ಮುಖವೇ ನೋಡಿರದ ಯೋಗಿ ನಿರ್ದೇಶನದಂತೆ ಎನ್​ಎಸ್​ಇಯಲ್ಲಿ ಮುಖ್ಯ ನಿರ್ಧಾರಗಳೆಲ್ಲವನ್ನೂ ಮಾಡಿದ್ದ ಚಿತ್ರಾ ರಾಮಕೃಷ್ಣ

ಮುಖವೇ ನೋಡಿರದ ಯೋಗಿಯೊಬ್ಬನ ಸೂಚನೆಯಂತೆ ಎನ್​ಎಸ್​ಇಯಲ್ಲಿ ಅತಿ ಮುಖ್ಯ ನಿರ್ಧಾರಗಳನ್ನು ಮಾಜಿ ಎಂ.ಡಿ. ಹಾಗೂ ಸಿಇಒ ಚಿತ್ರಾ ರಾಮಕೃಷ್ಣ ತೆಗೆದುಕೊಂಡಿದ್ದರು ಎಂಬುದು ಗೊತ್ತಾಗಿದೆ.

ಮುಖವೇ ನೋಡಿರದ ಯೋಗಿ ನಿರ್ದೇಶನದಂತೆ ಎನ್​ಎಸ್​ಇಯಲ್ಲಿ ಮುಖ್ಯ ನಿರ್ಧಾರಗಳೆಲ್ಲವನ್ನೂ ಮಾಡಿದ್ದ ಚಿತ್ರಾ ರಾಮಕೃಷ್ಣ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Feb 13, 2022 | 7:42 AM

4 ಲಕ್ಷ ಕೋಟಿ ಅಮೆರಿಕನ್ ಡಾಲರ್ ಮಾರುಕಟ್ಟೆ ಮೌಲ್ಯದ ಭಾರತದ ಅತಿ ದೊಡ್ಡ ಷೇರು ವಿನಿಮಯ ಕೇಂದ್ರ ಎನ್​ಎಸ್​ಇ (NSE)ಗೆ ಮಾಜಿ ಸಿಇಒ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದವರು ಚಿತ್ರಾ ರಾಮಕೃಷ್ಣ. ಹಿಮಾಲಯದಲ್ಲಿ ವಾಸವಿರುವ ಅಪರಿಚಿತ- ಮುಖರಹಿತ ಯೋಗಿಯೊಬ್ಬರ ಮಾತಿಗೆ ಕಟ್ಟು ಬಿದ್ದಿದ್ದರು. ಅವರೇ ಆನಂದ್​ ಸುಬ್ರಮಣಿಯನ್​ ಅವರ ನೇಮಕಕ್ಕೆ ಚಿತ್ರಾಗೆ ಮಾರ್ಗದರ್ಶನ ನೀಡಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ. 2013ರ ಹೊತ್ತಿಗಿನ ಸಮಯ ಅದು. ಆ ವೇಳೆಗೆ ಆನಂದ್ ಸುಬ್ರಮಣಿಯನ್ ಅವರು ವಿನಿಮಯ ಕೇಂದ್ರದ ಸಿಒಒ (ಚೀಫ್ ಆಪರೇಟಿಂಗ್ ಆಫೀಸರ್) ಆಗಿದ್ದರು. ಆ ನೇಮಕಕ್ಕೆ ಎನ್​ಎಸ್​ಇ 5 ಕೋಟಿ ರೂಪಾಯಿ ಬೆಲೆ ತೆರಬೇಕಾಯಿತು. ಈ ಸಂಗತಿಯು ಬಹಿರಂಗ ಆಗಿದ್ದು ಶುಕ್ರವಾರ. ಎನ್​ಎಸ್​ಇ, ಚಿತ್ರಾ ರಾಮಕೃಷ್ಣ ಮತ್ತು ಇತರ ನಾಲ್ವರ ವಿರುದ್ಧ ತನಿಖೆ ನಡೆಸಿದ ನಂತರ ಸೆಬಿ ನೀಡಿದ ಅಂತಿಮ ಆದೇಶದ ಭಾಗದಲ್ಲಿ ಈ ಸಂಗತಿ ಇದೆ. ಆದೇಶವನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದ್ದು, ಮಾರುಕಟ್ಟೆಯ ನಿಯಂತ್ರಕವಾದ ಸೆಬಿಯ ವೆಬ್​ಸೈಟ್​ನಲ್ಲಿ ಲಭ್ಯ ಇದೆ.

