ACB Raids: 10 ಸಾವಿರ ಲಂಚ ಸ್ವೀಕರಿಸುತ್ತಿದ್ದ ಚಿಕ್ಕಬಾಣಾವರ ಪುರಸಭೆ ಕಚೇರಿ ಸಿಬ್ಬಂದಿ ಎಸಿಬಿ ಬಲೆಗೆ

| Updated By: ಆಯೇಷಾ ಬಾನು

Updated on: Mar 09, 2022 | 7:07 PM

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡದಲ್ಲಿ ಸಬ್ರಿಜಿಸ್ಟ್ರಾರ್, ಬಾಂಡ್ ರೈಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪಿತ್ರಾರ್ಜಿತ ಆಸ್ತಿ ಪರಭಾರೆ ದಾಖಲೆ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ 4,000 ಲಂಚ ಸ್ವೀಕರಿಸ್ತಿದ್ದ ಸಬ್ ರಿಜಿಸ್ಟ್ರಾರ್ ಸಂಜೀವ್ ಕಪಾಲಿ ಮತ್ತು ಬಾಂಡ್ ರೈಟರ್ ಶಿವಯೋಗಿ ಮಲ್ಲಯ್ಯನವರ ಎಸಿಬಿ ಬಲೆಗೆ ಬಿದ್ದಿದ್ದಾರೆ.

ACB Raids: 10 ಸಾವಿರ ಲಂಚ ಸ್ವೀಕರಿಸುತ್ತಿದ್ದ ಚಿಕ್ಕಬಾಣಾವರ ಪುರಸಭೆ ಕಚೇರಿ ಸಿಬ್ಬಂದಿ ಎಸಿಬಿ ಬಲೆಗೆ
10 ಸಾವಿರ ಲಂಚ ಸ್ವೀಕರಿಸುತ್ತಿದ್ದ ಚಿಕ್ಕಬಾಣಾವರ ಪುರಸಭೆ ಕಚೇರಿ ಸಿಬ್ಬಂದಿ ಎಸಿಬಿ ಬಲೆಗೆ
Follow us on

ಬೆಂಗಳೂರು: ನಿವೇಶನ ಖಾತೆ ನೀಡಲು 10 ಸಾವಿರ ಲಂಚ ಸ್ವೀಕರಿಸುತ್ತಿದ್ದ ಪುರಸಭೆ ಕಚೇರಿ ಸಿಬ್ಬಂದಿ ಎಸಿಬಿ(ACB) ಬಲೆಗೆ ಬಿದ್ದಿದ್ದಾರೆ. ಚಿಕ್ಕಬಾಣಾವರ ಪುರಸಭೆ ಕಚೇರಿ ಸಿಬ್ಬಂದಿ ಶಂಕರ್, ಆಸೀಫ್ ಅನ್ವರ್ ಎಂಬುವರ ಬಳಿ 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 15 ಸಾವಿರ ಪಡೆದಿದ್ದ ಶಂಕರ್ ಇಂದು ಬಾಕಿ 10 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಇನ್ನು ಮತ್ತೊಂದು ಕಡೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡದಲ್ಲಿ ಸಬ್ರಿಜಿಸ್ಟ್ರಾರ್, ಬಾಂಡ್ ರೈಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪಿತ್ರಾರ್ಜಿತ ಆಸ್ತಿ ಪರಭಾರೆ ದಾಖಲೆ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ 4,000 ಲಂಚ ಸ್ವೀಕರಿಸ್ತಿದ್ದ ಸಬ್ ರಿಜಿಸ್ಟ್ರಾರ್ ಸಂಜೀವ್ ಕಪಾಲಿ ಮತ್ತು ಬಾಂಡ್ ರೈಟರ್ ಶಿವಯೋಗಿ ಮಲ್ಲಯ್ಯನವರ ಎಸಿಬಿ ಬಲೆಗೆ ಬಿದ್ದಿದ್ದಾರೆ. ದಾಖಲಾತಿ ನೀಡಲು ಸಂಜೀವ ಕಪಾಲಿ ವಿನಾಕಾರಣ ವಿಳಂಬ ಮಾಡುತ್ತಿದ್ದರು. ಈ ಬಗ್ಗೆ ಕೇಳಿದಾಗ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಶಿವಪ್ಪ ವರಗಣ್ಣವರ ಎಂಬುವವರು ಎಸಿಬಿಗೆ ದೂರು ನೀಡಿದ್ದರು.

ಪೊಲೀಸ್ ಕ್ವಾರ್ಟರ್ಸ್ನಲ್ಲಿಯೇ ಖದೀಮರ ಕೈಚಳಕ
ಬೆಂಗಳೂರಿನ ಆಡುಗೋಡಿಯ ಪೊಲೀಸ್ ಕ್ವಾರ್ಟರ್ಸ್ನಲ್ಲಿಯೇ ಖದೀಮರು ಕೈಚಳಕ ತೋರಿಸಿದ್ದಾರೆ. ಪೊಲೀಸ್ ಕ್ವಾರ್ಟರ್ಸ್ನ ಮೂರು ಮನೆಗಳಲ್ಲಿ ಕಳ್ಳತನ ನಡೆದಿದೆ. ಬೆಂಗಳೂರಿನ ಆಡುಗೋಡಿಯ ಪೊಲೀಸ್ ಕ್ವಾರ್ಟರ್ಸ್ನ ಮನೆಗಳಲ್ಲಿದ್ದ 70 ಸಾವಿರ ನಗದು ಸೇರಿ ಚಿನ್ನಾಭರಣ ಕದ್ದ ಖದೀಮರು ಪರಾರಿಯಾಗಿದ್ದಾರೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮ್ಯೂನಿಯಾ ಪಕ್ಷಿಗಳ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ
ಅಳಿವಿನಂಚಿನಲ್ಲಿರುವ ಮ್ಯೂನಿಯಾ ಪಕ್ಷಿಗಳ ಮಾರಾಟಕ್ಕೆ ಯತ್ನಿಸುತ್ತಿದ್ದ ಪವನ್(27), ಪ್ರಕಾಶ್(22)ನನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ಭುವನೇಶ್ವರಿನಗರ ಬಸ್ ನಿಲ್ದಾಣದಲ್ಲಿ ಇಬ್ಬರನ್ನು ಬಂಧಿಸಿ 36 ಮ್ಯೂನಿಯಾ ಪಕ್ಷಿಗಳನ್ನು ಪೊಲೀಸರು ರಕ್ಷಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಒಳಉಡುಪು ಧರಿಸದೆ ಪಬ್ಲಿಕ್​ನಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ ಚೋಪ್ರಾ; ಬಂತು ಸಾಲುಸಾಲು ಟೀಕೆ

Womens World Cup 2022: ವಿಶ್ವ ಸಮರದಲ್ಲಿ ಭಾರತಕ್ಕೆ ಬಲಿಷ್ಠ ಕಿವೀಸ್ ಎದುರಾಳಿ! ಮುಖಾಮುಖಿ ದಾಖಲೆ ಹೀಗಿದೆ

Published On - 6:27 pm, Wed, 9 March 22