ಸಾಲದ ಹೊರೆ ತಾಳಲಾರದೆ ಮೊಬೈಲ್ ಅಂಗಡಿ ಮಾಲೀಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ಸಾಲದ ಹೊರೆ ತಾಳಲಾರದೆ ಮೊಬೈಲ್ ಅಂಗಡಿ ಮಾಲೀಕ ನೇಣು ಬಿಗಿದುಕೊಂಡು ಆತ್ಮಹತ್ಯೆ
ಸಾಂಕೇತಿಕ ಚಿತ್ರ

ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವನ್ನಪ್ಪಿದ್ದಾನೆ. ತಾಲ್ಲೂಕಿನ ದೇವಸುಗೂರಿನ ರಾಘವೇಂದ್ರ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಉತ್ತರ ಪ್ರದೇಶ ಮೂಲದ ನರೇಂದ್ರ (35) ಮೃತ ಕಾರ್ಮಿಕ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 01, 2022 | 10:05 AM

ಮೈಸೂರು: ಸಾಲದ ಹೊರೆ ತಾಳಲಾರದೆ ಮೊಬೈಲ್ ಅಂಗಡಿ ಮಾಲೀಕ ಆತ್ಮಹತ್ಯೆ (Suicide) ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಆರ್.ಟಿ.ನಗರ ರಿಂಗ್ ರಸ್ತೆ ಬಳಿಯಿರುವ ಶಿವೇಗೌಡ ಫಾರಂ ಬಳಿ ಘಟನೆ ಸಂಭವಿಸಿದ್ದು, ಮರಕ್ಕೆ ನೇಣು ಬಿಗಿದುಕೊಂಡು ಹೇಮಂತ್ ಕುಮಾರ್ (24) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊಬೈಲ್ ಅಂಗಡಿ ಮಾಲೀಕರಾಗಿದ್ದ ಹೇಮಂತ್ ಕುಮಾರ್, ಹೆಚ್ಚಿನ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಸಾಧ್ಯವಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವು:

ರಾಯಚೂರು: ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವನ್ನಪ್ಪಿದ್ದಾನೆ. ತಾಲ್ಲೂಕಿನ ದೇವಸುಗೂರಿನ ರಾಘವೇಂದ್ರ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಉತ್ತರ ಪ್ರದೇಶ ಮೂಲದ ನರೇಂದ್ರ (35) ಮೃತ ಕಾರ್ಮಿಕ. ಮನೆಯೊಂದರಲ್ಲಿ ಪೈಂಟಿಂಗ್ ಮಾಡುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಕಾರ್ಮಿಕ ಸಾವನ್ನಪ್ಪಿದ್ದಾನೆ. ಶಕ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನುಮಾನಾಸ್ಪದವಾಗಿ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ:

ನೆಲಮಂಗಲ: ಅನುಮಾನಸ್ಪದವಾಗಿ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಘಟನೆ ನಡೆದಿದೆ. ತುಮಕೂರಿನ ಚಂದ್ರಕಲಾ(19)ಮೃತ ದುರ್ದೈವಿ. ಪೋಷಕರಿಂದ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದ್ದು, ಗೊರವನಹಳ್ಳಿ ದೇವಾಲಯವೊಂದರಲ್ಲಿ ಕಳೆದ 8 ತಿಂಗಳ ಹಿಂದೆಯಷ್ಠೆ ನವೀನ್(21)ಜೋತೆ ಲವ್ ಮ್ಯಾರೇಜ್ ಆಗಿತ್ತು. ಇಬ್ಬರೂ ಕೂಡ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಹರಿಹರಪುರ ಗ್ರಾಮದವರಾಗಿದ್ದಾರೆ. ಬಾರ್ ಬೆಂಡಿಗ್ ಕೆಲಸ ಮಾಡಿಕೊಂಡು ಬೆಂಗಳೂರಿನ ಚಿಕ್ಕಬಾಣಾವರದಲ್ಲಿ ವಾಸವಿದ್ದ ದಂಪತಿಗಳು, 03ತಿಂಗಳ ಗರ್ಭಾವತಿ ಆಗಿದ್ದ ಬಗ್ಗೆ ಪೋಷಕರಿಗೆ ತಿಳಿಸಿದ್ದ ಮೃತ ಚಂದ್ರಕಲಾ, ಕುಡಿತ ನಶೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ವರದಕ್ಷಿಣೆ ಕಿರುಕುಳ, ಕುಟುಂಬಸ್ಥರು ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. IPC1860 ರೀತ್ಯಾ 498A,304Bಕೇಸ್ ಅಡಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೌಡಿಶೀಟರ್ ನಾಪತ್ತೆ:

