Google career certificate courses: ಭಾರತದ ಉದ್ಯೋಗ ಮಾರುಕಟ್ಟೆಯ ಆಟವೇ ಬದಲಿಸುತ್ತಾ ಗೂಗಲ್?

ಉದ್ಯೋಗ ಮಾರುಕಟ್ಟೆಯಲ್ಲಿ ಮಹತ್ವದ ಬದಲಾವಣೆಗೆ ನಾಂದಿ ಹಾಡಬಹುದು ಗ್ರೋ ವಿಥ್ ಗೂಗಲ್ ಅಭಿಯಾನ. ಈ ಮೂಲಕ ಭಾರತದಲ್ಲಿ ಪದವಿಯೊಂದಿಗೆ ಹೊರಬರುವವರಿಗೆ ಕೌಶಲ ಹೆಚ್ಚಿಸಿಕೊಳ್ಳಲು ಸಹ ಅವಕಾಶ ಸಿಗಲಿದೆ.

Google career certificate courses: ಭಾರತದ ಉದ್ಯೋಗ ಮಾರುಕಟ್ಟೆಯ ಆಟವೇ ಬದಲಿಸುತ್ತಾ ಗೂಗಲ್?
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on:Mar 23, 2021 | 4:32 PM

ಗೂಗಲ್​ನಿಂದ ಈ ಹೆಜ್ಜೆ ಗಟ್ಟಿಯಾಗಿ ಇಟ್ಟಲ್ಲಿ ಖಂಡಿತಾ ಇದು ಉದ್ಯೋಗ ಮಾರುಕಟ್ಟೆಯಲ್ಲಿನ ಆಟವನ್ನೇ ಬದಲಿಸುತ್ತದೆ. ಏಕೆಂದರೆ, ಆಂಡ್ರಾಯಿಡ್ ಡೆವಲಪ್​ಮೆಂಟ್ ಮತ್ತು ಡೇಟಾ ಅನಲಿಟಿಕ್ಸ್​ನಂಥ ಕೌಶಲಗಳ ವೃತ್ತಿಪರ ಪ್ರಮಾಣಪತ್ರಗಳ ಕೋರ್ಸ್​​ಗಳನ್ನು ಆರಂಭಿಸುವ ಬಗ್ಗೆ ಮಾರ್ಚ್ 11, 2021ರಂದು ಗೂಗಲ್ ಘೋಷಣೆ ಮಾಡಿದೆ. ಮೇಲ್ನೋಟಕ್ಕೆ ಹೇಳುವುದಾದರೆ ಆ ಮೂಲಕ ನೇಮಕಾತಿ ಪ್ರಕ್ರಿಯೆಯಲ್ಲೇ ದೊಡ್ಡ ಬದಲಾವಣೆ ಮಾಡುವ ಹೆಜ್ಜೆ ಇದಾಗಲಿದೆ. ಗೂಗಲ್​ನಿಂದ ಆಗುತ್ತಿರುವ ಮಹತ್ತರ ಕ್ರಮ ಇದು ಎಂಬುದು ಒಂದು ಕಡೆಯಾಯಿತು. ಆದರೆ ಈ ಕೋರ್ಸ್​ಗಳನ್ನು ಪ್ರತಿಸ್ಪರ್ಧಿಗಳಿಗಿಂತ ಅರ್ಧ ದರಕ್ಕೆ ಒದಗಿಸಲಾಗುತ್ತಿದೆ. ಇನ್ನೂ ಮುಂದುವರಿದು ಇನ್ಫೋಸಿಸ್, ಆಕ್ಸೆಂಚರ್, ಇಂಟೆಲ್, ಸ್ನ್ಯಾಪ್ ಇಂಕ್ ಮತ್ತು 130 ಟಾಪ್ ಸಂಸ್ಥೆಗಳೂ ಸೇರಿ ಅಮೆರಿಕದಲ್ಲಿ ಉದ್ಯೋಗದ ಭರವಸೆಯನ್ನು ಸಹ ನೀಡಿದೆ. ಈ ಮಾಹಿತಿಯನ್ನು ಕಳೆದ ವಾರ ಕಂಪೆನಿಯ ಸಿಇಒ ಸುಂದರ್ ಪಿಚೈ ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ.

