AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲದ ಸುಳಿಯಲ್ಲಿ ಸಿಲುಕಿ ರೈತ ಕಂಗಾಲು: ಕೃಷಿ ಜಮೀನು ಹರಾಜ್ ಹಾಕಲು ಬ್ಯಾಂಕ್ ಮುಂದು; ಸಿಧನೂರು ರೈತರ ಗೋಳು ಕೇಳೊರ್ಯಾರು?

ಅಕ್ರಮವಾಗಿ ಕಸಾಯಿಖಾನೆಗೆ ಸಾಗಾಟವಾಗುತ್ತಿದ್ದ 7 ಹಸುಗಳ ರಕ್ಷಣೆ ಮಾಡಲಾಗಿದೆ. ಬಾಗಲಗುಂಟೆ ಪೊಲೀಸರಿಂದ ಹಸುಗಳ ರಕ್ಷಣೆ ಮಾಡಲಾಗಿದ್ದು, ತುಮಕೂರು ರಸ್ತೆ ಟಿ.ದಾಸರಹಳ್ಳಿಯ ಹೆದ್ದಾರಿಯಲ್ಲಿ ವಶಕ್ಕೆ ಪಡೆಯಲಾಗಿದೆ.

ಸಾಲದ ಸುಳಿಯಲ್ಲಿ ಸಿಲುಕಿ ರೈತ ಕಂಗಾಲು: ಕೃಷಿ ಜಮೀನು ಹರಾಜ್ ಹಾಕಲು ಬ್ಯಾಂಕ್ ಮುಂದು; ಸಿಧನೂರು ರೈತರ ಗೋಳು ಕೇಳೊರ್ಯಾರು?
ಕೃಷಿ ಜಮೀನು, ರೈತರು
TV9 Web
| Edited By: |

Updated on:Apr 02, 2022 | 11:56 AM

Share

ರಾಯಚೂರು: ಸಾಲದ ಸುಳಿಯಲ್ಲಿ ರೈತರು (Farmer) ಸಿಲುಕಿದ್ದು, ಕೃಷಿ ಜಮೀನು ಹರಾಜ್ ಹಾಕಲು ಬ್ಯಾಂಕ್ ಮುಂದಾಗಿದೆ. ಜಿಲ್ಲೆಯ ಸಿಂಧನೂರು ತಾಲೂಕಿನ ರೈತರ ಗೋಳು ಕೇಳೊರ್ಯಾರು? ಸಿಂಧನೂರು ತಾಲ್ಲೂಕಿನ 15 ಕ್ಕು ಹೆಚ್ಚು ರೈತರ ಜಮೀನು ಹರಾಜಾಗೊ ಭಯ ಕಾಡುತ್ತಿದೆ. ಹರಾಜು ಮಾಡಿದರೇ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಎಚ್ಚರಿಕೆ ನೀಡಿದ್ದಾರೆ. 2002 ರಲ್ಲಿ 15 ಕ್ಕೂ ಹೆಚ್ಚು ರೈತರು ಬೆಳೆಸಾಲ ಪಡೆದಿದ್ದರು. ಆ ಪೈಕಿ 50 ಸಾವಿರ ಬೆಳೆಸಾಲ ಪಡೆದಿದ್ದ ರೈತ ಆಲಂಪಾಷಾ. 50 ಸಾವಿರದಲ್ಲಿ 20 ಸಾವಿರ ಡೆಪಾಸಿಟ್, 10 ಸಾವಿರ ಡಾಕ್ಯುಮೆಂಟ್ ಚಾರ್ಜ್, 6 ಸಾವಿರ ಸಿಬ್ಬಂದಿ ಪಡೆದಿದ್ದಾರೆ. ಆ 50 ಸಾವಿರ ಸಾಲದಲ್ಲಿ ಕೈ ಸೇರಿದ್ದು ಕೇವಲ 14 ಸಾವಿರ ಮಾತ್ರ. ಈ ಮಧ್ಯೆ ಅಸಲು, ಬಡ್ಡಿ ಸೇರಿ 2.47 ಲಕ್ಷ ಮರುಪಾವತಿಗೆ ಸೂಚನೆ ನೀಡಲಾಗಿದೆ. ಇದೇ ರೀತಿ 15 ಕ್ಕೂ ಹೆಚ್ಚು ರೈತರು ಕಣ್ಣೀರಿಡುತ್ತಿದ್ದಾರೆ. ರೈತರಿಗೆ ಮಾಹಿತಿ ನೀಡದೇ ದಡೇಸುಗೂರಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೋರ್ಟ್ ಮೊರೆ ಹೋಗಿದೆ. ಕೋರ್ಟ್ ಆದೇಶ ಪಡೆದು ರೈತ ಆಲಂ ಪಾಷಾರ 6 ಎಕರೆ 20 ಗುಂಟೆ ಜಮೀನು ಹರಾಜಿಗೆ ಆದೇಶಿಸಲಾಗಿದೆ. ಇದೇ ಏಪ್ರಿಲ್ 8 ಕ್ಕೆ ಕೃಷಿ ಜಮೀನು ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ಮಧ್ಯೆ ರೈತರಿಂದ ಬಳ್ಳಾರಿಯ ಮುಖ್ಯ ಶಾಖೆ ಅಧಿಕಾರಿಗಳಿಗೆ ದೂರು ಸಹ ನೀಡಲಾಗಿದೆ. ಆಗ ಸಾಲದ ಶೇಕಡಾ 10% ರಷ್ಟು ಹಣ ಪಾವತಿಸಿ, ಉಳಿದ 90% ಹಣ ಕೈಬಿಡುವಂತೆ ಸೂಚಿಸಲಾಗಿದೆ. ಹೀಗಿದ್ದರೂ ದಡೇಸುಗೂರು ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ಡೋಂಟ್ ಕೇರ್ ಎನ್ನುತ್ತಿದ್ದಾರೆ.

ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳ ರಕ್ಷಣೆ:

ನೆಲಮಂಗಲ: ಅಕ್ರಮವಾಗಿ ಕಸಾಯಿಖಾನೆಗೆ ಸಾಗಾಟವಾಗುತ್ತಿದ್ದ 7 ಹಸುಗಳ ರಕ್ಷಣೆ ಮಾಡಲಾಗಿದೆ. ಬಾಗಲಗುಂಟೆ ಪೊಲೀಸರಿಂದ ಹಸುಗಳ ರಕ್ಷಣೆ ಮಾಡಲಾಗಿದ್ದು, ತುಮಕೂರು ರಸ್ತೆ ಟಿ.ದಾಸರಹಳ್ಳಿಯ ಹೆದ್ದಾರಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಮನ್ಸೂರ್ ಖಾನ್ ಜೊತೆ ಚಾಲಕ ಅಬ್ದುಲ್ ಕರೀಂ ಬಂಧನ ಮಾಡಲಾಗಿದೆ. ರಕ್ಷಣೆ ಗೈದ ಹಸುಗಳನ್ನ ಹಂಚಿಪುರದ ಗೋಶಾಲೆಗೆ ರವಾನೆ ಮಾಡಲಾಗಿದ್ದು, ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರ್ಷಾ ಕೊಲೆ ಪ್ರಕರಣದ ತನಿಖೆಗಾಗಿ ಶಿವಮೊಗ್ಗಕ್ಕೆ ಎನ್.ಐ.ಎ ತಂಡ ಆಗಮನ:

ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷಾ ಕೊಲೆ ಪ್ರಕರಣದ ತನಿಖೆಗಾಗಿ ಶಿವಮೊಗ್ಗಕ್ಕೆ ಎನ್.ಐ.ಎ ತಂಡ ಆಗಮಿಸಿದೆ. ಪ್ರಕರಣ ತನಿಖೆಯನ್ನ ಎನ್.ಐ.ಎಗೆ ಸಿ.ಎನ್ಎನ್ ಪೊಲೀಸ್ ಇನ್ ಸ್ಪೆಕ್ಟರ್ ಗುರುರಾಜ್ ಹಸ್ತಾಂತರ ಮಾಡಲಿದ್ದಾರೆ. ಗುರುರಾಜ್ ಹರ್ಷಾ ಕೊಲೆ ತನಿಖೆ ಕೈಗೊಂಡಿದ್ದ ಅಧಿಕಾರಿ.

