ಸೀಮೆ ಎಣ್ಣೆ ಸುರಿದು ಪತ್ನಿ ಹತ್ಯೆಗೆ ಪತಿ ಯತ್ನ ಪ್ರಕರಣ; 26 ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ಮಹಿಳೆ ಸಾವು

ಮುದ್ದೇಬಿಹಾಳ ಪಟ್ಟಣದ ಮಿನಿ‌ ವಿಧಾನಸೌಧ ಕಟ್ಟಡದ ಬಳಿ ಅಗ್ನಿ ಅವಘಡ ಸಂಭವಿಸಿದೆ. ಬಾಂಡ್ ರೈಟರ್ಸ್ ಅಂಗಡಿಗಳು‌ ಬೆಂಕಿಗಾಹುತಿಯಾಗಿವೆ. ಅಂಗಡಿಯೊಂದರಲ್ಲಿ ಯುಗಾದಿ ಅಮಾವಾಸ್ಯೆ ಪೂಜೆಗೆ ಹಚ್ಚಿಟ್ಟಿದ್ದ ದೀಪದಿಂದ‌ ಬೆಂಕಿ ಹೊತ್ತಿರೋ ಸಂಶಯ ವ್ಯಕ್ತವಾಗಿದೆ.

ಸೀಮೆ ಎಣ್ಣೆ ಸುರಿದು ಪತ್ನಿ ಹತ್ಯೆಗೆ ಪತಿ ಯತ್ನ ಪ್ರಕರಣ; 26 ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ಮಹಿಳೆ ಸಾವು
ಸಾವನ್ನಪ್ಪಿದ ಮಹಿಳೆ ಮತ್ತು ಆಕೆಯ ಪತಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Apr 01, 2022 | 1:02 PM

ಹಾಸನ: ಪ್ರೀತಿಸಿ ಮದುವೆಯಾದವಳಿಗೆ ಸೀಮೆ ಎಣ್ಣೆ ಸುರಿದು ಹತ್ಯೆಗೆ ಯತ್ನ (Murder Attempts) ಪ್ರಕರಣಕ್ಕೆ ಸಂಬಂಧಿಸಿದಂತೆ, 26 ದಿನಗಳ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಮಹಿಳೆ ಸಾವನ್ನಪ್ಪಿದ್ದಾಳೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಮರಡಿಕೆರಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಮಡದಿ ಮೇಲಿನ ಅನುಮಾನದಿಂದ ಆಕೆ ಮಲಗಿದ್ದಾಗ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಪಾಪಿ ಪತಿ ಯತ್ನಿಸಿದ್ದ. ಚಿಕಿತ್ಸೆ ಫಲಿಸದೆ ಹಾಸನ ವೈದ್ಯಕೀಯ ಆಸ್ಪತ್ರೆಯಲ್ಲಿ ನೆನ್ನೆ ಮದ್ಯಾಹ್ನ ಮಹಿಳೆ ಭವ್ಯ(23) ಮೃತಪಟ್ಟಿದ್ದಾಳೆ. ಗ್ರಾಮದ ಸತೀಶ್ ಎಂಬಾತನಿಂದ ಪತ್ನಿ ಭವ್ಯ(22) ಮೇಲೆ ಅಮಾನವೀಯ ದಾಳಿ ಮಾಡಿದ್ದು, ಶೇಕಡಾ 70 ರಷ್ಟು ದೇಹ ಸುಟ್ಟು ಮಹಿಳೆ ನರಳಾಡಿದ್ದಾಳೆ. ಐದು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿ, ಕೆಲವೇ ವರ್ಷದಲ್ಲಿ ಪತ್ನಿ ಮೇಲೆ ಪತಿಗೆ ಅನುಮಾನ ಬಂದಿದೆ.

