ಬೆಂಗಳೂರು, ಸೆಪ್ಟೆಂಬರ್ 23: ಬೆಂಗಳೂರಿನ ( Bangalore) ಗಾಣಕಲ್ ರಸ್ತೆಯಲ್ಲಿ ಇಂದು ಶನಿವಾರ ಬೆಳಿಗ್ಗೆ ೭ ಗಂಟೆ ಸುಮಾರಿಗೆ ಹಿಟ್ ಆ್ಯಂಡ್ ರನ್ಗೆ (hit and run) ಓರ್ವ ಬೈಕ್ ಸವಾರ (Biker) ಬಲಿಯಾಗಿದ್ದಾರೆ. KA 53 MH 9090 ಸಂಖ್ಯೆಯ ಕಾರು ಚಾಲಕನಿಂದ ಹಿಟ್ ಆ್ಯಂಡ್ ರನ್ ನಡೆದಿದೆ. ಅಜಾಗರೂಕತೆ ಹಾಗೂ ವೇಗವಾಗಿ ಬಂದ ಕಾರ್ನಿಂದ ಬೈಕ್ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಚಿಕ್ಕೇಗೌಡನಪಾಳ್ಯದಿಂದ ಉತ್ತರಹಳ್ಳಿ ಕಡೆಗೆ ವೇಗವಾಗಿ ಕಾರು ವೇಗವಾಗಿ ಚಲಿಸಿದೆ.
ಕಾರು ಡಿಕ್ಕಿ ಪರಿಣಾಮ ಬೈಕ್ ಸವಾರ ಅಜಯ್ ಕುಮಾರ್ ತೀವ್ರ ಗಾಯಗಳಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಚಾಲಕ ಸ್ಥಳದಿಂದ ಕಾರು ಸಮೇತ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕೆಂಗೇರಿ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಚಾಲಕನಿಗಾಗಿ ಶೋಧ ನಡೆದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್ಗೆ ಬಾಲಕ ಬಲಿ; ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:26 pm, Sat, 23 September 23