13 ಜನ ದಲಿತ ಮುಖಂಡರ ವಿರುದ್ಧ FIR ದಾಖಲಿಸಿದ ರೇಣುಕಾಚಾರ್ಯ ಸಹೋದರ ದ್ವಾರಕೇಶ್ವರಯ್ಯ
ಜಮೀನು ವ್ಯಾಜ್ಯಕ್ಕಾಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿರುವಂತಹ ಘಟನೆ ನಡೆದಿದೆ. ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೂರು ತಿಂಗಳಿಂದ ಎರಡು ಕುಟುಂಬಗಳ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು.
ದಾವಣಗೆರೆ: ಬೇಡ ಜಂಗಮ ಎಂದು ನಕಲಿ ಎಸ್ಸಿ ಜಾತಿ ಪ್ರಮಾಣ ಪತ್ರ (Caste Certificate) ಪಡೆದಿದ್ದಾರೆ ಎಂದು ಆರೋಪಿಸಿ ದ್ವಾರಕೇಶ್ವರಯ್ಯ ಅವರನ್ನು ದಲಿತ ಮುಖಂಡರು ಮುತ್ತಿಗೆ ಹಾಕಿದ್ದರು. ಈ ಹಿನ್ನೆಲೆ ಮತ್ತೆ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರ ಎಂ.ಪಿ. ದ್ವಾರಕೇಶ್ವರಯ್ಯ. ಹೋರಾಟಕ್ಕೆ ಮುಂದಾಗಿದ್ದಾರೆ. ಹೂವಿನಮಡು ಅಂಜನಪ್ಪ. ಹೆಗ್ಗೆರೆ ರಂಗಪ್ಪ ಸೇರಿ 13 ಜನ ದಲಿತ ಮುಖಂಡರ ವಿರುದ್ಧ ದ್ವಾರಕೇಶ್ವರಯ್ಯ ಎಫ್.ಐ.ಆರ್ ದಾಖಲಿಸಿದ್ದಾರೆ. ಮಾರ್ಚ 28 ರಂದು ದಾವಣಗೆರೆ ಪ್ರೆಸ್ ಕ್ಲಬ್ ಎದುರು ನಡೆದ ಘಟನೆ ಹಿನ್ನೆಲೆ ಎಫ್ ಐ ಆರ್ ದಾಖಲು ಮಾಡಲಾಗಿದೆ. ನಗರದ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದ್ವಾರಕೇಶ್ವರಯ್ಯ ದೂರು ದಾಖಲಿಸಿದ್ದಾರೆ. ರೇಣುಕಾಚಾರ್ಯ ವಿರುದ್ಧ ಹೋರಾಟಕ್ಕೆ ಸಜ್ಜಾದ ದಲಿತ ಸಂಘಟನೆಗಳು ರೇಣುಕಾಚಾರ್ಯ ಕುಟುಂಬ ಈಗಾಗಲೇ ಹಿಂದು ಲಿಂಗಾಯತ ಇದ್ದವರು ಬೇಡಜಂಗಮ ಎಸ್ಸಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ವಿಚಾರ ಪ್ರಶ್ನೆ ಮಾಡಿದಕ್ಕೆ ರೇಣುಕಾಚಾರ್ಯ ಸಹೋದರನಮ್ಮ ಮೇಲೆ ದೂರು ದಾಖಲಿಸಿದ್ದಾರೆ. ರೇಣುಕಾಚಾರ್ಯ ಅವರನ್ನ ತಕ್ಷಣ ಗಡಿಪಾರು ಮಾಡಬೇಕು. ವಿಳಂಭವಾದ್ರೆ ದಲಿತ ಸಂಘಟನೆಗಳು ರಾಜ್ಯಾದ್ಯಂತ ಹೋರಾಟ ಆರಂಭಿಸುವುದಾಗಿ ದಲಿತರ ಸಂಘಟನೆಗಳ ಒಕ್ಕೂಟದಿಂದ ಎಚ್ಚರಿಕೆ ನೀಡಿದ್ದಾರೆ.
