Shocking News: ಗಂಡ ಸತ್ತ ಮೇಲೆ ತವರುಮನೆಯಲ್ಲಿದ್ದ ವಿಧವೆಗೆ ತಮ್ಮನ ಮೇಲೇ ಲವ್ ಆಯ್ತು; ಹೀಗೊಂದು ವಿಚಿತ್ರ ಪ್ರೇಮಕತೆ!
ಈ ಕತೆ ಕೇಳಿದರೆ ನಿಮಗೂ ಆಶ್ಚರ್ಯವಾಗಬಹುದು. ಅಕ್ಕ-ತಮ್ಮ ಮದುವೆಯಾದ ಉದಾಹರಣೆ ಎಲ್ಲಾದರೂ ಉಂಟಾ ಎಂದು ನೀವು ಹುಬ್ಬೇರಿಸಬಹುದು. ಆದರೆ, ಇಂಥದ್ದೊಂದು ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರ: ಪ್ರೀತಿ ಕುರುಡು ಎಂಬ ಮಾತು ಬಹುತೇಕ ಸಂದರ್ಭಗಳಲ್ಲಿ ಅನ್ವಯವಾಗುತ್ತದೆ. ಆದರೆ, ಕುರುಡು ಪ್ರೀತಿ ಕೆಲವೊಮ್ಮೆ ನಮ್ಮ ಜೀವನವನ್ನೇ ಬದಲಾಯಿಸಿಬಿಡುತ್ತದೆ. ಆ ಬದಲಾವಣೆ ಒಳ್ಳೆಯದಾಗಿದ್ದರೆ ಏನೂ ತೊಂದರೆಯಾಗದು. ಒಂದುವೇಳೆ ಆ ಬದಲಾವಣೆ ಕೆಟ್ಟದಾಗಿದ್ದರೆ ಅದರಿಂದ ಬೇರೆಯವರಿಗೂ ತೊಂದರೆಯಾಗುವುದು ಸಹಜ. ಬಿಹಾರದ (Bihar) ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಒಂದು ವಿಚಿತ್ರ ಪ್ರೇಮಕಥೆ (Love Story) ನಡೆದಿದೆ. ವಿಧವೆ ಮಹಿಳೆಯೊಬ್ಬಳು ತನ್ನ ತಮ್ಮನನ್ನೇ ಪ್ರೀತಿ ಮಾಡಿ, ಮದುವೆಯಾಗಲು ನಿರ್ಧರಿಸಿದ್ದಾಳೆ. ಅಕ್ಕ-ತಮ್ಮ ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತಿದ್ದು, ಬದುಕಿದರೂ ಒಟ್ಟಿಗೆ, ಸತ್ತರೂ ಒಟ್ಟಿಗೇ ಎಂದು ನಿರ್ಧಾರ ಮಾಡಿಕೊಂಡಿದ್ದಾರೆ. ಆದರೆ, ಆ ಕುಟುಂಬದವರಿಗೆ ಈ ವಿಷಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಏನೇ ಆದರೂ ಈ ರೀತಿ ಸ್ವಂತ ಅಕ್ಕ-ತಮ್ಮ ಮದುವೆಯಾಗಲು ನಾವು ಬಿಡುವುದಿಲ್ಲ ಎಂದು ಪೋಷಕರು ಹಠ ಹಿಡಿದಿದ್ದಾರೆ.
ಈ ಕತೆ ಕೇಳಿದರೆ ನಿಮಗೂ ಆಶ್ಚರ್ಯವಾಗಬಹುದು. ಅಕ್ಕ-ತಮ್ಮ ಮದುವೆಯಾದ ಉದಾಹರಣೆ ಎಲ್ಲಾದರೂ ಉಂಟಾ ಎಂದು ನೀವು ಹುಬ್ಬೇರಿಸಬಹುದು. ಆದರೆ, ಇಂಥದ್ದೊಂದು ಘಟನೆ ಬಿಹಾರದಲ್ಲಿ ನಡೆದಿದೆ. ಆ ಕುಟುಂಬದರಿಗೆ ಅಕ್ಕ-ತಮ್ಮನ ಪ್ರೀತಿಯನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಅಕ್ಕ-ತಮ್ಮ ತಾವು ಹಿಡಿದ ಹಠ ಬಿಡಲಿಲ್ಲ. ಕೊನೆಗೆ ಏನು ಮಾಡುವುದು ಎಂದು ಗೊತ್ತಾಗದೆ ಪಂಚಾಯಿತಿ ಕರೆದು, ಈ ಸಮಸ್ಯೆಯನ್ನು ಇತ್ಯರ್ಥ ಮಾಡಲು ನಿರ್ಧರಿಸಲಾಯಿತು.
