AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಆರ್‌ಎಸ್‌ಗೆ ದೃಷ್ಟಿ ತಾಗಿದೆಯಂತೆ! ಜೆಡಿಎಸ್ ಶಾಸಕರಿಂದ ಇಂದು ದೃಷ್ಟಿ ದೋಷ ನಿವಾರಣಾ ಪೂಜೆ

ಖ್ಯಾತ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾರ ನೇತೃತ್ವದಲ್ಲಿ ಇಂದು ಬೆಳಗ್ಗೆ 9 ಗಂಟೆಗೆ ದೃಷ್ಟಿ ದೋಷ ನಿವಾರಣಾ ಪೂಜೆ ಆರಂಭವಾಗಲಿದೆ. ಹೋಮ-ಹವನಗಳ ಮೂಲಕ ಡ್ಯಾಂಗೆ ತಾಗಿರುವ ದೃಷ್ಟಿ ದೋಷ ನಿವಾರಣೆ ಮಾಡಲಾಗುತ್ತೆ.

ಕೆಆರ್‌ಎಸ್‌ಗೆ ದೃಷ್ಟಿ ತಾಗಿದೆಯಂತೆ! ಜೆಡಿಎಸ್ ಶಾಸಕರಿಂದ ಇಂದು ದೃಷ್ಟಿ ದೋಷ ನಿವಾರಣಾ ಪೂಜೆ
ಕೆಆರ್‌ಎಸ್‌ ಡ್ಯಾಂ
Follow us
TV9 Web
| Updated By: ಆಯೇಷಾ ಬಾನು

Updated on:Jul 26, 2021 | 11:18 AM

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌(KRS) ಡ್ಯಾಂಗೆ ಇಂದು ದೃಷ್ಟಿ ದೋಷ ನಿವಾರಣಾ ಪೂಜೆ ಸಲ್ಲಿಸಲಾಗುತ್ತಿದೆ. ಜೆಡಿಎಸ್ ಶಾಸಕರು ಕೆಆರ್‌ಎಸ್ಗೆ ದೃಷ್ಟಿ ದೋಷ ನಿವಾರಣೆ ಮಾಡಲು ಮುಂದಾಗಿದ್ದಾರೆ.

ಖ್ಯಾತ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾರ ನೇತೃತ್ವದಲ್ಲಿ ಇಂದು ಬೆಳಗ್ಗೆ 9 ಗಂಟೆಗೆ ದೃಷ್ಟಿ ದೋಷ ನಿವಾರಣಾ ಪೂಜೆ ಆರಂಭವಾಗಲಿದೆ. ಹೋಮ-ಹವನಗಳ ಮೂಲಕ ಡ್ಯಾಂಗೆ ತಾಗಿರುವ ದೃಷ್ಟಿ ದೋಷ ನಿವಾರಣೆ ಮಾಡಲಾಗುತ್ತೆ.

ಈ ಹಿಂದೆ ಕೆಆರ್‌ಎಸ್‌ ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದರು. ಇದಾದ ಬಳಿಕ ಕೆಆರ್‌ಎಸ್‌ಮೆಟ್ಟಿಲುಗಳ ಗೋಡೆ ಕುಸಿದಿತ್ತು. ಈ ವೇಳೆ ಕೆಆರ್‌ಎಸ್‌ ಗೆ ದೃಷ್ಟಿ ಆಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದರು. ಹೀಗಾಗಿ ಕೆಆರ್‌ಎಸ್ನ ಕಾವೇರಿ ಪ್ರತಿಮೆ ಬಳಿ ಇಂದು ಜೆಡಿಎಸ್ ಶಾಸಕರಿಂದ ದೃಷ್ಟಿ ನಿವಾರಣಾ ಪೂಜೆ ಹಮ್ಮಿಕೊಳ್ಳಲಾಗುತ್ತಿದೆ.

