ಎನ್​ಆರ್​ ನಾರಾಯಣಮೂರ್ತಿ ಒಡೆತನದ ಕ್ಯಾಟಮರನ್ ಹಾಗೂ ಅಮೆಜಾನ್ ಮಧ್ಯೆ ಬ್ರೇಕಪ್

ಎನ್​ಆರ್ ನಾರಾಯಣಮೂರ್ತಿ ಒಡೆತನದ ಕ್ಯಾಟಮರನ್ ಜತೆಗಿನ ಪಾಲುದಾರಿಕೆ ಕೊನೆಗೊಳಿಸಲು ಅಮೆಜಾನ್ ನಿರ್ಧರಿಸಿ, ಈ ಬಗ್ಗೆ ಆಗಸ್ಟ್ 9ನೇ ತಾರೀಕು ಘೋಷಣೆ ಮಾಡಿದೆ.

ಎನ್​ಆರ್​ ನಾರಾಯಣಮೂರ್ತಿ ಒಡೆತನದ ಕ್ಯಾಟಮರನ್ ಹಾಗೂ ಅಮೆಜಾನ್ ಮಧ್ಯೆ ಬ್ರೇಕಪ್
ಅಮೆಜಾನ್‌ ದುಬಾರಿ: ಸೆಪ್ಟೆಂಬರ್ 1 ರಿಂದ ಅಮೆಜಾನ್‌ ಆರ್ಡರ್ ಕೂಡ ದುಬಾರಿಯಾಗಲಿದೆ. ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಕಂಪನಿಯು ಲಾಜಿಸ್ಟಿಕ್ಸ್ ವೆಚ್ಚವನ್ನು ಹೆಚ್ಚಿಸುವುದಾಗಿ ತಿಳಿಸಿದೆ. ಅದರಂತೆ, ಫ್ರೀ ಡೆಲಿವರಿ ಇಲ್ಲದ ವಸ್ತುಗಳ ಮೇಲೆ 500 ಗ್ರಾಂ ಪ್ಯಾಕೇಜ್‌ಗೆ 58 ರೂಪಾಯಿ ಪಾವತಿಸಬೇಕಾಗಬಹುದು. ಹಾಗೆಯೇ ಪ್ರಾದೇಶಿಕ ವೆಚ್ಚ ರೂ 36.50 ಆಗಿರಲಿದೆ ಎಂದು ತಿಳಿಸಲಾಗಿದೆ.
Follow us
TV9 Web
| Updated By: Srinivas Mata

