ಬಿಡಿಎ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ: 75 ಕೋಟಿ ಮೌಲ್ಯದ 6 ನಿವೇಶನಗಳ ನಕಲಿ ದಾಖಲೆ ಪತ್ತೆ

| Updated By: ganapathi bhat

Updated on: Nov 20, 2021 | 6:23 PM

Bengaluru News: ದಾಳಿ ಕುರಿತು ಎಸಿಬಿ ಅಧಿಕಾರಿಗಳಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. 75 ಕೋಟಿ ಮೌಲ್ಯದ 6 ನಿವೇಶನಗಳ ನಕಲಿ ದಾಖಲೆ ಪತ್ತೆ ಆಗಿದೆ. ಬಿಡಿಎ ಅರ್ಕಾವತಿ ಬಡಾವಣೆ, ಕೆಂಪೇಗೌಡ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಸೈಟ್‌ ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆ.

ಬಿಡಿಎ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ: 75 ಕೋಟಿ ಮೌಲ್ಯದ 6 ನಿವೇಶನಗಳ ನಕಲಿ ದಾಖಲೆ ಪತ್ತೆ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಬೆಂಗಳೂರು ಅಭಿವೃದ್ಧು ಪ್ರಾಧಿಕಾರ (ಬಿಡಿಎ) ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಉಪ ಕಾರ್ಯದರ್ಶಿ ಕಚೇರಿ 4ರಲ್ಲಿ ಎಸಿಬಿ ಶೋಧ ಕಾರ್ಯ ಅಂತ್ಯವಾಗಿದೆ. ಕೆಲ ಮಹತ್ವದ ದಾಖಲೆ ವಶಕ್ಕೆ ಪಡೆದು ಎಸಿಬಿ ಅಧಿಕಾರಿಗಳು ತೆರಳಿದ್ದಾರೆ. DS-2, DS-4ರ ಕಚೇರಿಯಲ್ಲಿ ಎಸಿಬಿ ದಾಳಿ ಮುಕ್ತಾಯವಾಗಿದೆ. DS-3, DS-1ರಲ್ಲಿ ಅಧಿಕಾರಿಗಳ ಶೋಧ ಮುಂದುವರಿದಿದೆ.

ದಾಳಿ ಕುರಿತು ಎಸಿಬಿ ಅಧಿಕಾರಿಗಳಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. 75 ಕೋಟಿ ಮೌಲ್ಯದ 6 ನಿವೇಶನಗಳ ನಕಲಿ ದಾಖಲೆ ಪತ್ತೆ ಆಗಿದೆ. ಬಿಡಿಎ ಅರ್ಕಾವತಿ ಬಡಾವಣೆ, ಕೆಂಪೇಗೌಡ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಸೈಟ್‌ ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆ. ಅನರ್ಹ ವ್ಯಕ್ತಿಗಳಿಗೆ ನಿವೇಶನ ಹಂಚಿಕೆಯಾಗಿರುವುದು ಪತ್ತೆ ಆಗಿದೆ. 1.5 ಕೋಟಿ ಮೌಲ್ಯದ 1,800 ಚದರಡಿ ಸೈಟ್ ಮಂಜೂರು ಮಾಡಲಾಗಿದೆ. ₹1.5 ಕೋಟಿ ಮೌಲ್ಯದ ನಿವೇಶನ ಅಕ್ರಮವಾಗಿ ಮಂಜೂರು ಮಾಡಲಾಗಿದೆ.

ಉಲ್ಲಾಳದಲ್ಲಿರುವ 1,800 ಚದರಡಿಯ ಫ್ಲ್ಯಾಟ್ ಅಕ್ರಮವಾಗಿದೆ. ಕೆಂಗೇರಿ ಸ್ಯಾಟಲೈಟ್​​ ಬಳಿ ನಿವೇಶನ ಅಕ್ರಮ ಮಂಜೂರು ಮಾಡಲಾಗಿದೆ. 80 ಲಕ್ಷ ಮೌಲ್ಯದ ಸಾವಿರ ಚದರಡಿ ನಿವೇಶನ ಮಂಜೂರು ಮಾಡಲಾಗಿದೆ. ಚಂದ್ರಾಲೇಔಟ್​​ನಲ್ಲಿ 5 ಕೋಟಿ ಮೌಲ್ಯದ ಸೈಟ್, 5 ಕೋಟಿ ಮೌಲ್ಯದ 2,400 ಚದರಡಿಯ ಸೈಟ್, ಕೆಂಪೇಗೌಡ ಬಡಾವಣೆಯಲ್ಲಿ 30 ಲಕ್ಷ ಮೌಲ್ಯದ ನಿವೇಶನ ಮಂಜೂರು ಮಾಡಲಾಗಿದೆ. ಒಂದೇ ಸೈಟ್ ಹೆಚ್ಚು ವ್ಯಕ್ತಿಗಳಿಗೆ ನೋಂದಣಿ ಮಾಡಿದ್ದು ಪತ್ತೆ ಆಗಿದೆ.

ವಿಶ್ವೇಶ್ವರಯ್ಯ ಬಡಾವಣೆಯಲ್ಲಿ 52 ಲಕ್ಷ ಮೌಲ್ಯದ ಸೈಟ್​​, ಅರ್ಕಾವತಿ ಬಡಾವಣೆಯಲ್ಲಿ ನಿವೇಶನ​ ಮಂಜೂರು ಮಾಡಲಾಗಿದೆ. ಆದ್ರೆ ಕಾರಣವಿಲ್ಲದೇ ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆ ಮಾಡಲಾಗಿದೆ. ಬಿಡಿಎ ಅಧಿಕಾರಿಗಳು, ಸಿಬ್ಬಂದಿ ಮಧ್ಯವರ್ತಿಗಳ ಜತೆ ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ಪರಿಹಾರ ಹಂಚಿಕೆ ಮಾಡಲಾಗಿದೆ. ಬಿಡಿಎಗೆ ಹಣ ಪಾವತಿಸಿದ್ದರೂ ಸೈಟ್​ ಹಂಚದೇ ವಿಳಂಬ ಮಾಡಲಾಗಿದೆ. ಈ ಸಂಬಂಧ ಎಲ್ಲಾ ದಾಖಲಾತಿ ವಶಕ್ಕೆ ಪಡೆದು ಎಸಿಬಿ ಕೊಂಡೊಯ್ದಿದೆ.

ಅಕ್ರಮವೆಸಗಿದ ಅಧಿಕಾರಿಗಳು, ಸಿಬ್ಬಂದಿಯ ಮಾಹಿತಿ ಸಂಗ್ರಹ ಮಾಡಲಾಗಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಎಸಿಬಿ ಮುಂದಾಗಿದೆ. ನಾಳೆ, ನಾಡಿದ್ದು ರಜೆ ಹಿನ್ನೆಲೆಯಲ್ಲಿ ಮಂಗಳವಾರ ಶೋಧ ಕಾರ್ಯ ನಡೆಯಲಿದೆ. ಅಗತ್ಯಬಿದ್ದರೆ ಮಂಗಳವಾರ ಶೋಧ ಕಾರ್ಯ ಮುಂದುವರಿಸುವ ಬಗ್ಗೆ ಹೇಳಲಾಗಿದೆ.

