AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hijab Verdict: ಹಿಜಾಬ್ ಪ್ರಕರಣ ಆದೇಶದ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

Supreme Court: ಈ ಅರ್ಜಿಯ ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವೇನಿದೆ? ನಾಳೆಯಿಂದ ರಜೆ ಆರಂಭವಾಗುತ್ತದೆ ಎಂದು ಸಿಜೆ ಎನ್​.ವಿ. ರಮಣ ತಿಳಿಸಿದ್ದಾರೆ. ಹೋಳಿ ಹಬ್ಬ ರಜೆಯ ಬಳಿಕ ಮೇಲ್ಮನವಿ ವಿಚಾರಣೆ ಸಾಧ್ಯತೆ ಎಂದು ಹೇಳಲಾಗಿದೆ.

Hijab Verdict: ಹಿಜಾಬ್ ಪ್ರಕರಣ ಆದೇಶದ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ಸುಪ್ರೀಂಕೋರ್ಟ್​
TV9 Web
| Edited By: |

Updated on:Mar 16, 2022 | 12:23 PM

Share

ದೆಹಲಿ: ಹಿಜಾಬ್ ಬ್ಯಾನ್ ಆದೇಶ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಹೋಳಿ ಹಬ್ಬದ ರಜೆಯ ಬಳಿಕ ಮೇಲ್ಮನವಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಲಾಗಿದೆ. ಕರ್ನಾಟಕ ಹೈಕೋರ್ಟ್​ನಲ್ಲಿ ಹಿಜಾಬ್ ಬಗ್ಗೆ ನಿನ್ನೆ (ಮಾರ್ಚ್ 15) ತೀರ್ಪು ನೀಡಲಾಗಿತ್ತು. ಬಳಿಕ, ಪ್ರಕರಣ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಕರ್ನಾಟಕ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಅರ್ಜಿ ಹಿನ್ನೆಲೆ, ತುರ್ತಾಗಿ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್​ಗೆ ಮನವಿ ಮಾಡಲಾಗಿತ್ತು. ಸೋಮವಾರವೇ ವಿಚಾರಣೆಗೆ ವಕೀಲ ಸಂಜಯ್ ಹೆಗಡೆ ಮನವಿ ಮಾಡಿದ್ದರು. ಆದರೆ ಸಿಜೆಐ ಎನ್​.ವಿ. ರಮಣ, ವಕೀಲ ಸಂಜಯ್ ಹೆಗಡೆ ಮನವಿ ತಿರಸ್ಕರಿಸಿದ್ದಾರೆ. ಹೋಳಿ ಹಬ್ಬದ ರಜೆ ಬಳಿಕ ಅರ್ಜಿ ವಿಚಾರಣೆ ಎಂದು ಸಿಜೆಐ ಎನ್​.ವಿ. ರಮಣ ತಿಳಿಸಿದ್ದಾರೆ.

ಹಿಜಾಬ್ ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವಿದೆಯಾ? ನಾಳೆಯಿಂದ ಸುಪ್ರೀಂಕೋರ್ಟ್​ಗೆ ರಜೆಯಿದೆ ಎಂದು ಹೇಳಿದ್ದಾರೆ. ಮುಂದಿನ ವಾರ ವಿಚಾರಣೆಗೆ ಅಶ್ವಿನಿ ಉಪಾಧ್ಯಾಯ ಮನವಿ ಮಾಡಿದ್ದಾರೆ. ಏಕರೂಪ ಸಮವಸ್ತ್ರ ಕೋರಿದ್ದ ಅರ್ಜಿ ಸುಪ್ರೀಂ ಕೋರ್ಟ್​ನಲ್ಲಿ ಪ್ರಸ್ತಾಪ ಮಾಡಲಾಗಿದೆ. ವಕೀಲ ಅಶ್ವಿನಿ ಉಪಾಧ್ಯಾಯರಿಂದ ಸಿಜೆಐ ಪೀಠದಲ್ಲಿ ಪ್ರಸ್ತಾಪಿಸಲಾಗಿದೆ. ಈ ಅರ್ಜಿಯ ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವೇನಿದೆ? ನಾಳೆಯಿಂದ ರಜೆ ಆರಂಭವಾಗುತ್ತದೆ ಎಂದು ಸಿಜೆ ಎನ್​.ವಿ. ರಮಣ ತಿಳಿಸಿದ್ದಾರೆ. ಹೋಳಿ ಹಬ್ಬ ರಜೆಯ ಬಳಿಕ ಮೇಲ್ಮನವಿ ವಿಚಾರಣೆ ಸಾಧ್ಯತೆ ಎಂದು ಹೇಳಲಾಗಿದೆ.