ಕೇವಲ ಪದವಿ ಎಂಬುದರಿಂದ ಪರಿಣತ ಎಂಬ ಮಟ್ಟಕ್ಕೆ ಆಗುತ್ತಿರುವ ಈ ಬದಲಾವಣೆ ಕುರಿತು ಬಹು ಕಾಲದಿಂದ ಚರ್ಚೆ ಜಾರಿಯಲ್ಲಿತ್ತು. ಇನ್ಫೋಸಿಸ್ ಹೊರತುಪಡಿಸಿ ಉಳಿದ ಭಾರತೀಯ ಕಂಪೆನಿಗಳಿಗೆ ಇದರ ಪರಿಣಾಮ ಏನಾಗಬಹುದು? ಈ ಹಿಂದೆ ಗೂಗಲ್​ನಿಂದ ಜಾರಿಗೆ ತಂದ ಇದೇ ಸಾಲಿನ ಕಾರ್ಯಕ್ರಮಗಳು ಹೆಚ್ಚಿನ ಸದ್ದು ಮಾಡಲಿಲ್ಲ. ಆದರೆ ಈಗಲೂ ಈ ಬಗ್ಗೆ ಮಾತನಾಡುವಾಗ ತುಂಬ ಬೇಗ ನಿರ್ಧಾರಕ್ಕೆ ಬಂದಂತೆ ಎನಿಸಬಹುದು. ಇರಲಿ, ಗೂಗಲ್​ನ ಬದಲಾವಣೆ ಪರ್ವದಿಂದ ಭವಿಷ್ಯದ ನೇಮಕಾತಿಯಲ್ಲಿ ಎಂಥ ಬದಲಾವಣೆ ಆಗಬಹುದು ಒಮ್ಮೆ ಯೋಚಿಸಬೇಕಿದೆ.

“ಗ್ರೋ ವಿಥ್ ಗೂಗಲ್” ಅಭಿಯಾನ “ಗ್ರೋ ವಿಥ್ ಗೂಗಲ್” ಎಂಬ ಗೂಗಲ್​​ನ ಈ ಅಭಿಯಾನದಲ್ಲಿ ಕೋರ್ಸ್​ಎರಾದ ಸಹಭಾಗಿತ್ವದಲ್ಲಿ ಬಳಕೆದಾರರ ಅನುಭವದ ರಚನೆ ಮತ್ತು ಪ್ರಾಜೆಕ್ಟ್ ಮ್ಯಾನೇಜ್​ಮೆಂಟ್ ಹಾಗೂ ಡೇಟಾ ಅನಲಿಟಿಕ್ಸ್​ನಂಥ ಪ್ರಮುಖ ಕ್ಷೇತ್ರದಲ್ಲಿ ವೃತ್ತಿಪರ ಕೌಶಲ ತರಬೇತಿ ಪ್ರಮಾಣಪತ್ರದ ಕೋರ್ಸ್​ಗಳ ನೋಂದಣಿ ಆರಂಭಿಸಿದೆ. ಈ ಮೂರು ಕೋರ್ಸ್ ಹೊರತುಪಡಿಸಿದಂತೆ ಐಟಿ ಸಪೋರ್ಟ್ ಸರ್ಟಿಫಿಕೇಷನ್ 2018ರಲ್ಲೇ ಆರಂಭಿಸಲಾಗಿದೆ. ಈ ಎಲ್ಲದರ ವೆಚ್ಚವು ಕೋರ್ಸ್​ಎರಾಗೆ ಚಂದಾದಾರರಾದರೆ ತಿಂಗಳಿಗೆ 39 ಅಮೆರಿಕನ್ ಡಾಲರ್. ಇನ್ನು ಆಂಡ್ರಾಯಿಡ್ ಡೆವಲಪರ್ಸ್ ಸರ್ಟಿಫಿಕೇಟ್ ತರಬೇತಿ ಮಟೀರಿಯಲ್ ಉಚಿತವಾಗಿದ್ದು, ಪರೀಕ್ಷೆ ಶುಲ್ಕ 149 ಅಮೆರಿಕನ್ ಡಾಲರ್ ಆಗುತ್ತದೆ