ಇದೇ ವಿಚಾರದಲ್ಲಿ ಜಗಳವಾಗಿ ಮಾರ್ಚ್ 5 ರ ಶನಿವಾರ ಪತ್ನಿ ಹತ್ಯೆಗೆ ಸಂಚು ಮಾಡಲಾಗಿದೆ. ಪತ್ನಿ ಮಲಗಿದ್ದಾಗ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದು, ಆಕೆ ಬದುಕುಳಿದಾಗ ಗ್ಯಾಸ್ ಲೀಕ್ ಆಗಿ ಬೆಂಕಿ ಬಿದ್ದಿದ್ದಾಗಿ ಹೇಳಿಕೆ ನೀಡುವಂತೆ ಬೆದರಿಸಿ ಪಾಪಿ ಪತಿ ಹೇಳಿಕೆ ಕೊಡಿಸಿದ್ದಾನೆ. ಗ್ಯಾಸ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡ ಬಗ್ಗೆ ಹೇಳಿಕೆ ನೀಡಿದ್ದ ಭವ್ಯ, ಘಟನೆ ಬಗ್ಗೆ ಅನುಮಾನದಿಂದ ತನಿಖೆ ನಡೆಸಿದಾಗ ಕೊಲೆ ಯತ್ನದ ಸತ್ಯ ಬಯಲಾಗಿದೆ. ಆರೋಪಿ ಪತಿ ಸತೀಶ್ ನನ್ನ ಬಂಧಿಸಿ ಜೈಲಿಗೆ ಕಳಿಸಿರೊ ಪೊಲೀಸರು, ಸಕಲೇಶಪುರ ತಾಲ್ಲೂಕಿನ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಮುದ್ದೇಬಿಹಾಳ ಪಟ್ಟಣದ ಮಿನಿ‌ ವಿಧಾನಸೌಧ ಕಟ್ಟಡದ ಬಳಿ ಅಗ್ನಿ ಅವಘಡ:

ವಿಜಯಪುರ: ಮುದ್ದೇಬಿಹಾಳ ಪಟ್ಟಣದ ಮಿನಿ‌ ವಿಧಾನಸೌಧ ಕಟ್ಟಡದ ಬಳಿ ಅಗ್ನಿ ಅವಘಡ ಸಂಭವಿಸಿದೆ. ಬಾಂಡ್ ರೈಟರ್ಸ್ ಅಂಗಡಿಗಳು‌ ಬೆಂಕಿಗಾಹುತಿಯಾಗಿವೆ. ಅಂಗಡಿಯೊಂದರಲ್ಲಿ ಯುಗಾದಿ ಅಮಾವಾಸ್ಯೆ ಪೂಜೆಗೆ ಹಚ್ಚಿಟ್ಟಿದ್ದ ದೀಪದಿಂದ‌ ಬೆಂಕಿ ಹೊತ್ತಿರೋ ಸಂಶಯ ವ್ಯಕ್ತವಾಗಿದೆ. ಬಾಂಡ್ ರೈಟರ್ಸ್ ಗಳಾದ ಎಂ ಪಿ ಕನ್ನೂರ್, ಆರ್ ಎಸ್ ಸಂಕೀನ್, ಪಿ ಎಸ್ ಹಿರೇಮಠ, ಶಿವಾನಂದ ಪೊಲೇಶಿ ಎಂಬವವರಿಗೆ ಸೇರಿದ ಅಂಗಡಿಗಳು ಮತ್ತು ಅಂಗಡಿಗಳಲ್ಲಿದ್ದ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ‌ ವ್ಯಾಪ್ತಿ ಘಟನೆ ದಾಖಲಾಗಿದೆ.

ಈಜಲು ಹೋಗಿ ಯುವಕ ನೀರು ಪಾಲು:

ಕೋಲಾರ: ಈಜಲು ಹೋದ ಯುವಕ ನೀರುಪಾಲಾದಂತಹ ಘಟನೆ ನಡೆದಿದೆ. ಜಿಲ್ಲೆಯ ಕೆಜಿಎಫ್ ತಾಲ್ಲೂಕು ಜಂಗಮಾನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು, ಕೆಜಿಎಫ್ ನಗರದ ಎಮ್.ಎಲ್.ಬ್ಲಾಕ್​ನ ಧನುಷ್ ಮೃತ ಯುವಕ. ಇಂದು ಸ್ನೇಹಿತರೊಟ್ಟಿಗೆ ಬಂದಿದ್ದ ಧನುಷ್ ಈಜಲು ಹೋಗಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಕ್ಯಾಸಂಬಳ್ಳಿ ಪೊಲೀಸರ ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಸರಣಿ ಕಳತನ; ಬಸ್ ಪ್ರಯಾಣಿಕರೇ ಇವರ ಟಾರ್ಗೆಟ್:

