AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗೆ ಶನಿವಾರ ಪ್ರಧಾನಿ ಮೋದಿ ಭೇಟಿ: ಸಾರ್ವಜನಿಕರು, ಕಾರ್ಯಕರ್ತರನ್ನು ಆಹ್ವಾನಿಸಿದ ಬಿಜೆಪಿ ನಾಯಕ ಆರ್​ ಅಶೋಕ್

ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್​ ಇಳಿಯುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದಿಸಲು ಆಗಸ್ಟ್​ 26ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಹಾಗಾಗಿ ಈ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಸಾರ್ವಜನಿಕರು ಮತ್ತು ಕಾರ್ಯಕರ್ತರಿಗೆ ಬಿಜೆಪಿ ನಾಯಕ ಆರ್.ಅಶೋಕ್​ ಮನವಿ ಮಾಡಿದ್ದಾರೆ.

ಬೆಂಗಳೂರಿಗೆ ಶನಿವಾರ ಪ್ರಧಾನಿ ಮೋದಿ ಭೇಟಿ: ಸಾರ್ವಜನಿಕರು, ಕಾರ್ಯಕರ್ತರನ್ನು ಆಹ್ವಾನಿಸಿದ ಬಿಜೆಪಿ ನಾಯಕ ಆರ್​ ಅಶೋಕ್
ಬಿಜೆಪಿ ನಾಯಕ ಆರ್.ಅಶೋಕ್
ಬಿ ಮೂರ್ತಿ, ನೆಲಮಂಗಲ
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 24, 2023 | 8:21 PM

Share

ಬೆಂಗಳೂರು, ಆಗಸ್ಟ್​​ 24: ಆಗಸ್ಟ್ 26ರಂದು ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಮಿಸುತ್ತಿದ್ದಾರೆ. ಜಾಲಹಳ್ಳಿ ಸರ್ಕಲ್​ನಿಂದ ಇಸ್ರೋ ಕಚೇರಿಯವರೆಗೂ ರೋಡ್ ಶೋ ಇರುತ್ತೆ ಎಲ್ಲರೂ ಪಾಲ್ಗೊಳ್ಳುವಂತೆ ಸಾರ್ವಜನಿಕರು ಮತ್ತು ಕಾರ್ಯಕರ್ತರಿಗೆ ಬಿಜೆಪಿ ನಾಯಕ ಆರ್.ಅಶೋಕ್ (R Ashoka)​ ಮನವಿ ಮಾಡಿದ್ದಾರೆ. ಪೀಣ್ಯಾ ಇಸ್ರೋ ಕಚೇರಿ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಗೆ ಹಾಗೂ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಬೆಂಗಳೂರಿನ ಜನ ಬರಬೇಕೆಂದು ಆಮಂತ್ರಣ ಕೋರುತ್ತಿದ್ದೇನೆ ಎಂದು ಹೇಳಿದರು.

ಪೀಣ್ಯದ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಸೆಂಟರ್​ಗೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸ್ಥಳೀಯ ಶಾಸಕರಾದ ಎಸ್ .ಆರ್.ವಿಶ್ವನಾಥ್​ ಮತ್ತು ಎಸ್. ಮುನಿರಾಜ್​​ ಸೇರಿಕೊಂಡು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ.

ಈ ಕಾರ್ಯಕ್ರಮ ಯಶಸ್ವಿಯಾಗಲೆಂದು ಎಲ್ಲರಿಗೂ ಆಮಂತ್ರಣ ನೀಡಲಾಗಿದೆ. ದಯವಿಟ್ಟು ಎಲ್ಲರೂ ಬೆಳಗ್ಗೆ 5:45 ಗಂಟೆಗೆ ಬಂದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೋ ವಿಜ್ಞಾನಿಗಳನ್ನು ನೋಡಬಹುದು ಎಂದರು.

ಇದನ್ನೂ ಓದಿ: ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 26 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ: ಆರ್ ಅಶೋಕ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 5:00 ಗಂಟೆಗೆ ಎಚ್ಎಎಲ್​ಗೆ ಬರುತ್ತಾರೆ. ಅಲ್ಲಿಂದ ಮಾರ್ಗದ ಮುಖಾಂತರವಾಗಿ ಇಸ್ರೋಗೆ ತಲುಪುತ್ತಾರೆ. ಐದೂವರೆ ಗಂಟೆಗೆ ಬರುವುದರಿಂದ ಎಲ್ಲಾ ಜನರು 5:30ಒಳಗೆ ಬರಬೇಕು. ಮೋದಿ ಅವರನ್ನ ಸ್ವಾಗತಿಸಬೇಕು. ಬೆಂಗಳೂರಿನ ನಗರ ಜಿಲ್ಲೆಯಿಂದ ಎಲ್ಲರನ್ನ ಬರಲು ಹೇಳಿದ್ದೇವೆ ಎಂದು ಹೇಳಿದರು.

