Multibagger Stock: ಹೂಡಿಕೆದಾರರ 1 ಲಕ್ಷ ರೂಪಾಯಿ 3 ತಿಂಗಳಲ್ಲಿ 7.62 ಲಕ್ಷ ಮಾಡಿಕೊಟ್ಟಿದೆ ಈ ಷೇರು
ಈ ಎಸ್ಎಂಇ ಷೇರು ಕಳೆದ ಮೂರು ತಿಂಗಳಲ್ಲಿ ಶೇ 600ಕ್ಕೂ ಹೆಚ್ಚು ಗಳಿಕೆ ಕಂಡಿದೆ. 1 ಲಕ್ಷ ರೂಪಾಯಿಯ ಹೂಡಿಕೆ 7.62 ಲಕ್ಷ ರೂಪಾಯಿ ಆಗಿದೆ.
ಸ್ಮಾಲ್ ಕ್ಯಾಪ್ ಸೂಚ್ಯಂಕವು ದಾಖಲೆ ಎತ್ತರಕ್ಕೆ ಏರಿದ್ದು, ಮಾರುಕಟ್ಟೆಯ ಏರಿಕೆಯಲ್ಲಿ ಇತರ ಸೂಚ್ಯಂಕಗಳು ಸಹ ಪಾಲ್ಗೊಂಡಿವೆ. 2021ರಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಂಪೆನಿ ಷೇರುಗಳು ಮಲ್ಟಿಬ್ಯಾಗರ್ಗಳಾಗಿವೆ. ಅಂದಹಾಗೆ ಮಲ್ಟಿಬ್ಯಾಗರ್ ಅಂದರೆ, ಬಂಡವಾಳ ಹಾಕಿರುವ ಷೇರುಗಳಿಗೆ ಶೇ 100ಕ್ಕಿಂತ ಹೆಚ್ಚು ರಿಟರ್ನ್ಸ್ ಬರುವಂಥವು. ಇದರಲ್ಲಿ ಲಾರ್ಜ್ ಕ್ಯಾಪ್, ಮಿಡ್-ಕ್ಯಾಪ್ ಮತ್ತು ಸ್ಮಾಲ್-ಕ್ಯಾಪ್ ಷೇರುಗಳು ಒಳಗೊಂಡಿವೆ. 2021ರ ಮಲ್ಟಿಬ್ಯಾಗರ್ ಸ್ಟಾಕ್ಗಳ ಪಟ್ಟಿಯಲ್ಲಿ SME ಷೇರುಗಳು ಸಹ ಒಳಗೊಂಡಿವೆ. ಇದಕ್ಕೆ ಈ ಲೇಖನದಲ್ಲಿ ಒಂದು ಉದಾಹರಣೆ ಆಗಿ ಸ್ಟೀಲ್ ಸ್ಟ್ರಿಪ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿಯನ್ನು ನೀಡಲಾಗುತ್ತಿದೆ. ಈ ಲೋಹದ ಷೇರು ಕಳೆದ ಮೂರು ತಿಂಗಳಲ್ಲಿ ಶೇ 632ರಷ್ಟು ಏರಿಕೆ ಕಂಡಿದೆ. ಮೇ 11, 2021ರಲ್ಲಿ ಈ ಸ್ಟಾಕ್ ಬೆಲೆ ಬಿಎಸ್ಇಯಲ್ಲಿ ರೂ. 4.42 ಇತ್ತು. ಇಂದು (ಆಗಸ್ಟ್ 10, 2021) ಬೆಳಗ್ಗೆ ಈ ಷೇರಿನ ಬೆಲೆ ರೂ. 32.35 ಆಗಿತ್ತು.