ಇನ್ನು ಗೂಗಲ್​ನಿಂದ ಅಭ್ಯರ್ಥಿಗಳಿಗೆ ಅಮೆರಿಕದಲ್ಲಿ ಪರ್ ಶೊಲಾಸ್, ಎನ್​ಪವರ್ ಮತ್ತು ಗುಡ್​ವಿಲ್​ನಂಥ ಸಂಸ್ಥೆಗಳ ಮೂಲಕ 1,00,000 ಸ್ಕಾಲರ್​ಷಿಪ್ ಕೂಡ ನೀಡಲಾಗುತ್ತಿದೆ. ಈ ಅಭಿಯಾನ ಆರಂಭಿಸುವಾಗಲೇ, ಅಮೆರಿಕದಲ್ಲಿ ಈ ಪ್ರಮಾಣಪತ್ರದೊಂದಿಗೆ 500 ಜನರನ್ನು ಇನ್ಫೋಸಿಸ್ ನೇಮಕಾತಿ ಮಾಡಿಕೊಳ್ಳಲಿದೆ ಎಂದು ಘೋಷಿಸಲಾಗಿದೆ. ಮತ್ತೊಂದು ಸಂಸ್ಥೆ Better.comನಿಂದ 2000 ಮಂದಿಯನ್ನು ನೇಮಿಸಿಕೊಳ್ಳುವುದಾಗಿ ಹೇಳಿದೆ. ಶೀಘ್ರದಲ್ಲೇ ಈ ಅಭಿಯಾನ ಭಾರತಕ್ಕೂ ವಿಸ್ತರಣೆ ಆಗಲಿದೆ. “ಭಾರತದಲ್ಲಿ ಈ ಪ್ರಮಾಣಪತ್ರ ಹೆಚ್ಚು ಮಂದಿ ಪಡೆಯುವಂತಾಗಬೇಕು ಎಂಬ ಕಡೆಗೆ ಪ್ರಯತ್ನಿಸುತ್ತಿದ್ದೇವೆ ಉದ್ಯೋಗದಾತರ ಒಕ್ಕೂಟ ರಚಿಸುತ್ತೇವೆ,” ಎಂದು ಪಿಚೈ ಬ್ಲಾಗ್​ನಲ್ಲಿ ಹೇಳಿದ್ದಾರೆ. ಆದರೆ ಗೂಗಲ್​ನಿಂದ ನೀಡುವಂಥ ಸ್ಕಾಲರ್​ಷಿಪ್​ಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಗೂಗಲ್ ಕಂಪೆನಿಯ ಉದ್ದೇಶದಲ್ಲಿ ಸ್ಪಷ್ಟತೆ ಕಾಣುತ್ತಿದೆ. ಕೇವಲ ಪದವಿ ಇಟ್ಟುಕೊಂಡು ಬರುವ ಅಭ್ಯರ್ಥಿಗಳಿಗಿಂತ ಕೌಶಲ ಮುಖ್ಯವಾಗಬೇಕು. ಉದ್ಯೋಗ ವಾತಾವರಣದಲ್ಲಿ ಎಲ್ಲರನ್ನೂ ಒಳಗೊಳ್ಳುವಂಥ ಸನ್ನಿವೇಶ ಸೃಷ್ಟಿಯಾಗಬೇಕು ಮತ್ತು ಎಲ್ಲರಿಗೂ ಅವಕಾಶ ಸಿಗಬೇಕು ಎನ್ನುವ ಗುರಿ ಇಟ್ಟುಕೊಳ್ಳಲಾಗಿದೆ.