Updated on: Aug 10, 2021 | 11:21 AM

ಅಮೆಜಾನ್ ನ್ಯಾಯಸಮ್ಮತ ಅಲ್ಲದ ವ್ಯವಹಾರ ಮಾಡುತ್ತಿದೆ ಎಂದು ಭಾರತದಲ್ಲಿನ ವರ್ತಕರ ಒಕ್ಕೂಟ, ರಾಜಕಾರಣಿಗಳು ಸೇರಿದಂತೆ ವಿವಿಧ ವಲಯಗಳಿಂದ ಆರೋಪ ಎದುರಿಸುದೆ. ಈ ಹಿನ್ನೆಲೆಯಲ್ಲಿ ವಿಶ್ವದ ಪ್ರಮುಖ ಇ-ಕಾಮರ್ಸ್ ಕಂಪೆನಿಯಾದ ಅಮೆಜಾನ್ ಎನ್​.ಆರ್​.ನಾರಾಯಣಮೂರ್ತಿ ಒಡೆತನದ ಕ್ಯಾಟಮರನ್ ವೆಂಚರ್ಸ್ (Catamaran Venturea) ಜತೆಗೆ ಪಾಲುದಾರಿಕೆ ಮುಂದುವರಿಸದಿರುಲು ನಿರ್ಧರಿಸಿದೆ. ಈ ಎರಡೂ ಕಂಪೆನಿಗಳು ಸೇರಿ (ಅಮೆಜಾನ್ ಹಾಗೂ ಕ್ಯಾಟಮರನ್) ಪ್ರಿಯೋನ್ ಬಿಜಿನೆಸ್ ಸರ್ವೀಸಸ್ (Prione Business Services) ನಡೆಸುತ್ತವೆ. ಅದರ ಸಂಪೂರ್ಣ ಒಡೆತನದ ಅಂಗಸಂಸ್ಥೆ ಕ್ಲೌಡ್​ಟೇಲ್ ಇಂಡಿಯಾ ಎಂಬುದು ದೇಶದಲ್ಲಿ ಇರುವ ಅಮೆಜಾನ್​ನ​ ಅತಿದೊಡ್ಡ ಮಾರಾಟ ಸಂಸ್ಥೆಯಲ್ಲಿ ಒಂದು. ಆಗಸ್ಟ್ 9ನೇ ತಾರೀಕಿನಂದು ಹೇಳಿಕೆ ನೀಡಿ, “ಇಬ್ಬರೂ ಪಾಲುದಾರರು ಇಂದು ಘೋಷಣೆ ಮಾಡಿದ್ದು, ಸದ್ಯದ ಅವಧಿ ನಂತರ ಜಾಯಿಂಟ್ ವೆಂಚರ್ ಮುಂದುವರಿಸಬಾರದು ಎಂದು ಪರಸ್ಪರ ನಿರ್ಧಾರ ಮಾಡಿದ್ದೇವೆ,” ಎಂದು ತಿಳಿಸಲಾಗಿದೆ.

ತುಂಬ ಆಸಕ್ತಿಕರ ಸಂಗತಿ ಏನೆಂದರೆ, ಕಳೆದ ಶುಕ್ರವಾರವಷ್ಟೇ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿತ್ತು. ಅಮೆಜಾನ್​ ಹಾಗೂ ಫ್ಲಿಪ್​ಕಾರ್ಟ್​ ನ್ಯಾಯಸಮ್ಮತ ಅಲ್ಲದ ವ್ಯವಹಾರ ಪದ್ಧತಿ ಅನುಸರಿಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭಾರತದ ಸ್ಪರ್ಧಾ ಆಯೋಗ (CCI) ನೀಡಿದ್ದ ವಿಚಾರಣೆ ಆದೇಶವನ್ನು ತಡೆ ಹಿಡಿಯುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿತ್ತು. ಆ ಆದೇಶ ಬಂದ ಕೆಲ ಸಮಯಕ್ಕೆ ಹೀಗೆ ಪಾಲುದಾರಿಕೆ ಕೊನೆಗೊಳಿಸಿಕೊಳ್ಳುವ ಘೋಷಣೆ ಮಾಡಿದೆ. ಪ್ರಿಯೋನ್ ಬಿಜಿನೆಸ್ ಸರ್ವೀಸ್ ಲಿಮಿಟೆಡ್ ಕಳೆದ ಏಳು ವರ್ಷಗಳಿಂದ ಭಾರತದಲ್ಲಿ ನಡೆಯುತ್ತಿದೆ. ಮತ್ತು ಇದು ಅಮೆಜಾನ್ ಹಾಗೂ ಕ್ಯಾಟಮರನ್ ಜಂಟಿ ಉದ್ಯಮ. ಮೇ 19, 2022ನೇ ಇಸವಿಗೆ ಒಪ್ಪಂದದ ನವೀಕರಣ ಬಾಕಿ ಇದೆ.

