ತಿದ್ದರೋ ಹಾಗೂ ಅವರನ್ನು ರಿಮೋಟ್ ಸಿಬ್ಬಂದಿ ಅಂತಲೇ ನೇಮಕ ಮಾಡಿಕೊಳ್ಳಲಾಗಿತ್ತೋ ಅಂಥವರನ್ನು 1 ವರ್ಷದ ಯೋಜನೆಯೊಂದಿಗೆ ಯಾವುದೇ ನೆರವು ಅಥವಾ ಪರಿಹಾರ ನೀಡದೆ ಕಚೇರಿ ಇರುವಂಥ ನಗರಕ್ಕೆ ಬರುವುದಕ್ಕೆ ಕೇಳಲಾಯಿತು. ದೂರದಿಂದ ಕೆಲಸ ಮಾಡುತ್ತಿದ್ದ ಜನರು ಈ ಬೆಳವಣಿಗೆಯಿಂದ ಬಹಳ ಬೇಸರಗೊಂಡರು. ಏಕೆಂದರೆ ತಮ್ಮ ಕುಟುಂಬವನ್ನು ಸ್ಥಳಾಂತರಿಸುವುದು ಅವರಿಗಿಷ್ಟ ಇರಲಿಲ್ಲ. ಪ್ರಶ್ನೋತ್ತರ ಸಮಯದಲ್ಲಿ ಒಬ್ಬ ಸಿಬ್ಬಂದಿಯು ಸಿಇಒ ಅವರನ್ನೇ ಈ ಬಗ್ಗೆ ಪ್ರಶ್ನಿಸಿದರು. ಇಂಥ ಸನ್ನಿವೇಶದಲ್ಲಿ ಏನಾದರೂ ವಿನಾಯಿತಿ ಉಂಟಾ ಎಂಬುದು ಕಂಪೆನಿ ಕಡೆಯಿಂದ ಅವರ ನಿರೀಕ್ಷೆ ಆಗಿತ್ತು. ಆದರೆ ಸಿಇಒ ಮುಖಕ್ಕೆ ಹೇಳಿದ್ದೇನು ಗೊತ್ತಾ, ನೋಡಿ, ಇದು ನಾವು ಮಾಡುತ್ತಿರುವುದು ಹಾಗೂ ಕಂಪೆನಿಗೆ ಯಾವುದು ಒಳ್ಳೆಯದು ಎನಿಸುತ್ತಿದೆಯೋ ಅದೇ ಮಾಡುತ್ತಿದ್ದೇವೆ. ನೀವು ಮನೆಯಿಂದ ಕೆಲಸ ಮಾಡಬೇಕು ಎಂದು ಬಯಸಿದರೆ, ಬೇರೆ ಎಲ್ಲಾದರೂ ಹೋಗಿ ಕೆಲಸ ಮಾಡಿ ಎಂಬುದು ನನ್ನ ಸಲಹೆ ಎಂದು ಹೇಳಿದರು ಎಂಬುದಾಗಿ ಆಗಿನ ಘಟನೆಯನ್ನು ವಿವರಿದ್ದಾರೆ.

ಸಿಇಒ ಸಲಹೆಯನ್ನು ಸಿಬ್ಬಂದಿ ಗಂಭೀರವಾಗಿ ಪರಿಗಣಿಸಿದರು. “ಆ ನಂತರ ಏನಾಯಿತು ಅಂದರೆ ಬಲೂನ್‌ನಿಂದ ಗಾಳಿ ಹೊರಹೋಗುವಂತೆ ಡಿಜಿಟಲ್ ಸಂವಾದಗಳ ಸಂಖ್ಯೆ ಕಡಿಮೆ ಆದವು. ಕಂಪೆನಿಯ ಮುಖ್ಯ ಚಾನೆಲ್ ಸಂಭಾಷಣೆಗಳು ಸ್ಥಗಿತಗೊಂಡವು ಮತ್ತು ಗಂವ್ವೆನ್ನುವಂತೆ ಜನರೇ ಇಲ್ಲವೆನ್ನುವಂತಾಯಿತು. ಉತ್ಸಾಹಭರಿತವಾದ ಸಂಭಾಷಣೆಗಳಿಂದ ಕೂಡಿರುತ್ತಿದ್ದದ್ದು ಕನಿಷ್ಠ ಕ್ರಿಯಾತ್ಮಕ ಸೌಜನ್ಯವಾಗಿ ಮಾರ್ಪಡುತ್ತಾ ಸಾಗಿತು. ಕಂಪೆನಿಯಾದ್ಯಂತದ ಸಭೆಗಳಲ್ಲಿ ಹಾಜರಾತಿ ಅರ್ಧದಷ್ಟು ಕುಸಿಯಿತು ಮತ್ತು ಒಂದು ತಿಂಗಳೊಳಗೆ ನನ್ನನ್ನೂ ಒಳಗೊಂಡಂತೆ ಹಲವರು ರಾಜೀನಾಮೆ ನೀಡಿದ್ದರಿಂದ ನಿಜವಾದ ಕೋಲಾಹಲವೇ ಸೃಷ್ಟಿಯಾಯಿತು,” ಎಂದು ಸಿಬ್ಬಂದಿಯು ಸನ್ನಿವೇಶವನ್ನು ವಿವರಿಸಿದ್ದಾರೆ.

ಮೊದಲಿಗೆ ತಮ್ಮ ತಂಡದಲ್ಲಿ ಎಂಟು ಸಿಬ್ಬಂದಿ ಇದ್ದರು ಎಂದು ಹೇಳುತ್ತಿದ್ದರು. ಈಗ ಕೇವಲ ಇಬ್ಬರು ಮಾತ್ರ ಅದೇ ಕಂಪೆನಿಯಲ್ಲಿ ಉಳಿದು, ಹೊಸ ನೀತಿಗೆ ಬದ್ಧವಾಗಿರುವುದಕ್ಕೆ ನಿರ್ಧರಿಸಿದ್ದಾರೆ. ಮತ್ತು ಆರು ತಿಂಗಳ ನಂತರವೂ ಕಂಪೆನಿಯು ಜನರನ್ನು ಹುಡುಕುವುದನ್ನು ಮುಂದುವರಿಸಿದೆ. “ನನಗೆ ಕಡಿಮೆ ಜವಾಬ್ದಾರಿ ಹಾಗೂ ಓವರ್​ಟೈಮ್​ ಮಾಡುತ್ತಿದ್ದ ಹೊರತಾಗಿಯೂ ಹೆಚ್ಚಿಗೆ ಹಣ ಸಿಗುತ್ತಿರಲಿಲ್ಲ. ಈಗ ಕಡಿಮೆ ಕೆಲಸದ ಸಮಯ ಹೊರತಾಗಿಯೂ ಶೇ 50ರಷ್ಟು ವೇತನ ಹೆಚ್ಚಳ ಪಡೆದಿದ್ದೇನೆ,” ಎಂದು ಉದ್ಯೋಗಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Pay Cut: ಸಿಬ್ಬಂದಿ ಶಾಶ್ವತವಾದ ವರ್ಕ್​ ಫ್ರಮ್ ಹೋಮ್ ಮಾಡಿದಲ್ಲಿ ಗೂಗಲ್​ನಿಂದ ಶೇ 5ರಿಂದ ಶೇ 25ರ ತನಕ ವೇತನ ಕಡಿತ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