ಚಿತ್ರಾ ರಾಮಕೃಷ್ಣ ಅವರು ಆ ಅಪರಿಚಿತ ಯೋಗಿಯನ್ನು “ಶಿರೋನ್ಮಣಿ” ಎಂದು ಕರೆಯುತ್ತಿದ್ದರು. ಎನ್​ಎಸ್​ಇಯ ಐದು ವರ್ಷದ ಮುಂದಿನ ಅಂದಾಜು, ಹಣಕಾಸು ಡೇಟಾ, ಡಿವಿಡೆಂಡ್ ರೇಷಿಯೋ, ಉದ್ಯಮ ಯೋಜನೆಗಳು, ಮಂಡಳಿ ಸಭೆಯ ಕಾರ್ಯಸೂಚಿಗಳು, ಅಷ್ಟೇ ಅಲ್ಲ ಉದ್ಯೋಗಿಗಳ ಪರ್ಫಾರ್ಮೆನ್ಸ್ ಮೌಲ್ಯಮಾಪನವನ್ನು ಸಹ ಚಿತ್ರಾ ಅವರು ಆ ಯೋಗಿ ಜತೆಗೆ ಹಂಚಿಕೊಳ್ಳುತ್ತಿದ್ದರು. ಸುಬ್ರಮಣಿಯನ್ ಅವರ ನೇಮಕಾತಿಯಲ್ಲಿ ಸಹ-ಸ್ಥಳ ಮತ್ತು ಆಲ್ಗೋ ಟ್ರೇಡಿಂಗ್ ಹಗರಣ ಹಾಗೂ ಅಧಿಕಾರ ದುರುಪಯೋಗದ ಪಾತ್ರಕ್ಕಾಗಿ 2016ರಲ್ಲಿ ಚಿತ್ರಾ ರಾಮಕೃಷ್ಣ ಅವರನ್ನು ಎನ್‌ಎಸ್‌ಇಯಿಂದ ಹೊರಹಾಕಲಾಯಿತು. ಚಿತ್ರಾ ಅವರು ನಿರ್ಭಯವಾಗಿ ಎನ್‌ಎಸ್‌ಇ ನಡೆಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ದೊಡ್ಡ ಸರ್ಕಾರಿ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳನ್ನು ಒಳಗೊಂಡಿರುವ ಹಿರಿಯ ಆಡಳಿತ ಮಂಡಳಿ ಅಥವಾ ಪ್ರವರ್ತಕರು ಯಾರೂ ಆಕೆಯ ದಾರಿಯನ್ನು ಎಂದಿಗೂ ವಿರೋಧಿಸಲಿಲ್ಲ. ಬದಲಿಗೆ ಚಿತ್ರಾ ಅವರು ಎನ್‌ಎಸ್‌ಇ ತೊರೆಯುವಾಗ 44 ಕೋಟಿ ರೂಪಾಯಿ ಬಾಕಿ ಮತ್ತು ಸಂಬಳವಾಗಿ ನೀಡಿದ್ದರು.

