ಬೆಂಗಳೂರು: ಕರ್ನಾಟಕದ 78 ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ 3 ಸೇರಿ ರಾಜ್ಯದ 78 ಸ್ಥಳಗಳಲ್ಲಿ ಎಸಿಬಿ ದಾಳಿ ನಡೆಸಲಾಗಿದೆ. 18 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 78 ಸ್ಥಳಗಳಲ್ಲಿ, ಏಕಕಾಲಕ್ಕೆ 200ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ ರೇಡ್ ಮಾಡಲಾಗಿದ್ದು, ಎಸಿಬಿ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಕೆ ಮಾಡಿರುವ ಆರೋಪ ಹಿನ್ನೆಲೆ, 18 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 75 ಕಡೆ ಎಸಿಬಿ ರೇಡ್ ಮಡಲಾಗಿದೆ.
ಕೆಳಕಂಡ 18 ಅಧಿಕಾರಿಗಳ ಮನೆ, ಕಚೇರಿ, ವಿವಿಧ ಸ್ಥಳಗಳ ಮೇಲೆ ಎಸಿಬಿ ದಾಳಿ
ಕರ್ನಾಟಕದ ವಿವಿಧೆಡೆ ಇರುವ 18 ಅಧಿಕಾರಿಗಳ ಮನೆ, ಕಚೇರಿ, ಫಾರ್ಮ್ ಹೌಸ್, ಲೆಕ್ಕಪತ್ರ ಪರಿಶೋಧಕರ ಮನೆ ಮುಂತಾದೆಡೆ ಎಸಿಬಿ ದಾಳಿ ನಡೆಸಲಾಗಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿರುವ ಆರೋಪದಲ್ಲಿ ಕೆಲವೆಡೆ ದಾಳಿ ನಡೆದಿದೆ. ಬೆಳಗ್ಗೆ 6 ಗಂಟೆಯಿಂದ ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರಾಜ್ಯದ ವಿವಿಧ ನಗರಗಳಲ್ಲಿ ಇರುವ 18 ಅಧಿಕಾರಿಗಳಿಗೆ ಸಂಬಂಧಪಟ್ಟ ಒಟ್ಟು 78 ಸ್ಥಳಗಳಲ್ಲಿ ಎಸಿಬಿ ರೇಡ್ ನಡೆಸಿದೆ.
ಇದನ್ನೂ ಓದಿ: BBMP ಕಚೇರಿ ಮೇಲೆ ಎಸಿಬಿ ದಾಳಿ; ನೂರಾರು ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ಪತ್ತೆ
ಇದನ್ನೂ ಓದಿ: ಲಂಚ: ಚಿಕ್ಕಬಳ್ಳಾಪುರದಲ್ಲಿ ಪಿ.ಡಿ.ಓ. ಶ್ರೀನಿವಾಸ್ ಮತ್ತು ಕೋಲಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಮೇಲೆ ಎಸಿಬಿ ದಾಳಿ
Published On - 8:28 am, Wed, 16 March 22