AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಟ್ಟಿಗೆಗೆ ನುಗ್ಗಿ, ಜನರನ್ನ ಹೆದರಿಸಿ 30 ಕುರಿ ಹೊತ್ತೊಯ್ದ ಕಳ್ಳರು; ಕುರಿಗಳನ್ನು ಕಳೆದುಕೊಂಡ ಕುರಿಗಾಹಿ ಕಣ್ಣೀರು

ಕುರಿದೊಡ್ಡಿಯಲ್ಲಿ ಮಲಗಿದ್ದವನನ್ನು ಹೆದರಿಸಿ ಐವರು ಕಳ್ಳರ ಗ್ಯಾಂಗ್ ಕುರಿಗಳನ್ನು ಕದ್ದುಕೊಂಡು ಹೋಗಿದ್ದಾರೆ. ಕುರಿದೊಡ್ಡಿಯಲ್ಲಿದ್ದ ಕುರಿಗಳನ್ನು ಬೊಲೆರೋ ವಾಹನದಲ್ಲಿ ಹಾಕಿಕೊಂಡು ಹೋಗಿದ್ದಾರೆ.

ಕೊಟ್ಟಿಗೆಗೆ ನುಗ್ಗಿ, ಜನರನ್ನ ಹೆದರಿಸಿ 30 ಕುರಿ ಹೊತ್ತೊಯ್ದ ಕಳ್ಳರು; ಕುರಿಗಳನ್ನು ಕಳೆದುಕೊಂಡ ಕುರಿಗಾಹಿ ಕಣ್ಣೀರು
ಕುರಿಗಳನ್ನು ಕಳೆದುಕೊಂಡು ಕುರಿಗಾಹಿ ಕಣ್ಣೀರು
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Apr 02, 2022 | 2:48 PM

Share

ಹಾವೇರಿ: ರಾತ್ರೋರಾತ್ರಿ ಕುರಿದೊಡ್ಡಿಗೆ ಎಂಟ್ರಿ ಕೊಟ್ಟು ಮೂವತ್ತು ಕುರಿ (Sheep) ಗಳನ್ನು ಖದೀಮರು ಕದ್ದುಕೊಂಡು ಹೋಗಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕಾಕೋಳ ತಾಂಡಾದಲ್ಲಿ ಘಟನೆ ನಡೆದಿದ್ದು, ಕುರಿಗಳನ್ನು ಕಳೆದುಕೊಂಡ ಕುರಿಗಾಹಿ ಕಣ್ಣೀರು ಹಾಕಿದ್ದಾರೆ. ಕುರಿಗಾಹಿ ಭೀಮಪ್ಪ ಲಮಾಣಿ ಎನ್ನುವವರಿಗೆ ಕುರಿಗಳು ಸೇರಿದ್ದು, ಖದೀಮರ ಕೈಚಳಕಕ್ಕೆ ಕಣ್ಣೀರು ಹಾಕುತ್ತಾ ಕುಳಿತಿದ್ದಾರೆ. ವಿಕಲಚೇತನನಾಗಿದ್ರೂ ಕುರಿಗಳನ್ನು ಸಾಕಿಕೊಂಡು ಕುಟುಂಬ ಸಾಗಿಸ್ತಿದ್ದ ಭೀಮಪ್ಪ. ಕುರಿದೊಡ್ಡಿಯಲ್ಲಿ ಮಲಗಿದ್ದವನನ್ನು ಹೆದರಿಸಿ ಐವರು ಕಳ್ಳರ ಗ್ಯಾಂಗ್ ಕುರಿಗಳನ್ನು ಕದ್ದುಕೊಂಡು ಹೋಗಿದ್ದಾರೆ. ಕುರಿದೊಡ್ಡಿಯಲ್ಲಿದ್ದ ಕುರಿಗಳನ್ನು ಬೊಲೆರೋ ವಾಹನದಲ್ಲಿ ಹಾಕಿಕೊಂಡು ಹೋಗಿದ್ದಾರೆ. ಕಳ್ಳರ‌ ಕೃತ್ಯಕ್ಕೆ ಬೆಚ್ಚಿ ಬಿದ್ದು ಕುರಿಗಾಹಿ ಕಣ್ಣೀರು ಹಾಕುತ್ತಿದ್ದಾರೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಜಮೀನು ವಿವಾದ ಹಿನ್ನೆಲೆ ಎರಡು ಕುಟುಂಬಗಳ ನಡುವೆ ಗುಂಪು ಘರ್ಷಣೆ:

ಚಿತ್ರದುರ್ಗ: ಜಮೀನು ವಿವಾದ ಹಿನ್ನೆಲೆ, ದುಗ್ಗಾಣಿಹಟ್ಟಿಯಲ್ಲಿ ಗುಂಪು ಘರ್ಷಣೆ ಉಂಟಾಗಿದೆ. ಜಿಲ್ಲೆಯ ಹಿರಿಯೂರು ತಾಲೂಕಿನ ದುಗ್ಗಾಣಿಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಗುಂಪು ಘರ್ಷಣೆಯಲ್ಲಿ ನಾಲ್ವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿತ್ರಲಿಂಗಪ್ಪ, ಕುಂಟಪ್ಪ, ಕವಿತಾ, ಬಸವರಾಜ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿತ್ರಲಿಂಗಪ್ಪ, ಚಿತ್ತಣ್ಣ ಕುಟುಂಬಗಳ ನಡುವೆ ಘರ್ಷಣೆಯಾಗಿದೆ. ಗುಂಪು ಘರ್ಷಣೆ ತಡೆಯಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ. ಗುಂಪು ಘರ್ಷಣೆ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಆಯತಪ್ಪಿ ಹರಿಯುತ್ತಿದ್ದ ಕಾಲುವೆಗೆ ಬಾಲಕ ಬಿದ್ದು ಸಾವು:

ವಿಜಯಪುರ: ನೀರು ಹರಿಯುತ್ತಿದ್ದ ಕಾಲುವೆಯಲ್ಲಿ ಬಿದ್ದು ಬಾಲಕ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಮುದ್ದೇಬಿಹಾಳ ತಾಲೂಕಿನ ಶಿರೋಳ ಗ್ರಾಮದ ಬಳಿಯ ಚಿಮ್ಮಲಗಿ ಏತ ನೀರವಾರಿ ಯೋಜನೆಯ ಕಾಲುವೆಯಲ್ಲಿ ಘಟನೆ ಸಂಭವಿಸಿದ್ದು, ರಿಜ್ವಾನ್ ಅಲ್ಲಾಭಕ್ಷ ತಾರಾಘರ (6) ಮೃತ ಬಾಲಕ. ಮುದ್ದೇಬಿಹಾಳ ಪಟ್ಟಣದ ಮಹಿಬೂಬ್ ನಗರ ನಿವಾಸಿ ಮೃತ ರಿಜ್ವಾನ್, ತಂದೆ ಅಲ್ಲಾಭಕ್ಷನೊಂದಿಗೆ ಕಾಲುವೆ ಬಳಿ ತೆರಳಿದ್ದ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ. ಬಾಲಕನ ಶವ ಸ್ಥಳಿಯರು ಹೊರ ತೆಗೆದಿದ್ದು, ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿ ಘಟನೆ ದಾಖಲಾಗಿದೆ.

