AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲೊಂದು ವಿಚಿತ್ರ ಪ್ರಕರಣ: ಕೆಲಸ ಇಲ್ಲದೆ ಖಾಲಿ ಕೂತ ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಪೇಚಿಗೆ ಸಿಲುಕಿದ ಮಹಿಳೆ

ಗಂಡ ಕೆಲಸಕ್ಕೆ ಹೋಗದೇ ಊಟ ಮಾಡಿಕೊಂಡು ಮನೆಯಲ್ಲೇ ಇರುತ್ತಿದ್ದ. ಇದರಿಂದ ಹೆಂಡ್ತಿ ಬೇಸರಗೊಂಡಿದ್ದಳು. ಕೊನೆ ಗಂಡನಿಗೆ ಸಂಸಾರದ ಕಷ್ಟ ಏನೆಂದು ಅರಿವು ಮೂಡಿಸಲು ಹೋಗಿ ಮಹಿಳೆ ಪೊಲೀಸರ ಅತಿಥಿಯಾಗಿದ್ದಾಳೆ. ಇನ್ನು ಏನು ಗೊತ್ತಿಲ್ಲದ ಇಬ್ಬರು ಯುವಕರು ಮಹಿಳೆ ಹೇಳಿದಂತೆ ಕೇಳಿ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಪತ್ನಿ ಪೇಚಿಗೆ ಸಿಲುಕಿದ ವಿಚಿತ್ರ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲೊಂದು ವಿಚಿತ್ರ ಪ್ರಕರಣ: ಕೆಲಸ ಇಲ್ಲದೆ ಖಾಲಿ ಕೂತ ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಪೇಚಿಗೆ ಸಿಲುಕಿದ ಮಹಿಳೆ
ಬಂಧಿತ ಆರೋಪಿಗಳು
Jagadisha B
| Edited By: |

Updated on: Aug 25, 2023 | 10:04 AM

Share

ಬೆಂಗಳೂರು, (ಆಗಸ್ಟ್ 25): ಕೆಲಸ ಇಲ್ಲದೆ ಖಾಲಿ ಇದ್ದ ಗಂಡನಿಗೆ(Husband) ಬುದ್ಧಿ ಕಲಿಸಲು ಹೋಗಿ ಮಹಿಳೆ (Woman) ಪೇಚಿಗೆ ಸಿಲುಕಿರುವ ಅಪರೂಪದ ಘಟನೆ ಬೆಂಗಳೂರಿನಲ್ಲಿ(Bengaluru) ಬೆಳಕಿಗೆ ಬಂದಿದೆ. ಕಷ್ಟ ಎಂದು ಗೊತ್ತಾದರೆ ಪತಿ ಕೆಲಸಕ್ಕೆ ಆದರೂ ಹೋಗಬಹುದು ಎಂದು ಮಹಿಳೆ ತನ್ನ ಬಂಗಾರ ಕಳ್ಳತನವಾಗಿದೆ ಎಂದು ನಾಟಕ ಮಾಡಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಹೌದು.. ತನ್ನ ಚಿನ್ನವನ್ನ ಸ್ನೇಹಿತನಿಗೆ ಹೇಳಿಸಿ ಕಳುವು ಮಾಡಿಸಿ ನಾಟಕವಾಡಿದ್ದ ಮಹಿಳೆ ಬಳಿಕ ತಾನೇ ಕಳ್ಳತನವಾಗಿದೆ ಎಂದು ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ. ಬಳಿಕ ಪೊಲೀಸರ ತನಿಖೆ ವೇಳೆ ಪತಿಗೆ ಬುದ್ಧಿ ಕಲಿಸಲು ಮಹಿಳೆ ಮಾಡಿದ್ದ ಕಳ್ಳಾಟ ಬಟಾಬಯಲಾಗಿದೆ.

ಬ್ಯಾಂಕ್ ನಿಂದ 109ಗ್ರಾಂ ಚಿನ್ನವನ್ನ ಬಿಡಿಸಿಕೊಂಡು ಗಾಡಿಯ ಡಿಕ್ಕಿಲ್ಲಿಟ್ಟುಕೊಂಡು ಬಂದಿದ್ದ ಮಹಿಳೆ, ಮಕ್ಕಳನ್ನು ಶಾಲೆಯಿಂದ ಟ್ಯೂಷನ್​ಗೆ ಬಿಟ್ಟಿದ್ದಳು. ಅದಾದ ಬಳಿಕ ಅತ್ತಿಗೆ ಮನೆಗೆ ತೆರಳಿದ್ದಳು. ನಂತರ ಮತ್ತದೇ ಮಲ್ಲೇಶ್ವರಂನ 13ನೇ ಕ್ರಾಸ್ ನಲ್ಲಿರುವ ಟ್ಯೂಷನ್ ಬಳಿ ಬಂದಿದ್ದಳು. ಈ ವೇಳೆ ಸ್ಕೂಟರ್ ನ ಫುಟ್ ಮ್ಯಾಟ್ ಬಳಿ ಗಾಡಿ ಕಿ ಇಟ್ಟಿದ್ದಳು. ಇದಾದ ಬಳಿಕ ತನ್ನ ಗೆಳೆಯ ಧನಂಜಯ್ ಎಂಬಾತನಿಗೆ ಕೆರೆ ಮಾಡಿದ್ದಳು. ಆಕೆಯೇ ಲೊಕೇಷನ್ ಕಳಿಸಿ ಕಳ್ಳತನ ಮಾಡಲು ಹೇಳಿದ್ದಳು. ಬಳಿಕ ಆಕೆ ಹೇಳಿದಂತೆ ಮತ್ತೋರ್ವ ರಾಕೇಶ್ ಎಂಬಾತನ ಜೊತೆ ಬಂದು ಬೈಕ್ ಸಮೇತ ಚಿನ್ನ ತೆಗೆದುಕೊಂಡು ಹೊಗಿದ್ದ.

