ಬೆಂಗಳೂರು: ಅಲ್ಲೊಂದು ನವ ಜೋಡಿ.. ಜೋರಾಗಿ ಮದ್ವೆ ಆಗುವ ಪ್ಲಾನ್ ಮಾಡಿಕೊಂಡಿದ್ದರೂ ಕೊರೊನಾ ಕಾಟದಿಂದಾಗಿ ಚೌಲ್ಟ್ರಿ ಬಿಟ್ಟು ದೇಗುಲದಲ್ಲಿ 25 ನಿಮಿಷದಲ್ಲಿಯೇ ಮದುವೆ ಮಾಡಿಕೊಂಡಿದ್ದಾರೆ. ಆದರೆ ಇಲ್ಲೊಬ್ಬ ವರಮಹಾಶಯ ಮದುವೆಗೆ ಹೋಗಲು ಕುದುರೆ ಏರಿ ಬಂದಿದ್ದಾನೆ. ಅದನ್ನು ಕಂಡು ಪೊಲೀಸರೂ ಗಲಿಬಿಲಿಗೊಂಡಿದ್ದಾರೆ! ವಾಹನವಾದರೆ ಜಪ್ತಿ ಮಾಡಬಹುದು. ಆದರೆ ಕುದುರೆಯನ್ನು ಏನು ಮಾಡುವುದು ಎಂಬ ಜಿಜ್ಞಾಸೆ ಪೊಲೀಸರಲ್ಲಿ ಮೂಡಿದೆ.
ಆ ವೇಳೆಯಲ್ಲಿಯೇ ಪೊಲೀಸರು ಯುವಕನನ್ನು ಹೊಡೆಯಲು ಮುಂದಾಗಿದ್ದಾರೆ. ಪೊಲೀಸರು ಮನದಿಂಗಿತ ಅರಿತವನಂತೆ ಅವರು ಹತ್ತಿರ ಬರುತ್ತಿದ್ದಂತೆ ಯುವಕ ಪತ್ರ ತೋರಿಸಿದ್ದಾನೆ. ಹೊಡೆಯಬೇಡಿ ಸಾರ್, ನಾನು ಅನುಮತಿ ಪಡೆದಿದ್ದೇನೆ. ಮದುವೆಗೆ ಹೋಗಲು ಅನುಮತಿ ಇದೆ ಎಂದು ಯುವಕ ಜೋರಾಗಿಯೇ ಕೇಳಿದ್ದಾನೆ.
ಕೊನೆಗೆ ಯುವಕನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಮತ್ತೆ ಕುದುರೆ ಏರಿ ಜೋರಾಗಿ, ಗತ್ತಿನಿಂದಲೇ ಮದುವೆ ಮನೆಗೆ ಹೊರಟಿದ್ದಾನೆ. ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯ ಬಳಿ ಈ ಘಟನೆ ನಡೆದಿದೆ.
(A youth rides horse to attend marriage party in kr market bangalore amid tight covid curfew guidelines)
ಇದನ್ನೂ ಓದಿ:
ಜೋರಾಗಿ ಮದ್ವೆ ಆಗುವ ಪ್ಲಾನ್ ಮಾಡಿದ್ದ ಜೋಡಿಗೆ ಬೇಸರ: ಚೌಲ್ಟ್ರಿ ಬಿಟ್ಟು ದೇಗುಲದಲ್ಲಿ 25 ನಿಮಿಷದಲ್ಲಿಯೇ ಮದುವೆ!
Published On - 1:40 pm, Thu, 29 April 21