ACB Raid: ಏಕಕಾಲಕ್ಕೆ ಕರ್ನಾಟಕದ 78 ಕಡೆಗಳಲ್ಲಿ 200ಕ್ಕೂ ಹೆಚ್ಚು ಅಧಿಕಾರಿಗಳಿಂದ ಎಸಿಬಿ ದಾಳಿ
ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿರುವ ಆರೋಪದಲ್ಲಿ ಕೆಲವೆಡೆ ದಾಳಿ ನಡೆದಿದೆ. ಬೆಳಗ್ಗೆ 6 ಗಂಟೆಯಿಂದ ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರಾಜ್ಯದ ವಿವಿಧ ನಗರಗಳಲ್ಲಿ ಇರುವ 18 ಅಧಿಕಾರಿಗಳಿಗೆ ಸಂಬಂಧಪಟ್ಟ ಒಟ್ಟು 78 ಸ್ಥಳಗಳಲ್ಲಿ ಎಸಿಬಿ ರೇಡ್ ನಡೆಸಿದೆ.
ಬೆಂಗಳೂರು: ಕರ್ನಾಟಕದ 78 ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ 3 ಸೇರಿ ರಾಜ್ಯದ 78 ಸ್ಥಳಗಳಲ್ಲಿ ಎಸಿಬಿ ದಾಳಿ ನಡೆಸಲಾಗಿದೆ. 18 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 78 ಸ್ಥಳಗಳಲ್ಲಿ, ಏಕಕಾಲಕ್ಕೆ 200ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ ರೇಡ್ ಮಾಡಲಾಗಿದ್ದು, ಎಸಿಬಿ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಕೆ ಮಾಡಿರುವ ಆರೋಪ ಹಿನ್ನೆಲೆ, 18 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 75 ಕಡೆ ಎಸಿಬಿ ರೇಡ್ ಮಡಲಾಗಿದೆ.
ಕೆಳಕಂಡ 18 ಅಧಿಕಾರಿಗಳ ಮನೆ, ಕಚೇರಿ, ವಿವಿಧ ಸ್ಥಳಗಳ ಮೇಲೆ ಎಸಿಬಿ ದಾಳಿ
- ಜ್ಞಾನೇಂದ್ರಕುಮಾರ್, ಹೆಚ್ಚುವರಿ ಆಯುಕ್ತರು ಸಾರಿಗೆ, ಟ್ರಾಡ್ ಸಾರಿಗೆ ಮತ್ತು ಸುರಕ್ಷತೆ, ಬೆಂಗಳೂರು
- ರಾಕೇಶ್ ಕುಮಾರ್ BDA, ಪಟ್ಟಣ ಯೋಜನೆ
- ರಮೇಶ ಕಣಕಟ್ಟೆ, ಆರ್.ಎಫ್.ಓ. ಸಾಮಾಜಿಕ ಅರಣ್ಯ, ಯಾದಗಿರಿ
- ಬಸವರಾಜ ಶೇಖರ ರೆಡ್ಡಿ ಪಾಟೀಲ್, ಕಾರ್ಯನಿರ್ವಾಹಕ ಅಭಿಯಂತರ, ಕೌಜಲಗಿ ವಿಭಾಗ, ಗೋಕಾಕ
- ಬಸವ ಕುಮಾರ್ ಎಸ್. ಅಣ್ಣಿಗೇರಿ, ಶಿರಸ್ತೇದಾರ್, ಡಿಸಿ ಕಛೇರಿ, ಗದಗ
- ಗಪಿನಾಥ್ ಸಾ ಎನ್ ಮಾಳಗಿ, ಪ್ರಾಜೆಕ್ಟ್ ಮ್ಯಾನೇಜರ್, ನಿರ್ಮಿತಿ ಕೇಂದ್ರ, ವಿಜಯಪುರ
- ಬಿ ಕೆ ಶಿವಕುಮಾರ್, ಹೆಚ್ಚುವರಿ ಡಿಟೆಕ್ಟರ್, ಇಂಡಸ್ಟ್ರಿವ್ಸ್ ಮತ್ತು ಕಾಮರ್ಸ್, ಬೆಂಗಳೂರು