ನೆಲಮಂಗಲ: ಸರಣಿಯಾಗಿ ಚಿಲ್ಲರೆ ಗ್ಯಾಂಗ್ ದೋಚುತ್ತಲೇ ಇದೆ. ಚಿಲ್ಲರೆ ಹಣ ಕೆಳಕ್ಕೆ ಬೀಳಿಸಿ ಚಿನ್ನಾಭರಣ ಎಗರಿಸುತ್ತಿರುವ ಗ್ಯಾಂಗ್, ಬಸ್ ಪ್ರಯಾಣಿಕರೇ ಈ ಚಿಲ್ಲರೆ ಗ್ಯಾಂಗ್​ನ ಟಾರ್ಗೆಟ್. ಕೆಎಸ್ಆರ್ ಟಿಸಿ ಬಸ್​ನಲ್ಲಿ ಲಲಿತಮ್ಮ ಎನ್ನುವವರ ಆಭರಣವನ್ನು ಗ್ಯಾಂಗ್ ಎಗರಿಸಿದೆ. ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಸಮೀಪದಲ್ಲಿ ಘಟನೆ ನಡೆದಿದೆ. ಮೂಡಲಪಾಳ್ಯದ ನಿವಾಸಿಯಾಗಿರುವ ಲಲಿತಮ್ಮ ಚಿನ್ನಾಭರಣಗಳನ್ನ ಕಳಕೊಂಡು ಕಂಗಾಲಾಗಿದ್ದಾರೆ. ಸಂಬಂಧಿಗಳ ಮದುವೆಗೆ ತುಮಕೂರಿಗೆ ಹೊರಟಿದ್ದ ಲಲಿತಮ್ಮ, ಬ್ಯಾಗ್​ನಲ್ಲಿ ನೆಕ್ಲೆಸ್, ಚಿನ್ನದ ಓಲೆ,ಬಳೆ ಸೇರಿದಂತೆ ವಿವಿಧ ರೀತಿಯ ಆಭರಣ ಇಟ್ಕೊಂಡಿದ್ದರು. ಆಭರಣ ಇದ್ದ ಬ್ಯಾಗ್ ಮೇಲೆ ಚಿಲ್ಲರೆ ಹಾಕಿ ತೆಗೆದುಕೊಳ್ಳುವಂತೆ ಮಾಡಿ ದುಷ್ಕೃತ್ಯ ಮೇರೆದಿದ್ದಾರೆ. ಬ್ಯಾಗ್ ಜಿಪ್ ತೆಗೆದು ಸದ್ದಿಲ್ಲದೆ ಆಭರಣ ಗಾಯಬ್ ಮಾಡಿದ್ದು, ನೋಡ ನೋಡುತ್ತಿದ್ದಂತೆ ಬಸ್ ಇಳಿದು 35ವರ್ಷದ ಅಪರಿಚಿತ ಮಹಿಳೆ ಹೋಗಿದ್ದಾಳೆ. ಬಳಿಕ ತುಮಕೂರಿನ ಮನೆಗೆ ಹೋಗಿ ಬ್ಯಾಗ್ ಪರಿಶೀಲನೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಇದುವರೆಗೆ 15ಕ್ಕೂ ಹೆಚ್ಚು ಪ್ರಕರಣ ನಡೆದು ಪ್ರಕರಣ ದಾಖಲಾಗಿದ್ರೂ ಚಿಲ್ಲರೆ ಗ್ಯಾಂಗ್ ಬಂಧಿಸದ ಪೊಲೀಸರ ವಿರುದ್ಧ ನೊಂದವರು ಕಿಡಿ ಕಾರಿದ್ದಾರೆ. ಆಭರಣ ಕಳ್ಳತನ ಬಗ್ಗೆ ಪೀಣ್ಯಾ ಠಾಣೆಗೆ ಲಲಿತಮ್ಮ ದೂರು ನೀಡಿದ್ದಾರೆ.

ಇದನ್ನೂ ಓದಿ:

Literature: ನೆರೆನಾಡ ನುಡಿಯೊಳಗಾಡಿ; ಸೆಲ್ವಕುಮಾರಿ ಅನುವಾದಿಸಿದ ತಮಿಳು ಕಥೆ ‘ದೇವರು ಮತ್ತು ಟೈಗರ್ ಸ್ವಾಮಿ’

Published On - 12:54 pm, Fri, 1 April 22

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು