ಒಂದು ಹಗ್ ಮಾಡು ಯಾರಿಗೂ ಹೇಳಲ್ಲ: ಪಾಸ್​ಪೋರ್ಟ್ ವೆರಿಫಿಕೇಷನ್ ನೆಪದಲ್ಲಿ ಯುವತಿಗೆ ಪೊಲೀಸ್ ಕಾನ್​ಸ್ಟೇಬಲ್ ಕಿರುಕುಳ

ಪಾಸ್​ಪೋರ್ಟ್ ವೆರಿಫಿಕೇಷನ್ ನೆಪದಲ್ಲಿ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಪೊಲೀಸ್ ಕಾನ್​ಸ್ಟೇಬಲ್ ಒಬ್ಬ ಟೆಕ್ಕಿ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಕಿರುಕುಳ ನೀಡಿದ ಘಟನೆ ನಡೆದಿದೆ. ಈ ಸಂಬಂಧ ಪಶ್ಚಿಮ ವಿಭಾಗ ಡಿಸಿಪಿಗೆ ಯುವತಿ ದೂರು ನೀಡಿದ್ದು, ಅದರಂತೆ ತನಿಖೆ ನಡೆಸಿದ ಪೊಲೀಸರು ಪೊಲೀಸ್ ಕಾನ್ಸ್​ಟೇಬಲ್​ನನ್ನು ಅಮಾನತುಗೊಳಿಸಿದ್ದಾರೆ. ಘಟನೆಯ ಪೂರ್ಣ ವಿವರ ಇಲ್ಲಿದೆ.

ಒಂದು ಹಗ್ ಮಾಡು ಯಾರಿಗೂ ಹೇಳಲ್ಲ: ಪಾಸ್​ಪೋರ್ಟ್ ವೆರಿಫಿಕೇಷನ್ ನೆಪದಲ್ಲಿ ಯುವತಿಗೆ ಪೊಲೀಸ್ ಕಾನ್​ಸ್ಟೇಬಲ್ ಕಿರುಕುಳ
ಪಾಸ್​ಪೋರ್ಟ್ (ಸಾಂದರ್ಭಿಕ ಚಿತ್ರ)
Edited By:

Updated on: Dec 02, 2024 | 9:10 AM

ಬೆಂಗಳೂರು, ಡಿಸೆಂಬರ್ 2: ‘ಒಂದೇ ಒಂದು ಹಗ್ ಮಾಡು, ಯಾರಿಗೂ ಹೇಳುವುದಿಲ್ಲ’ ಎಂದು ಪಾಸ್​ಪೋರ್ಟ್ ವೆರಿಫಿಕೇಷನ್ ನೆಪದಲ್ಲಿ ಪೊಲೀಸ್ ಕಾನ್​ಸ್ಟೇಬಲ್ ಒಬ್ಬರು ಮಹಿಳಾ ಟೆಕ್ಕಿಗೆ ಕಿರುಕುಳ ನೀಡಿದ ಆರೋಪ ಬೆಂಗಳೂರಿನ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದೀಗ ಮಹಿಳಾ ಟೆಕ್ಕಿಯ ಆರೋಪದ ಬೆನ್ನಲ್ಲೇ, ಅಸಭ್ಯ ವರ್ತನೆ ತೋರಿದ ಕಾನ್​ಸ್ಟೇಬಲ್ ಕಿರಣ್ ಎಂಬಾತನನ್ನು ಅಮಾನತುಗೊಳಿಸಲಾಗಿದೆ.

ಬಾಪೂಜಿನಗರದ ಯುವತಿಯೊಬ್ಬರು ಇತ್ತೀಚಗೆ ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ನಂತರ, ಪಾಸ್​ಪೋರ್ಟ್ ವೆರಿಫಿಕೇಷನ್​ಗೆಂದು ಪೊಲೀಸ್ ಕಾನ್​ಸ್ಟೇಬಲ್ ಕಿರಣ್ ಯುವತಿಯ ಮನೆಗೆ ತೆರಳಿದ್ದ. ಎರಡ್ಮೂರು ಬಾರಿ ಕಿರಣ್ ಯುವತಿಯ ಮನೆಗೆ ಹೋಗಿದ್ದ, ಅಲ್ಲದೆ ಅಸಭ್ಯ ವರ್ತನೆ ತೋರಿದ್ದ ಎಂದು ಆರೋಪಿಸಲಾಗಿದೆ.

