Crime News: ಅಪಾರ್ಟ್ಮೆಂಟ್ನ 5ನೇ ಮಹಡಿಯಿಂದ ಜಾರಿ ಬಿದ್ದು ಖ್ಯಾತ ನಿರ್ದೇಶಕನ ಮಗ ಸಾವು
ಶುಕ್ರವಾರ ಗೆಳೆಯರೊಂದಿಗೆ ಹೋಳಿ ಆಡಿದ ನಂತರ ಮಧ್ಯಾಹ್ನ ಮನೆಗೆ ವಾಪಾಸ್ ಬಂದಿದ್ದ ಗಿರೀಶ್ ಅವರ ಮಗ ಮನ್ನನ್ ಅಂಧೇರಿಯಲ್ಲಿರುವ ಅಪಾರ್ಟ್ಮೆಂಟ್ನ ತನ್ನ ಮನೆಯ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.
ಮುಂಬೈ: ಬಾಲಿವುಡ್ ಸಿನಿಮಾ ನಿರ್ದೇಶಕ ಗಿರೀಶ್ ಮಲಿಕ್ (Girish Malik) ಅವರ 17 ವರ್ಷದ ಮಗ ಮನ್ನನ್ ಮುಂಬೈನ ಅಂಧೇರಿಯಲ್ಲಿರುವ ಅಪಾರ್ಟ್ಮೆಂಟ್ನ 5 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಆಕಸ್ಮಿಕವಾಗಿ ಮೇಲಿನಿಂದ ಜಾರಿ ಬಿದ್ದ ಮನ್ನನ್ನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ದುರದೃಷ್ಟವಶಾತ್ ಆತ ಬದುಕಲಿಲ್ಲ. ಬಾಲಿವುಡ್ನಲ್ಲಿ ಸಂಜಯ್ ದತ್ (Sanjay Dutt) ಅವರ ತೋರ್ಬಾಜ್ (Torbaaz), ಮನ್ ವರ್ಸಸ್ ಖಾನ್, ಜಲ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಗಿರೀಶ್ ಮಲಿಕ್ ನಟರೂ ಆಗಿದ್ದರು. ಅವರ ಮಗ ಮನ್ನನ್ ಶುಕ್ರವಾರ ತನ್ನ ಮನೆಯ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಗಿರೀಶ್ ಅವರ ಮಗ ಮನ್ನನ್ ಶುಕ್ರವಾರ ಹೋಳಿ ಹಬ್ಬದ ಪ್ರಯುಕ್ತ ಗೆಳೆಯರೊಂದಿಗೆ ಹೋಳಿ ಆಡಿದ ನಂತರ ಮಧ್ಯಾಹ್ನ ಮನೆಗೆ ವಾಪಾಸ್ ಬಂದಿದ್ದ. ನಂತರ ಅಂಧೇರಿಯಲ್ಲಿರುವ ಅಪಾರ್ಟ್ಮೆಂಟ್ನ ತನ್ನ ಮನೆಯ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಇದು ಆಕಸ್ಮಿಕ ಸಾವೆಂದು ಆತನ ಮನೆಯವರು ಹೇಳಿಕೆ ನೀಡಿದ್ದಾರೆ. ಆದರೆ, ಪೊಲೀಸರು ಆತ ಉದ್ದೇಶಪೂರ್ವಕವಾಗಿಯೇ 5ನೇ ಮಹಡಿಯಿಂದ ಕೆಳಗೆ ಹಾರಿದನಾ ಅಥವಾ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದನಾ ಅಥವಾ ಈ ಘಟನೆಯ ಹಿಂದೆ ಬೇರೆ ಯಾರದ್ದಾದರೂ ಕೈವಾಡವಿದೆಯಾ? ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
ಕೆಳಗೆ ಬಿದ್ದ ಕೂಡಲೆ ಮನ್ನನ್ನನ್ನು ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆತ ಬದುಕುಳಿಯಲಿಲ್ಲ. ಮನ್ನನ್ ಸಾವಿಗೆ ಸಂಜಯ್ ದತ್, ತೋರ್ಬಾಜ್ ನಿರ್ಮಾಪಕ ಸೇರಿದಂತೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಮನ್ನನ್ ಸಾವನ್ನಪ್ಪಿರುವ ವಿಷಯವನ್ನು ವೈದ್ಯರು ಘೋಷಿಸಿದ್ದಾರೆ.
ಇದನ್ನೂ ಓದಿ: ‘ಬಾಲಿವುಡ್ನ ಹಳೆಯ ತಲೆಮಾರು ಕುಸಿಯುತ್ತಿದೆ’; ‘ದಿ ಕಾಶ್ಮೀರ್ ಫೈಲ್ಸ್’ ಕುರಿತು ಮೌನ ತಾಳಿದವರಿಗೆ ನಿರ್ದೇಶಕನ ತಿರುಗೇಟು
ಕೆಜಿಎಫ್ 2 ಕ್ಲೈಮ್ಯಾಕ್ಸ್ ಶೂಟಿಂಗ್: ಪ್ರಶಾಂತ್ ನೀಲ್ ಬೇಡಿಕೆಗೆ ನೋ ಎಂದ ಸಂಜಯ್ ದತ್