ಇಂದಿನ ಆರಂಭದ ವಹಿವಾಟಿನಲ್ಲಿ ಈ ಎಸ್ಎಂಇ ಲೋಹದ ಸ್ಟಾಕ್ ಶೇ 5ರ ಮೇಲ್ಸ್ತರದ ದರವನ್ನು ಮುಟ್ಟಿದೆ. ಕಳೆದ ಐದು ಟ್ರೇಡಿಂಗ್ ಸೆಷನ್ನಲ್ಲಿ ಶೇ 21ರಷ್ಟು ಗಳಿಕೆ ಕಂಡಿದೆ. 26.70 ರೂಪಾಯಿಯಲ್ಲಿ ಇದ್ದದ್ದು 32.35 ರೂಪಾಯಿಗೆ ಬಂದು ತಲುಪಿದೆ. ಆದರೆ ಕಳೆದ ಒಂದು ತಿಂಗಳ ಲೆಕ್ಕಾಚಾರವನ್ನೇ ಹೇಳುವುದಾದರೆ, ಪ್ರತಿ ಷೇರಿಗೆ 12.31 ರೂಪಾಯಿ ಇದ್ದ ಈ ಷೇರು 32.35 ರೂಪಾಯಿಯನ್ನು ಮುಟ್ಟುವ ಮೂಲಕ ಶೇ 162ರಷ್ಟು ರಿಟರ್ನ್ಸ್ ನೀಡಿದೆ. ಇನ್ನೂ ಮುಂದುವರಿದು ಹೇಳುವುದಾದರೆ, ಮೂರು ತಿಂಗಳ ಹಿಂದೆ ಈ ಈಕ್ವಿಟಿ ಷೇರಿನ ಬೆಲೆ ರೂ. 4.42 ಇತ್ತು. ಅದೀಗ 32.35 ರೂಪಾಯಿಗೆ ಬಂದು ನಿಂತು, ಈ ಅವಧಿಯಲ್ಲಿ ಶೇ 632ರಷ್ಟು ರಿಟರ್ನ್ ನೀಡಿದೆ.
ಇಷ್ಟು ಹೊತ್ತು ನೀವು ಓದಿದ್ದು ಈ ಸ್ಟೀಲ್ ಸ್ಟ್ರಿಪ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿಯ ಷೇರಿನ ಬೆಲೆಯ ಇತಿಹಾಸವನ್ನು. ಈಗ ಹೂಡಿಕೆದಾರರ ಹೂಡಿಕೆಗೆ ಎಷ್ಟು ರಿಟರ್ನ್ಸ್ ಬರುತ್ತಿತ್ತು ಅಂತ ನೋಡುವುದಾದರೆ, 5 ದಿನದ ಹಿಂದೆ 1 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದ್ದಲ್ಲಿ ಅದು 1.21 ಲಕ್ಷ ರೂ. ಆಗಿರುತ್ತಿತ್ತು. ಇದೇ ಒಂದು ಲಕ್ಷ ರೂಪಾಯಿ ಮೊತ್ತವನ್ನು ತಿಂಗಳ ಹಿಂದೆ ಹೂಡಿಕೆ ಮಾಡಿದ್ದರೆ ಈಗ 2.62 ಲಕ್ಷ ರೂಪಾಯಿ ಆಗಿರುತ್ತಿತ್ತು. ಇನ್ನು ಮೂರು ತಿಂಗಳ ಹಿಂದೆ ಹೂಡಿದ್ದಲ್ಲಿ ಈಗ 7.32 ಲಕ್ಷ ರೂಪಾಯಿ ಆಗ್ತಿತ್ತು.
ಇದನ್ನೂ ಓದಿ: 1 ಲಕ್ಷ ಹೂಡಿಕೆ ಮಾಡಿದ ಈ ಷೇರುದಾರನಿಗೆ ಸಿಕ್ತು 40 ಲಕ್ಷ; ಅಬ್ಬಾ ಯಾವುದೀ ಷೇರು
ಇದನ್ನೂ ಓದಿ: Multibagger stock 2021: ಒಂದು ವರ್ಷದಲ್ಲಿ ರೂ.7.82ರ ಸುಬೆಕ್ಸ್ ಷೇರು 72.75ಕ್ಕೆ ಜಿಗಿತ; ವರ್ಷದಲ್ಲಿ ಶೇ 837ರಷ್ಟು ಲಾಭ
(Steel Strips Infrastructure Stock Gain More Than 600 Percent In Within 3 Months)