ಕಚೇರಿಯಲ್ಲೇ ಲಂಚ: ಎಸಿಬಿ ಬಲೆಗೆ ಬಿಬಿಎಂಪಿ ಎಫ್​ಡಿಎ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 05, 2021 | 8:13 PM

ಕಡತ ವಿಲೇವಾರಿ ಮಾಡಲು ಪೀಠೋಪಕರಣ ಗುತ್ತಿಗೆದಾರರೊಬ್ಬರಿಂದ ₹ 15 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಬಿಎಂಪಿ ಕೇಸ್​ ವರ್ಕರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕಚೇರಿಯಲ್ಲೇ ಲಂಚ: ಎಸಿಬಿ ಬಲೆಗೆ ಬಿಬಿಎಂಪಿ ಎಫ್​ಡಿಎ
ಭ್ರಷ್ಟಾಚಾರ ನಿಗ್ರಹ ದಳ
Follow us on

ಬೆಂಗಳೂರು: ಕಡತ ವಿಲೇವಾರಿ ಮಾಡಲು ಪೀಠೋಪಕರಣ ಗುತ್ತಿಗೆದಾರರೊಬ್ಬರಿಂದ ₹ 15 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಥಮ ದರ್ಜೆ ಗುಮಾಸ್ತ ರಾಜು ಎಂಬುವವರು ಭ್ರಷ್ಟಾಚಾರ ನಿಗ್ರಹ ದಳದ (Anti Corruption Bureau – ACB) ಬಲೆಗೆ ಬಿದ್ದಿದ್ದಾರೆ. ಪೀಠೋಪಕರಣ ಗುತ್ತಿಗೆದಾರ ರಾಘವೇಂದ್ರ ಎಂಬುವವರ ಫೈಲ್ ಕ್ಲಿಯರ್​ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದರು.

ಬೆಂಗಳೂರು ಮಹಾನಗರಪಾಲಿಕೆಯಲ್ಲಿ ರಾಜು ಕೇಸ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದರು. ಲಂಚದ ಹಣಕ್ಕೆ ರಾಜು ಬೇಡಿಕೆಯಿಟ್ಟಿದ್ದರು. ಈ ವಿಚಾರವನ್ನು ರಾಘವೇಂದ್ರ ಎಸಿಬಿ ಗಮನಕ್ಕೆ ತಂದಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಎಸಿಬಿ, ₹ 15 ಸಾವಿರ ಹಣ ಪಡೆಯುತ್ತಿರುವಾಗ ರಾಜು ಅವರನ್ನು ಬಂಧಿಸಿದರು.

ಅನೈತಿಕ ಸಂಬಂಧ: ಯುವಕನ ಕೊಲೆ
ಹಲಸೂರು ಠಾಣಾ ವ್ಯಾಪ್ತಿಯ ಮರ್ಫಿ ಟೌನ್​ನಲ್ಲಿ‌ ಸೋಮವಾರ (ಅ.4) ನಡೆದಿದ್ದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವಕನ ತಾಯಿ ಮತ್ತು ಆಕೆಯ ಪ್ರಿಯಕರನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕೊಲೆಯಾದ ಯುವಕನನ್ನು ನಂದು (17) ಎಂದು ಗುರುತಿಸಲಾಗಿದೆ. ಶಕ್ತಿ ಎಂಬಾತನೊಂದಿಗೆ ನಂದು ತಾಯಿ ಗೀತಾ ಅನೈತಿಕ ಸಂಬಂಧ ಹೊಂದಿದ್ದರು. ಈ ಸಂಬಂಧಕ್ಕೆ ನಂದು ವಿರೋಧ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ನಂದುವಿನ ಹೊಟ್ಟೆ, ಎದೆಗೆ ಚಾಕುವಿನಿಂದ ಇರಿದು ಶಕ್ತಿ ಕೊಲೆ ಮಾಡಿದ್ದ

(ACB Arrests BBMP Case worker when receiving bribe for clearing file)

ಇದನ್ನೂ ಓದಿ: ನೀವು ವಾಸಿಸುವ ಏರಿಯಾದಲ್ಲಿ ಯಾವುದಾದರೂ ಕಟ್ಟಡ ಶಿಥಿಲಗೊಂಡಿದೆಯೇ? ಬಿಬಿಎಂಪಿಯನ್ನು ಸಂಪರ್ಕಿಸಿ

ಇದನ್ನೂ ಓದಿ: Bengaluru: ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರದ ಪ್ರಕರಣಗಳ ಏರಿಕೆ; ಬಿಬಿಎಂಪಿಯಿಂದ ಮನೆ ಮನೆ ಸಮೀಕ್ಷೆ