KRS Dam puja

ದೃಷ್ಟಿ ನಿವಾರಣಾ ಪೂಜೆಗೆ ಸಿದ್ಧತೆ

KRS Dam puja

ಜೆಡಿಎಸ್ ಶಾಸಕರಿಂದ ದೃಷ್ಟಿ ನಿವಾರಣಾ ಪೂಜೆ

KRS Dam puja

ಜೆಡಿಎಸ್ ಶಾಸಕರಿಂದ ದೃಷ್ಟಿ ನಿವಾರಣಾ ಪೂಜೆ

ಕೆಆರ್​ಎಸ್ ಡ್ಯಾಂ ಬಳಿ ಕಲ್ಲುಗಳ ಕುಸಿತ ಅಕ್ರಮ ಗಣಿಗಾರಿಕೆಯಿಂದ ಕೆಆರ್​ಎಸ್​ ಡ್ಯಾಂಗೆ ತೊಂದರೆಯಾಗುತ್ತಿದೆ ಎಂಬ ಕೂಗು ಬಲವಾಗಿ ಕೇಳಿಬಂದ ಬೆನ್ನಲ್ಲೇ ಅಣೆಕಟ್ಟಿನ ಸಮೀಪ ಕಲ್ಲುಗಳು ಕುಸಿದಿದ್ದು, ಜಲಾಶಯದಿಂದ ಮೇಲ್ಭಾಗಕ್ಕೆ ತೆರಳಲು ರಸ್ತೆಯಂತಿರುವ ಪ್ರದೇಶದಲ್ಲಿ ಘಟನೆ ಸಂಭವಿಸಿತ್ತು. ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾದವರ ಪಟ್ಟಿಯಲ್ಲಿ ರವೀಂದ್ರ ಶ್ರೀಂಕಠಯ್ಯ ಅವರ ಮೇಲೂ ಕೆಲ ಆರೋಪ ಕೇಳಿಬಂದಿದ್ದು, ಈ ವಿಚಾರವಾಗಿ ಭಾರೀ ವಾಗ್ಯುದ್ಧವೇ ನಡೆದಿತ್ತು. ಅವಘಡ ಸಂಭವಿಸಿದ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಇದಕ್ಕೂ ಡ್ಯಾಂಗೂ ಸಂಬಂಧವಿಲ್ಲ ಎಂದು ಸ್ಪಷ್ಟೀಕರಿಸಿದ್ದರು.

ಡ್ಯಾಂ ನಿರ್ಮಾಣದ ನಂತರ ಕಲ್ಲುಗಳು ಕುಸಿದಿದ್ದು ಇದೇ ಮೊದಲ ಬಾರಿಯಾಗಿದ್ದು, ನೀರಾವರಿ ನಿಗಮದ ಅಧಿಕಾರಿಗಳು ದುರಸ್ತಿ ಕಾರ್ಯ ಆರಂಭಿಸಿದ್ದಾರೆ. ಆದರೆ, ಗಾರ್ಡನ್​ಗೆ ಹೋಗುವ ರಸ್ತೆಯಲ್ಲಿ ಕುಸಿದಿರುವ ಕಲ್ಲುಗಳಿಂದ ಡ್ಯಾಂ ಸುರಕ್ಷತೆಗೆ ಯಾವುದೇ ರೀತಿಯಲ್ಲೂ ಧಕ್ಕೆಯಾಗುವುದಿಲ್ಲ ಎಂದು ಅಧಿಕಾರಿಗಳು ಕೂಡಾ ಸ್ಪಷ್ಟಪಡಿಸಿದ್ದು, ಆತಂಕ ಅಗತ್ಯವಿಲ್ಲ ಎಂದು ಹೇಳಿದ್ದರು.

ಪಾದಚಾರಿ ಮಾರ್ಗಕ್ಕೆ ಬಳಸುತ್ತಿದ್ದ ಹಳೆ ರಸ್ತೆಯ ಕಲ್ಲುಗಳು ಕುಸಿದಿದ್ದು, 80+ ಗೇಟ್‌ಗಳ ಕಾಮಗಾರಿ ವೇಳೆ ಘಟನೆ ಸಂಭವಿಸಿದೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಕಲ್ಲುಗಳ ಕುಸಿತ ಕಂಡಿರುವುದರಿಂದ ಸಹಜವಾಗಿಯೇ ಆತಂಕ ಉದ್ಭವಿಸಿತ್ತು. ಅಲ್ಲದೇ ಅದು ಕೆಆರ್‌ಎಸ್ ಡ್ಯಾಂನ ಮಧ್ಯ ಭಾಗದಲ್ಲಿರುವ ಜಾಗವಾಗಿದ್ದು, ಗೇಟ್ ದುರಸ್ತಿ ಕಾರ್ಯದ ವೇಳೆ ಏಕಾಏಕಿ ಕುಸಿತವಾಗಿದ್ದು ಅನುಮಾನಕ್ಕೆ ಆಸ್ಪದವಾಗಿತ್ತು. ಆದರೆ, ಈ ಬಗ್ಗೆ ಸೂಪರಿಂಟೆಂಡೆಂಟ್ ಇಂಜಿನಿಯರ್ ಸ್ಪಷ್ಟನೆ ನೀಡಿರುವುದರಿಂದ ಜನ ಕೊಂಚ ನಿರಾಳರಾಗಿದ್ದರು.

ಇದನ್ನೂ ಓದಿ: ಕೆಆರ್​ಎಸ್ ಸುತ್ತಮುತ್ತಲ ಗಣಿಗಾರಿಕೆ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರ ಗಮನ ಸೆಳೆದ ಸುಮಲತಾ

Published On - 8:22 am, Mon, 26 July 21