ಸುಮಾರು 20 ವರ್ಷಗಳಿಂದ ಚಿತ್ರಾ ರಾಮಕೃಷ್ಣ ಅವರು ಎಂದಿಗೂ ಭೇಟಿಯಾಗದ ಯೋಗಿಯೊಂದಿಗೆ ಇಮೇಲ್ ಮೂಲಕ ಸಂವಹನ ನಡೆಸಿದ್ದರು ಮತ್ತು ಸುಬ್ರಮಣಿಯನ್ ಅವರನ್ನು ಎನ್‌ಎಸ್‌ಇಯಲ್ಲಿ ಎರಡನೇ ಕಮಾಂಡ್ ಆಗಿ ನೇಮಿಸಲು ಮಾರ್ಗದರ್ಶನ ನೀಡಿದರು ಎಂದು ಸೆಬಿಯ ತನಿಖೆಯು ಬಹಿರಂಗಪಡಿಸಿದೆ. “ಅವರ ಆಧ್ಯಾತ್ಮಿಕ ಶಕ್ತಿಗಳ ಕಾರಣಕ್ಕೆ ಯೋಗಿ ಜತೆಗೆ ಅಂತಹ ಯಾವುದೇ ಭೌತಿಕ ಸಂಪರ್ಕದ ಅಗತ್ಯವಿಲ್ಲ ಮತ್ತು ಯೋಗಿಯ ಇಚ್ಛೆಯಂತೆ ಪ್ರಕಟವಾಗುತ್ತದೆ,” ಎಂದು cಇತ್ರಾ ಸೆಬಿಗೆ ತಿಳಿಸಿದ್ದಾರೆ. ಇಮೇಲ್‌ನ ವಿಷಯಗಳನ್ನು ಆಕೆ ನಿರಾಕರಿಸಿಲ್ಲ. ಜನವರಿ 18, 2013ರಂದು ಸುಬ್ರಮಣಿಯನ್ ಅವರಿಗೆ ಮುಖ್ಯ ಕಾರ್ಯತಂತ್ರ ಸಲಹೆಗಾರರನ್ನಾಗಿ ಎನ್​ಎಸ್​ಇಗೆ ವಾರ್ಷಿಕ ವೇತನವಾದ 1.68 ಕೋಟಿ ರೂಪಾಯಿಗೆ ನೇಮಕ ಆದರು. ತಾವೇ ಕ್ಲೇಮ್ ಮಾಡಿಕೊಳ್ಳುವಂತೆ ಅವರಿಗೆ Balmer Lawrieನಲ್ಲಿ ಅವರ ಕೊನೆಯ ಡ್ರಾ ಸಂಬಳ ರೂ. 15 ಲಕ್ಷ ಇತ್ತು.

2014ರ ಮಾರ್ಚ್​ನಲ್ಲಿ ಚಿತ್ರಾ ರಾಮಕೃಷ್ಣ ಅವರು ಸುಬ್ರಮಣಿಯನ್ ಅವರಿಗೆ ಶೇಕಡಾ 20ರಷ್ಟು ಹೆಚ್ಚಳವನ್ನು ಅನುಮೋದಿಸಿದರು ಮತ್ತು ಅವರ ವೇತನವನ್ನು ರೂ. 2.01 ಕೋಟಿಗೆ ಪರಿಷ್ಕರಿಸಲಾಯಿತು. ಐದು ವಾರಗಳ ನಂತರ, ಸುಬ್ರಮಣಿಯನ್ ಅವರ ಸಂಬಳವನ್ನು ಮತ್ತೆ ಶೇಕಡಾ 15ರಷ್ಟು ಮೇಲೇರಿಸಿ, ರೂ. 2.31 ಕೋಟಿಗೆ ಪರಿಷ್ಕರಿಸಲಾಯಿತು. ಏಕೆಂದರೆ ಚಿತ್ರಾ ರಾಮಕೃಷ್ಣ ಅವರು ಸುಬ್ರಮಣಿಯನ್ ಕಾರ್ಯಕ್ಷಮತೆಯನ್ನು A+ (ಅಸಾಧಾರಣ) ಎಂದು ಕರೆದಿದ್ದರು. 2015ರ ಹೊತ್ತಿಗೆ ಅವರ ಸಿಟಿಸಿ (ಕಾಸ್ಟ್ ಟು ಕಂಪೆನಿ) 5 ಕೋಟಿ ರೂಪಾಯಿಗೆ ಏರಿತು. ಅವರಿಗೆ ಚಿತ್ರಾ ಪಕ್ಕದಲ್ಲಿ ಕ್ಯಾಬಿನ್ ನೀಡಲಾಯಿತು ಮತ್ತು ಪ್ರಥಮ ದರ್ಜೆ ಅಂತಾರಾಷ್ಟ್ರೀಯ ವಿಮಾನ ಪ್ರಯಾಣವನ್ನು ನೀಡಲಾಯಿತು. ಇವೆಲ್ಲವೂ ಯೋಗಿಯ ಸೂಚನೆಯಂತೆಯೇ ಇತ್ತು.