ಓಮಿನಿ ಕಾರಿನಲ್ಲಿ ಬೆಂಕಿ ಅವಘಡ:

ತುಮಕೂರು: ಓಮಿನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿರುವಂತಹ ಘಟನೆ ನಡೆದಿದೆ. ಗ್ಯಾಸ್ ಲೀಕ್ ಆಗಿ ಕಾರಿಗೆ ಬೆಂಕಿ ಹತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನಗರದ ಡಿಸಿ ಕಚೇರಿ ಬಳಿ ನಡೆದ ಘಟನೆ ನಡೆದಿದೆ. ರಸ್ತೆ ಪಕ್ಕದಲ್ಲಿ ಓಮಿನಿ ಕಾರು ಹೊತ್ತಿ ಉರಿದಿದೆ. ಓಮಿನಿ ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ದಳ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಓಮಿನಿ‌ ಕಾರಿನ ಮಾಲೀಕ ಪತ್ತೆಯಾಗಿಲ್ಲ. ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಅತ್ಯಾಚಾರ ಆರೋಪಿ ಮೇಲೆ ಫೈರಿಂಗ್:

ಬೆಂಗಳೂರು: ನಗರದಲ್ಲಿ ಅತ್ಯಾಚಾರ ಆರೋಪಿ ಮೇಲೆ ಫೈರಿಂಗ್ ಮಾಡಲಾಗಿದೆ. ಅವೇಜ್ ಅಲಿಯಾಸ್ ಬಚ್ಚನ್​ ಕಾಲಿಗೆ ನಗರದ ಡಿ.ಜೆ.ಹಳ್ಳಿ ಠಾಣೆ ಪೊಲೀಸರಿಂದ ಫೈರಿಂಗ್ ಮಾಡಲಾಗಿದೆ. ವೈದ್ಯಕೀಯ ತಪಾಸಣೆಗೆ ಕರೆದೊಯ್ದಿದ್ದ ವೇಳೆ ಪರಾರಿಯಾಗಿದ್ದು, ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಆರೋಪಿ ಬಂಧನಕ್ಕೆ ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ್ದು, ಶರಣಾಗುವಂತೆ ಸೂಚಿಸಿದರೂ ಕೇಳದೆ ಪರಾರಿಯಾಗಲು ಪ್ರಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಅತ್ಯಾಚಾರ ಪ್ರಕರಣದ ಆರೋಪಿ ಅವೇಜ್​ನನ್ನ ಬಂಧಿಸಲಾಗಿದೆ. ಬೆಳಗ್ಗೆ 3:30 ರ ಸುಮಾರಿಗೆ ಕೈಯಲ್ಲಿ ಬೇಡಿ ಇರುವ ವ್ಯಕ್ತಿ ಓಡಾಡುತ್ತಿರುವ ಬಗ್ಗೆ ಕರೆ ಬಂದಿತ್ತು. ತಕ್ಷಣವೇ ಪೊಲೀಸರು ಅಲರ್ಟ್​ ಆಗಿದ್ದಾರೆ. ಬೀಟ್​ನಲ್ಲಿದ್ದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ವೀರಣ್ಣಪಾಳ್ಯ ಬಳಿ ಬೀಟ್ ನಲ್ಲಿದ್ದಾಗ ಆರೋಪಿ ಬಗ್ಗೆ ಮಾಹಿತಿ ನೀಡಲಾಗಿದೆ. ವೀರಣ್ಣಪಾಳ್ಯದ ಮುಖ್ಯ ರಸ್ತೆಯಲ್ಲಿ ಆರೋಪಿ ಇರುವ ಹಿನ್ನಲೆ ಬಂಧನಕ್ಕೆ ಮುಂದಾಗಿದ್ದಾರೆ. ಈ ವೇಳೆ ಆರೋಪಿ ಅವೇಜ್ ಪಿಸಿ ಅರುಣ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಡಿಜೆಹಳ್ಳಿ ಇನ್ಸ್ಪೆಕ್ಟರ್ ಕಿರಣ್ ಕುಮಾರ್ ರಿಂದ ಆತ್ಮರಕ್ಷಣೆಗಾಗಿ ಫೈರಿಂಗ್ ನಡೆಸಲಾಗಿತ್ತು. ಸದ್ಯ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ನಂತರ ಗಡಿಪಾರು ಉಲ್ಲಂಘನೆ ಮಾಡಿದ ಪ್ರಕರಣದಲ್ಲಿ ಬಾಂಡ್ ವಯೋಲೇಷನ್ ಮೇರೆಗೆ ಕ್ರಮ ಕಯಗೊಳ್ಳಲಾಗುವುದು ಎಂದು ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೆದ್ ಹೇಳಿಕೆ ನೀಡಿದ್ದಾರೆ.