ಭ್ರಷ್ಟಾಚಾರ ನಿಗ್ರಹದಳದ ದಾಳಿ ವೇಳೆ ಪತ್ತೆಯಾದ ಅಕ್ರಮಗಳು
1) ಅರ್ಕಾವತಿ ಬಡಾವಣೆ, ಕೆಂಪೇಗೌಡ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆ 75 ಕೋಟಿ ಬೆಲೆ ಬಾಳುವ 6 ನಿವೇಶನಗಳನ್ನ ಸುಳ್ಳು ಮಾಹಿತಿ ನೀಡಿ ನಕಲಿ ದಾಖಲೆ ಸೃಷ್ಠಿಸಿರುವುದು ಪತ್ತೆ
2) ಕೆಂಗೇರಿ ಹೊಬಳಿಯಲ್ಲಿ ಉಲ್ಲಾಳ ಗ್ರಾಮದಲ್ಲಿ 1.5 ಕೋಟಿ ಮೌಲ್ಯದ ಅಕ್ರಮ ನಿವೇಶನಗಳು ಮಂಜೂರು
3) ಸ್ಯಾಟಲೈಟ್ ಟೌನ್ ಬಳಿ 80 ಲಕ್ಷ ಮೌಲ್ಯದ ನಿವೇಶನ ಅಕ್ರಮವಾಗಿ ಮಂಜೂರು
4) ಚಂದ್ರಾಲೇಔಟ್ ನಲ್ಲಿ2400 ಚದರ ಅಡಿಯ 5 ಕೋಟಿ ಮೌಲ್ಯದ ನಿವೇಶನ ಅಕ್ರಮ ಮಂಜೂರು
5) ಕೆಂಪೇಗೌಡ ಲೇಔಟ್ ನಲ್ಲಿ 30 ಲಕ್ಷ ಮೌಲ್ಯದ ಅಕ್ರಮ ನಿವೇಶನ ಮಂಜೂರು
6) ಒಂದು ನಿವೇಶನವನ್ನ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳಿಗೆ ನೊಂದಣಿ ಈ ಕುರಿತು ತನಿಖೆ
7) ವಿಶ್ವೇಶ್ವರಯ್ಯ ಲೇಔಟ್ ನಲ್ಲಿ 52 ಲಕ್ಷ ಮೌಲ್ಯದ ನಿವೇಶನ ಅಕ್ರಮವಾಗಿ ಮಂಜೂರು
8) ಅರ್ಕಾವತಿ ಲೇಔಟ್ ನಲ್ಲಿ ಪಲಾನುಭವಿಗಳಿಗಲ್ಲದೆ ಬೇರೆಯವರಿಗೆ ನಿವೇಶನ ಮಂಜೂರು
9) ಕೆಂಪೇಗೌಡ ಲೇಔಟ್, ಶಿವರಾಮ ಕಾರಂತ ಲೇಔಟ್, ಮೊದಲಾದ ಕಡೆ ಅಧಿಕಾರಿಗಳು ಮತ್ತು ಮದ್ಯವರ್ತಿಗಳೊಂದಿಗೆ ಅಕ್ರಮವಾಗಿ ಸೈಟ್ ಗಳ ಮಂಜೂರು
10) ಕೋಟ್ಯಾಂತರ ಮೌಲ್ಯದ ಪರಿಹಾರ ಧನ ಸದರಿ ವ್ಯಕ್ತಿಗಳಿಗೆ ನೀಡದೆ ಬೇರೆಯವರಿಗೆ ನೀಡಿರುವುದು ಪತ್ತೆ
11) ಅಂಜನಾಪುರ ಬಡಾವಣೆಯಲ್ಲಿ ಮೂಲ ಮಾಲೀಕನಿಗಲ್ಲದೆ ಬೇರೆಯವರಿಗೆ ನಿವೇಶನ ನೀಡಿರುವ ದಾಖಲೆ ಪತ್ತೆ
12) ಅರ್ಕಾವತಿ ಲೇಔಟ್ ಸೇರಿದಂತೆ ಇತರೆ ಕಡೆ ಅರ್ಜಿದಾರರಿಂದ ಹಣ ಪಡೆದು ನಿವೇಶನ ನೀಡದೆ ತೊಂದರೆ ಕೊಟ್ಟಿರುವ ಅಧಿಕಾರಿಗಳು
13) ಅರ್ಜಿದಾರರಿಗೆ ನಿವೇಶನ ಹಂಚಿಕೆ ಪತ್ರ ನೀಡದೆ ವಿಳಂಬ ಮಾಡಿರುವು ಪತ್ತೆ

ಇದನ್ನೂ ಓದಿ: ಎಸಿಬಿ ದಾಳಿ ಸ್ವಾಗತಿಸುವೆ, ದಾಖಲೆಗಳ ನೀಡಿ ಸಹಕರಿಸುವೆ, ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯಲಿ -ಬಿಡಿಎ ಅಧ್ಯಕ್ಷ ವಿಶ್ವನಾಥ್

ಇದನ್ನೂ ಓದಿ: ಬಿಡಿಎ ಕಡತಗಳ ಒಂದೊಂದು ಹಾಳೆಯನ್ನೂ ಜಾಲಾಡುತ್ತಿರುವ ಎಸಿಬಿ, ಬ್ರೋಕರ್‌ಗಳಿಂದ ತುಂಬಿದ್ದ ಆವರಣದಲ್ಲಿ ಸ್ಮಶಾನ ಮೌನ