Pay Cut: ಸಿಬ್ಬಂದಿ ಶಾಶ್ವತವಾದ ವರ್ಕ್​ ಫ್ರಮ್ ಹೋಮ್ ಮಾಡಿದಲ್ಲಿ ಗೂಗಲ್​ನಿಂದ ಶೇ 5ರಿಂದ ಶೇ 25ರ ತನಕ ವೇತನ ಕಡಿತ

TV9 Digital Desk

| Edited By: Srinivas Mata

Updated on: Aug 10, 2021 | 6:35 PM

ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್​ ಮಾಡುವ ಸಿಬ್ಬಂದಿಗೆ ಅವರ ಮನೆ ಎಲ್ಲಿದೆ ಎಂಬುದನ್ನು ಆಧರಿಸಿ ಗೂಗಲ್​ನಿಂದ ಶೇ 5ರಿಂದ 25ರ ತನಕ ವೇತನ ಕಡಿತ ಆಗಲಿದೆ ಎಂದು ತಿಳಿಸಲಾಗಿದೆ.

Pay Cut: ಸಿಬ್ಬಂದಿ ಶಾಶ್ವತವಾದ ವರ್ಕ್​ ಫ್ರಮ್ ಹೋಮ್ ಮಾಡಿದಲ್ಲಿ ಗೂಗಲ್​ನಿಂದ ಶೇ 5ರಿಂದ ಶೇ 25ರ ತನಕ ವೇತನ ಕಡಿತ
ಪ್ರಾತಿನಿಧಿಕ ಚಿತ್ರ

ಗೂಗಲ್ ಕಂಪೆನಿಯ ಸಿಬ್ಬಂದಿಗೆ ಸಂಬಂಧಿಸಿದ ಸುದ್ದಿ ಇದು. ಅದರಲ್ಲೂ ಅವರ ವೇತನಕ್ಕೆ ಸಂಬಂಧಪಟ್ಟಿದ್ದು. ಯಾರು ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ಮಾಡುತ್ತಾರೋ ಅಂಥವರಿಗೆ ವೇತನದಲ್ಲಿ ಕಡಿತ ಮಾಡಲಾಗುತ್ತದೆ. ಅದರಲ್ಲೂ ದೂರದಿಂದ ಕೆಲಸ ಮಾಡುವವರಿಗೆ ಹೆಚ್ಚಿಗೆಯೇ ಪರಿಣಾಮ ಆಗುತ್ತದೆ ಎಂದು ಕಂಪೆನಿಯ ವೇತನ ಲೆಕ್ಕಾಚಾರಗಳನ್ನು ನೋಡಿರುವುದಾಗಿ ಹೇಳಿಕೊಂಡಿರುವ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಇದು ಪ್ರಾಯೋಗಿಕವಾಗಿ ನಡೆದಿರುವಂಥದ್ದು. ಉಳಿದ ಉದ್ಯೋಗದಾತರು ಇದನ್ನೇ ಅನುಸರಿಸುವ ಎಲ್ಲ ಸಾಧ್ಯತೆ ಇದೆ. ಕಡಿಮೆ ವೆಚ್ಚದ ಸ್ಥಳದಲ್ಲಿ- ದೂರದಿಂದ ಕೆಲಸ ಮಾಡುವವರಿಗೆ ಫೇಸ್​ಬುಕ್, ಟ್ವಿಟ್ಟರ್ ಕೂಡ ವೇತನ ಕಡಿತ ಮಾಡಲಿವೆ. ಅಂದಹಾಗೆ ಸಣ್ಣ ಕಂಪೆನಿಗಳಾದ Reddit, Zillow ಕೂಡ ಉದ್ಯೋಗಿಗಳು ಎಲ್ಲ ಕೆಲಸ ಮಾಡುತ್ತಾರೆ ಎಂಬುದರ ಆಧಾರದಲ್ಲಿ ವೇತನ ನಿಗದಿ ಮಾಡುತ್ತವೆ.