ಬೆಂಗಳೂರು: ನಗರದಲ್ಲಿ ನೇಪಾಳ ಮೂಲದ ಮಹಿಳೆ ಮೇಲೆ ರೌಡಿಶೀಟರ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಪತ್ತೆಯಾದ ರೌಡಿಶೀಟರ್ ಅವೇಜ್ ಅಲಿಯಾಸ್ ಬಚ್ಚಾನ್​ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಪೊಲೀಸರ ವಶದಲ್ಲೇ ಇದ್ದೂ ಮೆಡಿಕಲ್ ವೇಳೆ ಪರಾರಿಯಾಗಿರುವ ಆರೋಪಿ ಕುಖ್ಯಾತ ರೌಡಿ ಆಸಾಮಿಯಾದ ಅವೇಜ್, ಡಿಸಿಪಿ ಆದೇಶದ ಮೇರೆಗೆ ಕಳೆದ ವರ್ಷ ಜುಲೈನಲ್ಲಿ ಗಡಿಪಾರು ಆದೇಶ ನೀಡಲಾಗಿತ್ತು. ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿ, ಕೊಲೆ ಯತ್ನ ಸೇರಿದಂತೆ 27ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಹೀಗಾಗಿ ಒಂದು ವರ್ಷದ ಕಾಲ ಗಡಿಪಾರು ಆದೇಶ ಮಾಡಲಾಗಿತ್ತು. ಆದೇಶವಿದ್ದರೂ ನಿಯಮ ಮೀರಿ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದು, ಇದೇ ವೇಳೆ ಅತ್ಯಾಚಾರ ಮಾಡಿದ್ದಾನೆ. ವಿಶೇಷ ತಂಡದಿಂದ ತಲೆಮರೆಸಿಕೊಂಡ ಕಾಮುಕ ರೌಡಿ ಆಸಾಮಿಗಾಗಿ ತಲಾಶ್ ಮಾಡಲಾಗುತ್ತಿದೆ.

ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ:

ಮೈಸೂರು: ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಕೊಂಡಿರುವಂತಹ ಘಟನೆ ನಡೆದಿದೆ. ಹುಣಸೂರು ತಾಲ್ಲೂಕಿನ ಬಿಳಿಕೆರೆ ಗ್ರಾಮದ ನಿವಾಸಿ ಶೇಖರೇಗೌಡ 35 ಆತ್ಮಹತ್ಯೆ ಮಾಡಿಕೊಂಡ ರೈತ. ಟ್ರ್ಯಾಕ್ಟರ್ ಖರೀದಿಗೆ 10 ಲಕ್ಷ ಸಾಲ, ಕೃಷಿಗಾಗಿ ಚಿನ್ನಾಭರಣ ಗಿರವಿ ಇಟ್ಟು 3 ಲಕ್ಷ ಸಾಲ ಮಾಡಿದ್ದ. ಶುಂಠಿ ತಂಬಾಕು ಬೆಳೆ ಬೆಳೆದಿದ್ದ ಶೇಖರೇಗೌಡ, ಬೆಳೆ ಕೈ ಕೊಟ್ಟು ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಮನನೊಂದು ಕೃಷಿಗೆ ಬಳಸುವ ವಿಷದ ಗುಳಿಗೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ್ದಾನೆ. ನಂಜನಗೂಡು ತಾಲ್ಲೂಕು ಮುದ್ದನಹಳ್ಳಿ ಗೇಟ್ ಬಳಿ ಘಟನೆ ನಡೆದಿದ್ದು, ಗುಂಡ್ಲುಪೇಟೆ ತಾಲ್ಲೂಕಿನ ಮುದ್ದಹಳ್ಳಿ ನಿವಾಸಿಯಾಗಿರುವ ಅನಿಲ್ ಕುಮಾರ್ 29 ಮೃತ ದುರ್ದೈವಿ. ಬೇಗೂರಿನಿಂದ ಮೈಸೂರಿಗೆ ತೆರಳುವಾಗು ಅಪರಿಚಿತ ವಾಹನ‌ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದವರ ಬಂಧನ:

ಕೋಲಾರ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ ಮಾಡಲಾಗಿದೆ. ತಮಿಳುನಾಡು ಮೂಲದ ಕರ್ಣನ್ ಹಾಗೂ ವಾಣಿ ಬಂದಿತರು. ಬಂಧಿತರಿಂದ 8 ಲಕ್ಷ ರೂಪಾಯಿ ಮೌಲ್ಯದ 20 kg ಗಾಂಜಾ ಹಾಗೂ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದು, ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:

Pariksha Pe Charcha; ಇಂದು ಬೆಳಗ್ಗೆ 11 ಗಂಟೆಗೆ ಪರೀಕ್ಷಾ ಪೇ ಚರ್ಚಾ; ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ

Follow us on

Related Stories

Most Read Stories

Click on your DTH Provider to Add TV9 Kannada