- ಶಿವಾನಂದ್ ಪಿ ಶರಣಪ್ಪ ಖೇಡಗಿ, RFO, ಬಾದಾಮಿ
- ಮಂಜುನಾಥ್, ಸಹಾಯಕ ಆಯುಕ್ತ, ರಾಮನಗರ
- ಶ್ರೀನಿವಾಸ್, ಜನರಲ್ ಮ್ಯಾನೇಜರ್, ಸಮಾಜ ಕಲ್ಯಾಣ ಇಲಾಖೆ
- ಮಹೇಶ್ವರಪ್ಪ, ಜಿಲ್ಲಾ ಪರಿಸರ ಅಧಿಕಾರಿ, ದಾವಣಗೆರೆ
- ಕೃಷ್ಣನ್ ಎಇ, ಎಪಿಎಂಸಿ, ಹಾವೇರಿ
- ಚಲುವರಾಜ್, ಅಬಕಾರಿ ನಿರೀಕ್ಷಕರು, ಗುಂಡ್ಲುಪೇಟೆ ತಾಲೂಕು
- ಗಿರೀಶ್, ಸಹಾಯಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಸುವಿವಿಭಾಗ
- ಬಾಲಕೃಷ್ಣ ಹೆಚ್ ಎನ್, ಪೊಲೀಸ್ ಇನ್ಸ್ ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ, ಮೈಸೂರು
- ಗವಿರಂಗಪ್ಪ, ಎಇಇ, ಪಿಡಬ್ಲ್ಯೂಡಿ, ಚಿಕ್ಕಮಂಗಳೂರು
- ಅಶೋಕ್ ರೆಡ್ಡಿ ಪಾಟೀಲ್, ಎಇಇ, ಕೃಷ್ಣ ಭಾಗ್ಯ ಜಲ ನಿಗಮ ಲಿ, ದೇವದುರ್ಗ ರಾಯಚೂರು
- ದಯಾ ಸುಂದರ್ ರಾಜು, AEE, KPTCL, ದಕ್ಷಿಣ ಕನ್ನಡ
ಕರ್ನಾಟಕದ ವಿವಿಧೆಡೆ ಇರುವ 18 ಅಧಿಕಾರಿಗಳ ಮನೆ, ಕಚೇರಿ, ಫಾರ್ಮ್ ಹೌಸ್, ಲೆಕ್ಕಪತ್ರ ಪರಿಶೋಧಕರ ಮನೆ ಮುಂತಾದೆಡೆ ಎಸಿಬಿ ದಾಳಿ ನಡೆಸಲಾಗಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿರುವ ಆರೋಪದಲ್ಲಿ ಕೆಲವೆಡೆ ದಾಳಿ ನಡೆದಿದೆ. ಬೆಳಗ್ಗೆ 6 ಗಂಟೆಯಿಂದ ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರಾಜ್ಯದ ವಿವಿಧ ನಗರಗಳಲ್ಲಿ ಇರುವ 18 ಅಧಿಕಾರಿಗಳಿಗೆ ಸಂಬಂಧಪಟ್ಟ ಒಟ್ಟು 78 ಸ್ಥಳಗಳಲ್ಲಿ ಎಸಿಬಿ ರೇಡ್ ನಡೆಸಿದೆ.
ಇದನ್ನೂ ಓದಿ: BBMP ಕಚೇರಿ ಮೇಲೆ ಎಸಿಬಿ ದಾಳಿ; ನೂರಾರು ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ಪತ್ತೆ
ಇದನ್ನೂ ಓದಿ: ಲಂಚ: ಚಿಕ್ಕಬಳ್ಳಾಪುರದಲ್ಲಿ ಪಿ.ಡಿ.ಓ. ಶ್ರೀನಿವಾಸ್ ಮತ್ತು ಕೋಲಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಮೇಲೆ ಎಸಿಬಿ ದಾಳಿ
Published On - 8:28 am, Wed, 16 March 22