AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Multibagger stock 2021: ಒಂದು ವರ್ಷದಲ್ಲಿ ರೂ.7.82ರ ಸುಬೆಕ್ಸ್ ಷೇರು 72.75ಕ್ಕೆ ಜಿಗಿತ; ವರ್ಷದಲ್ಲಿ ಶೇ 837ರಷ್ಟು ಲಾಭ

ಬೆಂಗಳೂರು ಮೂಲದ ಸುಬೆಕ್ಸ್ ಕಂಪೆನಿಯು ಕಳೆದ ಒಂದು ವರ್ಷದಲ್ಲಿ ಷೇರುದಾರರಿಗೆ ಶೇ 837ಕ್ಕೂ ಹೆಚ್ಚು ರಿಟರ್ನ್ಸ್ ನೀಡಿದೆ. ಆ ಬಗ್ಗೆ ವರದಿ ಇಲ್ಲಿದೆ. ಆದರೆ ಈ ವರದಿಯು ಆ ಷೇರಿನ ಖರೀದಿಗೆ ಶಿಫಾರಸು ಅಲ್ಲ

Multibagger stock 2021: ಒಂದು ವರ್ಷದಲ್ಲಿ ರೂ.7.82ರ ಸುಬೆಕ್ಸ್ ಷೇರು 72.75ಕ್ಕೆ ಜಿಗಿತ; ವರ್ಷದಲ್ಲಿ ಶೇ 837ರಷ್ಟು ಲಾಭ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 09, 2021 | 1:17 PM

Share

“ದೊಡ್ಡ ಹಣವು ಖರೀದಿ ಅಥವಾ ಮಾರಾಟದಲ್ಲಿಲ್ಲ, ಆದರೆ ಕಾಯುವಿಕೆಯಲ್ಲಿದೆ,” ಎಂದು ಮನಿ ಮ್ಯಾಗ್ನೆಟ್ ಚಾರ್ಲಿ ಮುಂಗರ್ ಒಮ್ಮೆ ಹೇಳಿದ್ದರು. ಭಾರತದ ಐಟಿ ಸ್ಟಾಕ್ ಸುಬೆಕ್ಸ್ ವಿಷಯಕ್ಕೆ ಬಂದಾಗ ಇದು ಸರಿಯಾಗಿ ತಾಳೆ ಆಗುತ್ತದೆ. ಬೆಂಗಳೂರು ಮೂಲದ ಸಾಫ್ಟ್‌ವೇರ್ ಈ ಕಂಪೆನಿಯ ಷೇರುಗಳ ಬೆಲೆ 2020ರ ಜುಲೈ 9ರಂದು ರೂ. 7.82 ಇದ್ದದ್ದು ಎನ್‌ಎಸ್‌ಇಯಲ್ಲಿ ಪ್ರತಿ ಷೇರು ರೂ. ಇವತ್ತಿಗೆ ಜುಲೈ 9ನೇ ತಾರೀಕಿನ (ಇಂದು ಬೆಳಿಗ್ಗೆ 10.49ಕ್ಕೆ) ರೂ. 72.75ಕ್ಕೆ ಏರಿದೆ. ಅಂದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಷೇರು ಶೇ 837.34 ರಷ್ಟು ಏರಿಕೆ ಕಂಡಿದೆ. ಈ ಐಟಿ ಸ್ಟಾಕ್ 2021 ರ ಮಲ್ಟಿಬ್ಯಾಗರ್ ಸ್ಟಾಕ್‌ಗಳಲ್ಲಿ ಒಂದಾಗಿದೆ. ಕುತೂಹಲಕಾರಿ ಅಂಶ ಏನೆಂದರೆ, ಈ ಮಲ್ಟಿಬ್ಯಾಗರ್ ಸ್ಟಾಕ್‌ಗಳ ಪಟ್ಟಿಯಲ್ಲಿ ಸ್ಮಾಲ್-ಕ್ಯಾಪ್ ಮತ್ತು ಮಿಡ್-ಕ್ಯಾಪ್ ಸ್ಟಾಕ್‌ಗಳು ತುಂಬಿವೆ. ಏಕೆಂದರೆ, ಕೊವಿಡ್​ 19ನಿಂದಾಗಿ ಷೇರು ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಹೊಡೆತದ ನಂತರ ಹೂಡಿಕೆದಾರರು ಈ ವಲಯದತ್ತ ಗಮನ ಹರಿಸಿದ್ದಾರೆ.