ಭಾರತದ ಪಾಲಿಗೆ ಎಂಥ ಬದಲಾವಣೆ ನಿರೀಕ್ಷಿಸಬಹುದು? ಭಾರತದಲ್ಲಿ ಅತಿ ದೊಡ್ಡ ಸಮಸ್ಯೆ ಆಗಿರುವುದು ಕೌಶಲದ್ದು. ಗೂಗಲ್ ಈ ಸರ್ಟಿಫಿಕೇಟ್ ಕೋರ್ಸ್​ಗಳನ್ನು ದೇಶದಲ್ಲಿ ಆರಂಭಿಸಿದರೆ ಆ ದೊಡ್ಡ ಸವಾಲಿಗೆ ತಕ್ಕಮಟ್ಟಿಗೆ ಪರಿಹಾರ ದೊರೆತಂತಾಗುತ್ತದೆ. ಕೈಗಾರಿಕಾ ಸಂಸ್ಥೆಗಳ ಅಂದಾಜಿನ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 6000 ಎಂಜಿನಿಯರಿಂಗ್ ಮತ್ತು ತಾಂತ್ರಿಕ ಸಂಸ್ಥೆಗಳಿಂದ 15 ಲಕ್ಷ ಪದವೀಧರರು ಹೊರಬರುತ್ತಾರೆ. ಆದರೆ ಅದರಲ್ಲಿ ಕಾಲು ಭಾಗಕ್ಕೂ ಕಡಿಮೆ ಜನ ಮಾತ್ರ ಉದ್ಯೋಗ ಪಡೆಯಲು ಅರ್ಹರಿರುತ್ತಾರೆ. ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ಅಡಿಯಲ್ಲಿ ತುಂಬ ವೇಗವಾಗಿ ಉದ್ಯೋಗ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಆಗುತ್ತಿಲ್ಲ. ಕೌಶಲದ ಕೊರತೆಯಂತೂ ಮೇಲುನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ. ಕ್ಯಾಂಪಸ್​ಗಳಲ್ಲಿ ಅತಿ ಮುಖ್ಯವಾದ ಉದ್ಯೋಗದಾತರು ಐಟಿ ಕಂಪೆನಿಗಳು. ಆದರೆ ಈಗ ಬೇಡಿಕೆಗಿಂತ ಪೂರೈಕೆ ಸಿಕ್ಕಾಪಟ್ಟೆ ಕಡಿಮೆಯಿದ್ದು, ಸೂಕ್ತ ಪ್ರತಿಭೆಗಳು ಸಿಗುವುದೇ ಕಷ್ಟವಾಗಿದೆ.

ಕಂಪೆನಿಯೊಂದರ ಸಿಇಒ ಈ ಬಗ್ಗೆ ಮಾತನಾಡುತ್ತಾ, ಈಗಿನಂತೆ ಕೌಶಲ ಇರುವ ವ್ಯಕ್ತಿಗಳ ಕೊರತೆಯನ್ನು ಕಳೆದ ಇಪ್ಪತ್ತು ವರ್ಷಗಳಲ್ಲೇ ಕಂಡಿರಲಿಲ್ಲ. ಹದಿನೈದು ಸಾವಿರ ಉದ್ಯೋಗಿಗಳನ್ನು ನೇಮಿಸಿರುವ ಕಂಪೆನಿಯೊಂದಕ್ಕೆ 150 ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲು ಜನರು ಬೇಕಾಗಿದ್ದಾರೆ. ಆದರೆ ಅದನ್ನು ತುಂಬುವುದಕ್ಕೆ ಆಗುತ್ತಿಲ್ಲ ಎಂದಿದ್ದಾರೆ. ಈ ಕೊರತೆಯನ್ನು ತುಂಬುವುದಕ್ಕೆ ಆನ್​ಲೈನ್ ಎಡ್- ಟೆಕ್ ಕಂಪೆನಿಗಳು ಮತ್ತು ಗೂಗಲ್ ಪ್ರಯತ್ನಿಸುತ್ತಿವೆ.

