ಸುಪ್ರೀಂಕೋರ್ಟ್​ಗೆ ಹೋಗಿದ್ದಾರೆ, ಮುಂದೆ ಇಡೀ ದೇಶದಲ್ಲಿ ಹಿಜಾಬ್ ರದ್ದಾಗಬಹುದು: ರಘುಪತಿ ಭಟ್

ಸುಪ್ರೀಂಕೋರ್ಟ್ ಸಹ ಇವರ ವಿರುದ್ಧ ತೀರ್ಪು ಕೊಟ್ಟರೆ, ಇಡೀ ದೇಶದಲ್ಲೇ ಹಿಜಾಬ್ ರದ್ದಾದರೆ ಇವರೇ ಕಾರಣರಾಗುತ್ತಾರೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು.

ಸುಪ್ರೀಂಕೋರ್ಟ್​ಗೆ ಹೋಗಿದ್ದಾರೆ, ಮುಂದೆ ಇಡೀ ದೇಶದಲ್ಲಿ ಹಿಜಾಬ್ ರದ್ದಾಗಬಹುದು: ರಘುಪತಿ ಭಟ್
ಶಾಸಕ ರಘುಪತಿ ಭಟ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 16, 2022 | 11:47 AM

ಬೆಂಗಳೂರು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿರುವ ಉಡುಪಿ ಕ್ಷೇತ್ರದ ಬಿಜೆಪಿ ಶಾಸಕ ರಘುಪತಿ ಭಟ್, ಸುಪ್ರೀಂಕೋರ್ಟ್ ಸಹ ಇವರ ವಿರುದ್ಧ ತೀರ್ಪು ಕೊಟ್ಟರೆ, ಇಡೀ ದೇಶದಲ್ಲೇ ಹಿಜಾಬ್ ರದ್ದಾದರೆ ಇವರೇ ಕಾರಣರಾಗುತ್ತಾರೆ ಎಂದರು. ಸರ್ಕಾರದ ಸಮವಸ್ತ್ರ ಪಾಲನೆ ನಿಯಮವನ್ನು ಸಹ ಹೈಕೋರ್ಟ್ ಕೂಡ ಎತ್ತಿ ಹಿಡಿದಿದೆ. ಪ್ರಶ್ನಿಸುವ ಅಧಿಕಾರ ಎಲ್ಲರಿಗೂ ಇದೆ. ತೀರ್ಪು ಕೊಟ್ಟ ನ್ಯಾಯಾಧೀಶರ ಕೆಲಸದ ಅನುಭವದಷ್ಟೂ ಈ ವಿದ್ಯಾರ್ಥಿನಿಯರಿಗೆ ವಯಸ್ಸಾಗಿಲ್ಲ ಎಂದರು.

ಈ ಹಿಂದೆ ಪರೀಕ್ಷೆಗೆ ಗೈರಾಗಿದ್ದವರಿಗೆ ಮತ್ತೊಮ್ಮೆ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಹಿಜಾಬ್ ತೆಗೆದು ಬಂದ ವಿದ್ಯಾರ್ಥಿನಿಯರಿಗೆ ನಮ್ಮ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಯಿಲ್ಲ. ಯಾವುದೇ ವಿದ್ಯಾರ್ಥಿನಿಯನ್ನು ಡಿಬಾರ್ ಮಾಡುವ ಪ್ರಶ್ನೆಯೇ ಇಲ್ಲ. ಆದರೆ ನಿಯಮ ಪಾಲಿಸದವರಿಗೆ ತರಗತಿಗಳಿಗೆ ಪ್ರವೇಶ ಕೊಡುವುದಿಲ್ಲ ಅಷ್ಟೇ. ಒಂದೂವರೆ ವರ್ಷ ಹಿಜಾಬ್ ತೆಗೆದಿಟ್ಟಿದ್ದವರು ಈಗ ಹಿಜಾಬ್ ಬೇಕು ಎನ್ನುತ್ತಿದ್ದಾರೆ. ಹೈಕೋರ್ಟ್ ಆದೇಶವನ್ನು ಎಲ್ಲ ಶಾಲಾ ಕಾಲೇಜುಗಳು ಪಾಲಿಸಬೇಕು ಎಂದರು.

