ಬೆಂಗಳೂರು: ಪೊಲೀಸ್ ಠಾಣೆಯಲ್ಲೇ ಫಿನಾಯಿಲ್ ಕುಡಿದು ಆರೋಪಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಆರೋಪಿ ಸುಲ್ತಾನ್ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ. ಕಳೆದ ತಿಂಗಳು ಡಿಸೆಂಬರ್ನಲ್ಲಿ ಆರೋಪಿ ಅಬ್ರಾರ್ ಬಾಷ ಅಲಿಯಾಸ್ ಸುಲ್ತಾನ್ ಸರಗಳ್ಳತನ ಮಾಡಿದ್ದನು. ಈ ಹಿನ್ನೆಲೆ ರಾಜಗೋಪಾಲನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆ ತಂದಿದ್ದರು.
ಸುಲ್ತಾನ್ ಶೌಚಾಲಯಕ್ಕೆ ಹೋಗಬೇಕು ಎಂದು ಹೇಳಿದ್ದನು. ಈ ವೇಳೆ ಪೊಲೀಸ್ ಪೇದೆ ಪ್ರಕಾಶ್ ಹ್ಯಾಂಡ್ ಕಪ್ ಹಾಗು ಲೀಡಿಂಗ್ ಚೈನ್ ಹಾಕಿ ಆರೋಪಿಯನ್ನು ಕರೆದೊಯ್ದಿದ್ದರು. ಶೌಚಾಲಯದ ಒಳಗಿದ್ದ ಆರೋಪಿ ಪಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಸಿದ್ದಾನೆ. ಇದನ್ನು ನೋಡಿದ ಪೇದೆ ತಕ್ಷಣ ಬಾಟಲ್ ಕಿತ್ತೆಸೆದಿದ್ದಾರೆ. ನಂತರ ಆರೋಪಿ ಸುಲ್ತಾನನ್ನು ಹೆಗ್ಗನಹಳ್ಳಿ ಜೈಮಾರುತಿ ಅಸ್ಪತ್ರೆಗೆ ದಾಖಲಿಸಿದ್ದಾರೆ.
ಯುವತಿಗೆ ಮೆಸೇಜ್ ಮಾಡಿದ್ದೇ ಯುವಕನಿಗೆ ಕಂಟಕವಾಯ್ತಾ? ಸೋದರ ಮಾವನಿಂದ ಕೊಲೆ ಆರೋಪ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯುವಕನೊಬ್ಬ ನಾಪತ್ತೆಯಾಗಿದ್ದು ಯುವಕನ ಕುಟುಂಬಸ್ಥರು ತಮ್ಮ ಮಗನನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಯುವತಿ ವಿಚಾರಕ್ಕೆ ಯುವಕನ ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮತ್ತಿಕೆರೆ ನಿವಾಸಿ ಗೋವಿಂದರಾಜು(19) ನಾಪತ್ತೆಯಾದ ಯುವಕ.
ನಾಪತ್ತೆಯಾದ ಯುವಕ ಗೋವಿಂದರಾಜು ಹಾಗೂ ಆರೋಪ ಕೇಳಿ ಬರುತ್ತಿರುವ ಯುವತಿ ಇಬ್ಬರೂ ಸಂಬಂಧಿಕರೇ ಆಗಿದ್ದಾರೆ. ಗೋವಿಂದರಾಜು ಯುವತಿಗೆ ಮೆಸೇಜ್ ಮಾಡಿದ್ದನಂತೆ. ಹೀಗಾಗಿ ಯುವತಿಯ ಸೋದರ ಮಾವ ಗೋವಿಂದರಾಜುನನ್ನು ಕರೆಸೆ ಮೆಸೇಜ್ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಬಳಿಕ ಆತನನ್ನು ಕರೆದೊಯ್ದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಳಿಕ ಬ್ಯಾಡರಹಳ್ಳಿಯ ತೋಟದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಗೋವಿಂದರಾಜು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ವೃತ್ತಿಯಲ್ಲಿ ಪೇಂಟರ್ ಆಗಿರುವ ಗೋವಿಂದರಾಜು ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಯುವತಿಯ ಹಿಂದೆ ಬಿದ್ದಿದ್ದನಂತೆ. ಸದ್ಯ ಪೊಲೀಸರಿಗೆ ಪೋಷಕರು ಘಟನೆಯ ಸಂಬಂಧ ಇರುವ ಅನುಮಾನದ ಬಗ್ಗೆ ಮಾಹಿತಿ ನೀಡಿದ್ದು ಮಾಹಿತಿ ಆಧರಿಸಿ ಯಶವಂತಪುರ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದಾರೆ. ನಾಪತ್ತೆಯಾದ ಗೊವಿಂದರಾಜು ಎಲ್ಲಿ ಇದ್ದಾನೆ ಎಂಬುವುದು ಯಾರಿಗೂ ತಿಳಿದಿಲ್ಲ.
ಘಟನೆ ಸಂಬಂಧ ಮಾತನಾಡಿದ ಗೊವಿಂದರಾಜು ತಾಯಿ ರಂಗಮ್ಮ, ನಿನ್ನೆ ಮಧ್ಯಾಹ್ನ ಕರೆ ಮಾಡಿದ್ದೆ ಆಗ ಮನೆಯಲ್ಲೇ ಇದ್ದೀನಿ ಅಂತ ಹೇಳಿದ್ದ. ನಂತರ ಫೋನ್ ಮಾಡಿದ್ರೆ ಫೋನ್ ಪಿಕ್ ಮಾಡ್ತಿಲ್ಲ. ಅವರ ಅತ್ತೆ ನನಗೆ ಕಾಲ್ ಮಾಡಿದ್ರು. ಏನು ವಿಚಾರ ಅನ್ನೊದು ನನಗೆ ಗೊತ್ತಿಲ್ಲ. ಆದ್ರೆ ಅವರು ನಿನ್ನ ಮಗನ ಹೊಡೆದು ಸಾಯಿಸ್ತಾನೆ ಅಂತ ಹೇಳಿದ್ರು. ಆಮೇಲೆ ಮತ್ತೆ ನಾನು ಕೇಳಿದಾಗ ಸಾಯಂಕಾಲ ಕಳುಹಿಸುತ್ತೀವಿ ಅಂದ್ರು. ಆದ್ರೆ ಮಗ ಬರಲಿಲ್ಲ. ಹಾಗಾಗಿ ನಾನು ಸಂಜೆ ಠಾಣೆಗೆ ಬಂದು ದೂರು ಕೊಟ್ಟಿದ್ದೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:12 am, Tue, 31 January 23