“ಭಾರತದಲ್ಲಿ ಇ-ಕಾಮರ್ಸ್​ನ ಆರಂಭದ ದಿನಗಳಲ್ಲಿ ಅಮೆಜಾನ್ ಮತ್ತು ಕ್ಯಾಟಮರನ್ ಜಂಟಿ ಉದ್ಯಮಕ್ಕೆ ಪ್ರವೇಶಿಸಿದವು. ನೂರಾರು ಸಾವಿರಾರು ಸಣ್ಣ ಉದ್ಯಮಗಳನ್ನು ತುಂಬ ವೇಗವಾಗಿ ಬದಲಾಗುತ್ತಿದ್ದ ಡಿಜಿಟಲ್ ಜಗತ್ತಿಗೆ ತಕ್ಕಂತೆ ಬದಲಾವಣೆ ಮಾಡುವ ದೃಷ್ಟಿಕೋನವನ್ನು ನಾವು ಹಂಚಿಕೊಂಡೆವು. ಆನ್​ಲೈನ್​ ವ್ಯವಹಾರವನ್ನು ನಡೆಸುವ ಸಾಮರ್ಥ್ಯ ದೊರಕಿಸಿ ಕೊಡುವ ಮೂಲಕ ಭಾರತ ಮತ್ತು ಜಾಗತಿಕ ಮಟ್ಟದ ಗ್ರಾಹಕರು ದೊರೆಯುವಂತೆ ಮಾಡಿದೆವು,” ಎಂದು ಜಾಗತಿಕ ಹಿರಿಯ ಉಪಾಧ್ಯಕ್ಷ ಮತ್ತು ಕಂಪೆನಿಯ ಭಾರತದ ಮುಖ್ಯಸ್ಥ ಅಮಿತ್ ಅಗರ್​ವಾಲ್ ಅವರು ಹೇಳಿದ್ದಾರೆ. ಈ ಜಂಟಿ ಉದ್ಯಮದಿಂದ 43 ಲಕ್ಷ ಸಣ್ಣ ಉದ್ಯಮಗಳ ಮೇಲೆ ಪರಿಣಾಮ ಬೀರಲು ಸಾಧ್ಯವಾಗಿದೆ. ನೂರಾರು ಸಾವಿರಾರು ಉದ್ಯೋಗ ಸೃಷ್ಟಿಯಾಗಿದೆ. ಭಾರತದ ಡಿಜಿಟಲ್ ಆರ್ಥಿಕತೆಗೆ ಕೊಡುಗೆ ನೀಡುವುದಕ್ಕೆ ಸಾಧ್ಯವಾಗಿದೆ. ಭಾರತದಲ್ಲಿ ಇ-ಕಾಮರ್ಸ್​ಗೆ ದಿಕ್ಕು-ದೆಸೆ ನಿರ್ಧರಿಸಲು ಸಹಕರಿಸಿದ್ದಕ್ಕೆ ಕ್ಯಾಟಮರನ್​ ತಂಡಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: Supreme Court: ಫ್ಲಿಪ್​ಕಾರ್ಟ್​, ಅಮೆಜಾನ್​ ವಿರುದ್ಧ ಸಿಸಿಐ ವಿಚಾರಣೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

(Amazon Announced To Discontinue Partnership With NR Narayana Murthy Owned Catamaran By 2022 May)

