ಅಣ್ಣನ ಮದುವೆ ಕಾರ್ಡ್ ಕೊಡಲು ಬಂದಿದ್ದ ಸ್ನೇಹಿತೆಯಿಂದ 11 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ; ತಪ್ಪೊಪ್ಪಿಕೊಂಡ ಆರೋಪಿ

| Updated By: sandhya thejappa

Updated on: Dec 16, 2021 | 2:52 PM

ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕೇಸ್ ದಾಖಲು ಮಾಡಿ 11 ಲಕ್ಷ ಮೌಲ್ಯದ 206 ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

ಅಣ್ಣನ ಮದುವೆ ಕಾರ್ಡ್ ಕೊಡಲು ಬಂದಿದ್ದ ಸ್ನೇಹಿತೆಯಿಂದ 11 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ; ತಪ್ಪೊಪ್ಪಿಕೊಂಡ ಆರೋಪಿ
ಆರೋಪಿ ಅಜ್ರಾ ಸಿದ್ದಿಕಾ
Follow us on

ಬೆಂಗಳೂರು: ಸ್ನೇಹಿತೆ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಜ್ರಾ ಸಿದ್ದಿಕಾಳನ್ನು ಜೆ.ಜೆ.ನಗರ ಪೊಲೀಸರು ಬಂಧಿಸಿ, ಬಂಧಿತಳಿಂದ ಸುಮಾರು 11 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಡಿಸೆಂಬರ್ 14ರ ಮಧ್ಯಾಹ್ನ 3.45ಕ್ಕೆ ಆರೋಪಿ ಸ್ನೇಹಿತೆಯ ಮನೆಗೆ ಬಂದಿದ್ದಳು. ಬಟ್ಟೆ ಬದಲಾಯಿಸುವ ನೆಪದಲ್ಲಿ ರೂಂಗೆ ಪದೇ ಪದೇ ಹೋಗುತ್ತಿದ್ದಳು. ನಂತರ ರಾತ್ರಿ11 ಗಂಟೆಗೆ ಬೀರು ತೆಗೆದು ನೋಡಿದಾಗ ಒಡವೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕೇಸ್ ದಾಖಲು ಮಾಡಿ 11 ಲಕ್ಷ ಮೌಲ್ಯದ 206 ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

ಸರ ಕಿತ್ತುಕೊಂಡು ಹೋಗಿದ್ದ ಅರೋಪಿ ಅರೆಸ್ಟ್
ಮನೆಗೆ ನುಗ್ಗಿ ಮಕ್ಕಳು ಆಟವಾಡುವ ಗನ್ ತೋರಿಸಿ ಸರ ಕಿತ್ತುಕೊಂಡು ಹೋಗಿದ್ದ ಅರೋಪಿ ಅರೆಸ್ಟ್ ಆಗಿದ್ದಾನೆ. ಲಿಂಗಪ್ಪ ಬಂಧಿತ ಅರೋಪಿ. ನಿನ್ನೆ ಗಂಗಮ್ಮನ ಗುಡಿಯ ಮನೆಯೊಂದಕ್ಕೆ ಅರೋಪಿ ನುಗ್ಗಿದ್ದ. ಕೈಯಲ್ಲಿ ನಕಲಿ ಗನ್ ಹಿಡಿದು ಬೆದರಿಸಿದ್ದ. ಬಳಿಕ ಮಹಿಳೆಯ ಐವತ್ತು ಗ್ರಾಂ ಚಿನ್ನದ ಸರ ಕಿತ್ತು ಪರಾರಿಯಾಗಿದ್ದ. ಈ ಬಗ್ಗೆ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ

ದೆಹಲಿಯಲ್ಲಿ ಒಮಿಕ್ರಾನ್ ಸೋಂಕಿನ ನಾಲ್ಕು ಪ್ರಕರಣ ಪತ್ತೆ, ದೇಶದಲ್ಲಿ ಸೋಂಕಿತರ ಸಂಖ್ಯೆ 77ಕ್ಕೆ ಏರಿಕೆ

Book Release : ಅಚ್ಚಿಗೂ ಮೊದಲು ; ಸತೀಶ್ ಚಪ್ಪರಿಕೆಯವರ ‘ಥೇಮ್ಸ್​ ತಟದ ತವಕ ತಲ್ಲಣ’ ಈ ಭಾನುವಾರ ಬಿಡುಗಡೆ