ಡ್ರಗ್ ಪೆಡ್ಲರ್‌ಗಳ ವಿರುದ್ಧ ಸಮರ ಸಾರಿದ ಬೆಂಗಳೂರು ಪೊಲೀಸರು: 200ಕ್ಕೂ ಹೆಚ್ಚು ಜನ ವಶ
ಬೆಂಗಳೂರು ನಗರ ಪೊಲೀಸರು ಡ್ರಗ್ಸ್ ದಂಧೆ ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದು, ಕಳೆದ 2-3 ದಿನಗಳಿಂದ ನಗರದ ಶಾಲಾ-ಕಾಲೇಜು, ಪಿಜಿ ಸುತ್ತಮುತ್ತ ಪ್ರದೇಶಗಳಲ್ಲಿ ದಾಳಿ ಮಾಡಿದ್ದಾರೆ. ಇದೀಗ ಶಾಲಾ-ಕಾಲೇಜು ಆರಂಭವಾದ ಹಿನ್ನೆಲೆ ಇಂದು (ಜೂ.02) ಹಿನ್ನೆಲೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಡ್ರಗ್ ಪೆಡ್ಲರ್ಗಳು (Drug Peddler) ಬೆಂಗಳೂರು ಪೊಲೀಸರ (Bengaluru Police) ನಿದ್ದೆಗೆಡಿಸಿದ್ದಾರೆ. ಡ್ರಗ್ಸ್ (Drugs) ಜಾಲವನ್ನು ಭೇದಿಸಲು ಪೊಲೀಸರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಈ ಸಂಬಂಧ ಅನೇಕ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಈ ಡ್ರಗ್ಸ್ ಹೆಚ್ಚಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳೇ (School-College Students) ಆಡಿಟ್ ಆಗುತ್ತಿದ್ದು, ಆಘಾತಕಾರಿ ಅಂಶವಾಗಿದೆ. ಹೀಗಾಗಿ ಈ ನಿಟ್ಟಿನಲ್ಲಿ ನಗರ ಪೊಲೀಸರು ಡ್ರಗ್ಸ್ ದಂಧೆ ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದು, ಕಳೆದ 2-3 ದಿನಗಳಿಂದ ನಗರದ ಶಾಲಾ-ಕಾಲೇಜು, ಪಿಜಿ ಸುತ್ತಮುತ್ತ ಪ್ರದೇಶಗಳಲ್ಲಿ ದಾಳಿ ಮಾಡಿದ್ದಾರೆ. ಶಾಲಾ-ಕಾಲೇಜು ಆರಂಭವಾದ ಹಿನ್ನೆಲೆ ಇಂದು (ಜೂ.02) ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ನಗರದ ಎಲ್ಲಾ ವಿಭಾಗದ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದು, ನಗರದ 250ಕ್ಕೂ ಹೆಚ್ಚು ಪ್ರದೇಶಗಳಲ್ಲಿ ದಾಳಿ ನಡೆಸಿ ಗಾಂಜಾ, ಎಂಡಿಎಂಎ ಸೇರಿದಂತೆ ಹಲವಾರು ಮಾದರಿಯ ಡ್ರಗ್ಸ್ಗಳನ್ನು ಜಪ್ತಿ ಮಾಡಿದ್ದಾರೆ.
ಅಲ್ಲದೇ 100ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ಸುಮಾರು 200ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರು 15 ಕೆಜಿಗೂ ಹೆಚ್ಚು ಗಾಂಜಾ, ಎಮ್ಡಿಎಮ್ಎ ಅನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ 19 ಪೆಡ್ಲರ್‌ಗಳ ಬಂಧನ: 7 ಕೋಟಿ ರೂ. ಅಧಿಕ ಮೌಲ್ಯದ ಡ್ರಗ್ಸ್ ಜಪ್ತಿ
ಮಾದಕ ವಸ್ತು ಸೇವಿಸುತ್ತಿದ್ದ 18 ಜನ ಸೇರಿ 3 ಡ್ರಗ್ ಪೆಡ್ಲರ್‌ಗಳ ಬಂಧನ
ಜೂನ್ 1 ರಂದು ನಗರದ ವಿವಿಧೆಡೆ ದಾಳಿ ನಡೆಸಿದ್ದ ಪೊಲೀಸರು ಗಾಂಜಾ, ಇತರೆ ಮಾದಕ ವಸ್ತು ಸೇವಿಸುತ್ತಿದ್ದ 18 ಜನ ಸೇರಿ 3 ಡ್ರಗ್ ಪೆಡ್ಲರ್‌ಗಳ ಬಂಧಿಸಿದ್ದರು. ಡ್ರಗ್ ಪೆಡ್ಲರ್‌ಗಳ ಬಳಿಯಿದ್ದ 2.5 ಕೆಜಿ ಗಾಂಜಾ, 11 ಗ್ರಾಂ ಎಂಡಿಎಂಎ, 7 ಗ್ರಾಂ ಹೈಡ್ರಾ ಮ್ಯಾಂಗೋ ವಶಕ್ಕೆ ಪಡೆದಿದ್ದರು.
ಕಾಲೇಜು, ಪಿಜಿಗಳ ಬಳಿ ಡ್ರಗ್ ಮಾರಾಟ: ಡ್ರಗ್ ಪೆಡ್ಲರ್ ಬಂಧನ
ನಗರದ ಕಾಲೇಜು, ಪಿಜಿಗಳ ಬಳಿ ಡ್ರಗ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮೇ.31 ರಂದು ಪೊಲೀಸರು ಬಂಧಿಸಿದ್ದರು. ಫಯಾಜ್ ಪಾಷಾ ಅಲಿಯಾಸ್ ಪಿಲ್ಲು ಬಂಧಿತ ಡ್ರಗ್ ಪೆಡ್ಲರ್. ಗುಬ್ಬಲಾಳ ಬಳಿಯ ಖಾಲಿ ಜಾಗವೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ತಲಘಟ್ಟಪುರ ಠಾಣಾ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು.
ಬಂಧಿತ ಆರೋಪಿ ಪಿಲ್ಲುನಿಂದ 10.50 ಲಕ್ಷ ಮೌಲ್ಯದ 15 ಕೆಜಿ ಗಾಂಜಾ, ನಗದು ಮತ್ತು ಬೈಕ್ ಜಪ್ತಿ ಮಾಡಿದ್ದರು. ಆರೋಪಿ ವಿರುದ್ಧ ಬನಶಂಕರಿ, ಜಯನಗರ, ಕೋರಮಂಗಲ, ಕೆ.ಎಸ್.ಲೇಔಟ್ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಸದ್ಯ ಆರೋಪಿಯನ್ನು ಬಂಧಿಸಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:41 am, Fri, 2 June 23