ಹಠಾತ್ ಮನೆ ಒಳ ಪ್ರವೇಶಿಸಿ ಬಾಗಿಲು ಮುಚ್ಚಿದ ಪೊಲೀಸ್

ಪಾಸ್​ಪೋರ್ಟ್ ವೆರಿಫಿಕೇಷನ್​ ನೆಪದಲ್ಲಿ ಯುವತಿಯ ಮನೆಗೆ ಬಂದ ಪೊಲೀಸ್ ಕಾನ್​ಸ್ಟೇಬಲ್ ಕಿರಣ್, ಮನೆ ಒಳ ಪ್ರವೇಶಿಸಿ ಅರ್ಧ ಬಾಗಿಲು ಮುಚ್ಚಿದ್ದಾನೆ. ನಂತರ ಯುವತಿ ಬಳಿ, ‘‘ನಿಮ್ಮಣ್ಣ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ಇದನ್ನೇ ನೆಪವಾಗಿಟ್ಟುಕೊಂಡು ನಿನ್ನ ಪಾಸ್​ಪೋರ್ಟ್ ಕ್ಯಾನ್ಸಲ್ ಮಾಡಿಸುತ್ತೇನೆ. ನೀನು ನನಗೆ ಸಹಕರಿಸಬೇಕು. ಬಾಗಿಲು ಹಾಕು’’ ಎಂದು ಯುವತಿ ಬಳಿ ಪೊಲೀಸ್ ಕಾನ್​ಸ್ಟೇಬಲ್ ಆಗ್ರಹಿಸಿದ್ದ ಎಂದು ದೂರಲಾಗಿದೆ. ಅಲ್ಲದೆ, ಯುವತಿ ಒಪ್ಪದಿದ್ದಾಗ ತಾನೇ ಹೋಗಿ ಬಾಗಿಲು ಮುಚ್ಚಿದ್ದಾನೆ. ಅಲ್ಲದೆ, ಯಾರಿಗೂ ಹೇಳಬೇಡ, ಒಂದೇ ಒಂದ್ ಸಲ ಹಗ್ ಮಾಡುತ್ತೇನೆ ಎಂದಿದ್ದಾಗಿ ಆರೋಪಿಸಲಾಗಿದೆ.

ಇದನ್ನೂ ಓದಿ: ಲವರ್​ನ ಕೊಂದು ಆತ್ಮಹತ್ಯೆಗೆ ಆನ್​ಲೈನ್​ನಲ್ಲಿ ಹಗ್ಗ ಆರ್ಡರ್​: ಪ್ರೀತಿ ಕೊಂದ ಕೊಲೆಗಾರನ ಸ್ಫೋಟಕ ಅಂಶ ಬೆಳಕಿಗೆ

ಯುವತಿಯ ಅಣ್ಣನ ಕಾಣುತ್ತಿದ್ದಂತೆ ವರಸೆ ಬದಲು!

ಯುವತಿ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಂತೆಯೇ ಆಕೆಯ ಅಣ್ಣ ಮತ್ತೊಂದು ಕೊಠಡಿಯಲ್ಲಿ ಇರುವುದು ಪೊಲೀಸ್ ಕಾನ್​​ಸ್ಟೇಬಲ್ ಗಮನಕ್ಕೆ ಬಂದಿದೆ. ಆಗ ವರಸೆ ಬದಲಾಯಿಸಿದ ಕಿರಣ್, ‘‘ನೀನು ಒಳಗೆ ಇದ್ದಿ ಎಂದೇ ನಾನೆ ಹಿಂಗೆ ಮಾತನಾಡಿದ್ದು, ನಿನ್ನ ತಂಗಿ ನನ್ನ ತಂಗಿ ಇದ್ದಹಾಗೆ’’ ಎಂದಿದ್ದ. ಈ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿಗೆ ಯುವತಿ ದೂರು ನೀಡಿದ್ದರು. ನಂತರ ಡಿಸಿಪಿ ಗಿರೀಶ್ ತನಿಖೆ ನಡೆಸಿ ಪೇದೆ ಕಿರಣ್​ನನ್ನು ಅಮಾನತುಗೊಳಿಸಿದ್ದಾರೆ.‌

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us