AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: ಇಂದು ಚಿನ್ನ, ಬೆಳ್ಳಿ ದರದಲ್ಲಿ ಕೊಂಚ ಏರಿಕೆ!

Gold Rate Today: ಇಂದು ನೀವು ಚಿನ್ನ, ಬೆಳ್ಳಿ ಖರೀಸಲು ಹೋಗಬೇಕು ಎಂದು ಯೋಚಿಸಿದ್ದರೆ, ಪ್ರಮುಖ ನಗರಗಳಲ್ಲಿ ಆಭರಣಗಳ ಬೆಲೆ ಇಂದು ಎಷ್ಟಿದೆ? ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.

Gold Price Today: ಇಂದು ಚಿನ್ನ, ಬೆಳ್ಳಿ ದರದಲ್ಲಿ ಕೊಂಚ ಏರಿಕೆ!
ಸಂಗ್ರಹ ಚಿತ್ರ
TV9 Web
| Edited By: |

Updated on:Oct 06, 2021 | 7:44 AM

Share

Gold and Silver Price Today | ಬೆಂಗಳೂರು: ಚಿನ್ನದ ದರ ದೈನಂದಿನ ದರ ಬದಲಾವಣೆಯಲ್ಲಿ ಗಮನಿಸಿದಾಗ ಏರಿಳಿತ ಕಾಣುತ್ತಿರವುದು ಸಾಮಾನ್ಯ. ನಿನ್ನೆ ಇಳಿಕೆ ಕಂಡಿದ್ದ ಚಿನ್ನ (Gold Price), ಬೆಳ್ಳಿ ದರ ಇಂದು ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿರುವುದು ಆಶ್ಚರ್ಯವೇನಲ್ಲ. ಆದರೆ ಚಿನ್ನಾಭರಣವನ್ನು ಖರೀದಿಸುವ ಸಮಯದಲ್ಲಿ ದರ ಇಳಿಕೆಯತ್ತ ಸಾಗಿದ್ದರೆ ಒಳ್ಳೆಯದು ಎಂಬ ಆಸೆ ಗ್ರಾಹಕರದ್ದು, ಇಂದು ನೀವು ಚಿನ್ನ, ಬೆಳ್ಳಿ (Silver Price) ಖರೀಸಲು ಹೋಗಬೇಕು ಎಂದು ಯೋಚಿಸಿದ್ದರೆ, ಪ್ರಮುಖ ನಗರಗಳಲ್ಲಿ ಆಭರಣಗಳ ಬೆಲೆ ಇಂದು ಎಷ್ಟಿದೆ? ಎಂಬ ಮಾಹಿತಿ ಈ ಕೆಳಗಿನಂತಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 43,750 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,37,500 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 2,400 ರೂಪಾಯಿ ಏರಿಕೆ ಕಂಡು ಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,730 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,77,300 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 2,600 ರೂಪಾಯಿ ಏರಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿಯೂ ಸಹ ಇಂದು ಏರಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 60,600 ರೂಪಾಯಿ ನಿಗದಿಯಾಗಿದೆ. ಸುಮಾರು 100 ರೂಪಾಯಿ ಏರಿಕೆ ಕಂಡು ಬಂದಿದೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,050 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,40,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 2,300 ರೂಪಾಯಿ ಏರಿಕೆ ಕಂಡು ಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಸುಮಾರು 48,060 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ ಸುಮಾರು 4,80,600 ರೂಪಾಯಿ ನಿಗದಿಯಾಗಿದೆ. ಸುಮಾರು 2,600 ರೂಪಾಯಿ ಏರಿಕೆ ಕಂಡು ಬಂದಿದೆ. ಬೆಳ್ಳಿ ದರ ಸ್ಥಿರತೆಯನ್ನು ಕಾಯ್ದುಕೊಂಡಿದ್ದು, ಕೆಜಿ ಬೆಳ್ಳಿಗೆ 64,800 ರೂಪಾಯಿ ನಿಗದಿಯಾಗಿದೆ.

ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,680 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,56,800 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,900 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,680 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,66,800 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,900 ರೂಪಾಯಿ ಏರಿಕೆ ಆಗಿದೆ. ಬೆಳ್ಳಿ ದರ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ 100 ರೂಪಾಯಿ ಏರಿಕೆ ಬಳಿಕ 60,600 ರೂಪಾಯಿ ನಿಗದಿಯಾಗಿದೆ.

ಇಂದು ಪ್ರಮುಖ ಎಲ್ಲಾ ಮಹಾ ನಗರಗಲ್ಲಿಯೂ ಸಹ ಚಿನ್ನದ ದರ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಚಿನ್ನ ಖರೀದಿಸುವ ದಿನ ಆಭರಣದ ದರ ಇಳಿಕೆಯತ್ತ ಸಾಗಿರಬೇಕು ಎಂಬ ಆಸೆ ಇರುವುದು ತಪ್ಪೇನಲ್ಲ. ಆದರೆ ದೈನಂದಿನ ದರ ಬದಲಾವಣೆಯಲ್ಲಿ ಬೆಲೆ ಏರಿಳಿತ ಕಾಣುತ್ತಿರುವುದು ಸರ್ವೇ ಸಾಮಾನ್ಯ. ನೀವು ಕೂಡಿಟ್ಟ ಹಣದಲ್ಲಿ ಚಿನ್ನ, ಬೆಳ್ಳಿಯನ್ನು ಖರೀದಿಸಬಹುದು ಎಂದೆನಿಸಿದರೆ ಆ ಕುರಿತಾಗಿ ಯೋಚಿಸಿ. ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ ಸೇರಿದಂತೆಯೇ ಜೈಪುರ, ಕೇರಳ, ಕೋಲ್ಕತ್ತಾ ಹೀಗೆ ಪ್ರಮುಖ ನಗರಗಳಲ್ಲೆಲ್ಲಾ ಇಂದು ಚಿನ್ನ, ಬೆಳ್ಳಿ ದರ ಕೊಂಚ ಏರಿಕೆ ಕಂಡಿದೆ.

ಇದನ್ನೂ ಓದಿ:

Gold Price Today: ಚಿನ್ನ, ಬೆಳ್ಳಿ ದರದಲ್ಲಿ ಮತ್ತಷ್ಟು ಇಳಿಕೆ; ಗ್ರಾಹಕರಿಗೆ ಸಂತೋಷ ನೀಡುವ ವಿಚಾರ

Gold Price Today: ಕೆಲವೆಡೆ ಸ್ಥಿರತೆ ಕಾಯ್ದುಕೊಂಡ ಚಿನ್ನದ ದರ, ಬೆಳ್ಳಿ ದರದಲ್ಲಿ ಕೊಂಚ ಏರಿಕೆ!

Published On - 7:21 am, Wed, 6 October 21

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್