ಎಸಿಬಿಯಿಂದ ಶಾಸಕ ಜಮೀರ್ ಅಹಮದ್ ಖಾನ್ ವಿಚಾರಣೆ: ನೂರಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಿದ ಅಧಿಕಾರಿಗಳು

| Updated By: ವಿವೇಕ ಬಿರಾದಾರ

Updated on: Aug 06, 2022 | 3:49 PM

ಇಂದು (ಆಗಸ್ಟ್ 6) ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಎಸಿಬಿ ವಿಚಾರಣೆಗೆ ಹಾಜರಾಗಿದ್ದು, ಮೊದಲ ವಿಚಾರಣೆಯಲ್ಲೇ ಅವರಿಗೆ ಎಸಿಬಿ ಅಧಿಕಾರಿಗಳು ನೂರಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಿದ್ದಾರೆ.

ಎಸಿಬಿಯಿಂದ ಶಾಸಕ ಜಮೀರ್ ಅಹಮದ್ ಖಾನ್ ವಿಚಾರಣೆ: ನೂರಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಿದ ಅಧಿಕಾರಿಗಳು
ಜಮೀರ್ ಅಹಮದ್ ಖಾನ್
Follow us on

ಬೆಂಗಳೂರು: ಇಂದು (ಆಗಸ್ಟ್ 6) ಕಾಂಗ್ರೆಸ್ (Congress) ಶಾಸಕ ಜಮೀರ್ ಅಹಮದ್ ಖಾನ್ (Zameer Ahmed Khan) ಎಸಿಬಿ (ACB) ವಿಚಾರಣೆಗೆ ಹಾಜರಾಗಿದ್ದು, ಮೊದಲ ವಿಚಾರಣೆಯಲ್ಲೇ ಅವರಿಗೆ ಎಸಿಬಿ ಅಧಿಕಾರಿಗಳು ನೂರಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಿದ್ದಾರೆ. ಜಮೀರ್ ಅಹಮದ್ ಬೆಳಿಗ್ಗೆ 10:55ಕ್ಕೆ ವಿಚಾರಣೆಗೆ ಹಾಜರಾಗಿದ್ದು, ಈ ವೇಳೆ ಎಸಿಬಿ ಅಧಿಕಾರಿಗಳು ಅಪಾರ ಪ್ರಮಾಣದ ಆಸ್ತಿಯ ಮೂಲದ ಕುರಿತು ನೂರು ಪ್ರಶ್ನೆಗಳನ್ನು ಲಿಖಿತ ರೂಪದಲ್ಲಿ ಕೇಳಿದ್ದಾರೆ. ಉತ್ತರವನ್ನು ಬರೆದು ಕೊಡಲು ಎಸಿಬಿ ಅಧಿಕಾರಿಗಳು ಒಬ್ಬ ಸಿಬ್ಬಂದಿಯನ್ನು ನೀಡಿದ್ದಾರೆ.

ಈ ಸಂಬಂಧ ಬೆಂಗಳೂರಿನ ಎಸಿಬಿ ಕಚೇರಿ ಬಳಿ ಶಾಸಕ ಜಮೀರ್ ಮಾತನಾಡಿ ಸಮನ್ಸ್ ಮೂಲಕ ಎಸಿಬಿಯವರು ಕೆಲವು ದಾಖಲೆ ಕೇಳಿದ್ದರು. ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಿದ್ದ ದಾಖಲೆಗಳನ್ನು ಸಲ್ಲಿಸಿದ್ದೇನೆ. ಕಟ್ಟಡ ನಿರ್ಮಾಣ ಸಂಬಂಧ ದಾಖಲೆ ಕೇಳಿದ್ದರು, ಸಲ್ಲಿಸಿದ್ದೇನೆ ಎಂದು ಹೇಳಿದರು.

ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ , ಜಮೀರ್​ ಮಾತ್ರ ಅವರ ಕಣ್ಣಿಗೆ ಕಾಣಿಸುತ್ತಾರೆ. ಇಡಿಗೆ ನೀಡಿದ್ದ ದಾಖಲೆಗಳನ್ನು ಎಸಿಬಿ ಅಧಿಕಾರಿಗಳಿಗೆ ನೀಡಿದ್ದೇನೆ. ಅಗತ್ಯವಿದ್ದು ಮತ್ತೆ ಕರೆದರೆ ಎಸಿಬಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.

2 ತಿಂಗಳೊಳಗೆ ದಾಖಲೆ ಜೊತೆ ಹಾಜರಾಗಲು ಎಸಿಬಿ ಅಧಿಕಾರಿಗಳು ಜಮೀರ್ ಅಹಮದ್ ಖಾನ್ ಅವರಿಗೆ ಗಡುವು ನೀಡಿದ್ದಾರೆ. ಜಮೀರ್ ಅಹಮದ್​ ಖಾನ್ ಕೆಲವು ದಾಖಲೆಗಳನ್ನು ಮಾತ್ರ ಸಲ್ಲಿಸಿದ್ದು, ತನಿಖೆ ಭಾಗವಾಗಿ ಪ್ರಮುಖ ದಾಖಲೆ ಸಲ್ಲಿಸುವಂತೆ ಎಸಿಬಿ ಸೂಚನೆ ನೀಡಿದೆ.

Published On - 3:49 pm, Sat, 6 August 22