ವಿಧಾನಪರಿಷತ್ ಸದಸ್ಯರ ಚಿಕಿತ್ಸೆ ವೆಚ್ಚ ದುಬಾರಿ; 2021 ರಲ್ಲಿ 69,04,024 ರೂಪಾಯಿ ವೈದ್ಯಕೀಯ ವೆಚ್ಚ
30 ಕ್ಕೂ ಅಧಿಕ ಪರಿಷತ್ ಸದಸ್ಯರು ಕೊವಿಡ್ ಕಾಲದಲ್ಲಿಯೇ ಬರೋಬ್ಬರಿ 1 ಕೋಟಿಗೂ ಹೆಚ್ಚು ವೈದ್ಯಕೀಯ ವೆಚ್ಚ ಪಡೆದುಕೊಂಡಿದ್ದಾರೆ. ಒಂದೇ ಸದಸ್ಯರಿಂದ ಮೂರ್ನಾಲ್ಕು ಬಾರಿ ಮೆಡಿಕಲ್ ಬಿಲ್ ಪಾವತಿಸಿ ಹಣ ಸಂದಾಯ ಆಗಿದೆ.
ಬೆಂಗಳೂರು: ವಿಧಾನಪರಿಷತ್ ಸದಸ್ಯರ ಚಿಕಿತ್ಸೆ ವೆಚ್ಚ ದುಬಾರಿಯಾಗುತ್ತಿದೆ. ವಿಧಾನಪರಿಷತ್ ಸದಸ್ಯರು ಕೋಟಿ ಕೋಟಿ ಒಡೆಯರಾದರೂ ಹಣಕ್ಕಾಗಿ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಚಿಕಿತ್ಸಾ ವೆಚ್ಚದ ಹಣ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಆ ಮೂಲಕ, ಪರಿಷತ್ ಸದಸ್ಯರು ಲಕ್ಷ ಲಕ್ಷ ಬಿಲ್ ಹಣ ಪಡೆದಿರುವ ಮಾಹಿತಿ ಲಭ್ಯವಾಗಿದೆ. ಪರಿಷತ್ ಸದಸ್ಯರು ಕೊರೊನಾ ವೇಳೆ ಕೋಟಿಗೂ ಹೆಚ್ಚು ಹಣ ಪಡೆದಿದ್ದಾರೆ. 30ಕ್ಕೂ ಹೆಚ್ಚು ಸದಸ್ಯರು ಸರ್ಕಾರದಿಂದ ಹಣ ಪಡೆದಿರುವ ಬಗ್ಗೆ ಮಾಹಿತಿ ದೊರಕಿದೆ.
ಕೊರೊನಾಗೂ ಮುಂಚೆ 34 ಲಕ್ಷ ಹಣ ಪಡೆದಿದ್ದ ಸದಸ್ಯರು, ಅವರಲ್ಲಿ ಕೆಲ ಸದಸ್ಯರಿಂದ 3-4 ಬಾರಿ ಮೆಡಿಕಲ್ ಬಿಲ್ ಕ್ಲೇಮ್ ಆಗಿರುವುದು ತಿಳಿದುಬಂದಿದೆ. 2019 ರಲ್ಲಿ 34,21,749 ರೂಪಾಯಿ ವೈದ್ಯಕೀಯ ವೆಚ್ಚ ಪಡೆದಿರುವ ಸದಸ್ಯರು, 2020 ರಲ್ಲಿ 48,64,161 ರೂಪಾಯಿ ವೈದ್ಯಕೀಯ ವೆಚ್ಚ ಪಡೆದುಕೊಂಡಿದ್ದಾರೆ. 2021 ರಲ್ಲಿ ಈ ಮೊತ್ತ 69,04,024 ರೂಪಾಯಿ ವೈದ್ಯಕೀಯ ವೆಚ್ಚ ಆಗಿದೆ. ಸದಸ್ಯರು 716 ರೂಪಾಯಿ ಬಿಲ್ ಅನ್ನು ಸಹ ಕ್ಲೇಮ್ ಮಾಡಿಕೊಂಡಿದ್ದಾರೆ. 30 ಕ್ಕೂ ಅಧಿಕ ಪರಿಷತ್ ಸದಸ್ಯರು ಕೊವಿಡ್ ಕಾಲದಲ್ಲಿಯೇ ಬರೋಬ್ಬರಿ 1 ಕೋಟಿಗೂ ಹೆಚ್ಚು ವೈದ್ಯಕೀಯ ವೆಚ್ಚ ಪಡೆದುಕೊಂಡಿದ್ದಾರೆ. ಒಂದೇ ಸದಸ್ಯರಿಂದ ಮೂರ್ನಾಲ್ಕು ಬಾರಿ ಮೆಡಿಕಲ್ ಬಿಲ್ ಪಾವತಿಸಿ ಹಣ ಸಂದಾಯ ಆಗಿದೆ.
ಇದನ್ನೂ ಓದಿ: ಕೊರೊನಾಗೆ ಬಲಿಯಾದ ಕುಟುಂಬಕ್ಕೆ ₹50 ಸಾವಿರ ಪರಿಹಾರ ನೀಡಲು ಸುಪ್ರೀಂ ಕೋರ್ಟ್ ಅನುಮೋದನೆ
ಇದನ್ನೂ ಓದಿ: ‘ಕೊರೊನಾ ಹಿನ್ನೆಲೆ ಸರಳವಾಗಿ ದಸರಾ ಆಚರಿಸೋಣ’ ಮೈಸೂರು ದಸರಾ ಆಹ್ವಾನ ಪತ್ರಿಕೆಯಲ್ಲಿ ಸಿಎಂ ಸಂದೇಶ