ಅಪರಿಚಿತ ಯೋಗಿಯ ಇಮೇಲ್‌ನಲ್ಲಿ ಮತ್ತೊಂದು ಸೂಚನೆ ಬಂತು. ಅದರಂತೆ, ಸುಬ್ರಮಣಿಯನ್ ಅವರ ಒಪ್ಪಂದದ 5-ದಿನದ ಕೆಲಸದ ವಾರದಿಂದ ವಿನಾಯಿತಿ ನೀಡಬೇಕು ಮತ್ತು ಬದಲಿಗೆ ಮೂರು ದಿನಗಳವರೆಗೆ ಮಾತ್ರ ಬರಲು ಹಾಗೂ ಉಳಿದ ಸಮಯವನ್ನು ಅವರ ಇಚ್ಛೆಯಂತೆ ಕೆಲಸ ಮಾಡಲು ಅನುಮತಿಸಬೇಕು ಎಂಬ ಆದೇಶವನ್ನು ಮಾಡಲಾಯಿತು. ಸೆಪ್ಟೆಂಬರ್ 5, 2015ರಂದು ಯೋಗಿಯಿಂದ ಇನ್ನೊಂದು ಇಮೇಲ್ ಚಿತ್ರಾ ಅವರಿಗೆ ಬಂದು, “SOM, ನನಗೆ ಭೂಮಿಯ ಮೇಲೆ ವ್ಯಕ್ತಿಯಾಗಲು ಅವಕಾಶವಿದ್ದಿದ್ದರೆ ಕಾಂಚನ್ ಸೂಕ್ತವಾಗಿ ಹೊಂದಿಕೊಳ್ಳುತ್ತಾರೆ. ಆಶೀರ್ವಾದಗಳು.” ಡಿಸೆಂಬರ್ 30, 2015ರಂದು, ಯೋಗಿಗೆ ಚಿತ್ರಾ ತನ್ನ ಉತ್ತರದಲ್ಲಿ, “ಶಿರೋನ್ಮಣಿ, ಹೋರಾಟವೆಂದರೆ ನಾನು ಯಾವಾಗಲೂ ಜಿ ಮೂಲಕ ನಿಮ್ಮನ್ನು ನೋಡಿದ್ದೇನೆ ಮತ್ತು ನನ್ನದೇ ಆದ ವ್ಯತ್ಯಾಸವನ್ನು ಅರಿಯಲು ಸವಾಲು ಹಾಕಿಕೊಳ್ಳುತ್ತಿದ್ದೇನೆ.” ‘ಎಸ್‌ಒಎಂ’ ಚಿತ್ರಾ ರಾಮಕೃಷ್ಣರನ್ನು ಸೂಚಿಸುತ್ತದೆ ಮತ್ತು ‘ಕಾಂಚನ್’ ಮತ್ತು ‘ಜಿ’ ಸುಬ್ರಮಣಿಯನ್ ಅವರನ್ನು ಉಲ್ಲೇಖಿಸುತ್ತದೆ ಎಂದು ಸೆಬಿ ತನಿಖೆಯಿಂದ ತಿಳಿದುಬಂದಿದೆ.

