ಬೆಂಗಳೂರು, ಸೆ.9: ಯುವಕನೊಬ್ಬನನ್ನು ರ್ಯಾಪಿಡೋ ಬೈಕ್ನಲ್ಲಿ (Rapido Bike) ಕಿಡ್ನಾಪ್ ಮಾಡಿ ರೂಮ್ನಲ್ಲಿ ಕೂಡಿಹಾಕಿ ಸುಲಿಗೆ ನಡೆಸಿದ ಘಟನೆ ನಗರದ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಸಂಬಂಧ ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮನು ಎಂಬವರು ರ್ಯಾಪಿಡೋ ಬೈಕ್ ಬುಕ್ ಮಾಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ಬೈಕ್ ಅನ್ನು ಏರುತ್ತಿದ್ದಂತೆ ಚಾಲಕ ಚಾಕು ತೋರಿಸಿ ಮನುನನ್ನು ಕಿಡ್ನಾಪ್ ಮಾಡಿದ್ದಾನೆ. ನಂತರ ರೂಮ್ಗೆ ಕರೆದೊಯ್ದು ಹಲ್ಲೆ ನಡೆಸಿ ಫೋನ್ ಪೇ ಮೂಲಕ ಮೂರು ಸಾವಿರ ರೂ. ವರ್ಗಾಯಿಸಿ ಪರಾರಿಯಾಗಿದ್ದಾನೆ.
ಪವನ್ ಎಂಬಾತ ಕಿಡ್ನಾಪ್ ನಡೆಸಿರುವ ಆರೋಪ ಕೇಳಿಬಂದಿದೆ. ಘಟನೆ ನಂತರ ಮನು ಗಿರಿನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಕಷ್ಟಕ್ಕೆ ಮರುಗಿದ ರ್ಯಾಪಿಡೋ ಚಾಲಕನಿಗೇ ವಂಚಿಸಿದ ಗ್ರಾಹಕ
ಇತ್ತೀಚೆಗೆ ಬೆಂಗಳೂರು ನಗರದಲ್ಲಿ ರ್ಯಾಪಿಡೋ ಬೈಕ್ನಿಂದ ಆಗುವ ಅನಾಹುತಗಳು ಹೆಚ್ಚುತ್ತಿವೆ. ಇತ್ತೀಚೆಗೆ, ಮಣಿಪುರದಲ್ಲಿ ನಡೆದ ಮಹಿಳೆಯ ಬೆತ್ತಲೆ ಮೆರವಣಿಗೆ ಖಂಡಿಸಿ ನಗರದ ಟೌನ್ಹಾಲ್ನಲ್ಲಿ ನಡೆದ ಪ್ರತಿಘಟನೆಯಲ್ಲಿ ಭಾಗಿಯಾದ ಯುವತಿಯೊಬ್ಬಳಿಗೆ ರ್ಯಾಪಿಡೋ ಬೈಕ್ ಚಾಲಕ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣ ನಡೆದಿತ್ತು.
ಪ್ರತಿಭಟನೆ ನಂತರ ಮನೆಗೆ ವಾಪಸ್ ಆಗಲು ಯುವತಿಯೊಬ್ಬಳು ರ್ಯಾಪಿಡೊ ಆಟೋ ಬುಕ್ ಮಾಡಿದ್ದಳು. ಇದು ಕ್ಯಾನ್ಸಲ್ ಆದ ಹಿನ್ನೆಲೆ ರ್ಯಾಪಿಡೊ ಬೈಕ್ ಬುಕ್ ಮಾಡಿದ್ದಳು. ಅದರಂತೆ ಸ್ಥಳಕ್ಕೆ ಆಗಮಿಸಿದ ಬೈಕ್ ಹತ್ತಿದ ಯುವತಿಗೆ ಚಾಲಕ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ಗ ಮಧ್ಯ ನಿರ್ಜನ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ನೀಡಿದ್ದನು. ಡ್ರಾಪ್ ಮಾಡಿದ ನಂತರ ಬೈಕ್ ಚಾಲಕ ಯುವತಿಯ ಮೊಬೈಲ್ಗೆ ಕರೆ ಮಾಡಿ ಕಿರುಕುಳ ನೀಡಿದ್ದನು. ಈ ಬಗ್ಗೆ ನೊಂದ ಯುವತಿ ಟ್ವೀಟ್ ಮಾಡಿದ್ದಳು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