ಕ್ಯಾಬ್ ಅಗ್ರಿಗೇಟರ್‌ಗಳಿಂದ ಹೆಚ್ಚುವರಿ ಶುಲ್ಕ ವಸೂಲಿ; ವಿಚಾರಣೆ ಸೆಪ್ಟೆಂಬರ್ 26ಕ್ಕೆ ಮುಂದೂಡಿದ ಕರ್ನಾಟಕ ಹೈಕೋರ್ಟ್​

ಕ್ಯಾಬ್ ಅಗ್ರಿಗೇಟರ್‌ಗಳು ವಿಧಿಸಬಹುದಾದ ಸೇವಾ ಶುಲ್ಕದ ಪ್ರಮಾಣವನ್ನು ನಿಗದಿಗೊಳಿಸಿ ಮತ್ತು ಕಡ್ಡಾಯಗೊಳಿಸಿ ಕರ್ನಾಟಕ ಸರ್ಕಾರದ ಮೋಟಾರು ವಾಹನ ಇಲಾಖೆಯು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಇದರಿಂದ ವಿನಾಯಿತಿ ಕೋರಿ ಕ್ಯಾಬ್ ಅಗ್ರಿಗೇಟರ್‌ಗಳು ಕರ್ನಾಟಕ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

ಕ್ಯಾಬ್ ಅಗ್ರಿಗೇಟರ್‌ಗಳಿಂದ ಹೆಚ್ಚುವರಿ ಶುಲ್ಕ ವಸೂಲಿ; ವಿಚಾರಣೆ ಸೆಪ್ಟೆಂಬರ್ 26ಕ್ಕೆ ಮುಂದೂಡಿದ ಕರ್ನಾಟಕ ಹೈಕೋರ್ಟ್​
ಸಾಂದರ್ಭಿಕ ಚಿತ್ರ
Edited By:

Updated on: Aug 24, 2023 | 7:34 PM

ಬೆಂಗಳೂರು, ಆಗಸ್ಟ್ 24: ಕ್ಯಾಬ್ ಅಗ್ರಿಗೇಟರ್‌ಗಳು ವಿಧಿಸುತ್ತಿರುವ ಹೆಚ್ಚುವರಿ ದರಕ್ಕೆ ಸಂಬಂಧಿಸಿದ ಮುಂದಿನ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ (Karnataka High Court) ಸೆಪ್ಟೆಂಬರ್ 26 ಕ್ಕೆ ನಿಗದಿಪಡಿಸಿದೆ. ಈ ಮಧ್ಯೆ, ಕರ್ನಾಟಕ ಚಾಲಕ ಒಕ್ಕೂಟ (KCO) ಕೂಡ ಪ್ರಕರಣಕ್ಕೆ ಸಂಬಂಧಿಸಿ ಅರ್ಜಿ ಸಲ್ಲಿಸಿದೆ. ನಾವು ಈ ಪ್ರಕರಣದಲ್ಲಿ ತೊಂದರೆಗೊಳಗಾದವರಾಗಿದ್ದೇವೆ ಮತ್ತು ಆ ಕಾರಣಕ್ಕಾಗಿ ಮನವಿ ಸಲ್ಲಿಸಿದ್ದೇವೆ ಎಂದು ಒಕ್ಕೂಟವನ್ನು ಪ್ರತಿನಿಧಿಸುವ ವಕೀಲ ನಟರಾಜ್ ಶರ್ಮಾ ತಿಳಿಸಿದ್ದಾರೆ.

ಏನಿದು ಪ್ರಕರಣ?

ಕ್ಯಾಬ್ ಅಗ್ರಿಗೇಟರ್‌ಗಳು ವಿಧಿಸಬಹುದಾದ ಸೇವಾ ಶುಲ್ಕದ ಪ್ರಮಾಣವನ್ನು ನಿಗದಿಗೊಳಿಸಿ ಮತ್ತು ಕಡ್ಡಾಯಗೊಳಿಸಿ ಕರ್ನಾಟಕ ಸರ್ಕಾರದ ಮೋಟಾರು ವಾಹನ ಇಲಾಖೆಯು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಇದರಿಂದ ವಿನಾಯಿತಿ ಕೋರಿ ಕ್ಯಾಬ್ ಅಗ್ರಿಗೇಟರ್‌ಗಳು ಕರ್ನಾಟಕ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

ವಿಚಾರಣೆಯ ಆಧಾರದ ಮೇಲೆ, ಕರ್ನಾಟಕ ಹೈಕೋರ್ಟ್ 2022 ರಲ್ಲಿ ಮಧ್ಯಂತರ ಆದೇಶವನ್ನು ನೀಡಿ, ಸೇವಾ ಶುಲ್ಕ ಮೂಲ ದರಕ್ಕಿಂತ ಶೇ 10 ಕ್ಕಿಂತ ಹೆಚ್ಚಿರುವಂತಿಲ್ಲ ಎಂದು ಆದೇಶ ನೀಡಿತ್ತು.

ಆದಾಗ್ಯೂ, ಕ್ಯಾಬ್ ಅಗ್ರಿಗೇಟರ್‌ಗಳು ಹೆಚ್ಚಿನ ಪ್ರಮಾಣದ ಸೇವಾ ಶುಲ್ಕವನ್ನು ವಿಧಿಸುವುದನ್ನು ಮುಂದುವರೆಸಿದ್ದರು. ಹೀಗಾಗಿ ಅವುಗಳು ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ಚಾಲಕ ಒಕ್ಕೂಟದ ಮೂಲವೊಂದು ‘ನ್ಯೂಸ್9’ಗೆ ತಿಳಿಸಿದೆ.

ಇದನ್ನೂ ಓದಿ: ಕರ್ನಾಟಕದ ಸಾಹಿತಿಗಳಿಗೆ ಪದೇ ಪದೇ ಬೆದರಿಕೆ ಪತ್ರ: ಸಿಎಂ ಭೇಟಿ ಬೆನ್ನಲೆ ತನಿಖಾಧಿಕಾರಿ ನೇಮಕಕ್ಕೆ ಸೂಚಿಸಿದ ಪೊಲೀಸ್ ಇಲಾಖೆ

ದುರ್ಬಲವಾದ ಸಾರ್ವಜನಿಕ ಸಾರಿಗೆ ಹಾಗೂ ಮೂಲಸೌಕರ್ಯದ ಕಾರಣ ಬೆಂಗಳೂರಿನ ಪ್ರಯಾಣಿಕರು ಕ್ಯಾಬ್ ಅಗ್ರಿಗೇಟರ್‌ಗಳ ಅನಿಯಂತ್ರಿತ ದರ ಏರಿಕೆಯನ್ನು ಸಹಿಸಬೇಕಾಗಿ ಬಂದಿದೆ. ಈ ಮಧ್ಯೆ, ಕ್ಯಾಬ್ ಅಗ್ರಿಗೇಟರ್‌ಗಳ ಅತಿರೇಕದ ನಡೆಯ ನಡುವೆ ‘ನಮ್ಮ ಯಾತ್ರಿ’ ಎಂಬ ಲಾಭರಹಿತ ಆ್ಯಪ್ ಆಧಾರಿತ ಕ್ಯಾಬ್, ಆಟೋ ಸೌಲಭ್ಯವು ಪ್ರಯಾಣಿಕರನ್ನು ಗಮನಾರ್ಹವಾಗಿ ಸೆಳೆಯುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