ಬೆಂಗಳೂರು ಪೊಲೀಸ್ ಕಮಿಷನರ್​ ದಯಾನಂದ್​ ನೇತೃತ್ವದಲ್ಲಿ ಸಭೆ

ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಬೆಂಗಳೂರು ಪೊಲೀಸ್ ಕಮಿಷನರ್​ ದಯಾನಂದ್​ ನೇತೃತ್ವದಲ್ಲಿ ಇಂದು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತರು, ಡಿಸಿಪಿಗಳ ಜೊತೆ ಭದ್ರತೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚಿಸಲಾಗಿದೆ. HAL ಏರ್​ಪೋರ್ಟ್​ಗೆ ಆಗಮಿಸಿ ನಂತರ ರಸ್ತೆ ಮಾರ್ಗವಾಗಿ ಇಸ್ರೋ ಸೆಂಟರ್​​ಗೆ ಪ್ರಧಾನಿ ಮೋದಿ ತೆರಳಲಿದ್ದು, ಹೀಗಾಗಿ ಪ್ರಧಾನಿ ಸಂಚರಿಸುವ ಮಾರ್ಗದ ಬಗ್ಗೆ ಅಧಿಕಾರಿಗಳ ಜೊತೆ​ ಚರ್ಚೆ ಮಾಡಲಾಗಿದೆ.

ಕೆಳಕಂಡ ರಸ್ತೆ ಮಾರ್ಗ ಬದಲಾವಣೆ

ಆಗಸ್ಟ್ 26 ಬೆಳಗ್ಗೆ 4:30 ರಿಂದ ಬೆಳಗ್ಗೆ 9:30ರ ವರೆಗೆ ಕೆಳಕಂಡ ರಸ್ತೆ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಈ ರಸ್ತೆಗಳ ಬದಲಾಗಿ ಪರ್ಯಾಯ ಮಾರ್ಗ ಬಳಕೆಗೆ ಪೋಲಿಸರು ಮನವಿ ಮಾಡಿದ್ದಾರೆ. ಓಲ್ಡ್ ಏರ್ಪೋರ್ಟ್ ರಸ್ತೆ, ಓಲ್ಡ್‌ ಮದ್ರಾಸ್ ರಸ್ತೆ, ಎಂ.ಜಿ.ರಸ್ತೆ,ಕಬ್ಬನ್ ರಸ್ತೆ, ರಾಜಭವನ ರಸ್ತೆ, ಬಳ್ಳಾರಿ ರಸ್ತೆ (ಮೇಖ್ರಿ ಸರ್ಕಲ್), ಸಿವಿ ರಾಮನ್ ರಸ್ತೆ, ಯಶವಂತಪುರ ಫ್ಲೈ ಓವರ್, ತುಮಕೂರು ರಸ್ತೆ (ಯಶವಂತಪುರದಿಂದ ನಾಗಸಂದ್ರದವರೆಗೆ), ಮಾಗಡಿ ರಸ್ತೆ, ಹೊರವರ್ತುಲ ರಸ್ತೆ (ಗೊರಗುಂಟೆ ಪಾಳ್ಯ ಜಂಕ್ಷನ್‌ನಿಂದ ಸುಮನಹಳ್ಳಿ) ಗುಬ್ಬಿ ತೋಟದಪ್ಪ ರಸ್ತೆ, ಜಾಲಹಳ್ಳಿ ಕ್ರಾಸ್‌ ರಸ್ತೆ.

ನಗರದೊಳಗೆ ಆಗಸ್ಟ್ 26ರ ಬೆಳಗಿನ ಜಾವ 04.00 ಗಂಟೆಯಿಂದ ಬೆಳಗ್ಗೆ 11.00 ಗಂಟೆಯವರೆಗೆ ಭಾರೀ ಸರಕು ಸಾಗಾಣಿಕೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:20 pm, Thu, 24 August 23