ಎಲ್ಲರೂ ತೀರ್ಪು ಪಾಲಿಸಬೇಕು: ಅಶ್ವತ್ಥ ನಾರಾಯಣ

ರಾಮನಗರ: ಹಿಜಾಬ್ ವಿಚಾರದಲ್ಲಿ ಹೈಕೋರ್ಟ್‌ ನೀಡಿರುವ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಮನವಿ ಮಾಡಿದ್ದಾರೆ. ಮಾಗಡಿ ತಾಲ್ಲೂಕಿನ ಸಂಕೀಘಟ್ಟದಲ್ಲಿ ಮಾತನಾಡಿದ ಅವರು, ಸಮವಸ್ತ್ರದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸ್ಪಷ್ಟ ಕಾನೂನು ರೂಪಿಸಲಾಗಿತ್ತು. ಇದಕ್ಕೆ ಕೆಲವರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿನ್ನೆಲೆ ಗೊಂದಲ ನಿರ್ಮಾಣವಾಯಿತು. ನ್ಯಾಯಾಲಯ ಕೂಡ ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟ ತೀರ್ಪು ಕೊಟ್ಟಿದೆ. ಕಾನೂನನ್ನು ಎಲ್ಲರೂ ಪಾಲಿಸಬೇಕು. ಧರ್ಮದ ಆಧಾರದ ಮೇಲೆ ಸರ್ಕಾರವು ಯಾವುದೇ ತಾರತಮ್ಯ ಮಾಡಿಲ್ಲ ಎಂದರು.

ಸರ್ಕಾರ ಸೂಕ್ತ ರೀತಿಯಲ್ಲಿ ನಡೆದುಕೊಂಡಿದೆ ಎಂದು ನ್ಯಾಯಾಲಯ ಸಹ ಹೇಳಿದೆ. ಕಾನೂನನ್ನು ಎಲ್ಲರೂ ಪಾಲಿಸಬೇಕು. ನನಗೆ ಇಷ್ಟವಿಲ್ಲ ಎಂದು ಅವರ ಅಭಿಪ್ರಾಯ ‌ಹೇಳಬಹುದು ಅಷ್ಟ. ತಮ್ಮ ಭವಿಷ್ಯ ಉತ್ತಮ ಪಡಿಸಿಕೊಳ್ಳಲು ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕು ಎಂದು ತಿಳಿಸಿದರು.

ಅಹಿತಕರ ಘಟನೆಗೆ ಕಡಿವಾಣ

ಬೆಂಗಳೂರು: ಕೋರ್ಟ್ ಆದೇಶವನ್ನು ಎಲ್ಲ ವಿದ್ಯಾರ್ಥಿಗಳು ಪಾಲಿಸುತ್ತಾರೆ. ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಮತೀಯ ಶಕ್ತಿಗಳ ಪ್ರಭಾವದಿಂದ ವಿದ್ಯಾರ್ಥಿಗಳು ಹೀಗೆ ಮಾಡುತ್ತಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಒಟ್ಟಾಗಿ ಇರಬೇಕು. ಮತೀಯ ಶಕ್ತಿಗಳ ವಿರುದ್ಧ ಕ್ರಮ ಆಗುತ್ತದೆ ಎಂದು ತಿಳಿಸಿದರು.

ಎಲ್ಲರೂ ಶಾಲೆಗಳಿಗೆ ಮರಳುತ್ತಾರೆ: ಬಿ.ಸಿ.ನಾಗೇಶ್ ನ್ಯಾಯಾಲಯದ ತೀರ್ಪಿನಿಂದ ಕೆಲವರಿಗೆ ಅಸಮಾಧಾನವಾಗಿರಬಹುದು. ಆದರೆ ಕೆಲವೇ ದಿನಗಳಲ್ಲಿ ಎಲ್ಲರಿಗೂ ಅವರ ತಪ್ಪುಒಪ್ಪುಗಳು ಅರ್ಥವಾಗುತ್ತವೆ. ಕೆಲವೇ ದಿನಗಳಲ್ಲಿ ಮೊದಲಿನಂತೆ ಸಮವಸ್ತ್ರ ಧರಿಸಿಕೊಂಡು ಶಾಲೆಗಳಿಗೆ ಬರುತ್ತಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Hijab Verdict: ಹಿಜಾಬ್ ಪ್ರಕರಣ ಆದೇಶದ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಇದನ್ನೂ ಓದಿ: ಹೈಕೋರ್ಟ್ ತೀರ್ಪು ಹಿನ್ನೆಲೆ: ಹಿಜಾಬ್ ತೆರೆದಿಟ್ಟು ತರಗತಿಗೆ ಬಂದ ಕೊಡಗು ವಿದ್ಯಾರ್ಥಿನಿಯರು