Bengaluru News: ಬೆಂಗಳೂರಿನಲ್ಲಿ ಕಷ್ಟಕ್ಕೆ ಮರುಗಿದ ರ್ಯಾಪಿಡೋ ಚಾಲಕನಿಗೇ ವಂಚಿಸಿದ ಗ್ರಾಹಕ
ವ್ಯಕ್ತಿಯೊಬ್ಬ ರ್ಯಾಪಿಡೋ ಬೈಕ್ ಸೇವೆ ಪಡೆದಿದ್ದಾನೆ. ಬಳಿಕ ಅದೇ ವ್ಯಕ್ತಿ ಅನಾರೋಗ್ಯದ ಕಾರಣ ನೀಡಿ ಚಾಲಕನಿಂದ ಹಣ ಪಡೆದು ವಂಚಿಸಿದ್ದಾನೆ. ಈ ಘಟನೆ ಬೆಂಗಳೂರಿನ ಮೈಕೋಲೇಔಟ್ನಲ್ಲಿ ನಡೆದಿದೆ.
ಬೆಂಗಳೂರು, ಜುಲೈ 28: ಕಷ್ಟಕ್ಕೆ ಮರುಗಿದ ರ್ಯಾಪಿಡೋ (Rapido) ಚಾಲಕನಿಗೇ ಗ್ರಾಹಕನೊಬ್ಬ ವಂಚನೆ ಎಸಗಿದ ಘಟನೆ ನಗರದ ಮೈಕೋಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತನಗೆ ಗ್ರಾಹಕನೊಬ್ಬ ನಾಲ್ಕು ಸಾವಿರ ರೂಪಾಯಿ ವಂಚಿಸಿರುವುದಾಗಿ ಆರೋಪಿಸಿ ರ್ಯಾಪಿಡೋ ಬೈಕ್ ಚಾಲಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಣವೀರ್ ಎಂಬಾತ ರ್ಯಾಪಿಡೋ ಬೈಕ್ ಸರ್ವೀಸ್ ಪಡೆದಿದ್ದಾನೆ. ನಂತರ ಬೈಕ್ ಚಾಲಕ ಮಣಿಕಂಠನ ಬಳಿ ತನ್ನ ಪತ್ನಿಯ ಅನಾರೋಗ್ಯದ ನೆಪ ಹೇಳಿದ್ದ ರಣವೀರ್, ಆಸ್ಪತ್ರೆಗೆ ದಾಖಲಿಸಿದ್ದ ಬಿಲ್ ಪಾವತಿಗೆ ಹಣ ಬೇಕಿದೆ. ನಾಲ್ಕು ಸಾವಿರ ಹಣ ಕೊಡಿ ಆನಂತರ ನೀಡುತ್ತೇನೆ ಎಂದಿದ್ದಾನೆ.
ಗ್ರಾಹಕನ ಸಂಕಷ್ಟಕ್ಕೆ ಮರುಗಿದ ಮಣಿಕಂಠ, ನಾಲ್ಕು ಸಾವಿರ ರೂಪಾಯಿ ಕಳುಹಿಸಿದ್ದಾರೆ. ಇದಾದ ಕೆಲ ಸಮಯದ ನಂತರ ರಣವೀರ್, ಮಣಿಕಂಠನಿಗೆ ಹಣ ಪಾವತಿಯ ಸ್ಕ್ರೀನ್ ಶಾಟ್ವೊಂದನ್ನು ಕಳುಹಿಸಿದ್ದಾನೆ. ಆದರೆ ದುಡ್ಡು ಬಂದಿರಲಿಲ್ಲ. ಆತ ಕಳುಹಿಸಿದ್ದು ನಕಲಿ ಸ್ಕ್ರೀನ್ ಶಾಟ್ ಎಂದು ಅರಿತ ಮಣಿಕಂಠ, ರಣವೀರ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಆತ ಮಣಿಕಂಠ ಅವರ ನಂಬರ್ ಅನ್ನು ಬ್ಲಾಕ್ ಮಾಡಿದ್ದಾನೆ.
ವಂಚನೆ ಸಂಬಂಧ ರ್ಯಾಪಿಡೋ ಚಾಲಕ ಮಣಿಕಂಠ, ಮೈಕೋಲೇಔಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