ಬೆಂಗಳೂರು ಹೊರವಲಯದಲ್ಲಿ ಎರಡು ದೊಡ್ಡ ಚಿತಾಗಾರ ಸ್ಥಾಪನೆ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು ಹೊರವಲಯದಲ್ಲಿ ಎರಡು ದೊಡ್ಡ ಚಿತಾಗಾರ ಸ್ಥಾಪನೆ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರಿನ ಚಿತಾಗಾರ ಮತ್ತು ಸ್ಮಶಾನ (ಸಂಗ್ರಹ ಚಿತ್ರ)

ಬೆಂಗಳೂರಿನಲ್ಲಿ ಪ್ರಸ್ತುತ 12 ವಿದ್ಯುತ್ ಚಿತಾಗಾರಗಳಿವೆ. ಏಕಕಾಲಕ್ಕೆ 180 ಶವಗಳ ಅಂತ್ಯಸಂಸ್ಕಾರ ಮಾಡುವ ಸಾಮರ್ಥ್ಯವಿದೆ

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 16, 2021 | 7:06 PM


ಬೆಳಗಾವಿ: ಬೆಂಗಳೂರಿನ ಹಲವು ಸ್ಮಶಾನಗಳ ಸಮೀಪ ಜನವಸತಿ ಪ್ರದೇಶಗಳಿವೆ. ಹೀಗಾಗಿ ಜನರಿಗೆ ಸಮಸ್ಯೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ವಹಿಸಬೇಕೆಂದು ವಿಧಾನ ಪರಿಷತ್​ ಸದಸ್ಯ ತಿಮ್ಮಾಪುರ ಸಲಹೆ ಮಾಡಿದರು. ಈ ವಿಷಯದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರಿನಲ್ಲಿ ಪ್ರಸ್ತುತ 12 ವಿದ್ಯುತ್ ಚಿತಾಗಾರಗಳಿವೆ. ಏಕಕಾಲಕ್ಕೆ 180 ಶವಗಳ ಅಂತ್ಯಸಂಸ್ಕಾರ ಮಾಡುವ ಸಾಮರ್ಥ್ಯವಿದೆ. ಆದರೆ ಪರಿಸರ ಮಾಲಿನ್ಯದ ನಿಯಮಗಳು ಮತ್ತು ಇತರ ಕೆಲ ಸಮಸ್ಯೆಗಳು ಕಾಣಿಸಿಕೊಂಡಿವೆ. ಹೀಗಾಗಿ ಬೆಂಗಳೂರಿನ ಹೊರವಲಯದಲ್ಲಿ ಇನ್ನೆರೆಡು ದೊಡ್ಡ ಸಾಮರ್ಥ್ಯದ ಚಿತಾಗಾರಗಳನ್ನು ಸ್ಥಾಪಿಸುತ್ತೇವೆ ಎಂದು ಬೊಮ್ಮಾಯಿ ಭರವಸೆ ನೀಡಿದರು.

ಬೆಂಗಳೂರು ನಗರದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ, ಸ್ಮಾರ್ಟ್ ಪಾರ್ಕಿಂಗ್, ನಗರೋತ್ಥಾನ ಯೋಜನೆ, ಬೆಂಗಳೂರು ಮಿಷನ್-2022 ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ 10,830 ಕಾಮಗಾರಿಗಳು ನಡೆಯುತ್ತಿವೆ. ಕೇಂದ್ರ, ರಾಜ್ಯ ಸರ್ಕಾರದಿಂದ ತಲಾ ₹ 500 ಕೋಟಿ ಅನುದಾನ ಬಿಡುಗಡೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯ ಪ್ರಮುಖ ರಸ್ತೆ ಕಾಮಗಾರಿಗಳ ನಿರ್ವಹಣೆಯ ಆಡಿಟ್​ಗೆ ಸೂಚನೆ ನೀಡಲಾಗಿದೆ. ಸ್ಮಾರ್ಟ್ ಪಾರ್ಕಿಂಗ್​​ಗೆ 85 ಸ್ಥಳಗಳನ್ನು ಗುರುತಿಸಲಾಗಿದೆ. ಎಲ್​ಇಡಿ ಲೈಟ್ ಅಳವಡಿಕೆಗೆ ಹಳೆ ಟೆಂಡರ್ ರದ್ದು ಮಾಡಲಾಗಿದೆ. ಆದಷ್ಟು ಬೇಗ ಹೊಸ ಟೆಂಡರ್ ಪ್ರಕ್ರಿಯೆ ಪ್ರಾರಂಭ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ತಿಳಿಸಿದರು.

ಬಿಬಿಎಂಪಿಗೆ ಸಮರ್ಥ ವಿದ್ಯುತ್ ಶಕ್ತಿ ಬಳಕೆ, ಬೀದಿ ದೀಪಗಳ ನಿರ್ವಹಣೆಗೆ ಯಾವುದೇ ಪ್ರಶಸ್ತಿ ಬಂದಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ಟ್ ಪಾರ್ಕಿಂಗ್ ಗೆ 85 ಜಾಗ ಗುರುತಿಸಲಾಗಿದೆ. ಬಿಲ್ಡಿಂಗ್ ಕಂಟ್ರೋಲ್ ಸೆಲ್ಯುಷನ್ ಇಂಡಿಯಾ ಲಿಮಿಟೆಡ್​ಗೆ ಪಿಪಿಪಿ ಮಾದರಿಯಲ್ಲಿ 10 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ತುರ್ತು ಅಗತ್ಯಗಳಿದ್ದಾಗ ಬಿಬಿಎಂಪಿ ಸಿಬ್ಬಂದಿಯೇ ಬೀದಿದೀಪಗಳನ್ನು ಅಳವಡಿಸುತ್ತಿದ್ದಾರೆ. ಆದಷ್ಟು ಬೇಗ ಹೊಸ ಟೆಂಡರ್ ಪ್ರಕ್ರಿಯೆ ಪ್ರಾರಂಭ ಮಾಡುತ್ತೇವೆ ಎಂದರು.

ಇದನ್ನೂ ಓದಿ: Video: ಸ್ಮಶಾನದಲ್ಲಿ ಎಚ್ಚರವಿಲ್ಲದೆ ಬಿದ್ದಿದ್ದವನ ಹೆಗಲ ಮೇಲೆ ಹೊತ್ತು ನಡೆದ ಮಹಿಳಾ ಪೊಲೀಸ್​ ಅಧಿಕಾರಿ; ಚೆನ್ನೈ ಮಳೆ ಮಧ್ಯೆ ಮನಕಲಕುವ ದೃಶ್ಯ
ಇದನ್ನೂ ಓದಿ: ಕರ್ನಾಟಕ ಸರ್ಕಾರದ ಮೇಲೆ ಶೇ 40ರ ಕಮಿಷನ್ ಆರೋಪ: ಬೆಳಗಾವಿ ಅಧಿವೇಶನದಲ್ಲಿ ಗೋವಿಂದ ಕಾರಜೋಳ ಪ್ರತಿಕ್ರಿಯೆ

Follow us on

Related Stories

Most Read Stories

Click on your DTH Provider to Add TV9 Kannada