ಕ್ವಾರ್ಟರ್ ಎಣ್ಣೆ ಕುಡಿಸಿ ಹೊಸ ಆಟೊ ಕದ್ದುಹೋಗಿದ್ದ ಅಡುಗೆ ಭಟ್ಟನನ್ನು ಪೀಣ್ಯ ಪೊಲೀಸರು ಲಾಕ್ ಮಾಡಿದರು!

Peenya police: ಕ್ವಾರ್ಟರ್ ಎಣ್ಣೆ ಕುಡಿಸಿ ಹೊಸ ಆಟೊವನ್ನೇ ಕದಿಯುತ್ತಿದ್ದ ಆರೋಪಿಯನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಕೆಳಗಿನ ಫೊಟೊದಲ್ಲಿರುವ ಈತನ ಹೆಸರು ವಿಷ್ಣು, ಕೆಂಗೇರಿ ಅಂಬೂರು ಬಿರಿಯಾನಿ ಹೊಟೆಲ್‌ನಲ್ಲಿ ಅಡುಗೆ ಭಟ್ಟನ ಕೆಲಸ ಮಾಡುತ್ತಿದ್ದ ವಿಷ್ಣು, ತನ್ನ ಶೋಕಿಗೆ ಹಣ ಸಾಲುವುದಿಲ್ಲ ಅಂತಾ ಕಳ್ಳತನ ಕೃತ್ಯಕ್ಕೆ ಇಳಿದಿದ್ದ. ಪೀಣ್ಯ, ತಾವರೆಕೆರೆ, ಮಾದನಾಯಕನಹಳ್ಳಿ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ.

ಕ್ವಾರ್ಟರ್ ಎಣ್ಣೆ ಕುಡಿಸಿ ಹೊಸ ಆಟೊ ಕದ್ದುಹೋಗಿದ್ದ ಅಡುಗೆ ಭಟ್ಟನನ್ನು ಪೀಣ್ಯ ಪೊಲೀಸರು  ಲಾಕ್ ಮಾಡಿದರು!
ಹೊಸ ಆಟೊ ಕದ್ದುಹೋಗಿದ್ದ ಅಡುಗೆ ಭಟ್ಟ ಅರೆಸ್ಟ್​
Follow us
ಬಿ ಮೂರ್ತಿ, ನೆಲಮಂಗಲ
| Updated By: ಸಾಧು ಶ್ರೀನಾಥ್​

Updated on: Aug 24, 2023 | 11:04 AM

ಆತ ವಿಷ್ಟು ಅಂತ ಹೆಸರಿಟ್ಟಿಕೊಂಡು ಅಮಾಯಕರ ನಂಬಿಕೆ ಗಳಿಸುತ್ತಿದ್ದ, ಒಳ್ಳೆ ಹೆಸರು ಒಳ್ಳೆ ವ್ಯಕ್ತಿ ಎಂದು ಇವನನ್ನ ನಂಬಿದವರಿಗೆ ಸರಿಯಾಗೆ ಯಾಮಾರಿಸಿ ಉಂಡೆನಾಮ ತಿಕ್ಕುತ್ತಿದ್ದ, ಕ್ವಾರ್ಟರ್ ಎಣ್ಣೆ ಕುಡಿಸಿ ಹೊಸ ಆಟೊವನ್ನೇ (auto rickshaw) ಕದಿಯುತ್ತಿದ್ದ ಆರೋಪಿಯನ್ನ ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಮೇಲಿನ ಫೊಟೊದಲ್ಲಿರುವ ಈತನ ಹೆಸರು ವಿಷ್ಣು, ಕೆಂಗೇರಿ ಅಂಬೂರು ಬಿರಿಯಾನಿ ಹೊಟೆಲ್‌ನಲ್ಲಿ ಅಡುಗೆ ಭಟ್ಟನ ಕೆಲಸ ಮಾಡುತ್ತಿದ್ದ ವಿಷ್ಣು, ತನ್ನ ಶೋಕಿಗೆ ಹಣ ಸಾಲುವುದಿಲ್ಲ ಅಂತಾ ಕಳ್ಳತನ ಕೃತ್ಯಕ್ಕೆ ಇಳಿದಿದ್ದ. ಪೀಣ್ಯ, ತಾವರೆಕೆರೆ, ಮಾದನಾಯಕನಹಳ್ಳಿ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ. ಇತ್ತೀಚೆಗೆ ಅಗಸ್ಟ್ 17ರಂದು ವಿಜಯಕುಮಾರ್ ಎನ್ನುವವರ ಅಟೋ ಕದ್ದಿದ್ದ ಪೀಣ್ಯ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ (Peenya Dasarahalli, Bangalore North) ಘಟನೆ ನಡೆದಿತ್ತು, ಆಟೋ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿರುವ ವಿಷ್ಣುವನ್ನು ಸಿಸಿಕ್ಯಾಮಾರ ದೃಶ್ಯ ಹಾಗೂ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಪೀಣ್ಯ ಪೊಲೀಸರು (Peenya police) ಇದೀಗ ಬಂಧಿಸಿದ್ದಾರೆ.

