6 ವರ್ಷದ ಮಗಳನ್ನು ಟೆರೇಸ್‌ನಿಂದ ತಳ್ಳಿ ತಾನೂ ಹಾರಿದ ತಂದೆ; ಸೂಸೈಡ್ ನೋಟ್ನಲ್ಲಿ ಸಾವಿನ ರಹಸ್ಯ ಬಯಲು
Suicide: ಮೃತ ಸುರೇಶ್ ಬಿಎಸ್‌ಎನ್‌ಎಲ್‌ನಲ್ಲಿ ಉದ್ಯೋಗಿಯಾಗಿದ್ದು, ಅವರು ತಮ್ಮ ಸಹೋದ್ಯೋಗಿ ನಾಗಲಕ್ಷ್ಮಿಯನ್ನು ಮದುವೆಯಾಗಿದ್ದರು.
ಬೆಂಗಳೂರು: ಹೆಂಡತಿಯ ಜೊತೆಗಿನ ಜಗಳದಿಂದ ತೆಲಂಗಾಣದ ಹೈದರಾಬಾದ್‌ನಲ್ಲಿ (Hyderabad) ವ್ಯಕ್ತಿಯೊಬ್ಬರು ತನ್ನ 6 ವರ್ಷದ ಮಗಳನ್ನು ಕೊಂದು, ಆಕೆಯ ಹೆಣವನ್ನು ಲಾಡ್ಜ್‌ನ ಟೆರೇಸ್‌ನಿಂದ ಎಸೆದು ತಾನೂ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಶುಕ್ರವಾರ ಈ ಘಟನೆ ನಡೆದಿದ್ದು, ಚೆರುಕುರಿ ಸುರೇಶ್ (40) ಎಂಬ ವ್ಯಕ್ತಿ ತನ್ನ ಹೆಂಡತಿಯ ವಿರುದ್ಧ ಆರೋಪಿಸಿ ಸೂಸೈಡ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಹಾಗೂ ತನ್ನ ಮಗಳ ಸಾವಿಗೆ ಕಾರಣವಾದ ಹೆಂಡತಿಯ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಸೂಸೈಡ್ ನೋಟ್ನಲ್ಲಿ ಬರೆದಿದ್ದಾರೆ.
ವರದಿಯ ಪ್ರಕಾರ, ಮೃತ ವ್ಯಕ್ತಿಯ ಹೆಂಡತಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇದೇ ಕಾರಣಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗುತ್ತಿತ್ತು. ತನ್ನ ಹೆಂಡತಿ ಇನ್ನು ಬದಲಾಗುವುದಿಲ್ಲ ಎಂದು ಆತ ತನ್ನ ಮಗಳೊಂದಿಗೆ ಸಾಯಲು ನಿರ್ಧರಿಸಿದ್ದಾರೆ.
ಮೃತ ಸುರೇಶ್ ಬಿಎಸ್‌ಎನ್‌ಎಲ್‌ನಲ್ಲಿ ಉದ್ಯೋಗಿಯಾಗಿದ್ದು, ಅವರು ತಮ್ಮ ಸಹೋದ್ಯೋಗಿ ನಾಗಲಕ್ಷ್ಮಿಯನ್ನು ಮದುವೆಯಾಗಿದ್ದರು. ಅವರಿಬ್ಬರೂ ತಮ್ಮ ಮಗಳೊಂದಿಗೆ ಚಂದನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಕಳೆದ ವರ್ಷ ಸುರೇಶ್ ಅವರ ಪತ್ನಿ ಕೆಲಸ ತೊರೆದು ಕೆನಡಾಕ್ಕೆ ತೆರಳಿ ವೃತ್ತಿಜೀವನದಲ್ಲಿ ಇನ್ನಷ್ಟು ಉನ್ನತ ಹುದ್ದೆಗೆ ಏರುವ ಆಸೆ ವ್ಯಕ್ತಪಡಿಸಿದ್ದರು. ಆದರೆ, ಈ ನಿರ್ಧಾರ ಸುರೇಶ್‌ಗೆ ಸರಿ ಹೋಗಲಿಲ್ಲ. ಅಲ್ಲದೆ, ಆಕೆಗೆ ವಿವಾಹೇತರ ಸಂಬಂಧವಿದೆ ಎಂದು ಅವರು ಅನುಮಾನಪಟ್ಟಿದ್ದರು.
ಈ ಕಾರಣಕ್ಕೆ ಅವರಿಬ್ಬರ ನಡುವೆ ಜಗಳವಾಗುತ್ತಿತ್ತು. ಬುಧವಾರ ಬೆಳಗ್ಗೆ ಸುರೇಶ್ ತನ್ನ ಮಗಳ ಜೊತೆ ಮನೆಯಿಂದ ಹೊರಟು ಬೇರೆ ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗಿದ್ದರು. ಗುರುವಾರ ಅವರು ತಮ್ಮ ಮಗಳೊಂದಿಗೆ ಯಾದಾದ್ರಿಗೆ ಆಗಮಿಸಿ ಲಾಡ್ಜ್‌ಗೆ ಚೆಕ್‌ಇನ್ ಮಾಡಿದ್ದರು. ಯಾದಗಿರಿಗುಟ್ಟಕ್ಕೂ ಭೇಟಿ ನೀಡಿ ದರ್ಶನ ಪಡೆದು ಲಾಡ್ಜ್‌ಗೆ ಮರಳಿದ್ದರು. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಸುರೇಶ್ ತನ್ನ ಅಪ್ರಾಪ್ತ ಮಗಳನ್ನು ಅದೇ ಲಾಡ್ಜ್‌ನ ಟೆರೇಸ್‌ನಿಂದ ಎಸೆದು ಕೊಂದ ನಂತರ ತಾನೂ ಟೆರೇಸ್‌ನಿಂದ ಜಿಗಿದು ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಅಪರಾಧದ ಬಗ್ಗೆ ತಿಳಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ, ಸೂಕ್ತ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಗರ್ಭಿಣಿಗೆ ಸರಿಯಾದ ಚಿಕಿತ್ಸೆ ನೀಡದೆ ಕೊಂದ ಆರೋಪ; ಅವಮಾನದಿಂದ ಸ್ತ್ರೀರೋಗ ತಜ್ಞೆ ಆತ್ಮಹತ್ಯೆ
Shocking News: ಗಂಡ ಸತ್ತ ಮೇಲೆ ತವರುಮನೆಯಲ್ಲಿದ್ದ ವಿಧವೆಗೆ ತಮ್ಮನ ಮೇಲೇ ಲವ್ ಆಯ್ತು; ಹೀಗೊಂದು ವಿಚಿತ್ರ ಪ್ರೇಮಕತೆ!
Published On - 6:45 pm, Sat, 2 April 22