Crime News: ಎಲ್‌ಪಿಜಿ ಸಿಲಿಂಡರ್ ಡೆಲಿವರಿ ಸಿಬ್ಬಂದಿಯನ್ನು ಅಪಹರಿಸಿ 2 ಲಕ್ಷ ರೂ ವಸೂಲಿ ಮಾಡಿದ ಗ್ಯಾಂಗ್
ಮಾರ್ಚ್ 15ರಂದು 4 ವಾಹನದಲ್ಲಿ ಆರು ಜನರ ಗುಂಪು ಚತುರ್ಶೃಂಗಿ ದೇವಸ್ಥಾನದ ಬಳಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಟೆಂಪೋವನ್ನು ನಿಲ್ಲಿಸಿತ್ತು. ನಂತರ ಅದರೊಳಗಿದ್ದ ಸಿಬ್ಬಂದಿಯನ್ನು ಅಪಹರಿಸಿದ್ದರು.
ಪುಣೆ: ಎಲ್‌ಪಿಜಿ ಸಿಲಿಂಡರ್ (LPG Cylinder) ಬೆಲೆ ಹೆಚ್ಚಾಗಿರುವುದರಿಂದ ಇಬ್ಬರು ಎಲ್‌ಪಿಜಿ ಸಿಲಿಂಡರ್ ಡೆಲಿವರಿ ಕಾರ್ಮಿಕರನ್ನು ಅಪಹರಿಸಿದ ಆರೋಪದ ಮೇಲೆ ಮೂವರನ್ನು ಪುಣೆ ನಗರ ಪೊಲೀಸರು ಬಂಧಿಸಿದ್ದಾರೆ. ಸಿಲಿಂಡರ್ ಡೆಲಿವರಿ ಸಿಬ್ಬಂದಿಯನ್ನು ಅಪಹರಿಸಿ, ಅವರ ಕುಟುಂಬದಿಂದ 2 ಲಕ್ಷ ರೂ. ಸುಲಿಗೆ ಮಾಡಿ ನಂತರ ಬಿಡುಗಡೆ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಬಿಬ್ವೆವಾಡಿಯ ಸುದರ್ಶನ ಕಿಶೋರ ಗಂಗವಾಣೆ (25), ಜಂಭುಲವಾಡಿಯ ವಿಕಾಸ್ ತುಕಾರಾಂ ಕೋಡಿಟ್ಕರ್ (30) ಮತ್ತು ದತ್ತನಗರದ ಅಂಬೆಗಾಂವ್‌ನ ಸತೀಶ ಸುಧೀರ್ ವಂಜಾಲೆ (33) ಎಂದು ಪೊಲೀಸರು ಗುರುತಿಸಿದ್ದಾರೆ. ಕ್ರೈಂ ಬ್ರಾಂಚ್ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ ಪ್ರಕಾರ, ಮಾರ್ಚ್ 15ರಂದು 4 ವಾಹನದಲ್ಲಿ ಆರು ಜನರ ಗುಂಪು ಚತುರ್ಶೃಂಗಿ ದೇವಸ್ಥಾನದ ಬಳಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಟೆಂಪೋವನ್ನು ನಿಲ್ಲಿಸಿತ್ತು. ನಂತರ ಅದರೊಳಗಿದ್ದ ಸಿಬ್ಬಂದಿಯನ್ನು ಅಪಹರಿಸಿದ್ದರು.
ಕ್ರೈಂ ಬ್ರಾಂಚ್ ಸ್ಲೀತ್‌ಗಳಂತೆ ನಟಿಸಿದ ಆರು ಮಂದಿ ಸಿಲಿಂಡರ್ ಸಾಗಿಸುತ್ತಿದ್ದ ಟೆಂಪೋದಲ್ಲಿದ್ದ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾನೂನು ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕಿದ್ದರು. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬಾರದು ಎಂದರೆ 5 ಲಕ್ಷ ರೂ. ಹಣ ಕೊಡಬೇಕು. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಹೆದರಿದ ಅವರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವರಿಬ್ಬರನ್ನು ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಹರಿಸಿದ ನಂತರ ಆ ಇಬ್ಬರ ಕುಟುಂಬಸ್ಥರನ್ನು ಸಂಪರ್ಕಿಸಿ, ಅವರಿಬ್ಬರನ್ನು ಬಿಡುಗಡೆ ಮಾಡಬೇಕಾದರೆ ಎರಡೂ ಕುಟುಂಬಸ್ಥರು 2 ಲಕ್ಷ ರೂ. ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಪೊಲೀಸರ ಪ್ರಕಾರ, ಅಪಹರಣಕಾರರು 2 ಲಕ್ಷ ರೂ. ಹಣ ಪಡೆದ ನಂತರ ಆ ಇಬ್ಬರನ್ನು ಬಿಡುಗಡೆ ಮಾಡಿದ್ದಾರೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ, ಚತುರ್ಶೃಂಗಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವಜಾ ಮಾಡಲಾಗಿರುವ ಮಾಜಿ ಗ್ಯಾಸ್ ಏಜೆನ್ಸಿ ಉದ್ಯೋಗಿಯ ಮೇಲೆ ದೂರುದಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಂಧಿತ ಶಂಕಿತನ ಬಳಿ ವಾಹನ, ಮೋಟಾರ್ ಬೈಕ್ ಮತ್ತು ಮೂರು ಸೆಲ್ ಫೋನ್ಗಳು ಪತ್ತೆಯಾಗಿದ್ದು, ಅವೆಲ್ಲವನ್ನೂ ಅಪರಾಧಕ್ಕೆ ಬಳಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Crime News: ತಮಿಳುನಾಡಿನಲ್ಲಿ ಐವರಿಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಕುಡಿದ ಅಮಲಿನಲ್ಲಿ ತಾವಾಗೇ ಸಿಕ್ಕಿಬಿದ್ದ ಕಾಮುಕರು
Crime News: ಅಪಾರ್ಟ್ಮೆಂಟ್ನ 5ನೇ ಮಹಡಿಯಿಂದ ಜಾರಿ ಬಿದ್ದು ಖ್ಯಾತ ನಿರ್ದೇಶಕನ ಮಗ ಸಾವು