ಪಂಚಾಯಿತಿಯವರು ಅಕ್ಕ-ತಮ್ಮನಿಗೆ ಬುದ್ಧಿ ಹೇಳಿ ಮದುವೆಯಾಗದಂತೆ ಮನವೊಲಿಸಬಹುದು ಎಂಬುದು ಆ ಕುಟುಂಬಸ್ಥರು ಉದ್ದೇಶವಾಗಿತ್ತು. ಆದರೆ ಪ್ರೀತಿಯಲ್ಲಿರುವವರನ್ನು ಬೇರ್ಪಡಿಸುವುದು ಅಷ್ಟು ಸುಲಭವೇ? ಪಂಚಾಯಿತಿಯವರು ಈ ರೀತಿಯ ಸಂಬಂಧ ತಪ್ಪು ಎಂದು ತೀರ್ಪು ಕೊಟ್ಟಿದೆ. ಅಲ್ಲದೆ, ಈ ರೀತಿಯ ತಪ್ಪು ನಿರ್ಧಾರ ಕೈಗೊಳ್ಳಲು ಮುಂದಾದ ಆ ಅಕಕ್-ತಮ್ಮನ ತಲೆ ಬೋಳಿಸಲು ಪಂಚಾಯಿತಿ ಆದೇಶ ನೀಡಿದೆ. ಇದರಿಂದ ಆತಂಕಗೊಂಡ ಆ ಅಕ್ಕ-ತಮ್ಮ ತಮ್ಮ ಪ್ರೀತಿಯನ್ನು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ತಮ್ಮ ರಕ್ಷಣೆಗಾಗಿ ಮೊರೆ ಹೋಗಿದ್ದಾರೆ.
ಅವರಿಬ್ಬರೂ ಮದುವೆಯಾಗಲು ತಮಗೆ ಬೇಕಾದವರನ್ನು ಕಾನೂನು ಪ್ರಕಾರ ವಯಸ್ಕರಾಗಿದ್ದಾರೆ. ರಕ್ತಸಂಬಂಧಿಗಳನ್ನು ಮದುವೆಯಾಗಬಾರದು ಎಂದು ಕಾನೂನು ಹೇಳಿಲ್ಲ. ಹೀಗಾಗಿ, ಈ ವಿಷಯದಲ್ಲಿ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಯಾರಾದರೂ ಕಾನೂನನ್ನು ಕೈಗೆ ತೆಗೆದುಕೊಂಡರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸರು ಆ ಕುಟುಂಬಸ್ಥರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಬಿಹಾರದ ಬೇಟಿಯಾ ಬನುಚಾಪುರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮಹಿಳೆಯ ಪತಿ 1 ವರ್ಷದ ಹಿಂದೆ ಮೃತಪಟ್ಟಿದ್ದ. ನಂತರ ಆಕೆ ತನ್ನ ಪೋಷಕರೊಂದಿಗೆ ವಾಸವಾಗಿದ್ದಳು. ಅಲ್ಲಿ ಆ ಮಹಿಳೆ ತನಗಿಂತ 4 ವರ್ಷದ ಸಣ್ಣವನಾದ ತನ್ನ ಕೊನೆಯ ತಮ್ಮನನ್ನು ಪ್ರೀತಿಸತೊಡಗಿದಳು. ಇದು ಅಕ್ಕ-ತಮ್ಮನ ನಡುವೆ ಇರುವ ಪ್ರೀತಿಯಾಗಿರಲಿಲ್ಲ. ಅವರಿಬ್ಬರೂ ಗಂಡ-ಹೆಂಡತಿಯಾಗಿ ಬದುಕಬೇಕೆಂದು ನಿರ್ಧರಿಸಿದ್ದರು. ಆ ಮಹಿಳೆ ಹಾಗೂ ಆಕೆಯ ತಮ್ಮ ಸುನಿಲ್ ಪೊಲೀಸರ ಮೊರೆ ಹೋಗಿದ್ದು, ಕಾನೂನುಪ್ರಕಾರ ಅವರಿಗೆ ಸಹಾಯ ಮಾಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Viral News: ಶಾಪಿಂಗ್ ಮಾಡುವಾಗ ಗಂಡ ಕಿರಿಕಿರಿ ಮಾಡ್ತಾನಾ?; ಈ ಮಾಲ್ನಲ್ಲಿದೆ ಹಸ್ಬೆಂಡ್ ಸ್ಟೋರೇಜ್ ಪಾಡ್ಸ್
Shocking News: ಬೆಕ್ಕು ಕಚ್ಚಿ ಇಬ್ಬರು ಮಹಿಳೆಯರು ಸಾವು; ಆಂಧ್ರ ಪ್ರದೇಶದಲ್ಲೊಂದು ದಾರುಣ ಘಟನೆ