ಕೋರ್ಸ್​​ಗಳು ಯುಎಕ್ಸ್ ಡಿಸೈನ್- ಗೂಗಲ್​​ನ ಈ ಕೋರ್ಸ್ ಕೋರ್ಸ್​ಎರಾದಲ್ಲಿ ದೊರೆಯುತ್ತದೆ. ಒಟ್ಟು ಅವಧಿ- 6 ತಿಂಗಳು. ಫೀ- 20,000 ರೂಪಾಯಿಗಿಂತ ಕಡಿಮೆ ಆಗುತ್ತದೆ. ಇನ್ನು ಸಂಬಳದ ವಿಚಾರಕ್ಕೆ ಬಂದರೆ, ವರ್ಷಕ್ಕೆ 6 ಲಕ್ಷ ರೂಪಾಯಿಯಿಂದ ಅನುಭವಕ್ಕೆ ತಕ್ಕಂತೆ 20 ಲಕ್ಷ ರೂಪಾಯಿ ತನಕ ಸಿಗಬಹುದು.

ಡೇಟಾ ಅನಲಿಟಿಕ್ಸ್- ಕೋರ್ಸ್​ಎರಾದಿಂದ ದೊರೆಯುತ್ತದೆ. ಒಟ್ಟು ಅವಧಿ 37 ವಾರಕ್ಕಿಂತ ಕಡಿಮೆ. ಒಂದು ವಾರಕ್ಕೆ 10 ಗಂಟೆಗಿಂತ ಕಡಿಮೆ ಅವಧಿ. ಫೀ- ತಿಂಗಳಿಗೆ 3000 ರೂಪಾಯಿಗಿಂತ ಕಮ್ಮಿ. ವೇತನ- 4ರಿಂದ 6 ಲಕ್ಷ ರೂಪಾಯಿ ವಾರ್ಷಿಕ ವೇತನದೊಂದಿಗೆ ಶುರುವಾಗುತ್ತದೆ. 12 ವರ್ಷಗಳ ಅನುಭವ ಇರುವವರಿಗೆ ಗರಿಷ್ಠ 60 ಲಕ್ಷ ರೂಪಾಯಿ ತನಕ ಸಿಗಬಹುದು.

ಪ್ರಾಜೆಕ್ಟ್ ಮ್ಯಾನೇಜ್​ಮೆಂಟ್- ಕೋರ್ಸ್​ಎರಾದಿಂದ ದೊರೆಯುತ್ತದೆ. 6.5 ತಿಂಗಳು ಕೋರ್ಸ್ ಅವಧಿ. ಕೋರ್ಸ್ ಫೀ 20,000 ರೂಪಾಯಿಗಿಂತ ಕಡಿಮೆ. ಇನ್ನು ಆರಂಭಿಕ ವೇತನ ವರ್ಷಕ್ಕೆ 5 ಲಕ್ಷ ರೂಪಾಯಿಯಿಂದ ಶುರುವಾಗುತ್ತದೆ.

ಗೂಗಲ್​ನ ಈ ಸರ್ಟಿಫಿಕೇಟ್ ಕೋರ್ಸ್​ಗಳನ್ನು ಮಾಡುವುದಕ್ಕೆ ಇಂತಿಷ್ಟು ಕನಿಷ್ಠ ವಿದ್ಯಾಭ್ಯಾಸ ಅಥವಾ ಇಂಥ ಕೋರ್ಸ್​ಗಳನ್ನು ಮಾಡಿರಬೇಕು ಎಂಬ ಮಾನದಂಡಗಳನ್ನು ಇಟ್ಟಿಲ್ಲ ಎಂಬುದು ಗಮನಾರ್ಹವಾದ ಅಂಶ.

ಇದನ್ನೂ ಓದಿ: ಇನ್ಮುಂದೆ ಡಾರ್ಕ್​ ಮೋಡ್​​ನಲ್ಲೂ ಲಭ್ಯ ಗೂಗಲ್​ ಮ್ಯಾಪ್​; ಆ್ಯಂಡ್ರಾಯ್ಡ್​ ಮೊಬೈಲ್​​ನಲ್ಲಿ ಸಿಂಪಲ್​ ಆಗಿ ಸೆಟ್ಟಿಂಗ್ಸ್​​ ಬದಲಿಸಿಕೊಂಡರೆ ಆಯಿತು..

Published On - 4:17 pm, Mon, 22 March 21

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