ಚನ್ನಪಟ್ಟಣ ಜೊತೆ ದೇವೇಗೌಡರ ನಂಟು, ಮತ್ತೊಮ್ಮೆ ಇಸವಿ ತಪ್ಪು ಹೇಳಿದ ನಿಖಿಲ್
ಚನ್ನಪಟ್ಟಣ ಜೊತೆ ದೇವೇಗೌಡರ ನಂಟು, ಮತ್ತೊಮ್ಮೆ ಇಸವಿ ತಪ್ಪು ಹೇಳಿದ ನಿಖಿಲ್
ಪತ್ನಿ ರೇವತಿಯವರ ಇಚ್ಛೆಯ ಮೇರೆಗೆ ಹರದನಹಳ್ಳಿಗೆ ಭೇಟಿ ನೀಡಿದ ನಿಖಿಲ್
ಪತ್ನಿ ರೇವತಿಯವರ ಇಚ್ಛೆಯ ಮೇರೆಗೆ ಹರದನಹಳ್ಳಿಗೆ ಭೇಟಿ ನೀಡಿದ ನಿಖಿಲ್
ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಜೊತೆ 'ಲೆಜೆಂಡ್' ಸಿರಾಜ್ ಹುಡುಗಾಟ
ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಜೊತೆ 'ಲೆಜೆಂಡ್' ಸಿರಾಜ್ ಹುಡುಗಾಟ
ಸ್ವಂತ ವಾಹನಗಳಿಗೆ ಪೆಟ್ರೋಲ್, ಬೇಕಾಬಿಟ್ಟಿ ಮದ್ಯದಂಗಡಿಗಳಿಗೆ ಲೈಸೆನ್ಸ್ ಆರೋಪ
ಸ್ವಂತ ವಾಹನಗಳಿಗೆ ಪೆಟ್ರೋಲ್, ಬೇಕಾಬಿಟ್ಟಿ ಮದ್ಯದಂಗಡಿಗಳಿಗೆ ಲೈಸೆನ್ಸ್ ಆರೋಪ
ಸಿದ್ದರಾಮಯ್ಯ, ಸೋಮಣ್ಣ ಮುಖಾಮುಖಿ: ಮುಡಾ ಬಗ್ಗೆ ನಡೀತು ಸ್ವಾರಸ್ಯಕರ ಚರ್ಚೆ!
ಸಿದ್ದರಾಮಯ್ಯ, ಸೋಮಣ್ಣ ಮುಖಾಮುಖಿ: ಮುಡಾ ಬಗ್ಗೆ ನಡೀತು ಸ್ವಾರಸ್ಯಕರ ಚರ್ಚೆ!
ನೂರು ಕೋಟಿ ಆಫರ್: ಮತ್ತೊಬ್ಬ ಕಾಂಗ್ರೆಸ್ ಶಾಸಕ ಹೇಳಿದ್ದೇನು ನೋಡಿ!
ನೂರು ಕೋಟಿ ಆಫರ್: ಮತ್ತೊಬ್ಬ ಕಾಂಗ್ರೆಸ್ ಶಾಸಕ ಹೇಳಿದ್ದೇನು ನೋಡಿ!
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಯಾಕೆ ಜನಪರ ಯೋಜನೆಗಳಿಲ್ಲ? ಸಿದ್ದರಾಮಯ್ಯ
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಯಾಕೆ ಜನಪರ ಯೋಜನೆಗಳಿಲ್ಲ? ಸಿದ್ದರಾಮಯ್ಯ
ಪೆಟ್ರೋಲ್ ಬಂಕ್​ಗೆ ನುಗ್ಗಿ ಸಿಬ್ಬಂದಿಗೆ ಥಳಿಸಿದ ಯುವಕರು
ಪೆಟ್ರೋಲ್ ಬಂಕ್​ಗೆ ನುಗ್ಗಿ ಸಿಬ್ಬಂದಿಗೆ ಥಳಿಸಿದ ಯುವಕರು
ಯೋಗೇಶ್ವರ್ ಮಾತಿಗೆ ವಿಪರೀತ ಅರ್ಥ ಕಲ್ಪಿಸುವುದು ಬೇಡ: ಪರಮೇಶ್ವರ್
ಯೋಗೇಶ್ವರ್ ಮಾತಿಗೆ ವಿಪರೀತ ಅರ್ಥ ಕಲ್ಪಿಸುವುದು ಬೇಡ: ಪರಮೇಶ್ವರ್
ಬಿಜೆಪಿಗೆ ಹಣದ ಕೊರತೆಯಿಲ್ಲ, ಹಣ ಚೆಲ್ಲಿ ಶಾಸಕರನ್ನು ಖರೀದಿಸುತ್ತಾರೆ: ಗಾಣಿಗ
ಬಿಜೆಪಿಗೆ ಹಣದ ಕೊರತೆಯಿಲ್ಲ, ಹಣ ಚೆಲ್ಲಿ ಶಾಸಕರನ್ನು ಖರೀದಿಸುತ್ತಾರೆ: ಗಾಣಿಗ