ಲಂಚ ಪಡೆದ ಗ್ರಾಪಂ ಉಪಾಧ್ಯಕ್ಷಕನಿಗೆ ಶಿಕ್ಷೆ:

ತುಮಕೂರು: ಲಂಚ ಪಡೆದ ಗ್ರಾಪಂ ಉಪಾಧ್ಯಕ್ಷಕನಿಗೆ ಶಿಕ್ಷೆ ವಿಧಿಸಲಾಗಿದೆ. ಡಾಟಾ ಎಂಟ್ರಿ ಆಪರೇಟರ್ ಹುದ್ದೆ ಖಾಯಂ ಮಾಡಲು ಲಂಚ ಪಡೆದ ಮತ್ತು ಮೊಬೈಲ್ ಕರೆ ಮಾಡಿ ಲೈಂಗಿಕ ಕಿರಕುಳ ನೀಡಿದ್ದ ಗ್ರಾಪಂ ಉಪಾಧ್ಯಕ್ಷನಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಜಿಲ್ಲೆಯ ಮಧುಗಿರಿ ತಾಲೂಕಿನ ಬ್ಯಾಲ್ಯ ಗ್ರಾಪಂ ಉಪಾಧ್ಯಕ್ಷ ಸಿಎಸ್ ನರೀಯಪ್ಪ ಮತ್ತು ರಮೇಶ್​ಗೆ ಶಿಕ್ಷೆ ನೀಡಲಾಗಿದೆ. ಗ್ರಾಪಂನಲ್ಲಿ ಹುದ್ದೆ ಖಾಯಂ ಮಾಡಲು ನರಸೀಯಪ್ಪ ಸೂಚನೆಯ ಮೇರೆಗೆ ರಮೇಶ್ ಲಂಚದ ಹಣವನ್ನ ಪಡೆದುಕೊಂಡಿದ್ದರು. ಕಳೆದ 2018 ಆಗಸ್ಟ್​​ನಲ್ಲಿ ಘಟನೆ ನಡೆದಿದ್ದ ಪ್ರಕರಣ. ನ್ಯಾಯದೀಶ ಎಸ್ ಸುಧೀಂದ್ರನಾಥ್ ಅವರು ನರಸೀಯಪ್ಪಗೆ 1 ವರ್ಷ ಕಠಿಣ ಸಜೆ ಮತ್ತು ಮೂರು ವರ್ಷ ಸಾಧಾರಣ ಸಜೆ ಹಾಗೂ 30 ಸಾವಿರ ದಂಡ ವಿಧಿಸಿದೆ. ಎರಡನೇ ಆರೋಪಿ ರಮೇಶ್​ಗೆ 3 ವರ್ಷ ಸಾಧಾರಣ ಸಜೆ ಹಾಗೂ 10 ಸಾವಿರ ದಂಡ ವಿಧಿಸಲಾಗಿದೆ. ಎಸಿಬಿ ಇನ್ಸಪೇಕ್ಟರ್ ಎಚ್ ಶೇಖರಪ್ಪ ಪ್ರಕರಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ಭ್ರಷ್ಟಾಚಾರ ನಿಗ್ರಹ ದಳದ ಪರವಾಗಿ ಬಸವರಾಜ್ ವಾದ ಮಂಡಿಸಿದ್ದರು.

ಇದನ್ನೂ ಓದಿ:

Child Marriage: ವೈಶಾಲಿಯಾನ; ಇದು ಶಿಶುಕಾಮ ದೃಷ್ಟಿಕೋನದ ತಣ್ಣನೆಯ ಕ್ರೌರ್ಯದರ್ಶನ

Published On - 10:31 am, Sat, 2 April 22