AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದಾದ್ಯಂತ ಕಾರು ಕದಿಯುತ್ತಿದ್ದ ಆಸಾಮಿ ಅರೆಸ್ಟ್! 21 ಕಾರುಗಳು ಪೊಲೀಸರ ವಶಕ್ಕೆ

2003ರಿಂದ ಈವರೆಗೆ 60ಕ್ಕೂ ಅಧಿಕ ಕಾರುಗಳನ್ನ ಕಳ್ಳತನ ಮಾಡಿದ್ದಾನೆ. 2019ರ ಬಳಿಕ ಬೆಂಗಳೂರಿನಲ್ಲೂ ಸಾಲು ಸಾಲು ಕಳ್ಳತನ ಮಾಡಿದ್ದಾನೆ. ವಿದೇಶದಿಂದ ಡಿವೈಸ್​ಗಳನ್ನ ತರಿಸಿಕೊಂಡು ಕೃತ್ಯ ಎಸಗಿರುವುದು ವಿಚಾರಣೆ ಬಳಿಕ ಬೆಳಕಿಗೆ ಬಂದಿದೆ.

ದೇಶದಾದ್ಯಂತ ಕಾರು ಕದಿಯುತ್ತಿದ್ದ ಆಸಾಮಿ ಅರೆಸ್ಟ್! 21 ಕಾರುಗಳು ಪೊಲೀಸರ ವಶಕ್ಕೆ
ಆರೋಪಿ ಸತ್ಯೇಂದರ್ ಸಿಂಗ್ ಶೇಖಾವತ್, ಆರೋಪಿ ಕದ್ದ ಕಾರು
TV9 Web
| Updated By: sandhya thejappa|

Updated on:Mar 16, 2022 | 12:41 PM

Share

ಬೆಂಗಳೂರು: ದೇಶದಾದ್ಯಂತ ಕಾರುಗಳನ್ನ (Cars) ಕದಿಯುತ್ತಿದ್ದ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸತ್ಯೇಂದರ್ ಸಿಂಗ್ ಶೇಖಾವತ್ (41) ರಾಜಸ್ಥಾನ್ (Rajasthan) ಮೂಲದವನಾಗಿದ್ದು, ಬಂಧಿತನಿಂದ ಕೋಟ್ಯಾಂತರ ಮೌಲ್ಯದ 21 ವಿವಿಧ ಕಾರುಗಳನ್ನ ವಶಕ್ಕೆ ಪಡೆದಿದ್ದಾರೆ. ಎಂಬಿಎ ಪದವೀಧರನಾಗಿರುವ ಆರೋಪಿ ತೆಲಂಗಾಣ ಪೊಲೀಸರಿಗೆ ಕ್ಯಾಚ್ ಮಿ ಇಫ್ ಯು ಕ್ಯಾನ್ ಎಂದು ಸವಾಲ್ ಹಾಕಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.

2003ರಿಂದ ಈವರೆಗೆ 60ಕ್ಕೂ ಅಧಿಕ ಕಾರುಗಳನ್ನ ಕಳ್ಳತನ ಮಾಡಿದ್ದಾನೆ. 2019ರ ಬಳಿಕ ಬೆಂಗಳೂರಿನಲ್ಲೂ ಸಾಲು ಸಾಲು ಕಳ್ಳತನ ಮಾಡಿದ್ದಾನೆ. ವಿದೇಶದಿಂದ ಡಿವೈಸ್​ಗಳನ್ನ ತರಿಸಿಕೊಂಡು ಕೃತ್ಯ ಎಸಗಿರುವುದು ವಿಚಾರಣೆ ಬಳಿಕ ಬೆಳಕಿಗೆ ಬಂದಿದೆ. ಕಾರ್ ಸಾಫ್ಟ್​ವೇರ್​ಗಳನ್ನ ಹ್ಯಾಕ್ ಮಾಡಿ ಕಾರ್ ಅನ್ ಲಾಕ್ ಮಾಡುತ್ತಿದ್ದ. ಕೆಲವು ಕಾರ್​ಗಳ ಮ್ಯಾನ್ಯುಲ್ ಲಾಕ್​ಗಳ ದಾಖಲೆಯನ್ನು ಕದ್ದು ತಯಾರಿಸುತಿದ್ದ. ಕದ್ದ ಕಾರಿನಲ್ಲೇ ಆರೋಪಿ ರಾಜಸ್ಥಾನಕ್ಕೆ ತೆರಳುತಿದ್ದ.

ಕದ್ದ ಕಾರುಗಳನ್ನ ಬಂಧಿತ ಆರೋಪಿ ಸತ್ಯೇಂದರ್ ಸಿಂಗ್ ಶೇಖಾವತ್ ಬಳಿಕ ಆ ಕಾರುಗಳನ್ನು ಮಾಫಿಯಾ ಜನರಿಗೆ ಮಾರಾಟ ಮಾಡುತಿದ್ದ. ಅಮೃತಹಳ್ಳಿ ಪೊಲೀಸರು ರಾಜಸ್ಥಾನದಲ್ಲಿ ಸತತ ಒಂದು ತಿಂಗಳ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

ನಕ್ಷತ್ರ ಆಮೆಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ: ಬೆಂಗಳೂರು ಅರಣ್ಯ ಸಂಚಾರಿ ದಳದ ಕಾರ್ಯಾಚರಣೆಯಲ್ಲಿ ನಕ್ಷತ್ರ ಆಮೆಗಳನ್ನ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬೆಂಗಳೂರು ನಗರದ ಬೆಂಗಳೂರು ಉತ್ತರ ತಾಲೂಕಿನ ಮತ್ತಿಕೆರೆ ಬಳಿ  ಮೊಹಮ್ಮದ್ ಹಾರೂನ್(27)ನನ್ನು ವಶಕ್ಕೆ ಪಡೆಯಲಾಗಿದೆ. ಎರಡು ಜೀವಂತ ನಕ್ಷತ್ರ ಆಮೆ, ಆಕ್ಟಿವಾ ಹೊಂಡಾ ಜಪ್ತಿ ಮಾಡಿಲಾಗಿದ್ದು, ಆರೋಪಿಯ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಉಲ್ಲಂಘನೆಯಡಿ ಅರಣ್ಯ ಮೊಕದ್ದಮೆ ದಾಖಲಾಗಿದೆ.

ಇದನ್ನೂ ಓದಿ

ತುಮಕೂರಿನ ಅಶೋಕ ಲಾಡ್ಜ್ ಅಂಡ್ ಹೋಟೆಲ್​ನಲ್ಲಿ ಹೆಂಡತಿ ಕಾಲು ಕತ್ತರಿಸಿ, ತಾನೂ ಹೊಟ್ಟೆಗೆ ಚೂರಿ ಹಾಕಿಕೊಂಡ ಗಂಡ

ಈ ರೀತಿಯ ಜೀವನಶೈಲಿಯಿಂದ ಸ್ತನ ಕ್ಯಾನ್ಸರ್​ನ ಅಪಾಯ ಹೆಚ್ಚು: ಇಲ್ಲಿದೆ ಮಾಹಿತಿ

Published On - 12:38 pm, Wed, 16 March 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