ಬೆಂಗಳೂರು, ಆ.16: ಸಿಟಿಯಲ್ಲಿ ಕಳ್ಳತನ ಮಾಡಿ, ಬಳಿಕ ಕದ್ದ ಆಭರಣಗಳೊಂದಿಗೆ ಕಾಡಿಗೆ ಎಸ್ಕೇಪ್ ಆಗುತ್ತಿದ್ದ ಐನಾತಿ ಕಳ್ಳನೊಬ್ಬನನ್ನ ಬೆಂಗಳೂರಿನ ಗಿರಿನಗರ ಪೊಲೀಸರು(Girinagara Police) ಬಂಧಿಸಿದ್ದಾರೆ. ಕುಖ್ಯಾತ ಕಳ್ಳ ನರಸಿಂಹ ರೆಡ್ಡಿ ಎಂಬಾತ ಸುಮಾರು 50 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇತ್ತೀಚೆಗೆ ಗಿರಿನಗರ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿ, ಕದ್ದ ಆಭರಣ ಸಮೇತ ಕಾಡಿಗೆ ಎಸ್ಕೇಪ್ ಆಗಿದ್ದ.
ನೆಲಮಂಗಲ ಬಳಿಯ ಗುಡೇಮಾರನಹಳ್ಳಿ ಹಾಗೂ ಕೃಷ್ಣಗಿರಿಯ ಫಾರೆಸ್ಟ್ ಎಂಬ ಎರಡು ಕಾಡುಗಳನ್ನ ಇತ ತನ್ನ ಆವಾಸಸ್ಥಾನ ಮಾಡಿಕೊಂಡಿದ್ದ. ಕಾಡಿನ ಬಂಡೆಗಳ ಮೇಲೆ ಮಲಗುತ್ತಿದ್ದ ಆರೋಪಿ, ಪೊಲೀಸರು ಬೆನ್ನತ್ತಿದರೆ ಅವರು ನನ್ನ ಹಿಂದೆ ಬರಬೇಕು, ಬೆನ್ನಟ್ಟಬೇಕು ಎಂದು ಚಾಲೆಂಜ್ ಮಾಡಿ ಹೋಗುತ್ತಿದ್ದ. ಹೀಗೆ ಗುಡೇಮಾರನಹಳ್ಳಿ ಕಾಡಿನಲ್ಲಿದ್ದ ವೇಳೆ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಇದನ್ನೂ ಓದಿ:ಹಣ ಹಾಕದೆಯೇ ಎಟಿಎಂ ಕಳ್ಳತನವೆಂದು ದೂರು: ಬೆಡ್ ಶೀಟ್ ಹಾಕ್ಕೊಂಡು ಬಂದಿದ್ದ ಬ್ಯಾಂಕ್ ಸಿಬ್ಬಂದಿಯ ಕಳ್ಳಾಟ ಬಯಲು
ಇನ್ನು ಈ ಆರೋಪಿ ನರಸಿಂಹ ರೆಡ್ಡಿ ನೆಲಮಂಗಲದ ಸೋಲೂರು ಮೂಲದವನು. ಒಂಟಿ ಮನೆಗಳು, ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಇತ, ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನ ಮಾಡಿ, ಅದೇ ದುಡ್ಡಲ್ಲಿ ಕಾರು ಖರೀದಿ ಮಾಡ್ತಿದ್ದ. ಬಳಿಕ ಕಾರಿನಲ್ಲಿ ಓಡಾಡುತ್ತಿದ್ದ ನರಸಿಂಹ, ಕಾಡಿನ ಬಂಡೆ ಕೆಳಗೆ ಕದ್ದ ಚಿನ್ನಾಭರಣ ಹೂತಿಟ್ಟಿದ್ದ. ಇದೀಗ ಖತರ್ನಾಕ್ ಕಳ್ಳನನ್ನ ಪೊಲೀಸರು ಬಂಧಿಸಿದ್ದು, ಆತನಿಂದ 70 ಲಕ್ಷ ರೂ. ಮೌಲ್ಯದ ಒಂದು ಕೆ.ಜಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಆಸಾಮಿಗಳನ್ನ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ರಘು ಅಲಿಯಾಸ್ ಪೆಪ್ಸಿ (26), ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ (36) ಬಂಧಿತ ಆರೋಪಿಗಳು. ಯಾರು ಇಲ್ಲದಿರೊ ಮನೆ ನೋಡಿ ಸಂಚು ಹಾಕಿತ್ತಿದ್ದ ಇವರು ಬಾಗಿಲು ಒಡೆದು ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದರು. ಈ ಬಂಧಿತರಿಂದ 470 ಗ್ರಾಂ ಚಿನ್ನ 3 ಕೆಜಿ ಬೆಳ್ಳಿ ಗಟ್ಟಿ ವಶಕ್ಕೆ ಪಡೆಯಲಾಗಿದೆ.
ಕಳ್ಳ ರಘು, ಕದ್ದ ಚಿನ್ನವನ್ನು ಪ್ರೇಯಸಿ ಹಾಗೂ ಸ್ನೇಹಿತರಿಗೆ ನೀಡುತ್ತಿದ್ದನಂತೆ, ಜೊತೆಗೆ ಬೆಂಗಳೂರು, ಹೈದ್ರಾಬಾದ್ನಲ್ಲಿ ಅಡ ಇಟ್ಟಿದ್ದ. ಇದೀಗ ಬನಶಂಕರಿಯ ಕಾವೇರಿನಗರ ಮನೆಯಲಿದ್ದ ಪ್ರೇಯಸಿಯಿಂದ 48 ಗ್ರಾಂ ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:08 pm, Fri, 16 August 24