ಆಲ್ಫಾಬೆಟ್​ನ ಗೂಗಲ್​ನಿಂದ ಸಿಬ್ಬಂದಿಗೆ ಕ್ಯಾಲ್ಕುಲೇಟರ್ ಒಂದನ್ನು ಒದಗಿಸುತ್ತದೆ. ಆ ಮೂಲಕ ಈ ಬೆಳವಣಿಗೆಯ ಪರಿಣಾಮ ಏನಾಗಲಿದೆ ಎಂಬುದನ್ನು ತಿಳಿಯಬಹುದು. ಆದರೆ ಅಭ್ಯಾಸದಲ್ಲಿ ಇರುವಂತೆ, ದೂರದಿಂದ ಪ್ರಯಾಣಿಸುವ ಸಿಬ್ಬಂದಿ, ಅದರಲ್ಲೂ ತುಂಬ ದೂರ ಪ್ರದೇಶಗಳಿಂದ ಪ್ರಯಾಣಿಸುವವರಿಗೆ ತಮ್ಮ ವಿಳಾಸದ ಬದಲಾವಣೆ ಮಾಡದಿದ್ದರೂ ವೇತನ ಕಡಿತದ ಅನುಭವ ಪಡೆಯುತ್ತಾರೆ. “ನಮ್ಮ ವೇತನ ಪ್ಯಾಕೇಜ್ ಯಾವ ಸ್ಥಳ ಎಂಬುದರ ಮೇಲೆ ಆಧಾರ ಪಟ್ಟಿರುತ್ತದೆ. ಉದ್ಯೋಗಿಯು ಎಲ್ಲಿಂದ ಕೆಲಸ ಮಾಡುತ್ತಾರೋ ಅಲ್ಲಿನ ಸ್ಥಳೀಯ ಮಾರುಕಟ್ಟೆಗೆ ಅತಿ ಹೆಚ್ಚಿನ ವೇತನವನ್ನು ನಾವು ನೀಡುತ್ತೇವೆ,” ಎಂದು ಗೂಗಲ್ ವಕ್ತಾರರು ಹೇಳಿದ್ದು, ನಗರದಿಂದ ನಗರಕ್ಕೆ ಹಾಗೂ ರಾಜ್ಯದಿಂದ ರಾಜ್ಯಕ್ಕೆ ವೇತನ ಬದಲಾಗುತ್ತದೆ ಎಂದಿದ್ದಾರೆ.

ಸೀಟಲ್​ಗೆ ಸಮೀಪದ ಕೌಂಟಿಯಲ್ಲೇ ಇರುವ ಗೂಗಲ್ ಸಿಬ್ಬಂದಿಯೊಬ್ಬರು ಮಾತನಾಡಿದ್ದು, ತಮ್ಮ ಗುರುತನ್ನು ಬಹಿರಂಗ ಮಾಡಬಾರದು ಎಂದು ಕೇಳಿಕೊಂಡಿದ್ದಾರೆ. ಪೂರ್ಣಾವಧಿ ಸಿಬ್ಬಂದಿಯಾದ ಅವರಿಗೆ ಶೇ 10ರಷ್ಟು ವೇತನ ಕಡಿತ ಆಗುತ್ತದೆ. ಕೆಲಸ ಮಾಡುವ ಸ್ಥಳದ ಆಧಾರದಲ್ಲಿ ಕಂಪೆನಿಯ ಟೂಲ್​ನ ಲೆಕ್ಕಾಚಾರದಲ್ಲಿ ಗೊತ್ತಾಗಿರುವ ಸಂಗತಿ ಇದು. ಕಚೇರಿಯಿಂದ ದೂರ ಇದ್ದು, ಪ್ರಯಾಣಕ್ಕೆ 2 ಗಂಟೆ ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದರೂ ಆಫೀಸ್​ಗೆ ಹೋಗಲು ತೀರ್ಮಾನಿಸಿದ್ದಾರೆ. “ನನಗೆ ಇತ್ತೀಚೆಗೆ ಸಿಕ್ಕ ಬಡ್ತಿಗಿಂತಲೂ ವೇತನ ಕಡಿತ ಹೆಚ್ಚಾಗಿ ಬಿಡುತ್ತದೆ. ನಾನು ಬಡ್ತಿ ಪಡೆಯಲು ಪಟ್ಟ ಕಷ್ಟಕ್ಕಿಂತ ಬಹಳ ಸುಲಭವಾಗಿ ವೇತನ ಕಡಿತ ಆಗಿಬಿಡುತ್ತದೆ,” ಎಂದಿದ್ದಾರೆ. ಸೀಟಲ್ ಕಚೇರಿಯಿಂದ ಎಷ್ಟು ದೂರ ಇದ್ದಾರೆ ಎಂಬುದರ ಆಧಾರದಲ್ಲಿ ಶೇ 5, ಶೇ 10, ಶೇ 15 ಹಾಗೂ ಗರಿಷ್ಠ ಶೇ 25ರ ತನಕ ವೇತನ ಕಡಿತ ಆಗುತ್ತದೆ. ಇದು ನಿರ್ಧಾರ ಆಗುವುದು ಟೂಲ್ ಮೂಲಕ. ಸಿಬ್ಬಂದಿಯು ತಮ್ಮ ವಿಳಾಸದ ಮಾಹಿತಿಯನ್ನು ಅದರಲ್ಲಿ ಭರ್ತಿ ಮಾಡಿದರೆ ಈ ಬಗ್ಗೆ ಗೊತ್ತಾಗುತ್ತದೆ.

ಇದನ್ನೂ ಓದಿ: Google career certificate courses: ಭಾರತದ ಉದ್ಯೋಗ ಮಾರುಕಟ್ಟೆಯ ಆಟವೇ ಬದಲಿಸುತ್ತಾ ಗೂಗಲ್?

(Pay Cut For Google Employees Who Work From Home Permanently)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada