ಬೆಸ್ಕಾಂಗೆ ನಕಲಿ ನೇಮಕಾತಿ ಮಾಡಿದ್ದ ಅರೋಪಿಗಳು ಅರೆಸ್ಟ್

|

Updated on: Jun 04, 2023 | 9:54 AM

ಲಕ್ಷಾಂತರ ರೂಪಾಯಿ ಹಣ ಪಡೆದು ಬೆಸ್ಕಾಂಗೆ ನಕಲಿ ನೇಮಕಾತಿ ಮಾಡಿದ್ದ ಐವರು ಆರೋಪಿಗಳನ್ನು ಬೆಂಗಳೂರು ನಗರದ ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬೆಸ್ಕಾಂಗೆ ನಕಲಿ ನೇಮಕಾತಿ ಮಾಡಿದ್ದ ಅರೋಪಿಗಳು ಅರೆಸ್ಟ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಲಕ್ಷಾಂತರ ರೂಪಾಯಿ ಹಣ ಪಡೆದು ಬೆಸ್ಕಾಂಗೆ (BESCOM) ನಕಲಿ ನೇಮಕಾತಿ ಮಾಡಿದ್ದ ಐವರು ಆರೋಪಿಗಳನ್ನು ಬೆಂಗಳೂರು (Bangalore) ನಗರದ ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ವೈಭವ್, ಶಿವಪ್ರಸಾದ್, ವಿಜಯ್ ಕುಮಾರ, ಪ್ರದೀಪ್, ಪುರುಷೋತ್ತಮ ಬಂಧಿತ ಅರೋಪಿಗಳಾಗಿದ್ದಾರೆ. ಇಪ್ಪತ್ತು ಲಕ್ಷ ಹಣಕ್ಕೆ ನಕಲಿ ನೇಮಕಾತಿ ಮಾಡಿ ವ್ಯಕ್ತಿಗಳಿಗೆ ವಂಚಿಸದ ಆರೋಪದಡಿ ಬಂಧಿಸಲಾಗಿದೆ.

ಬೆಂಗಳೂರಿನ ವಿದ್ಯುತ್ ಕಂಪನಿ ಅಧೀಕ್ಷಕರ ಹೆಸರಲ್ಲಿ ನೇಮಕಾತಿ ಆರ್ಡರ್ ನೀಡಿದ ಆರೋಪಿಗಳು, ಬೆಸ್ಕಾಂ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ ಹೆಸರಲ್ಲಿ ನಕಲಿ ಸೀಲು ಹಾಕಿ ಹಣ ಕೊಟ್ಟ ಉದ್ಯೋಗ ಆಕಾಂಕ್ಷಿಗಳಿಗೆ ನೀಡಿದ್ದಾರೆ. ಅದರಂತೆ ನೇಮಕಾತಿ ಆದೇಶ ಪತ್ರ ಹಿಡಿದ ಕೆಸಲಕ್ಕೆ ಸೇರಕೆಂದು ಕಚೇರಿಗೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಡ್ರಗ್ ಪೆಡ್ಲರ್​ಗಳ ವಿರುದ್ಧ ಸಮರ ಸಾರಿದ ಬೆಂಗಳೂರು ಪೊಲೀಸರು: 200ಕ್ಕೂ ಹೆಚ್ಚು ಜನ ವಶ

ಬಂಧಿತ ವೈಭವ್ ಎಂಬಾತ ಆನಂದ್ ರಾವ್ ಸರ್ಕಲ್​ನಲ್ಲಿ ಇರುವ ಬೆಂಗಳೂರು ವಿದ್ಯುತ್ ಕಂಪನಿಯಲ್ಲಿ ಕೆಲಸಕ್ಕೆ ರಿಪೋರ್ಟ್ ಮಾಡಿಕೊಳ್ಳಲು ಬಂದಿದ್ದ. ಆದೇಶ ಪ್ರತಿ ನೋಡಿದಾಗ ಈ ರೀತಿ ಕಿರಿಯ ಸಹಾಯಕ ಹುದ್ದೆಗೆ ನೇಮಕಾತಿ ಆಗಿಲ್ಲಾ ಎಂದು ತಿಳಿಸಲಾಗಿದೆ. ನಂತರ ಆದೇಶ ಪ್ರತಿ ಪರಿಶೀಲನೆ ಮಾಡಿದಾಗ ಅದೊಂದು ನಕಲಿ ಆದೇಶ ಎಂದು ತಿಳಿದುಬಂದಿದೆ.

ಸರ್ಕಾರದ ಸೀಲು, ಅಧಿಕಾರಿಗಳ ಸಹಿ ಎಲ್ಲವನ್ನು ನಕಲಿಯಾಗಿ ಸೃಷ್ಟಿ ಮಾಡಲಾಗಿತ್ತು. ಈ ಬಗ್ಗೆ ಹೌಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಐವರನ್ನು ಬಂಧಿಸಿದ್ದು, ಅರೋಪಿಗಳು ಇನ್ನು ಹಲವರಿಗೆ ನಕಲಿ ನೇಮಕಾತಿ ಮಾಡಿರುವ ಶಂಕೆ ಹಿನ್ನೆಲೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ಕ್ರೈಂ ನ್ಯೂಸ್​ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