ಈಗ ಕಂಡುಕೊಂಡಿರುವುದನ್ನು ಅಂದಿನ ಎನ್‌ಎಸ್‌ಇ ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿ ಅಧ್ಯಕ್ಷರಾದ ದಿನೇಶ್ ಕಣಬರ್ ಅವರು ದೃಢಪಡಿಸಿದ್ದಾರೆ. ಸುಬ್ರಮಣಿಯನ್ ಅವರು ಎಂಡಿ ಮತ್ತು ಸಿಇಒನ ಎಲ್ಲ ಅಧಿಕಾರಗಳನ್ನು ಹೊಂದಿದ್ದರು ಮತ್ತು ಪ್ರಥಮ ದರ್ಜೆ ವಿಮಾನಗಳಲ್ಲಿ ಹಾರಾಡುತ್ತಿದ್ದರು. ಆದರೆ ಕಾಗದದ ಮೇಲೆ ಸಲಹೆಗಾರರಾಗಿದ್ದರು. ಅಪರಿಚಿತ ವ್ಯಕ್ತಿಯೊಂದಿಗೆ ಎನ್‌ಎಸ್‌ಇ ಮುಖ್ಯಸ್ಥರನ್ನು ಒಳಗೊಂಡ ಹಣ ಮಾಡುವ ಯೋಜನೆಯ ಸ್ಪಷ್ಟವಾದ ಪಿತೂರಿ ಇರುವುದನ್ನು ಸೆಬಿ ಗಮನಿಸಿದೆ. ಫೆಬ್ರವರಿ 18, 2015ರ ಇಮೇಲ್ ಚಿತ್ರಾ ರಾಮಕೃಷ್ಣರಿಂದ ಅಪರಿಚಿತ ಯೋಗಿಗೆ, “ಗುಂಪಿನ ಮುಖ್ಯ ಸಮನ್ವಯ ಅಧಿಕಾರಿಯ ಪಾತ್ರ ಮತ್ತು ಹುದ್ದೆ ಚೆನ್ನಾಗಿದೆ ಹಾಗೂ ನಾವು ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗಬಹುದು. ನನ್ನ ಬಳಿ ಒಂದು ಸಣ್ಣ ಸಲ್ಲಿಕೆ ಇದೆ, ನಾವು ಇದನ್ನು ಗುಂಪಿನ ಅಧ್ಯಕ್ಷರು ಮತ್ತು ಮುಖ್ಯ ಸಮನ್ವಯ ಅಧಿಕಾರಿಯಾಗಿ ಮಾಡಬಹುದೇ? ಮತ್ತು ನೀವು ನಿರ್ದೇಶಿಸಿದಂತೆ ಸಮಯದ ಚೌಕಟ್ಟಿನಲ್ಲಿ ನಾವು ವಿನಿಮಯದ ಸಂಪೂರ್ಣ ಕಾರ್ಯಾಚರಣೆಗಳನ್ನು G ಅಡಿಯಲ್ಲಿ ವರ್ಗಾಯಿಸಬಹುದೇ ಮತ್ತು ಅವರನ್ನು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಮರುವಿನ್ಯಾಸ ಮಾಡಬಹುದೇ? ಮುಂದಿನ ಹಾದಿಯಲ್ಲಿ ನಿಮ್ಮ ಮಾರ್ಗದರ್ಶನವನ್ನು ಪಡೆದುಕೊಳ್ಳುತ್ತೇವೆ ಸ್ವಾಮಿ, ಇದಕ್ಕೆ ನಿಮ್ಮ ಘನತೆವೆತ್ತ ನಿಮ್ಮ ಅನುಮೋದನೆಯೊಂದಿಗೆ ಸೂಕ್ತವಾದರೆ, ಸಮಾನಾಂತರವಾಗಿ ನಾವು ಜೆಆರ್ (ರವಿ) ಅವರನ್ನು ಗ್ರೂಪ್ ಅಧ್ಯಕ್ಷ ಹಣಕಾಸು ಮತ್ತು ಮಧ್ಯಸ್ಥಗಾರರ ಸಂಬಂಧಗಳು ಹಾಗೂ ಕಾರ್ಪೊರೇಟ್ ಜನರಲ್ ಕೌನ್ಸಿಲ್ ಆಗಿ ನೇಮಿಸಬಹುದೇ?” ಎಂದಿದ್ದಾರೆ.

