ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಫೋಟೋ ತೋರಿಸಿ ವಂಚಿಸಿದ ಅರ್ಚಕ; ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪಿ ಎಸ್ಕೇಪ್

ದೇವಾಲಯಕ್ಕೆ ಬರುತ್ತಿದ್ದ ಭಕ್ತರಿಗೆ ಮನೆ ಕೊಡಿಸೋದಾಗಿ ಅರ್ಚಕ ವಂಚಿಸಿದ್ದಾನೆ. ಸಭೆ ಸಮಾರಂಭಗಳಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳು, ಐಪಿಎಸ್ ಅಧಿಕಾರಿಗಳು, ಸೆಲೆಬ್ರೆಟಿಗಳ ಜೊತೆ ಫೋಟೋ ತೆಗೆದುಕೊಂಡು ಅವರೆಲ್ಲ ಪರಿಚಯವಿದೆ ಎನ್ನುತ್ತಿದ್ದ.

ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಫೋಟೋ ತೋರಿಸಿ ವಂಚಿಸಿದ ಅರ್ಚಕ; ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪಿ ಎಸ್ಕೇಪ್
ರವಿ ಡಿ.ಚನ್ನಣ್ಣನವರ್ ಜೊತೆ ಫೋಟೋ ತೆಗೆಸಿಕೊಂಡ ಅರ್ಚಕ
Edited By:

Updated on: Jul 26, 2021 | 10:25 AM

ಬೆಂಗಳೂರು: ಆಶ್ರಯ ಯೋಜನೆ ಅಡಿಯಲ್ಲಿ ಮನೆ ಕೊಡಿಸುತ್ತೇನೆ ಅಂತ ಅರ್ಚಕ ಮಂಜುನಾಥ್ ಅಲಿಯಾಸ್ ಮಹಾಬಲ ಜನರಿಗೆ ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಉತ್ತರಹಳ್ಳಿಯ ನಿವಾಸಿಯಾದ ಅರ್ಚಕ ಮಂಜುನಾಥ್, ಉತ್ತರಹಳ್ಳಿ, ಸುಬ್ರಹ್ಮಣ್ಯಪುರ ಸುತ್ತಮುತ್ತಲಿನ ಜನರಿಗೆ ವಂಚಿದ್ದಾನೆ. ಉತ್ತರಹಳ್ಳಿಯ ಆಂಜನೇಯ ದೇಗುಲದಲ್ಲಿ ಪೂಜೆ ಮಾಡುತ್ತಿದ್ದ ಮಂಜುನಾಥ್, 50ಕ್ಕೂ ಹೆಚ್ಚು ಜನರಿಂದ ತಲಾ 1.5 ಲಕ್ಷವರೆಗೆ ಹಣ ಪಡೆದಿದ್ದ.

ದೇವಾಲಯಕ್ಕೆ ಬರುತ್ತಿದ್ದ ಭಕ್ತರಿಗೆ ಮನೆ ಕೊಡಿಸೋದಾಗಿ ಅರ್ಚಕ ವಂಚಿಸಿದ್ದಾನೆ. ಸಭೆ ಸಮಾರಂಭಗಳಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳು, ಐಪಿಎಸ್ ಅಧಿಕಾರಿಗಳು, ಸೆಲೆಬ್ರೆಟಿಗಳ ಜೊತೆ ಫೋಟೋ ತೆಗೆದುಕೊಂಡು ಅವರೆಲ್ಲ ಪರಿಚಯವಿದೆ ಎನ್ನುತ್ತಿದ್ದ. ಅಲ್ಲದೇ ಫೋಟೋಗಳನ್ನು ತೋರಿಸಿ ಸಂಬಂಧಿ ಅಂತ ಹೇಳಿ ನಂಬಿಸಿದ್ದ. ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಸ್ವಂತ ಸಹೋದರ ಅಂತ ಹೇಳಿದ್ದನಂತೆ.

ಭಕ್ತರಿಗೆ ರವಿ ಡಿ.ಚನ್ನಣ್ಣನವರ್ ಜೊತೆಗಿನ ಫೋಟೋ ತೋರಿಸಿ ವಂಚಿಸುತ್ತಿದ್ದ ಅರ್ಚಕ ಮಂಜುನಾಥ್ ವಿರುದ್ಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪಿ ಅರ್ಚಕ ಪರಾರಿಯಾಗಿದ್ದಾನೆ.

ನಟ ವಿಷ್ಣುವರ್ಧನ್ ಸಮಾಧಿ ಬಳಿ ಫೋಟೋ ತೆಗೆದುಕೊಂಡಿದ್ದ ಅರ್ಚಕ

ಇದನ್ನೂ ಓದಿ

Kargil Vijay Diwas: ಕಾರ್ಗಿಲ್​ ಯುದ್ಧದ ಗೆಲುವಿಗೆ 22 ವರ್ಷ; ಭಾರತದ ಧೀರ ಯೋಧರ ಸಾಹಸಗಾಥೆಯ ಕಿರು ಪರಿಚಯ ಇಲ್ಲಿದೆ

ಕೆಆರ್‌ಎಸ್‌ಗೆ ದೃಷ್ಟಿ ತಾಗಿದೆಯಂತೆ! ಜೆಡಿಎಸ್ ಶಾಸಕರಿಂದ ಇಂದು ದೃಷ್ಟಿ ದೋಷ ನಿವಾರಣಾ ಪೂಜೆ

(A priest has defrauded people by showing photo of IPS officer Ravi D Channannavar)

Published On - 9:23 am, Mon, 26 July 21