‘ಬಾಲಿವುಡ್​ನ​ ಹಳೆಯ ತಲೆಮಾರು ಕುಸಿಯುತ್ತಿದೆ’; ‘ದಿ ಕಾಶ್ಮೀರ್​ ಫೈಲ್ಸ್​’ ಕುರಿತು ಮೌನ ತಾಳಿದವರಿಗೆ ನಿರ್ದೇಶಕನ​ ತಿರುಗೇಟು

ಬಾಲಿವುಡ್​ನ ಸ್ಟಾರ್​ ನಟ ಅಕ್ಷಯ್​ ಕುಮಾರ್ ಹಾಗೂ ಕಂಗನಾ ರಣಾವತ್​ ಮಾತ್ರ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಉಳಿದವರು ಈ ಬಗ್ಗೆ ಮೌನ ತಾಳಿದ್ದಾರೆ.

‘ಬಾಲಿವುಡ್​ನ​ ಹಳೆಯ ತಲೆಮಾರು ಕುಸಿಯುತ್ತಿದೆ’; ‘ದಿ ಕಾಶ್ಮೀರ್​ ಫೈಲ್ಸ್​’ ಕುರಿತು ಮೌನ ತಾಳಿದವರಿಗೆ ನಿರ್ದೇಶಕನ​ ತಿರುಗೇಟು
ವಿವೇಕ್​ ಅಗ್ನಿಹೋತ್ರಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 16, 2022 | 3:52 PM

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾಗೆ (The Kashmir Files Movie) ಎಲ್ಲ ಕಡೆಗಳಿಂದ ಮೆಚ್ಚುಗೆ ಕೇಳಿ ಬರುತ್ತಿದೆ. ಸಾಮಾನ್ಯವಾಗಿ, ಎಲ್ಲಾ ಸಿನಿಮಾಗಳು ವೀಕೆಂಡ್​ನಲ್ಲಿ ಒಳ್ಳೆಯ ಕಲೆಕ್ಷನ್​ ಮಾಡಿ, ನಂತರದ ದಿನಗಳಲ್ಲಿ ಕುಸಿತ ಕಾಣುತ್ತವೆ. ಮತ್ತೆ ಕಲೆಕ್ಷನ್​ ಹೆಚ್ಚಬೇಕು ಎಂದರೆ ವಾರಾಂತ್ಯವೇ ಬರಬೇಕು. ಅದರಲ್ಲೂ ಕಮರ್ಷಿಯಲ್​ ಸಿನಿಮಾ ಅಲ್ಲ ಎಂದರೆ ಜನರು ಚಿತ್ರಮಂದಿರದ ಒಳಗೆ ಹೋಗೋಕೆ ಹಿಂದೇಟು ಹಾಕುತ್ತಾರೆ. ಆದರೆ, ‘ದಿ ಕಾಶ್ಮೀರ್ ಫೈಲ್ಸ್​’ ಈ ಎಲ್ಲಾ ನಂಬಿಕೆಗಳನ್ನು ಮುರಿದು ಹಾಕಿದೆ. ಈ ಚಿತ್ರ ಒಳ್ಳೆಯ ಗಳಿಕೆ ಮಾಡುತ್ತಿದೆ. ಈ ಮಧ್ಯೆ, ಚಿತ್ರದ ಬಗ್ಗೆ ಬಾಲಿವುಡ್​ (Bollywood) ಮಂದಿ ಮೌನ ತಾಳಿರುವುದನ್ನು ವಿವೇಕ್​ ಅಗ್ನಿಹೋತ್ರಿ ಟೀಕಿಸಿದ್ದಾರೆ. ಬಾಲಿವುಡ್​ ಮಂದಿಯ ಪ್ರತಿಕ್ರಿಯೆ ಅಗತ್ಯವಿಲ್ಲ ಎಂದಿದ್ದಾರೆ.

ಬಾಲಿವುಡ್​ ಸೇರಿ ಎಲ್ಲಾ ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾ ತೆರೆಗೆ ಬಂದರೆ ಅದರ ಬಗ್ಗೆ ಉಳಿದ ಸೆಲೆಬ್ರಿಟಿಗಳು ಮೆಚ್ಚುಗೆಯ ಮಾತನಾಡುತ್ತಾರೆ. ಸಿನಿಮಾ ನೋಡುವಂತೆ ಅಭಿಮಾನಿಗಳಿಗೆ ಪ್ರೇರೇಪಿಸುತ್ತಾರೆ. ಆದರೆ, ‘ದಿ ಕಾಶ್ಮೀರ್ ಫೈಲ್ಸ್​’ ವಿಚಾರದಲ್ಲಿ ಹಾಗೆ ಆಗುತ್ತಿಲ್ಲ. ಬಾಲಿವುಡ್​ನ ಸ್ಟಾರ್​ ನಟ ಅಕ್ಷಯ್​ ಕುಮಾರ್ ಹಾಗೂ ಕಂಗನಾ ರಣಾವತ್​ ಮಾತ್ರ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಉಳಿದವರು ಈ ಬಗ್ಗೆ ಮೌನ ತಾಳಿದ್ದಾರೆ. ಈ ಕುರಿತು ಅನೇಕರು ಟೀಕೆ ಮಾಡುತ್ತಿದ್ದಾರೆ. ಈ ವಿಚಾರವಾಗಿ ವಿವೇಕ್ ಖಾರವಾಗಿಯೇ​ ಪ್ರತಿಕ್ರಿಯೆ ನೀಡಿದ್ದಾರೆ.