ಅದಕ್ಕೆ ಉತ್ತರವು ಹೀಗಿದೆ, “ನನ್ನ ಬಳಿ ಈ ಕೆಳಗಿನ ಪ್ರಶ್ನೆಗಳಿವೆ, ಅದು ನಿಮ್ಮೆಲ್ಲರನ್ನು ಮುಜುಗರದ ಪರಿಸ್ಥಿತಿಯಲ್ಲಿ ಇರಿಸುತ್ತದೆ. ನಾನು ನಿಮ್ಮ ವಾದ ಮತ್ತು ವಿಶ್ಲೇಷಣೆಯನ್ನು ಆಸಕ್ತಿದಾಯಕವಾಗಿ ನೋಡುತ್ತಿದ್ದೇನೆ. ಆದರೆ ನಿಮ್ಮ ಸ್ವಂತ ಆತಂಕಗಳಿವೆಯೇ ಹೊರತು ನನ್ನ ಉತ್ತರಗಳನ್ನು ಪಡೆದಿಲ್ಲ. ಒಂದು ಕಡೆ ನಾನು JR ಅವರನ್ನು KMP (ಪ್ರಮುಖ ನಿರ್ವಹಣಾ ವ್ಯಕ್ತಿ) ಅಧ್ಯಕ್ಷ ಎಂದು ಕರೆದರೆ, ಆತ/ಆಕೆ ಹೇಗೆ ಕ್ಷಮಿಸಬಹುದು? ಇವರು ವ್ಯಕ್ತಿನಿಷ್ಠವೇ? ಪ್ರತಿಸ್ಪರ್ಧಿಗಳು ಬುದ್ಧಿವಂತಿಕೆಯಲ್ಲಿ ಕೆಳ ಮಟ್ಟದ ಮತ್ತು ಕ್ರಿಯಾತ್ಮಕ ಪರಿಣತಿಯಲ್ಲಿ ಹೊಸ ಮುಖಗಳನ್ನು ತರುತ್ತಾರೆ. ಅವರು ಎಲ್ಲರನ್ನೂ COO ಮತ್ತು VPಯಂತೆ ತರುತ್ತಾರೆ. ನಾವು ಇಲ್ಲಿ ಒಪ್ಪಿತ ಆಗುವಂಥ ಪ್ರಕರಣವನ್ನು ತರುತ್ತಿದ್ದೇವೆ. ಆತ್ಮಾವಲೋಕನದ ಅಗತ್ಯವಿದೆ. ವ್ಯಾಪಾರ ಮತ್ತು ಇತರ ವರ್ಟಿಕಲ್‌ಗಳ ವರದಿಯಲ್ಲಿ ಯಾವುದೇ ಬದಲಾವಣೆಗಳನ್ನು ನಾನು ಎಂದಿಗೂ ಸೂಚಿಸಿಲ್ಲ, ನಾನು ಸಂಸ್ಥೆಯೊಳಗಿನ ಮಟ್ಟದ ಪ್ರಾಮುಖ್ಯತೆಯನ್ನು ಪ್ರಾರಂಭಿಸಲು ಮಾತ್ರ ಪ್ರಯತ್ನಿಸುತ್ತಿದ್ದೇನೆ. ಆದ್ದರಿಂದ ಕಾರ್ಯತಂತ್ರದ ದೃಷ್ಟಿಕೋನದಿಂದ ನಾನು ಗ್ರೂಪ್ ಸಿಒಒ ಶೀರ್ಷಿಕೆಯನ್ನು ತರಬಹುದೇ? ಏಕೆಂದರೆ ಅಂಗಸಂಸ್ಥೆಗಳು ಸಹ ಅವರಿಗೆ ರಿಪೋರ್ಟ್​ ಮಾಡುತ್ತವೆ ಮತ್ತು ಎಲ್ಲರಿಗೂ ಸ್ವೀಕಾರಾರ್ಹ. ಆಲೋಚನೆಗಳು ದೊಡ್ಡದಾಗುತ್ತವೆ, ನಮ್ಮ ನಿಲುವು ಸ್ಪಷ್ಟವಾಗುತ್ತದೆ, ಭಂಗಿಗಳು ಸುಲಭವಾಗುತ್ತವೆ. ಆಶೀರ್ವದಂ, ಇದಕ್ಕೆ ಪ್ರತಿಕ್ರಿಯಿಸುವುದು ಎಲ್ಲರಿಗೂ ಒಳ್ಳೆಯದು. ಜ್ಞಾನ ವೆಲ್.”