ಶಾಸಕ ರೇಣುಕಾಚಾರ್ಯ ವಿರುದ್ಧ ದಲಿತ ಸಂಘಟನೆಗಳು ವಿಭಿನ್ನ ಹೋರಾಟ ನಡೆಸಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಿ ಶಾಸಕ ರೇಣುಕಾಚಾರ್ಯ ವಿರುದ್ದ ಹೋರಾಟ ಮಾಡಿದ್ದಾರೆ. ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿ ಇರುವ ಅಂಬೇಡ್ಕರ್ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಲಾಗಿದೆ. ಲಕ್ಷಣಕ್ಕೆ ರೇಣುಕಾಚಾರ್ಯ ಕುಟುಂಬ ಬೇಡ ಜಂಗಮ ಹೆಸರಿನಲ್ಲಿ ಪಡೆದ ಎಸ್ಸಿ ಪ್ರಮಾಣ ಪತ್ರ ವಾಪಸ್ಸು ಪಡೆಯಬೇಕು. ಅವರನ್ನ ಗಡಿ ಪಾರು ಮಾಡಬೇಕು. ಹಾಗೆ ಬಿಟ್ಟರೇ ಅಧಿಕಾರ ಬಳಿಸಿ ಮತ್ತೆ ದಬ್ಬಾಳಿಕೆ ಮಾಡುವ ಸಾದ್ಯತೆ ಇದೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ಜಮೀನು ವ್ಯಾಜ್ಯಕ್ಕಾಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ:
ಹುಬ್ಬಳ್ಳಿ: ಜಮೀನು ವ್ಯಾಜ್ಯಕ್ಕಾಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿರುವಂತಹ ಘಟನೆ ನಡೆದಿದೆ. ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೂರು ತಿಂಗಳಿಂದ ಎರಡು ಕುಟುಂಬಗಳ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ವೀರನಗೌಡ, ಬಸವರಾಜ್ ಮಡಿವಾಳರ ಕುಟುಂಬಗಳ ಮಧ್ಯೆ ಕಲಹ. ವೀರನಗೌಡ ಮನೆಗೆ ನುಗ್ಗಿ ಬಸವರಾಜ್ ಮಡಿವಾಳರ ಕುಟುಂಬದ ಹಲ್ಲೆ ಆರೋಪ ಮಾಡಲಾಗಿದೆ. ಕೊಡಲಿ, ದೊಣ್ಣೆಗಳಿಂದ ಬಸವರಾಜ್ ಮಡಿವಾಳರ ಕುಟುಂಬ ಹಲ್ಲೆ ಮಾಡಿದೆ. ನಿರಂತರ ಜಗಳಕ್ಕೆ ಬೇಸತ್ತು 20 ದಿನ ಊರು ತೊರೆದಿದ್ದ ವೀರನಗೌಡರ ಪುತ್ರ ರಾಯನಗೌಡ. ನಿನ್ನೆ ರಾಯನಗೌಡ ಗ್ರಾಮಕ್ಕೆ ಬರ್ತಿದ್ದಂತೆ ಬಸವರಾಜ್ ಕುಟುಂಬಸ್ಥರಿಂದ ಹಲ್ಲೆ ಆರೋಪ ಮಾಡಲಾಗಿದೆ. ವೀರನಗೌಡ ಕೈಗೆ ಕೊಡಲಿ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಲಾಗಿದೆ. ಕೊಡಲಿಯಿಂದ ಹೊಡೆದಿದ್ದಕ್ಕೆ ವೀರನಗೌಡ ಪಾಟೀಲ್ ಕೈಗೆ ತೀವ್ರ ಗಾಯವಾಗಿದ್ದು, ಹಲ್ಲೆಗೊಳಗಾದ ವೀರನಗೌಡ ಪಾಟೀಲ್ನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಎರಡು ಕುಟುಂಬದಿಂದ ದೂರು ಪ್ರತಿದೂರು ನೀಡಲಾಗಿದೆ.
ಕೊವಿಡ್ ವೇಳೆ ನೇಮಕಗೊಂಡಿದ್ದ ಆರೊಗ್ಯ ಸಿಬ್ಬಂದಿ ದಿಡೀರ್ ಉಚ್ಛಾಟನೆ;
ಚಿಕ್ಕಮಗಳೂರು: ಕೊವಿಡ್ ವೇಳೆ ನೇಮಕಗೊಂಡಿದ್ದ ಆರೊಗ್ಯ ಸಿಬ್ಬಂದಿ ದಿಡೀರ್ ಉಚ್ಛಾಟನೆ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇವೆಯಿಂದ ವಜಾ ಖಂಡಿಸಿ ಆರೋಗ್ಯ ಸಿಬ್ಬಂದಿಗಳಿಂದ ಪ್ರತಿಭಟನೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲಾಧಿಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನವಿ ಸಲ್ಲಿಸಿದ್ದಾರೆ. ಕೊವಿಡ್ ವೇಳೆ ಹೆಚ್ಚುವರಿ ಕೆಲಸಕ್ಕಾಗಿ ನೇಮಕಗೊಂಡಿದ್ದ ಸಿಬ್ಬಂದಿ. ಡಿ ಗ್ರೂಪ್, ನರ್ಸಿಂಗ್, ಡಾಟಾ ಎಂಟ್ರಿ ಆಪರೇಟರ್, ಫಾರ್ಮಾಸಿಸ್ಟ್, ಡಾಕ್ಟರ್ ಸೇರಿದಂತೆ ಎಲ್ಲರೂ ವಜಾ ಮಾಡಲಾಗಿದೆ. ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳ ಬಳಿ ಆರೋಗ್ಯ ಇಲಾಖೆ ಸಿಬ್ಬಂದಿ ಮೊರೆಯಿಟ್ಟಿದ್ದಾರೆ.
ಇದನ್ನೂ ಓದಿ;
ಸೀಮೆ ಎಣ್ಣೆ ಸುರಿದು ಪತ್ನಿ ಹತ್ಯೆಗೆ ಪತಿ ಯತ್ನ ಪ್ರಕರಣ; 26 ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ಮಹಿಳೆ ಸಾವು