ಹಿಜಾಬ್ ಬ್ಯಾನ್ ಆದೇಶದ ವಿರುದ್ದ ಸುಪ್ರೀಂಕೋರ್ಟ್​ನಲ್ಲಿ ವಿಚಾರ ಪ್ರಸ್ತಾಪವಾಗಿದೆ. ವಕೀಲರಾದ ಸಂಜಯ್ ಹೆಗ್ಡೆ, ದೇವದತ್ತ ಕಾಮತ್ ಅವರಿಂದ‌ ಪ್ರಸ್ತಾಪ ಮಾಡಲಾಗಿದೆ. ಹಿಜಾಬ್ ಬ್ಯಾನ್ ಆದೇಶದಿಂದ ವರ್ಗೀಕರಣ ಸೃಷ್ಟಿಯಾಗುವಂತೆ ಮಾಡಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಇತರರ ನಡುವೆ ಅಸಮಂಜಸವಾದ ವರ್ಗೀಕರಣವನ್ನು ಸೃಷ್ಟಿಸುತ್ತದೆ. ಭಾರತೀಯ ಸಂವಿಧಾನದ ಮೂಲಭೂತ ರಚನೆಯನ್ನು ರೂಪಿಸುವ ಸೆಕ್ಯುಲರಿಸಂ ಪರಿಕಲ್ಪನೆಯ ನೇರ ಉಲ್ಲಂಘನೆಯಾಗಿದೆ ಎಂದು ಸಿಜೆಐ ಪೀಠದ ಮುಂದೆ ವಕೀಲರು ಪ್ರಸ್ತಾಪಿಸಿದ್ದಾರೆ.

ಹಿಜಾಬ್ (Hijab) ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಶಾಲಾ-ಕಾಲೇಜುಗಳಲ್ಲಿ ಹಿಜಾಬ್  ಧರಿಸುವುದರ ಮೇಲಿನ ನಿಷೇಧವನ್ನು ಎತ್ತಿಹಿಡಿದಿರುವ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ (Supreme Court) ವಿಶೇಷ ರಜಾಕಾಲದ ಅರ್ಜಿಯನ್ನು(Special Leave Petition) ಸಲ್ಲಿಸಲಾಗಿತ್ತು. ನಿಬಾ ನಾಜ್ ಎಂಬ ಮುಸ್ಲಿಂ ವಿದ್ಯಾರ್ಥಿನಿ ಅಡ್ವೊಕೇಟ್ ಆನ್ ರೆಕಾರ್ಡ್ ಅನಸ್ ತನ್ವೀರ್ ಮೂಲಕ ವಿಶೇಷ ರಜಾಕಾಲದ ಅರ್ಜಿ ಸಲ್ಲಿಸಿದ್ದರು.

ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠ ನಿನ್ನೆ (ಮಾರ್ಚ್ 15) ಹಿಜಾಬ್ ಧರಿಸುವುದು ಇಸ್ಲಾಮಿಕ್ ನಂಬಿಕೆಯಲ್ಲಿ ಅಗತ್ಯವಾದ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಹೇಳಿತ್ತು. ರಾಜ್ಯವು ಶಾಲಾ ಸಮವಸ್ತ್ರ ಆರ್ಟಿಕಲ್ 25 ರ ಅಡಿಯಲ್ಲಿ ವಿದ್ಯಾರ್ಥಿಗಳ ಹಕ್ಕುಗಳಿಗೆ ಸಮಂಜಸವಾದ ನಿರ್ಬಂಧವಾಗಿದೆ. ಆದ್ದರಿಂದ ಫೆಬ್ರವರಿ 5 ರಂದು ಕರ್ನಾಟಕ ಸರ್ಕಾರ ಹೊರಡಿಸಿದ ಸರ್ಕಾರಿ ಆದೇಶವು ಅವರ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಲಯವು ಹೇಳಿತ್ತು. ರಾಜ್ಯವು ಶಾಲಾ ಸಮವಸ್ತ್ರದ ಪ್ರಿಸ್ಕ್ರಿಪ್ಷನ್ ಆರ್ಟಿಕಲ್ 25 ರ ಅಡಿಯಲ್ಲಿ ವಿದ್ಯಾರ್ಥಿಗಳ ಹಕ್ಕುಗಳ ಸಮಂಜಸವಾದ ನಿರ್ಬಂಧವಾಗಿದೆ ಎಂದು ನ್ಯಾಯಾಲಯವು ಹೇಳಿತ್ತು.

ಇದನ್ನೂ ಓದಿ: Hijab Row ಹಿಜಾಬ್ ಪ್ರಕರಣದಲ್ಲಿ ನಮ್ಮ ಮನವಿ ಆಲಿಸಿ; ಸುಪ್ರೀಂಕೋರ್ಟ್​​ಗೆ ಕೇವಿಯಟ್ ಅರ್ಜಿ ಸಲ್ಲಿಸಿದ ಹಿಂದೂ ಸೇನಾ

ಇದನ್ನೂ ಓದಿ: Hijab: ಹಿಜಾಬ್ ಇಲ್ಲದೆ ನಾವು ಕಾಲೇಜಿಗೆ ಹೋಗುವುದಿಲ್ಲ, ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಉಡುಪಿ ವಿದ್ಯಾರ್ಥಿನಿಯರ ಸುದ್ದಿಗೋಷ್ಠಿ

Published On - 11:27 am, Wed, 16 March 22

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