ಸೆಬಿ ಆದೇಶವು ಹೀಗೆ ಹೇಳಿದೆ, “ಅನಿಯಂತ್ರಿತ ಮತ್ತು ಸರ್ವಾಧಿಕಾರಿ ಆಳ್ವಿಕೆಯ ಚಾವಟಿಯು ಯಾವುದೇ ಉದ್ಯೋಗಿ ತನ್ನ ಉನ್ನತ ನಾಯಕನ ವಿರುದ್ಧ ಪರಿಣಾಮಗಳ ಭಯದಿಂದ ದೂರು ಸಲ್ಲಿಸಲು ಹಿಂಜರಿಯುವಂತೆ ಮಾಡುವುದು ಅಸಾಮಾನ್ಯವೇನಲ್ಲ. ಚಿತ್ರಾ ರಾಮಕೃಷ್ಣ ಅವರ ವಿರುದ್ಧ ಸೆಬಿ ಸ್ವೀಕರಿಸಿದ ವಿವಿಧ ಅನಾಮಧೇಯ ದೂರುಗಳಿಂದ ಇದು ಸ್ಪಷ್ಟವಾಗಿದೆ, ಈ ಪ್ರಕ್ರಿಯೆಗಳು ಹೊರಹೊಮ್ಮಿವೆ ಮತ್ತು ವಿವಿಧ ಅಕ್ರಮಗಳು ಬೆಳಕಿಗೆ ಬಂದಿವೆ. ಆದರೂ ಚಿತ್ರಾ ರಾಮಕೃಷ್ಣ ಅವರನ್ನು ದೆಹಲಿಯ ಪ್ರಬಲ ರಾಜಕಾರಣಿಯೊಬ್ಬರು ಬೆಂಬಲಿಸುವುದರೊಂದಿಗೆ 2013ರಲ್ಲಿ ಎನ್‌ಎಸ್‌ಇಯ ಎಂಡಿ ಮತ್ತು ಸಿಇಒ ಆಗಿ ಮಾಡಲಾಯಿತು ಎಂದು ಮೂಲಗಳು ಬಿಜಿನೆಸ್​ಲೈನ್‌ಗೆ ತಿಳಿಸಿವೆ. ಫೋರೆನ್ಸಿಕ್ ಆಡಿಟ್ ತೋರಿಸಿದ್ದು, ಚಿತ್ರಾ ರಾಮಕೃಷ್ಣ ಮತ್ತು ಸುಬ್ರಮಣಿಯನ್ ಅವರನ್ನು ಮಾತ್ರ ಚಿತ್ರಿಸಲಾಗಿದೆ/ಪರಿಶೀಲಿಸಲಾಗಿದೆ. ಆದರೆ ಅವರಿಗೆ ನಿಯೋಜಿಸಲಾದ ಲ್ಯಾಪ್‌ಟಾಪ್‌ಗಳನ್ನು ಎನ್‌ಎಸ್‌ಇ ಇ-ತ್ಯಾಜ್ಯವಾಗಿ ವಿಲೇವಾರಿ ಮಾಡಿದೆ. ಅವರ ವೈಯಕ್ತಿಕ ಇಮೇಲ್‌ಗಳು ಕೂಡ ಫೋರೆನ್ಸಿಕ್ ಆಡಿಟ್‌ಗೆ ಲಭ್ಯವಿರಲಿಲ್ಲ.