ಸುಬೆಕ್ಸ್ ಷೇರು ಬೆಲೆ ಇತಿಹಾಸ ಮೊದಲೇ ಹೇಳಿದಂತೆ, ಕಳೆದ ಆರು ತಿಂಗಳಲ್ಲಿ ಸುಬೆಕ್ಸ್ ಷೇರು ಬೆಲೆ ಶೇಕಡಾ 337.34 ರಷ್ಟು ಏರಿಕೆಯಾಗಿದೆ; ಈ ಐಟಿ ಸ್ಟಾಕ್ ತನ್ನ ಷೇರುದಾರರಿಗೆ ಶೇಕಡಾ 150 ಕ್ಕಿಂತ ಹೆಚ್ಚು ಲಾಭವನ್ನು ಗಳಿಸಿ ಕೊಟ್ಟಿದೆ. ಕಳೆದ ಒಂದು ತಿಂಗಳಲ್ಲಿ ಶೇ 22.88ರಷ್ಟು ಲಾಭವು ಬಂದಿದೆ. ಆದ್ದರಿಂದ, ಐಟಿ ಸ್ಟಾಕ್ ವರ್ಷಪೂರ್ತಿ ತನ್ನ ಹೂಡಿಕೆದಾರರಿಗೆ ಹಣ ಗಳಿಸಿಕೊಟ್ಟಿರುವ ಸ್ಟಾಕ್ ಆಗಿ ಉಳಿದಿದೆ.

ಹೂಡಿಕೆ ಲಾಭ ಸುಬೆಕ್ಸ್ ಷೇರುಗಳಿಗೆ ಬಂದಿರುವ ಮೇಲಿನ ಆದಾಯದಿಂದ ಲೆಕ್ಕ ತೆಗೆದುಕೊಂಡರೆ, ನಗದು ವಿಭಾಗದ ಹೂಡಿಕೆದಾರರು ಕೌಂಟರ್‌ನಲ್ಲಿ 1 ಲಕ್ಷ ಹೂಡಿಕೆ ಮಾಡಿದ್ದರೆ, ಆ 1 ಲಕ್ಷ ರೂಪಾಯಿ ಕಳೆದ ಒಂದು ವರ್ಷದಲ್ಲಿ 8.37 ಲಕ್ಷ ರೂಪಾಯಿ ಆಗಿದೆ. ಕಳೆದ ಆರು ತಿಂಗಳಲ್ಲಿ 1 ಲಕ್ಷ ರೂಪಾಯಿ 1.53 ಲಕ್ಷ ಆಗಿದೆ. ಇನ್ನು ಕಳೆದ ಒಂದು ತಿಂಗಳಲ್ಲಿ ಹೂಡಿಕೆದಾರರು ಹೂಡಿದ 1 ಲಕ್ಷ ರೂಪಾಯಿಗೆ 22,000 ಬಂದಿದ್ದು, ನಿವ್ವಳ ಮೊತ್ತವು ಕಳೆದ ಒಂದು ತಿಂಗಳಲ್ಲಿ 1.22 ಲಕ್ಷ ಆಗಿದೆ. ಪ್ರಸ್ತುತ, ಸುಬೆಕ್ಸ್‌ನ ಮಾರುಕಟ್ಟೆ ಬಂಡವಾಳ ಮೌಲ್ಯವು ಸುಮಾರು 3750 ಕೋಟಿ ರೂ. ಆಗಿದೆ. ಇತ್ತೀಚಿನ ತ್ರೈಮಾಸಿಕ ಫಲಿತಾಂಶಗಳಲ್ಲಿ ಸಗಟು ಮಾರಾಟವು 754.40 ಕೋಟಿ ದಾಖಲಾಗಿದ್ದರೆ, ಆದಾಯವು 758.90 ಕೋಟಿ ರೂಪಾಯಿ ಎಂದು ವರದಿ ಆಗಿದೆ.

ಇದನ್ನೂ ಓದಿ: Kotak Mahindra Bank: ಖಾಸಗಿ ಬ್ಯಾಂಕ್ ಷೇರಿನ 10,000 ರೂಪಾಯಿ 20 ವರ್ಷದಲ್ಲಿ 64 ಲಕ್ಷ ರೂ.

(Multibagger stock Subex gained 837 percent in one year. Here is the details)

Follow Us
TV9 Web
TV9 Web

TV9 Kannada

Read More
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