‘ಚಿತ್ರದ ಬಗ್ಗೆ ಈ ಸೆಲೆಬ್ರಿಟಿಗಳ ಪ್ರತಿಕ್ರಿಯೆ ಏಕೆ ಮುಖ್ಯ? ಭಾರತ ಬದಲಾಗಿದೆ. ಬಾಲಿವುಡ್​ನ ಹಳೆಯ ತಲೆಮಾರು ಕುಸಿಯುತ್ತಾ ಇದೆ. ‘ದಿ ಕಾಶ್ಮೀರ ಫೈಲ್ಸ್’ ಯಶಸ್ಸು ಇದಕ್ಕೆ ಉತ್ತಮ ಉದಾಹರಣೆ. ಈ ಸಿನಿಮಾ ನಿಜವಾದ ವ್ಯಕ್ತಿಗಳು ಮತ್ತು ಅವರು ಅನುಭವಿಸಿದ ದುರಂತದ ಬಗ್ಗೆ ಇದೆಯೇ ಹೊರತು, ಬಾಲಿವುಡ್ ಬಗ್ಗೆ ಅಲ್ಲ. ನಾನು ಥಿಯೇಟರ್‌ಗೆ ಹೋದಾಗ ನನ್ನ ತಾಯಿಯ ವಯಸ್ಸಿನ ಮಹಿಳೆಯರು ಅಳುತ್ತಾ ನನ್ನ ಪಾದಗಳನ್ನು ಮುಟ್ಟುತ್ತಾರೆ. ಆಗ ನಾನು ಭಾವುಕನಾಗುತ್ತೇನೆ. ಜನರು ಸಿನಿಮಾ ಜತೆ ಕನೆಕ್ಟ್​ ಆಗುತ್ತಿದ್ದಾರೆ,  ಅದು ನನಗೆ ಹೆಚ್ಚು ಮುಖ್ಯ’ ಎಂದಿದ್ದಾರೆ ವಿವೇಕ್​ ಅಗ್ನಿಹೋತ್ರಿ.

ಕಂಗನಾ ಟೀಕೆ..

ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಕುರಿತು ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ತಯಾರಾಗಿದೆ. ಆ ಕಾರಣದಿಂದ ಕೆಲವು ವಿವಾದಗಳು ಕೂಡ ಹುಟ್ಟಿಕೊಂಡಿವೆ. ಒಂದು ವರ್ಗದ ಜನರು ಈ ಸಿನಿಮಾ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರು ಈ ಚಿತ್ರವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಸಾಧನೆ ಮಾಡುತ್ತಿರುವ ಈ ಚಿತ್ರದ ಬಗ್ಗೆ ಬಾಲಿವುಡ್​ ಸೆಲೆಬ್ರಿಟಿಗಳು ಮೌನ ವಹಿಸಿರುವುದು ಕಂಗನಾ ರಣಾವತ್​ ಅವರ ಅಸಾಮಾಧಾನಕ್ಕೆ ಕಾರಣ ಆಗಿತ್ತು.

‘ಈ ಸಿನಿಮಾದ ಕಂಟೆಂಟ್​ ಮಾತ್ರವಲ್ಲದೇ ಬಾಕ್ಸ್​ ಆಫೀಸ್​ ಗಳಿಕೆ ಕೂಡ ಗಮನಾರ್ಹ ಆಗಿವೆ. ಈ ಬಗ್ಗೆ ಬಾಲಿವುಡ್​ನಲ್ಲಿ ಸೃಷ್ಟಿ ಆಗಿರುವ ಮೌನವನ್ನು ಗಮನಿಸಿ. ಬಂಡವಾಳ ಮತ್ತು ಲಾಭದ ದೃಷ್ಟಿಯಿಂದ ನೋಡಿದರೆ ಈ ವರ್ಷ ಅತಿ ಹೆಚ್ಚು ಲಾಭ ಮಾಡಿದ ಸಿನಿಮಾ ಇದಾಗಲಿದೆ. ಕೊರೊನಾ ಬಳಿಕ ದೊಡ್ಡ ಸಿನಿಮಾಗಳಿಗೆ ಮಾತ್ರ ಥಿಯೇಟರ್​ಗಳು ಸೂಕ್ತ ಎಂಬ ಕಲ್ಪನೆಯನ್ನು ಈ ಚಿತ್ರ ಹೊಡೆದುಹಾಕಿದೆ. ಮುಂಜಾನೆ 6 ಗಂಟೆಯ ಶೋಗಳು ಹೌಸ್​ಫುಲ್​ ಆಗುತ್ತಿವೆ. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇಡೀ ಜಗತ್ತು ಈ ಚಿತ್ರವನ್ನು ನೋಡುತ್ತಿದೆ. ಆದರೆ ಬಾಲಿವುಡ್​ನವರು ಸೈಲೆಂಟ್​ ಆಗಿದ್ದಾರೆ’ ಎಂದು ಕಂಗನಾ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ: PM Modi: ‘ಇದನ್ನು ಎಲ್ಲರೂ ನೋಡಬೇಕು’; ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ಪ್ರಧಾನಿ ಮೋದಿ ವಿಶೇಷ ಮಾತು

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡದವರು ದೇಶವಿರೋಧಿಗಳು; ವಿವಾದಾತ್ಮಕ ಹೇಳಿಕೆ ಕೊಟ್ಟ ಶಾಸಕ ರೇಣುಕಾಚಾರ್ಯ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್