ಬೆಂಗಳೂರು: ಶ್ವಾನದ ಜೊತೆ ಅಸಹಜ ಲೈಂಗಿಕ ಕ್ರಿಯೆ, ಆರೋಪಿ ಬಂಧನ

| Updated By: Rakesh Nayak Manchi

Updated on: Sep 24, 2023 | 5:15 PM

ಇತ್ತೀಚೆಗಷ್ಟೇ ಮೇಕೆ ಮೇಲೆ ಅತ್ಯಾಚಾರ ಎಸಗಿದ್ದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿತ್ತು. ಇದರ ಬೆನ್ನಲ್ಲೇ ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಶ್ವಾನದ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಘಟನೆ ನಡೆದಿದೆ. ಕೃತ್ಯ ಸಂಬಂಧ ಮಂಡ್ಯ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಶ್ವಾನದ ಜೊತೆ ಅಸಹಜ ಲೈಂಗಿಕ ಕ್ರಿಯೆ, ಆರೋಪಿ ಬಂಧನ
ಶ್ವಾನದ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಆರೋಪಿಯನ್ನ ಬಂಧಿಸಿದ ಬೆಂಗಳೂರು ಪೊಲೀಸರು
Follow us on

ಬೆಂಗಳೂರು, ಸೆ.24: ಇತ್ತೀಚೆಗಷ್ಟೇ ಮೇಕೆ ಮೇಲೆ ಅತ್ಯಾಚಾರ ಎಸಗಿದ್ದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿತ್ತು. ಇದರ ಬೆನ್ನಲ್ಲೇ ಬೆಂಗಳೂರಿನ (Bangalore) ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಶ್ವಾನದ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಘಟನೆ ನಡೆದಿದೆ. ಕೃತ್ಯ ಸಂಬಂಧ ಮಂಡ್ಯ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೂಕ ಪ್ರಾಣಿ ಜೊತೆ ಸಾರ್ವಜನಿಕ ಸ್ಥಳದಲ್ಲಿ ಅಸಹಜ ಲೈಗಿಂಕ ಕ್ರಿಯೆ ನಡೆಸಿದ ಮಂಡ್ಯ ಮೂಲದ ಮರಿಗೌಡ ಬಂಧಿತ ಆರೋಪಿಯಾಗಿದ್ದಾನೆ. ಪ್ರಾಣಿ ಕಲ್ಯಾಣ ಅಧಿಕಾರಿ ತೇಜೆಶ್ವರ್ ಅವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ತಿಲಕ್ ನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ ಆಟೋ ಚಾಲಕನೊಬ್ಬ ಮೇಕೆ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣ ಇತ್ತೀಚೆಗೆ ನಡೆದಿತ್ತು. ತನ್ನ ಬಡಾವಣೆಯಲ್ಲಿನ ನಿರ್ಮಾಣ ಹಂತದ ಮನೆಯ ಬಳಿ ಮೇಕೆಯನ್ನು ಹಿಡಿದುಕೊಂಡು ಹೀಗಿ ಸಂಭೋಗ ನಡೆಸಿದ್ದನು.

ಇದನ್ನೂ ಓದಿ: ರಾಮನಗರ: ಮೇಕೆ ಮೇಲೆ ಅತ್ಯಾಚಾರ, ರೋಹಿದ್ ಎನ್ನುವ ಕಾಮುಕನ ವಿರುದ್ಧ ಪ್ರಕರಣ ದಾಖಲು

ಇದರ ವಿಡಿಯೋವನ್ನು ಮೊಬೈಲ್ ಕ್ಯಾಮೆರಾ ಮೂಲಕ ಸೆರೆ ಹಿಡಿಯಲಾಗಿತ್ತು. ಈ ಬಗ್ಗೆ ಮೇಕೆ ಮಾಲೀಕ ಜಮೀರ್ ಖಾನ್ ಅವರು ಆರೋಪಿ ವಿರುದ್ಧ ದೂರು ನೀಡಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೆಲವು ತಿಂಗಳ ಹಿಂದೆ ಕರು ಜೊತೆ ಅತ್ಯಾಚಾರ ಎಸಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್​ ತಾಲೂಕಿನಲ್ಲಿ ನಡೆದಿತ್ತು. ಅತ್ಯಾಚಾರಕ್ಕೆ ಒಳಗಾದ ಕರು ಸಾವನ್ನಪ್ಪಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ರಾಯಚೂರಿನಲ್ಲೂ ಕರು ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಪೊಲೀಸರು ಕಳೆದ ವರ್ಷ ಬಂಧಿಸಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