8ನೇ ಮೈಲಿ ದಾಸರಹಳ್ಳಿ ಸುತ್ತಾಮುತ್ತಾ ಆಟೋ ಓಡಿಸುವ ವಿಜಯ್ ಕುಮಾರ್, ಆಟೋ ಓಡಿಸುತ್ತಲೇ ಜೀವನ ಸಾಗಿಸುತ್ತಿದ್ದ. ಹೀಗಿರುವಾಗ ಇತ್ತೀಚೆಗೆ ಮಟ ಮಟ ಮಧ್ಯಾಹ್ನವೇ ಈತನ ಬಳಿಗೆ ಬಂದ ಆರೋಪಿ ವಿಷ್ಣು ಈ ಸ್ಟಾಂಡ್ ನಲ್ಲಿ ದಿನಕ್ಕೆ ಎಷ್ಟು ಕಲೆಕ್ಷನ್ ಆಗುತ್ತೆ,ನಾನು ಇದೇ ನಿಲ್ದಾಣದಲ್ಲಿ ನಿಲ್ಲಿಸ ಬಹುದ ಅಂತಲ್ಲ ಕೇಳಿ ಪರಿಚಯದವನಂತೆ ನಟಿಸಿದ. ಸ್ವಲ್ಪ ಹೊತ್ತಿನ ಬಳಿಕ ಬಾ ಗುರು ಎಣ್ಣೆ ಹೊಡೆಯೋಣ ಅಂದಿದ್ದಾನೆ. ಇವನ್ಯಾರಪ್ಪ ನನ್ನ ಕರಿತಾವ್ನೆ ಅಂತ ಈತ ಅಂದುಕೊಳ್ಳುವಷ್ಟರಲ್ಲಿ ಆತ ಮತ್ತೆ ಬಾ ಗುರು ನಾನೂ ಆಟೋ ಓಡಿಸೋದೆ, ನಿನ್ನ ಕಷ್ಟ ನನಗೂ ಗೊತ್ತಾಗುತ್ತೆ ಅಂತಾ ಮೂನ್ ಲೈಟ್ ಬಾರ್‌ಗೆ ಕರೆದುಕೊಂಡು ಹೋಗಿದ್ದಾನೆ.

ಅಲ್ಲಿ ಎಣ್ಣೆ ಕೊಡಿಸಿ ಬಳಿಕ ಬಿಲ್ ಸಹ ತಾನೆ ಕೊಟ್ಟಿದ್ದಾನೆ, ಆಚೆ ಬರುತ್ತಿದ್ದಂತೆ ವಿಜಯ್ ಕುಮಾರ್ ಎಣ್ಣೆ ಹೊಡೆದಿರುವುದರಿಂದ ಹೊಸ ಆಟೋದಲ್ಲಿ ಮಲಗೋದು ಬೇಡ ಅಂತಾ ಅರೊಪಿ ವಿಷ್ಣುವಿನ ಹಳೇ ಆಟೋದಲ್ಲಿ ಮಲಗಿದ್ದಾನೆ, ಈತ ಮಲಗಿರುವುದನ್ನೇ ಕಾಯುತ್ತಿದ್ದ ಆರೋಪಿ ವಿಜಯ್‌ಕುನಾರ್‌ನ ಹೊಸ ಆಟೋ ಕದ್ದು ಪರಾರಿಯಾಗಿದ್ದಾನೆ. ಅಲ್ಲದೆ ಆಟೋದಲ್ಲಿ ವಿಜಯ್ ಕುಮಾರ್‌ಗೆ ಸೇರಿದ ಒಂದು ಮೊಬೈಲ್‌ ಸಹ ಹೊತ್ತು ಹೋಗಿದ್ದ.

ಇನ್ನು ಅರೋಪಿ ವಿಷ್ಣು ಹಾಸನ ಜಿಲ್ಲೆಯ ಅರಸಿಕೆರೆ ಮೂಲದವನು ಈತನ ದಿನನಿತ್ಯದ ಕಳವು ಪ್ರಕರಣಗಳಿಗೆ ಬೇಸತ್ತು ಪೋಷಕರು ಈತನನ್ನು ಮನೆಯಿಂದ ಆಚೆ ಹಾಕಿದ್ರು, ಈತ ನೇರವಾಗಿ ಕೆಎಸ್ಆರ್‌ಟಿಸಿ ಬಸ್ ಹತ್ತಿ ಬೆಂಗಳೂರಿಗೆ ಬಂದು ಕಳ್ಳತನವನ್ನೇ ಮೈಗೂಡಿಸಿಕೊಂಡು ಜೀವನ ಸಾಗಿಸುತ್ತಿದ್ದಾನೆ, ರಾತ್ರಿ ಮಲಗುವ ಉದ್ದೇಶದಿಂದ ಕೆಂಗೇರಿ ಅಂಬೂರು ಬಿರಿಯಾನಿ ಹೋಟೆಲ್ ನಲ್ಲಿ ಸಹಾಯಕ ಭಟ್ಟನಾಗಿದ್ದ!

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೀಣ್ಯ ಪೊಲೀಸರು ಆರೋಪಿ ಬಿಟ್ಟು ಹೋದ ಆಟೋ ಪತ್ತೆ ಹಚ್ಚಿದಾಗ ಆರೋಪಿ ಬಿಟ್ಟು ಹೋಗಿರುವ ಆಟೋ ಸುದ್ದೆಕುಂಟೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಕಳ್ಳತನ ಆಗಿರೋದು ಬೆಳಕಿಗೆ ಬಂದಿತ್ತು. ಪ್ರಕರಣ ಬೆನ್ನತ್ತಿದಾಗ ಮೊಬೈಲ್ ಟವರ್ ಆಧರಿಸಿ ಆರೋಪಿ ವಿಷ್ಣುವನ್ನು ಬಂಧಿಸಿ, ಬಂಧಿತ ಅರೋಪಿಯಿಂದ 2 ಅಟೋ, ಒಂದು ಬೈಕ್ ಜಪ್ತಿ ಮಾಡಿದ್ದಾರೆ.

ಬೆಂಗಳೂರಿನ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್