ಇದನ್ನೂ ಓದಿ: ಕ್ವಾರ್ಟರ್ ಎಣ್ಣೆ ಕುಡಿಸಿ ಹೊಸ ಆಟೊ ಕದ್ದುಹೋಗಿದ್ದ ಅಡುಗೆ ಭಟ್ಟನನ್ನು ಪೀಣ್ಯ ಪೊಲೀಸರು ಲಾಕ್ ಮಾಡಿದರು!

ಬಳಿಕ ಮಲ್ಲೇಶ್ವರಂ ಪೊಲೀಸ್​ ಠಾಣೆಗೆ ತೆರಳಿ, ಬೈಕ್​ ಸಮೇತ ಚಿನ್ನವನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದು, ವಾಕಿಂಗ್ ಮಾಡಿ ಬಂದು ನೋಡಿದಾಗ ಗಾಡಿ ಇರಲಿಲ್ಲ ಎಂದಿದ್ದಾಳೆ. ನಂತರ ಕಾರ್ಯಪ್ರವೃತರಾದ ಪೊಲೀಸರು, ಸಿಸಿಟಿವಿ ಪರಿಶೀಲಿಸಿ ಧನಂಜಯ್ ಹಾಗೂ ರಾಕೇಶ್ ಬಂಧಿಸಿ ವಿಚಾರಣೆಗೊಳಪಡಿಸಿದಾಗ ದೂರುದಾರ ಮಹಿಳೆ ಹೇಳಿದಂತೆ ಆರೋಪಿಗಳು ಕೆಲಸ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ. ಇದರೊಂದಿಗೆ ಮಹಿಳೆಯೆ ನೌಟಂಕಿ ಆಟ ಬಟಾಬಯಲಾಗಿದೆ. ಬಳಿಕ ಆರೋಪಿಗಳ ಮೊಬೈಲ್ ಪರಿಶೀಲನೆ ವೇಳೆ ದೂರುದಾರೆ ಜೊತೆ ಮಹಿಳೆ ಚಾಟಿಂಗ್ ಮಾಡಿರುವುದು ಬಯಲಿಗೆ ಬಂದಿದೆ. ಸದ್ಯ ಮಹಿಳೆಯನ್ನು ಸಹ ಪೊಲೀಸರು ಬಂಧಿಸಿ 109ಗ್ರಾಂ ಚಿನ್ನ ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.

ಗಂಡ ಕೆಲಸಕ್ಕೆ ಹೋಗಲ್ಲ. ಮನೆಲ್ಲಿರೋದೆಲ್ಲ ಕಳ್ಳತನ ಆಯ್ತು ಅಂತ ಕಷ್ಟ ಶುರುವಾದ್ರೆ ಬೀದಿಗೆ ಬರುತ್ತೇವೆ. ಆಗ ಪತಿ ಕೆಲಸಕ್ಕೆ ಹೋಗುತ್ತಾನೆ ಎಂದು ಮಹಿಳೆ ಈ ಪ್ಲ್ಯಾನ್​ ಮಾಡಿದ್ದಳು ಎಂದು ತಿಳಿದುಬಂದಿದೆ.

ಗಂಡ ಕೆಲಸಕ್ಕೆ ಹೋಗದೇ ಊಟ ಮಾಡಿಕೊಂಡು ಮನೆಯಲ್ಲೇ ಇರುತ್ತಿದ್ದ. ಇದರಿಂದ ಹೆಂಡ್ತಿ ಬೇಸರಗೊಂಡಿದ್ದಳು. ಕೆಲಸಕ್ಕೆ ಹೋಗಿ ಹೋಗಿ ಎಂದು ಎಷ್ಟು ಹೇಳಿದರೂ ಗಂಡ ಮಾತ್ರ ಊಟ ಮಾಡಿಕೊಂಡು ಆರಾಮಾಗಿ ಮನೆಯಲ್ಲಿರುತ್ತಿದ್ದ. ಇದರಿಂದ ರೋಸಿ ಹೊದ ಮಹಿಳೆ ಕೊನೆಗೆ ತನ್ನ ಪತಿಗೆ ಕಷ್ಟ ಅರಿವು ಆದ ಬಳಿಕವಾದರೂ ಕೆಲಸಕ್ಕೆ ಹೋಗಬಹುದು ಎಂದು ತನ್ನ ಚಿನ್ನಾಭರಣಗಳು ಕಳತನ ನಾಟಕ ಮಾಡಿದ್ದಾಳೆ. ಆದ್ರೆ, ಮಹಿಳೆಯ ನಾಟಕವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಪೊಲೀಸರಿಗೆ ಮಹಿಳೆಯ ಸಮಸ್ಯೆ ಏನು ಗೊತ್ತಿರುತ್ತೆ ಅಲ್ವೇ, ಮಹಿಳೆ ದೂರು ಕೊಟ್ಟಿದ್ದಳು ಅದರಂತೆ ಪೊಲೀಸರು ತನಿಖೆ ನಡೆಸಿ ಪ್ರಕರಣ ಭೇದಿಸಿದ್ದಾರೆ.

ಬೆಂಗಳೂರಿನ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