AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Children Helpline Number: ಮಕ್ಕಳ ಸಹಾಯವಾಣಿ ಸಂಖ್ಯೆ ಬದಲಾಯಿಸಿದ ಕೇಂದ್ರ, ಪೋಲಿಸ್ ಇಲಾಖೆ ಸಹಾಯವಾಣಿಗೆ ಮರ್ಜ್

ದೇಶಾದ್ಯಂತ ದಶಕಗಳಿಂದ ಮಕ್ಕಳ ಸಹಾಯವಾಣಿ 1098 ಉಪಯೋಗಿಸಲಾಗುತ್ತಿತ್ತು. ಇದೀಗ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಂಬರ್ ಸ್ಥಗಿತಗೊಳಿಸಲು ಮುಂದಾಗಿದೆ. ಅಂದಹಾಗೇ ಮಕ್ಕಳ ರಕ್ಷಣೆ ಮಾಡಲು 1996 ರಲ್ಲಿ ಸಹಾಯವಾಣಿ ನಂಬರ್ ಚಾಲ್ತಿಗೆ ಬಂತು.

Children Helpline Number: ಮಕ್ಕಳ ಸಹಾಯವಾಣಿ ಸಂಖ್ಯೆ ಬದಲಾಯಿಸಿದ ಕೇಂದ್ರ, ಪೋಲಿಸ್ ಇಲಾಖೆ ಸಹಾಯವಾಣಿಗೆ ಮರ್ಜ್
ಸಾಂದರ್ಭಿಕ ಚಿತ್ರ
Poornima Agali Nagaraj
| Edited By: |

Updated on: Jun 04, 2023 | 8:25 AM

Share

ಬೆಂಗಳೂರು: ಹಲವು ವರ್ಷಗಳಿಂದ 1098 ಮಕ್ಕಳ ಸಹಾಯವಾಣಿ ನಂಬರ್ ಆಗಿತ್ತು. ಆದ್ರೆ ಇನ್ಮುಂದೆ ಈ ನಂಬರ್ ಬದಲಾಗಲಿದೆ. ರಾಜಾಧಾನಿಯಲ್ಲಿ ಹಲವು ವರ್ಷಗಳಿಂದ ಮಕ್ಕಳ ಸಹಾಯವಾಣಿಗೆಂದೇ ಒಂದು ನಂಬರ್ ನಿಗದಿ ಪಡಿಸಲಾಗಿತ್ತು. ಆದ್ರೆ ಇನ್ಮುಂದೆ ಈ ನಂಬರ್ ಬದಲಾಗಲಿದೆ. ಹೌದು, ಇನ್ಮುಂದೆ 1098 ಮಕ್ಕಳ ಸಹಾಯವಾಣಿ ನಂಬರ್ ಇತಿಹಾಸದ ಪುಟ ಸೇರಲಿದೆ. ಮಕ್ಕಳ ಸಹಾಯವಾಣಿ ನಂಬರ್ ಪೋಲಿಸ್ ಇಲಾಖೆಯ ಸಹಾಯವಾಣಿ ನಂಬರ್ ನೊಂದಿಗೆ ಮರ್ಜ್ ಆಗಲಿದೆ ಅಂತ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿದೆ‌.

ದೇಶಾದ್ಯಂತ ದಶಕಗಳಿಂದ ಮಕ್ಕಳ ಸಹಾಯವಾಣಿ 1098 ಉಪಯೋಗಿಸಲಾಗುತ್ತಿತ್ತು. ಇದೀಗ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಂಬರ್ ಸ್ಥಗಿತಗೊಳಿಸಲು ಮುಂದಾಗಿದೆ. ಅಂದಹಾಗೇ ಮಕ್ಕಳ ರಕ್ಷಣೆ ಮಾಡಲು 1996 ರಲ್ಲಿ ಸಹಾಯವಾಣಿ ನಂಬರ್ ಚಾಲ್ತಿಗೆ ಬಂತು. ಅಂದಿನಿಂದ ಇಲ್ಲಿ ತನಕ ಸಹಾಯ ವಾಣಿ ಕೆಲಸ ನಿರ್ವಹಣೆಯಾಗುತ್ತಿತ್ತು. ಇದೀಗ ಪೊಲೀಸ್ ಸುರ್ಪದಿಗೆ ಮಕ್ಕಳ ಸಹಾಯವಾಣಿ ಬಂದಿದೆ. ಆದ್ರೆ ನಂಬರ್ ಬದಲಾವಣೆಯ ಬಗ್ಗೆ ಮಕ್ಕಳ ಹಕ್ಕುಗಳ ಹೋರಾಟಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದ ಬಿಬಿಎಂಪಿ, ನಾಗರಿಕರು ನೋಂದಣಿ ಯಾವಾಗ ಮಾಡಿಕೊಳ್ಳಬಹುದು? ಇಲ್ಲಿದೆ ಮಾಹಿತಿ

ಹೌದು, ಮಕ್ಕಳ ಸಹಾಯವಾಣಿ ನಂಬರ್ ಅನ್ನ ಪೊಲೀಸ್ ಇಲಾಖೆಯ ಅಡಿಗೆ ನೀಡುತ್ತಿರುವುದು ಸಂತೋಷ. ಆದ್ರೆ ಮಕ್ಕಳ ಸಹಾಯವಾಣಿ ನಂಬರ್ ನಲ್ಲಿ ಸಾಕಷ್ಟು ಜನ ಸಿಬ್ಬಂದಿಗಳು ಕೆಲಸ ಮಾಡ್ತಿದ್ದಾರೆ. ಅವರೆಲ್ಲರೂ ನಿಪುಣರಾಗಿದ್ರು. ಇದೀಗಾ ಅವರೆಲ್ಲ ಉದ್ಯೋಗವನ್ನ ಕಳೆದುಕೊಳ್ತಾರೆ. ಜೊತೆಗೆ ಮಕ್ಕಳ ಹುಡುಕಾಟ, ರಕ್ಷಣೆ ತಕ್ಷಣಕ್ಕೆ ಮಾಡುತ್ತಿದ್ರು. ಇದೀಗಾ ಸಹಾಯವಾಣಿಯನ್ನೆ ನಂಬಿರುವ ಸಾವಿರಾರು ಎನ್.ಜಿ.ಒಗಳಿಗೆ ಕೆಲಸ ಸಿಗದೇ ಬೀದಿಗೆ ಬರಲಿದ್ದಾರೆ‌. ಮಕ್ಕಳ ಸಹಾಯವಾಣಿ ನಂಬರ್ ಎಲ್ಲಾ ಶಾಲೆಗಳ ಗೋಡೆ ಮೇಲೆ ಬರೆಯಲಾಗಿದೆ. ಅಲ್ಲದೆ ಎಲ್ಲಾರಿಗೂ ಚಿರಪರಿಚಿತ ಸಂಖ್ಯೆ. ಮಕ್ಕಳ ಸಹಾಯವಾಣಿ ನಂಬರ್ ಗೆ ಕರೆ ಮಾಡಿದ್ರೆ ನೇರವಾಗಿ ಕನೆಕ್ಟ್ ಆಗ್ತಿತ್ತು. ಆದ್ರೆ ಪೊಲೀಸ್ ಇಲಾಖೆ ಸೇರಿಸಿರುವ ಸಂಖ್ಯೆ 122 ಕಾಲ್ ಮಾಡಿದ್ರೆ ಅಪ್ಶನ್ ಕೇಳುತ್ತೆ. ಹೀಗಾಗಿ ಸಾಕಷ್ಟು ಗೊಂದಲ ಉಂಟಾಗುತ್ತೆ. ಕೂಡಲೇ ಸರ್ಕಾರ ಮೊದಲಿದ್ದ ನಂಬರೇ ಇರುವಂತೆ ಒತ್ತಾಯ ಮಾಡಲಾಗುತ್ತಿದೆ.

ಒಟ್ನಲ್ಲಿ, ಸಹಾಯವಾಣಿ ನಂಬರ್ ಏನೋ ಬದಲಾಗಲಿದೆ. ಆದ್ರೆ ಬದಲಾವಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಬಗ್ಗೆ ಮಕ್ಕಳ ರಕ್ಷಣ ಹಕ್ಕುಗಳ ಆಯೋಗ ಕ್ರಮ ತೆಗದುಕೊಳ್ಳಬೇಕಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