ಕಾರ್ಕಳದಲ್ಲಿ ಮತ್ತೆ ಕಂಡುಬಂದ ಗೋಕಳ್ಳತನ:

ಉಡುಪಿ: ಕಾರ್ಕಳದಲ್ಲಿ ಮತ್ತೆ ಗೋಕಳ್ಳತನ ಕಂಡುಬಂದಿದೆ. ಇಂದು ಬೆಳಗ್ಗಿನ ಜಾವ 2.45ಕ್ಕೆ ಘಟನೆ ನಡೆದಿದೆ. ಕಾರ್ಕಳ ಬಂಗ್ಲೆಗುಡ್ಡೆ ಯ ವಿದ್ಯಾ ಸರಸ್ವತಿ ಮಂದಿರದ ಆವರಣದಲ್ಲಿದ್ದ ದನಗಳನ್ನು ಕಳತನ ಮಾಡಲಾಗಿದೆ. ಐಷಾರಾಮಿ ಕಾರುಗಳನ್ನು ಬಳಸಿ ದನ ಕಳ್ಳತನ ಮಾಡುತ್ತಿದ್ದು, ನಗರದಲ್ಲಿ ಎಗ್ಗಿಲ್ಲದೆ ಗೋ ದರೋಡೆ ಪ್ರಕರಣಗಳು ನಡೆಯುತ್ತಿವೆ. ಸರಕಾರದ ವೈಫಲ್ಯತೆಗೆ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ದಿನದ ಹಿಂದೆ ಹಗಲಿನ ವೇಳೆಯಲ್ಲಿ ಗೋಕಳ್ಳತನ ಪತ್ತೆಹಚ್ಚಿದ್ದ ಹಿಂದೂ ಕಾರ್ಯಕರ್ತರು, ನಕಲಿ ನಂಬರ್ ಪ್ಲೇಟ್ ಬಳಸಿದ ಓಮ್ನಿ ಕಾರಿನಲ್ಲಿ ಸಾಗಾಟವಾಗುತ್ತಿತ್ತು. ಇಂದು ಬೆಳಿಗ್ಗೆ ಮತ್ತೆ ದನಕಳ್ಳತನ ನಡೆದಿದ್ದು, ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ರೀತಿಯಾಗಿ ಅಸ್ಸಾಂ ಕಾರ್ಮಿಕರಿಂದ ಗೋ ಮಾಂಸ ಅಕ್ರಮ ಸಾಗಾಟ ಮಾಡುತ್ತಿರುವಂತ ಘಟನೆ ನಡೆದಿದೆ. ಜಿಲ್ಲೆಯ ಶನಿವಾರಸಂತೆ ಸಮೀಪದ ಸೋಮವಾರಪೇಟೆ ತಾಲ್ಲೂಕಿನ ಮಾಲಂಬಿ ಗ್ರಾಮದಲ್ಲಿ ಘಟನೆ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಗೊ ಮಾಂಸ ಸಾಗಿಸುತ್ತಿದ್ದ ಅಸ್ಸಾಂ‌ ಕಾರ್ಮಿಕರನ್ನು ಭಜರಂಗದಳ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದವರ ಬಂಧನ:

ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್ ಮತ್ತು ಸಂತೋಷ್ ಬಂಧಿತ ಆರೋಪಿಗಳು. ಬಂಧಿತರಿಂದ 3ಲಕ್ಷದ 15 ಸಾವಿರ ನಗದು, ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ರಾಜಾಜಿನಗರ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದರು. ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

ಸ್ಟನ್ನಿಂಗ್ ಕಡ್ಡಾಯ ನಿಯಮ ಆದೇಶವನ್ನು ನಮ್ಮ ಇಲಾಖೆಯಿಂದ ಹೊರಡಿಸಿಲ್ಲ: ಪ್ರಭು ಚೌಹಾಣ್ ಹೇಳಿಕೆ

ರಾಷ್ಟ್ರಾದ್ಯಂತ ಎಂಬಿಬಿಎಸ್​ ವಿದ್ಯಾರ್ಥಿಗಳಿಗೆ 10 ದಿನಗಳ ಯೋಗ ತರಬೇತಿ ಕಡ್ಡಾಯ; ಸುತ್ತೋಲೆ ಹೊರಡಿಸಿದ ರಾಷ್ಟ್ರೀಯ ವೈದ್ಯಕೀಯ ಮಂಡಳಿ

Published On - 1:00 pm, Sat, 2 April 22