ಆ ಸಮಯದಲ್ಲಿ ಪರಿಹಾರ ಸಮಿತಿ, ಎನ್‌ಆರ್‌ಸಿ ಅಥವಾ ಎನ್‌ಎಸ್‌ಇ ಮಂಡಳಿ ಈ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಯನ್ನು ಎತ್ತಿರಲಿಲ್ಲ ಅಥವಾ ಈ ಸಂಬಂಧ ಯಾವುದೇ ಸಮಸ್ಯೆಯನ್ನು ತನ್ನ ಗಮನಕ್ಕೆ ತಂದಿಲ್ಲ ಎಂದು ಚಿತ್ರಾ ರಾಮಕೃಷ್ಣ ಸೆಬಿಗೆ ತಿಳಿಸಿದ್ದಾರೆ. ಹಣಕಾಸು ಸಚಿವಾಲಯದ ಮಾಜಿ ಅಧಿಕಾರಿ ಅಶೋಕ್ ಚಾವ್ಲಾ ಮತ್ತು ಆಗಿನ ಎನ್‌ಎಸ್‌ಇ ಅಧ್ಯಕ್ಷರು, ವೈಯಕ್ತಿಕ ಕಾರಣಗಳಿಂದಾಗಿ ಚಿತ್ರಾ ಅವರ ರಾಜೀನಾಮೆಯನ್ನು ಅಂಗೀಕರಿಸಿದರು ಮತ್ತು ಸಂಸ್ಥೆಯ ಬೆಳವಣಿಗೆಗೆ ಅವರು ನೀಡಿದ ಕೊಡುಗೆಯನ್ನು ಮಂಡಳಿಯು ಪ್ರಶಂಸಿಸಿತು. ಈ ಎಲ್ಲದಕ್ಕೂ ಚಿತ್ರಾಗೆ ಸೆಬಿಯ ಶಿಕ್ಷೆ ಬಹಳ ಕಡಿಮೆ ಇದೆ. ಚಿತ್ರಾ ಅವರನ್ನು ಈಗ ಮೂರು ವರ್ಷಗಳ ಕಾಲ ಬಂಡವಾಳ ಮಾರುಕಟ್ಟೆಯಿಂದ ನಿರ್ಬಂಧಿಸಲಾಗಿದೆ ಮತ್ತು ಸೆಬಿ ನಿರ್ದೇಶನ ನೀಡಿದೆ: ಚಿತ್ರಾ ರಾಮಕೃಷ್ಣ ಅವರ ಹೆಚ್ಚುವರಿ ರಜೆ ಎನ್‌ಕ್ಯಾಶ್‌ಮೆಂಟ್ ರೂ.1.54 ಕೋಟಿ ಮತ್ತು ಮುಂದೂಡಲ್ಪಟ್ಟ ಬೋನಸ್ ರೂ. 2.83 ಕೋಟಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ.

(ಮಾಹಿತಿ: ಬಿಜಿನೆಸ್​ಲೈನ್)

ಇದನ್ನೂ ಓದಿ: Anil Ambani: ರಿಲಯನ್ಸ್ ಹೋಮ್ ಫೈನಾನ್ಸ್, ಅನಿಲ್ ಅಂಬಾನಿ ಮತ್ತು ಇತರ ಮೂವರನ್ನು ಸೆಕ್ಯೂರಿಟೀಸ್​ ಮಾರುಕಟ್ಟೆಯಿಂದ ನಿಷೇಧಿಸಿದ ಸೆಬಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್